ನಿಮಗೆ ಒಂದು ರೂಪಾಯಿಯ ಮೌಲ್ಯ ಗೊತ್ತಿದೆಯೆ ಒಂದು ರೂಪಾಯಿಂದ ಏನಾಗುತ್ತದೆ ಅಬ್ಬಬ್ಬಾ ಎಂದರೆ ಟ್ರಾಫಿಕ್ ಸಿಗ್ನಲ್ ನಲ್ಲಿ ಸಿಕ್ಕಿಹಾಕಿಕೊಂಡ ಸಂದರ್ಭದಲ್ಲಿ ಯಾರಿಗಾದರೂ ಸಹಾಯವಾಗಲಿ ಎಂಬ ಉದ್ದೇಶದಿಂದ ಉಳಿದಿರುವ ಚಿಲ್ಲರೆಯನ್ನು ನಾವು ಕೊಡುತ್ತೇವೆ. ಆದರೆ ಅದೇ ಒಂದು ರೂಪಾಯಿಯ ಮೌಲ್ಯವನ್ನು ಅರ್ಥ ಮಾಡಿಕೊಂಡಿರುವ ವ್ಯಕ್ತಿ ಇಂದು ಸಾವಿರ ಕೋಟಿಯ ಸಾಮ್ರಾಜ್ಯವನ್ನು ಕಟ್ಟಿದ್ದಾರೆ ನೀವು ಚಿಕ್ ಶಾಂಪೂ ಬಗ್ಗೆ ಕೇಳಿರುತ್ತೀರಿ ಕಾರ್ತಿಕ ಶಾಂಪೂ ಮೀರಾ ಶಾಂಪೂಗಳು ನಿಮಗೆ ಗೊತ್ತಿರಬಹುದು.

ಚಿನ್ನಿಸ್ ಚಿಕ್ಕಿ ಹತ್ತಿರ ಹತ್ತಿರ ಏಳುನೂರು ಕೋಟಿ ರೂಪಾಯಿ ವಹಿವಾಟು ಮಾಡುತ್ತಿದೆ. ಕಡಿಮೆ ಬೆಲೆಗೆ ಆರಂಭ ಮಾಡಿದ ಚಿಕ್ ಶಾಂಪು ಈಗ ಮುನ್ನೂರು ಕೋಟಿ ರೂಪಾಯಿ ವಹಿವಾಟು ಮಾಡುತ್ತಿದೆ. ಇಪ್ಪತ್ತೆರಡನೇ ವಯಸ್ಸಿಗೆ ಮನೆಯಿಂದ ಹೊರಗೆ ಬಂದು ಸ್ವಂತ ಕಾಲ ಮೇಲೆ ನಿಲ್ಲುವ ಪ್ರಯತ್ನ ಮಾಡಿದ ವ್ಯಕ್ತಿ ಇಂದು ಹನ್ನೆರಡು ದೇಶಗಳಲ್ಲಿ ತಮ್ಮ ಉತ್ಪನ್ನವನ್ನು ಮಾರಾಟ ಮಾಡುವಂತಹ ಸಾಧನೆಯನ್ನು ಮಾಡಿದ್ದಾರೆ. ಬಾಂಗ್ಲಾದೇಶ ಹಾಗೂ ಶ್ರೀಲಂಕಾದಲ್ಲಿ ನಮ್ಮಲ್ಲಿರುವಂತಹ ಕಂಪನಿಯ ಬ್ರಾಂಚ್ ಗಳನ್ನು ತೆರೆದಿದ್ದಾರೆ ಇದು ಒಂದು ರೂಪಾಯಿ ಮೌಲ್ಯದ ಮೇಲೆ ಕಟ್ಟಿದ ಸಾವಿರ ಕೋಟಿ ರೂಪಾಯಿಗು ಹೆಚ್ಚಿನ ಉದ್ಯಮ ಸಾಮ್ರಾಜ್ಯದ ಕಥೆ ಇದು.

