ಯುವಕರಿಗೆ ಚಾಣಿಕ್ಯ ಹೇಳಿದ ರಾಜತಂತ್ರ ಜೀವನಕ್ಕೆ ಸ್ಪೂರ್ತಿ ಓದಿ.

0 5

ಆಚಾರ್ಯ ಚಾಣಕ್ಯ ಈ ಹೆಸರು ಕೇಳಿದ ತಕ್ಷಣವೇ ನಾವು ಇವರು ಒಬ್ಬ ಮಹಾನ್ ಜ್ಞಾನಿ ಎನ್ನುವುದನ್ನು ತಿಳಿಯುತ್ತೇವೆ ಇವರು ಸಾಮಾನ್ಯ ಜ್ಞಾನಿ ಅಲ್ಲಾ. ತಂತ್ರ, ಕುತಂತ್ರ, ರಾಜತಂತ್ರ ಯುದ್ಧ ತಂತ್ರ , ವೇದೋಪನಿಷತ್ತು ಎಲ್ಲವನ್ನೂ ಅರೆದು ಕೂಡಿದ ಮಹಾನ್ ಮೇಧಾವಿ. ನಾವು ನಮ್ಮ ಜೀವನದಲ್ಲಿ ಕೇವಲ ಒಳ್ಳೆಯವರಾಗಿ ಬದುಕಲು ಸಾಧ್ಯವಿಲ್ಲ. ಕೆಲವು ಸಮಯದಲ್ಲಿ ಕೆಟ್ಟವರೂ ಕೂಡಾ ಅಗಬೇಕಾಗುವುದು ಎಂದು ಇವರು ತಿಳಿಸುತ್ತಾರೆ. ಇಂತಹ ಮೇಧಾವಿ ಅರ್ಥಶಾಸ್ತ್ರ ಎನ್ನುವ ರಾಜ್ಯ ಶಾಸ್ತ್ರವನ್ನು ರಚಿಸಿ ಭವಿಷ್ಯದಲ್ಲಿ ನಡೆಯಬಹುದಾದ ಎಷ್ಟೋ ವಿಷಯಗಳನ್ನು ಏಕ ದೃಷ್ಟಿಯಲ್ಲಿ ನೋಡಿದ ಮಹಾನ್ ಜ್ಞಾನಿ. ಚಾಣಕ್ಯನು ಮಾನವ ಸಂರಕ್ಷಣೆ ಮತ್ತು ಮಾರ್ಗದರ್ಶನಕ್ಕಾಗಿ ಹೇಳಿದ ಕೆಲವು ಚಾಣಕ್ಯ ನೀತಿಗಳನ್ನು ನಾವಿಲ್ಲಿ ನೋಡೋಣ.