ನೀವು ಚಿಕ್ ಶಾಂಪೂವಿನ ಬಗ್ಗೆ ಕೇಳಿರುತ್ತೀರಿ ಚಿಕ್ ಎಂದರೆ ಚಿನ್ನಿ ಕೃಷ್ಣನ್ ಎಂಬ ಹೆಸರಿನ ಮೊದಲ ಎರಡು ಅಕ್ಷರ. ಈ ಸಂಸ್ಥೆಯನ್ನು ಪ್ರಾರಂಭಮಾಡಿದ ಸಿಕೆ ರಂಗನಾಥನ್ ಅವರ ತಂದೆ ಹೆಸರು ಚಿನ್ನಿ ಕೃಷ್ಣನ್. ಅವರು ಔಷಧಿ ಉತ್ಪನ್ನಗಳನ್ನು ಪ್ಯಾಕ್ ಮಾಡುವಂತಹ ಒಂದು ಉದ್ಯಮವನ್ನು ನಡೆಸುತ್ತಿದ್ದರು. ಅವರಿಗೆ ವಸ್ತುಗಳನ್ನು ಚಿಕ್ಕದಾಗಿ ಪ್ಯಾಕ್ ಮಾಡುವುದು ಜನಸಾಮಾನ್ಯರಿಗೆ ಚಿಕ್ಕ ಪ್ಯಾಕ್ ಗಳಲ್ಲಿ ಚಿಕ್ಕ ಬಾಕ್ಸ್ಗಳಲ್ಲಿ ಸಿಕ್ಕಾಗ ನಾವು ಇದನ್ನು ಬಳಸಬಹುದು ಎಂಬ ಆಸೆ ಮೂಡುತ್ತದೆ ಎಂಬುದನ್ನು ಚಿನ್ನಿ ಕೃಷ್ಣನ ಅವರು ನಂಬುತ್ತಿದ್ದರು.

ಅವರಿಗೆ ಒಟ್ಟು ಆರು ಜನ ಮಕ್ಕಳು ಅವರು ತೀರಿ ಹೋದ ಬಳಿಕ ಸಿಕೆ ರಂಗನಾಥನ್ ಮತ್ತು ಅವರ ಅಣ್ಣಂದಿರು ಸೇರಿಕೊಂಡು ವೆಲ್ವೆಟ್ ಶಾಂಪು ಉದ್ಯಮವನ್ನು ಪ್ರಾರಂಭಿಸುತ್ತಾರೆ. ಉದ್ಯಮ ತುಂಬಾ ಚೆನ್ನಾಗಿ ನಡೆಯುತ್ತಿತ್ತು ಆದರೆ ಸಿಕೆ ರಂಗನಾಥ್ ಅವರಿಗೆ ಅವರ ಅಣ್ಣಂದಿರ ಜೊತೆಗೆ ಸರಿಬರುವುದಿಲ್ಲ ಹಾಗಾಗಿ ನಾನು ಬೇರೆ ಏನನ್ನಾದರೂ ಮಾಡಬೇಕು ಎಂಬ ಕಾರಣಕ್ಕೆ ಮನೆಯಿಂದ ಹೊರಬಂದಾಗ ಅವರಿಗೆ ಕೇವಲ ಇಪ್ಪತ್ತೆರಡು ವರ್ಷ ವಯಸ್ಸು. ಅಣ್ಣಂದಿರು ಈಗಾಗಲೇ ಶಾಂಪು ಉದ್ಯಮವನ್ನು ಮಾಡುತ್ತಿದ್ದಾರೆ ನಾನು ಶಾಂಪು ಉದ್ಯಮವನ್ನು ಪ್ರಾರಂಭಿಸಿದರೆ ಅವರಿಗೆ ಪ್ರತಿಸ್ಪರ್ಧಿ ಆಗುತ್ತೇನೆ ಹಾಗಾಗಿ ಅದು ಬೇಡ. ನಾನು ಒಂದು ಕೋಳಿ ಫಾರ್ಮ್ ಅನ್ನು ಮಾಡುತ್ತೇನೆ ಎಂದು ಯೋಚನೆ ಮಾಡುತ್ತಾರೆ.

ಆದರೆ ಅವರಿಗೆ ಅದು ಸರಿಯೆನಿಸಲಿಲ್ಲ ಏಕೆಂದರೆ ಶಾಂಪೂ ತಯಾರಿಕೆಯ ಬಗ್ಗೆ ಅವರಿಗೆ ಮಾಹಿತಿ ಇತ್ತು. ಹಾಗಾಗಿ ಮನೆಯಿಂದ ಹೊರಬಂದ ಇಪ್ಪತ್ತಾರು ದಿನಗಳಲ್ಲಿ ಅವರ ಹೊಸ ಉತ್ಪನ್ನ ಚಿಕ್ ಶಾಂಪೂ ಮಾರುಕಟ್ಟೆಗೆ ಬಂದಿತ್ತು. ಒಂದೇ ತಿಂಗಳಿನಲ್ಲಿ ಇಪ್ಪತ್ತಾರು ಸಾವಿರ ಸ್ಯಾಶೆಗಳನ್ನು ಮಾರಾಟ ಮಾಡುತ್ತಾರೆ ಅದು ಕೇವಲ ಏಳು ಎಂಎಲ್ ಶಾಂಪು ಗೆ ಎಪ್ಪತ್ತೈದು ಪೈಸೆಯಂತೆ. ಹೀಗೆ ಮಾರುಕಟ್ಟೆಗೆ ಒಂದು ತಿಂಗಳಲ್ಲಿ ಹೊಸ ಉತ್ಪನ್ನವನ್ನು ತಂದಂತಹ ರಂಗನಾಥ್ ಅವರು ಒಂದು ವರ್ಷದಲ್ಲಿ ಗಳಿಸಿದ್ದು ಆರು ಲಕ್ಷ ರೂಪಾಯಿ.

ಐದುನೂರು ರೂಪಾಯಿ ಬಾಡಿಗೆ ಕೊಟ್ಟು ಅವರದೇ ಆದ ಒಂದು ಲ್ಯಾಬ್ ಅನ್ನು ಪ್ರಾರಂಭ ಮಾಡುತ್ತಾರೆ ಅಲ್ಲಿ ಒಂದಿಬ್ಬರು ಕೆಮಿಸ್ಟ ಗಳನ್ನು ನೇಮಕ ಮಾಡಿಕೊಳ್ಳುತ್ತಾರೆ ಅವರ ಸಹಾಯದಿಂದ ಮತ್ತಷ್ಟು ಉತ್ಪನ್ನಗಳನ್ನು ಮಾರುಕಟ್ಟೆಗೆ ತರುವುದಕ್ಕೆ ಸಹಾಯವಾಗುತ್ತದೆ. ಅದರ ಪ್ರತಿಫಲ ನಿಮ್ಮೆಲ್ಲರಿಗೂ ತಿಳಿದಿರುವಂತೆ ಫೇರೆವರ್ ಕ್ರೀಂ ನೈಲ್ ಶಾಂಪೂ ಹೀಗೆ ಅನೇಕ ಉತ್ಪನ್ನಗಳು ಮಾರುಕಟ್ಟೆಗೆ ಬರುತ್ತವೆ.

ಆದರೆ ರಂಗನಾಥನ್ ಅವರು ಪ್ರಾರಂಭಿಸಿದ ಚಿಕ್ ಶಾಂಪೂ ಮನೆ ಮಾತಾಗುವುದಕ್ಕೆ ಕಾರಣ ಮಾರುಕಟ್ಟೆಯ ಬಗ್ಗೆ ಅವರಿಗಿದ್ದ ಜ್ಞಾನ. ಅವರು ಶಾಂಪೂವನ್ನು ಮಾರುಕಟ್ಟೆಗೆ ತಂದ ಕೆಲದಿನಗಳಲ್ಲಿ ನೀವು ಐದು ಕಾಲಿ ಸ್ಯಾಶೆಗಳನ್ನು ತಂದುಕೊಟ್ಟರೆ ಅಂದರೆ ನೀವು ಯಾವುದೇ ಕಂಪನಿಯ ಐದು ಕವರ್ ಗಳನ್ನು ತಂದುಕೊಟ್ಟರು ಅವರು ಒಂದು ಚಿಕ್ ಶಾಂಪೂ ಕೊಡುತ್ತಿದ್ದರು. ಇದನ್ನು ಹತ್ತು ತಿಂಗಳವರೆಗೆ ಅವರು ಮುಂದುವರಿಸಿದರು ನಂತರ ಚಿಕ್ ಶಾಂಪೂವಿನ ಐದು ಕಾಲಿ ಸ್ಯಾಶೆಗಳನ್ನು ತಂದು ಕೊಟ್ಟರೆ ಒಂದು ಚಿಕ್ ಶಾಂಪೂ ಕೊಡುತ್ತಿದ್ದರು.