ಚಾಣಕ್ಯ ನೀತಿಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಇದು ನಮ್ಮ ಬದುಕಿನ ಉದ್ದಕ್ಕೂ ಬರುತ್ತದೆ. ಇದನ್ನು ನಾವು ನಮ್ಮ ಶತ್ರುಗಳನ್ನು ಮಟ್ಟ ಹಾಕಲೂ ಕೂಡಾ ಬಳಸಬಹುದು. ಬೇರೆಯವರ ಪತ್ನಿಯ ಜೊತೆಗೆ ಹೊರಗಡೆ ಹೋಗಬಾರದು ಹೀಗೆ ಹೋಗುವುದರಿಂದ ಇಬ್ಬರ ಸಂಸಾರವೂ ಹಾಳಾಗುವುದು. ಸಮಾಜದಲ್ಲಿ ನಿಮಗೆ ಇರುವ ಹೆಸರು , ಗೌರವ ಹಾಳಾಗಿ ಇನ್ನೂ ಹೆಚ್ಚಿನ ಸಮಸ್ಯೆಗಳನ್ನು ನೀವು ಎದುರಿಸಬೇಕಾಗುತ್ತದೆ. ಸದಾಕಾಲ ಹುಡುಗಿಯರ ಹಿಂದೆ ಓಡಾಡುವ ಜನರಿಗೆ ಒಳ್ಳೆಯ ಆಲೋಚನೆಗಳು ಬರುವುದಿಲ್ಲ ಬದಲಿಗೆ ತಮ್ಮ ಬಳಿ ಇರುವ ಅಷ್ಟು ಇಷ್ಟು ಜ್ಞಾನವನ್ನೂ ಕೂಡಾ ಕಳೆದುಕೊಳ್ಳುತ್ತಾರೆ. ಸ್ವಲ್ಪ ದಿನಗಳ ನಂತರ ಅದೇ ಹುಡುಗಿಯ ಕೈ ಗೊಂಬೆ ಆಗುತ್ತೀರ. ನಿಮಗೆ ಪರಿಚಯ ಇಲ್ಲದ ಸ್ತ್ರೀಯರ ಬಳಿ ನಿಮ್ಮ ರಹಸ್ಯಗಳನ್ನು ಹೆಳಿಕೊಳ್ಳಬಾರದು ಹಾಗೂ ಅತಿಯಾಗಿ ಮಾತನಾಡಲೂ ಬಾರದು ಅದು ನಿಮ್ಮನ್ನು ನಾಶ ಮಾಡುವ ಸಾಧ್ಯತೆ ಇರುತ್ತದೆ. ನಮ್ಮ ಈಗಿನ ಸಮಾಜದಲ್ಲಿ ಎಷ್ಟೋ ಜನ ಗಣ್ಯ ವ್ಯಕ್ತಿಗಳು ಇದರಿಂದಾಗಿ ತಮ್ಮ ಗೌರವ ಕಳೆದುಕೊಂಡಿರುವ ಉದಾಹರಣೆಗಳು ಸಾಕಷ್ಟು ನಮ್ಮ ಎದುರು ಇದೆ. ಯೌವನದಲ್ಲಿ ಕಾಮವನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವವನನ್ನು ಎಂತಹ ಕಷ್ಟಗಳೂ ಕುಗ್ಗಿಸಲು ಸಾಧ್ಯವಿಲ್ಲ ಅವನು ಎಂತಹ ಕಷ್ಟಗಳನ್ನೂ ಎದುರಿಸಬಲ್ಲ.

ಇಂದ್ರಿಯ ನಿಗ್ರಹ ಬೇಕು ಅಂದರೆ ಸಾಧನೆ ಬಹಳ ಮುಖ್ಯ. ಇದರಿಂದ ಎಂತಹ ಕಾರ್ಯವನ್ನಾದರೂ ಮಾಡಬಹುದು. ಸ್ತ್ರೀ ಇಂದ ಬಂದ ಹಣದಿಂದ ಬಹಳ ಅನರ್ಥಗಳು ನಡೆಯುತ್ತವೆ. ಒಂದುವೇಳೆ ಅವರಿಗೆ ಬೇಕಾದ ಸಮಯಕ್ಕೆ ಹಣವನ್ನು ನೀಡದೆ ಹೋದರೆ ಅವರ ಮನೆಯ ಮರ್ಯಾದೆ ನಾಶವಾಗುವುದು. ಹಾಗೂ ಒಂದು ಸ್ತ್ರೀ ತನ್ನ ಮನೆಯವರಿಗೆ ತಿಳಿಯದೆ ಹಣವನ್ನು ಇನ್ನೊಬ್ಬರಿಗೆ ನೀಡಿದ್ದರೆ ಅದರಿಂದ ಆ ಸ್ತ್ರೀಯ ಜೀವನ ಕೂಡಾ ನಾಶವಾಗುವ ಸಾಧ್ಯತೆಗಳು ಇರುತ್ತವೆ. ತನ್ನ ಆಲೋಚನೆಗಳನ್ನು ಹೊರಗೆ ಹಾಕಿದವನು ಬಹಳ ಸಮಸ್ಯೆಗಳನ್ನು ಎದುರಿಸಬೇಕಾಗುವುದು. ನಿಮ್ಮ ಆಲೋಚನೆಗಳನ್ನು ಯಾರಿಗೂ ಹೇಳದೆ ಕಾರ್ಯ ಸಾಧಿಸುವ ಪ್ರಯತ್ನ ಮಾಡಿ.ನಿಮ್ಮಲಿನ ಆಲೋಚನೆಗಳನ್ನು ಇನ್ನೊಬ್ಬರಿಗೆ ಹೇಳುವುದರಿಂದ ಬಹಳಷ್ಟು ಜನ ಶತ್ರುಗಳು ಹುಟ್ಟಿಕೊಳ್ಳುತ್ತಾರೆ. ಅದೇ ರೀತಿ ಅದೇ ಆಲೋಚನೆಗಳಿಂದ ಇನ್ನೊಬ್ಬರು ನಿಮ್ಮನ್ನು ತುಳಿಯುವ ಅವಕಾಶ ಕೂಡಾ ಇದೆ.