ಇವರ ಈ ಪ್ರಯತ್ನ ಏಷ್ಯಾದಲ್ಲಿ ಒಂದು ಸಂಚಲನವನ್ನೇ ಮೂಡಿಸಿತು. ಇದನ್ನು ಹತ್ತು ತಿಂಗಳಿಗೆ ನಿಲ್ಲಿಸಿದರು ಅಷ್ಟರಲ್ಲಿ ಚಿಕ್ ಬ್ರಾಂಡ್ ತುಂಬಾ ಜನಪ್ರಿಯವಾಗಿತ್ತು. ಹೀಗೆ ಸಾವಿರದ ಓಂಬೈನೂರಾ ಎಂಬತ್ಮುರರಲ್ಲಿ ಪ್ರಾರಂಭವಾದ ಚಿಕ್ ಕಂಪನಿ ಯಶಸ್ಸಿನ ದಾಖಲೆಯನ್ನು ಬರೆಯುತ್ತಾ ಮುಂದೆ ಸಾಗಿತು. ಹೀಗೆ ಉತ್ತಮ ದಾಖಲೆಯನ್ನು ಬರೆಯುತ್ತಿದ್ದಂತಹ ಚಿಕ್ ಕಂಪನಿ ಸಾವಿರದ ಒಂಬೈನೂರಾ ತೊಂಬತ್ತೆಂಟರ ಹೊತ್ತಿಗೆ ಹೊಸ ಹೆಸರಿನೊಂದಿಗೆ ಜನರ ಮುಂದೆ ಬಂತು.

ಆದರೆ ಚಿಕ್ ಎನ್ನುವ ಉತ್ಪನ್ನದ ಹೆಸರು ಬದಲಾಗಲಿಲ್ಲ ಬದಲಾಗಿ ಕವಿನ್ ಕೇರ್ ಎಂದು ಹೆಸರನ್ನು ಬದಲಾಯಿಸಿದರು ಸಿ ಇಂದ ಪ್ರಾರಂಭವಾಗುವ ಕವಿನ್ ಕೆ ಇಂದ ಪ್ರಾರಂಭವಾಗುವ ಕೇರ್ ಈ ರೀತಿಯಾಗಿ ಚಿನ್ನಿ ಕೃಷ್ಣನ್ ಎಂಬ ಹೆಸರಿನ ಎರಡು ಅಕ್ಷರವನ್ನು ಬಳಸಿಕೊಂಡರು. ಕವಿನ್ ಎಂದರೆ ತಮಿಳಿನಲ್ಲಿ ಸೌಂದರ್ಯ ಎನ್ನುವ ಅರ್ಥ ಬರುತ್ತದೆ.

ಹೀಗೆ ಜನಸಾಮಾನ್ಯರು ಒಂದು ರೂಪಾಯಿಗೆ ಏನನ್ನು ಕೊಂಡುಕೊಳ್ಳಬಹುದು ಅಥವಾ ಒಳ್ಳೆಯ ಗುಣಮಟ್ಟದ ವಸ್ತು ಅವರ ಕೈಗೆಟುಕುವಂತೆ ಆದರೆ ಅದರ ಶಕ್ತಿ ಹೇಗಿರುತ್ತದೆ ಅದರಿಂದ ಆಗಬಹುದಾದ ಬದಲಾವಣೆ ಹೇಗಿರುತ್ತದೆ ಎನ್ನುವುದನ್ನು ಸಿಕೆ ರಂಗನಾಥನ ಅವರು ಜಗತ್ತಿಗೆ ತಿಳಿಸಿಕೊಟ್ಟಿದ್ದಾರೆ. ನೀವು ಕೂಡ ಯಾವತ್ತೂ ಮರೆಯಬೇಡಿ ಒಂದು ರೂಪಾಯಿ ಎನ್ನುವುದು ಕಡಿಮೆಯಲ್ಲ ಅದರ ಬೆಲೆಯ ಪಾಠವೇ ಈಗ ಒಂದುವರೆ ಸಾವಿರ ಕೋಟಿ ರೂಪಾಯಿ ಸಾಮ್ರಾಜ್ಯವನ್ನು ಕಟ್ಟುವ ಹಾಗೆ ಮಾಡಿದ್ದು. ಹಾಗಾದರೆ ಇದರಿಂದ ನಾವು ಏನನ್ನು ಕಲಿಯಬಹುದು ಎಂಬುದನ್ನು ತಿಳಿಯುವುದಾದರೆ ಅಥವಾ ಸಿಕೆ ರಂಗನಾಥನ ಅವರಿಂದ ನಾವು ಕಲಿಯಬಹುದಾದ ಅಂಶವೇನೆಂದರೆ ನೀವು ಉತ್ಪಾದಿಸುವ ಉತ್ಪನ್ನ ಹೊಸತನವನ್ನು ಹೊಂದಿರಬೇಕು. ಜನಸಾಮಾನ್ಯರಿಗೆ ಕೈಗೆಟುಕುವಂತಿರಬೇಕು ಹಾಗೆಯೇ ಅದರ ಗುಣಮಟ್ಟ ಕೂಡ ಉತ್ತಮವಾಗಿರಬೇಕು.

ಒಂದು ರೂಪಾಯಿಗೆ ಕೊಂಡುಕೊಳ್ಳುತ್ತಾರೆ ಎಂದು ಕಡಿಮೆ ಗುಣಮಟ್ಟದ ವಸ್ತುವನ್ನು ಕೊಡಬಾರದು. ಉತ್ತಮ ಗುಣಮಟ್ಟದ ವಸ್ತು ಸರಿಯಾದ ಸಮಯದಲ್ಲಿ ಜನರ ಕೈಗೆಟುಕುವ ದರದಲ್ಲಿ ಅವರಿಗೆ ಸಿಕ್ಕರೆ ಅದರಿಂದ ಯಶಸ್ಸನ್ನು ಸಾಧಿಸಬಹುದು ಅದಕ್ಕೆ ಉದಾಹರಣೆ ರಂಗನಾಥನ ಅವರು. ಅವರು ಓದಿರುವುದು ತಮಿಳು ಮೀಡಿಯಂನಲ್ಲಿ ಅವರಿಗೆ ಇಂಗ್ಲಿಷ್ ಬಗ್ಗೆ ಅಷ್ಟಾಗಿ ಆಸಕ್ತಿ ಇರಲಿಲ್ಲ. ಆದರೆ ಬರಬರುತ್ತಾ ಇಂಗ್ಲಿಷ್ ಅಗತ್ಯತೆ ತಿಳಿದುಬಂದಾಗ ಪ್ರತಿದಿನ ಐದು ಇಂಗ್ಲಿಷ್ ಪದಗಳನ್ನು ಬರೆದು ಐದು ಇಂಗ್ಲಿಷ್ ವಾಕ್ಯಗಳನ್ನು ಬರೆಯುವ ಮುಖಾಂತರ ಹಲವು ವರ್ಷಗಳಲ್ಲಿ ಅವರು ಇಂಗ್ಲಿಷನ್ನು ಸುಲಲಿತವಾಗಿ ಮಾತನಾಡುವುದಕ್ಕೆ ಕಲಿತುಕೊಂಡಿದ್ದಾರೆ.

ಈ ರೀತಿಯಾಗಿ ಅವರಿಗೆ ಏನು ಬೇಕು ಅದನ್ನು ಪಡೆಯುವುದಕ್ಕೆ ಸರಿಯಾದ ರೀತಿಯಲ್ಲಿ ಪ್ರಯತ್ನವನ್ನು ಮಾಡುತ್ತಾರೆ. ಹಾಗಾಗಿ ನಿಮ್ಮ ಕನಸನ್ನು ಈಡೇರಿಸಿಕೊಳ್ಳುವುದಕ್ಕೆ ಮೊದಲು ನಿಮ್ಮ ಆತ್ಮಸ್ಥೈರ್ಯ ಬಹಳ ಮುಖ್ಯ ಇದೆಲ್ಲವನ್ನ ಗಮನಿಸಿ ನೀವು ನಿಮ್ಮ ಕನಸುಗಳಿಗೆ ಜೀವ ತುಂಬಿ ಯಶಸ್ವಿಯ ಜೀವನವನ್ನು ನಿಮ್ಮದಾಗಿಸಿಕೊಳ್ಳಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!