ಇನ್ನು ನೇರವಾಗಿ ಮಾತನಾಡುವವರಿಗೆ ಶತ್ರುಗಳು ಜಾಸ್ತಿ ಹಾಗಾಗಿ ಸಮಯಕ್ಕೆ ತಕ್ಕಂತೆ ಮಾತನಾಡಬೇಕು. ಇನ್ನು ಸುಳ್ಳು ಹೇಳುವವರಿಗೆ ಕೂಡಾ ಮಿತ್ರರು ಹೆಚ್ಚು. ಹಾಗಾಗಿ ಹೆಚ್ಚು ಸುಳ್ಳು ಹೇಳುವವರ ಜೊತೆಗೆ ಎಂದಿಗೂ ಸ್ನೇಹ ಬೇಡ. ಸುಳ್ಳು ಹೇಳಿದರೂ ಇನ್ನೊಬ್ಬರಿಗೆ ಅನ್ಯಾಯ , ಮೋಸ ಆಗುವ ರೀತಿಯಲ್ಲಿ ಸುಳ್ಳು ಹೇಳಬಾರದು. ಸ್ವಾರ್ಥಕ್ಕಾಗಿ ಒಳ್ಳೆಯ ಮಾತುಗಳನ್ನು ಹೇಳುವವರು ಬಹಳ ಜನ ಇರುತ್ತಾರೆ ಅವರು ತಮ್ಮ ಸ್ವಾರ್ಥ ಸಾಧನೆಗಾಗಿ ಏನಾದರೂ ಹೇಳುತ್ತಿದ್ದಾರೆ ನಿಮ್ಮ ರಹಸ್ಯಗಳನ್ನು ಎಂದಿಗೂ ಅಂತಹ ವ್ಯಕ್ತಿಗಳ ಬಳಿ ಹೇಳಬಾರದು. ನಿಸ್ವಾರ್ಥ ಮನಸ್ಸಿನವರಿಗೇ ನೋವು ಕೊಡುವ ಜನ ಬಹಳ. ಆದ್ದರಿಂದ ಎಂತಹ ಸಂದರ್ಭ ಬಂದರೂ ಅದನ್ನು ಎದುರಿಸುವುದನ್ನು ಕಲಿಯಬೇಕು. ಕುದಿಯುವ ನೀರಿನಲ್ಲಿ ಹೇಗೆ ಪ್ರತಿಬಿಂಬ ಕಾಣಿಸುವುದಿಲ್ಲ ಅದೇ ರೀತಿ ಕೋಪದಲ್ಲಿ ಇದ್ದಾಗ ವ್ಯಕ್ತಿಗೆ ತಾನು ಎನು ಮಾತನಾಡುತ್ತಿರುವ ಎನ್ನುವುದರ ಅರಿವು ಇರುವುದಿಲ್ಲ. ಕೋಪ ಬಂದಾಗ ತಾಳ್ಮೆಯಿಂದ ವ್ಯವಹರಿಸುವುದು ಒಳ್ಳೆಯದು. ಯಾರು ಎಂತಹ ಜ್ಞಾನಿಯೆ ಆಗಿದ್ದರೂ ಲೋಕ ಜ್ಞಾನ ಹಾಗೂ ಸಮಯ ಪ್ರಜ್ಞೆ ಇರಬೇಕು. ಕೆಟ್ಟವರು ಮನಸಿನಲ್ಲಿ ಒಂದು ಹೊರಗಡೆ ಒಂದು ರೀತಿ ಮಾತನಾಡುತ್ತಾರೆ ಅಂತವರ ಹತ್ತಿರ ಯಾವುದೇ ಸಹಾಯವನ್ನೂ ಕೇಳಬಾರದು. ಮೂರ್ಖರು ನಿಮ್ಮನ್ನು ಅಪಹಾಸ್ಯ ಮಾಡಿದಾಗ ಅಲ್ಲಿಂದ ನಗುತ್ತಾ ಹೊರಬಂದು ಅವನು ಶತ ಮೂರ್ಖನೆ ಆಗಿದ್ದರೆ ಅವನ ಜೊತೆ ರಾಜಿ ಆಗಬೇಕು ಅಥವಾ ಬೇಕಂತಲೇ ಹಾಗೇ ಮಾಡುತ್ತಿದ್ದಾರೆ ಅವನ ರಹಸ್ಯವನ್ನು ತಿಳಿದು ಎದುರಿಸಬೇಕು. ನಿಮಗೆ ಬರುವ ಆದಾಯದ ಬಗ್ಗೆ ಎಂದಿಗೂ ಯಾರಿಗೂ ಹೇಳಬಾರದು. ಹೀಗೆ ಹೇಳುವುದರಿಂದ ಮಾನವ ದೃಷ್ಟಿ ನಿಮ್ಮ ಮೇಲೆ ಬೀಳುವುದು ಹಾಗೂ ಬಹಳಷ್ಟು ಜನ ಬೇಕಂತಲೇ ಸಹಾಯ ಕೇಳಿ ನಿಮ್ಮನ್ನು ತುಳಿಯುತ್ತಾರೆ. ಇನ್ನು ಶತ್ರುಗಳು ನಿಮ್ಮ ಆದಾಯ ಮಾರ್ಗವನ್ನು ನಾಶ ಮಾಡುವ ಸಾಧ್ಯತೆಯೂ ಇರುತ್ತದೆ. ಇನ್ನು ಕೆಟ್ಟ ಅಭ್ಯಾಸಗಳು ನಿಮ್ಮನ್ನು ಆರ್ಥಿಕ ಕಶ್ಟಗಳಿಗೆ ತಳ್ಳುತ್ತವೆ. ಇಲ್ಲಿ ಕೆಟ್ಟ ಅಭ್ಯಾಸಗಳು ಅಂದರೆ ಕೇವಲ ಧೂಮಪಾನ, ಮಧ್ಯಪಾನ ಮತ್ತು ಕೆಟ್ಟ ಸಂಬಂಧಗಳು ಮಾತ್ರವಲ್ಲ ಅತಿಯಾಗಿ ಮೊಬೈಲ್ ಬಳಕೆ ಇವು ಕೂಡಾ ಹೌದು ಇವುಗಳಿಂದ ನಾವು ನಮ್ಮ ಏಕಾಗ್ರತೆಯನ್ನು ಕಳೆದುಕೊಳ್ಳುತ್ತೇವೆ. ಇದರಿಂದ ನಮ್ಮ ಕಾರ್ಯ ಸಿದ್ಧಿ ಆಗಲು ಸಾಧ್ಯವಿಲ್ಲ. ನಿಮಗೆ ಕೆಲಸ ಆಗಬೇಕಿದ್ದಲ್ಲಿ ಯಾವುದೇ ಬೇಸರ ನಾಚಿಕೆ ಇಲ್ಲದೆ ಹೋಗಿ ಕೇಳಬೇಕು. ನಾಚಿಕೆಯಿಂದ ಅವರು ಏನಂದುಕೊಳ್ಳುತ್ತರೋ ಎಂದು ಕೂತರೆ ನಷ್ಟ ನಿಮಗೆ. ಇವು ಆಚಾರ್ಯ ಚಾಣಕ್ಯ ಹೇಳಿದ ಕೆಲವು ನೀತಿಗಳು.

Leave A Reply

Your email address will not be published.