ಚಾಣಿಕ್ಯನ ಈ ನೀತಿ ತಿಳಿದುಕೊಂಡರೆ ಜನಗಳ ಮಧ್ಯೆ ಉತ್ತಮರಾಗಿ ಬದುಕುತ್ತಿರ

0 4

ನಮ್ಮ ಭಾರತ ಹಲವಾರು ಶ್ರೇಷ್ಠ ವ್ಯಕ್ತಿಗಳನ್ನು ಮತ್ತು ಅವರ ಆದರ್ಶಗಳನ್ನು ನಮಗೆ ಉಡುಗೊರೆಯಾಗಿ ನೀಡಿದೆ. ಅಂತಹ ಮಹಾನ್ ವ್ಯಕ್ತಿಗಳಲ್ಲಿ ಆಚಾರ್ಯ ಚಾಣಕ್ಯ ಅವರು ಕೂಡ ಒಬ್ಬರು. ಅವರ ಮಾತುಗಳು, ನೀತಿಗಳು ಮತ್ತು ಕಟುವಾದ ಸತ್ಯಗಳು ಅತ್ಯಂತ ಅದ್ಭುತವಾಗಿದೆ. ಮನುಷ್ಯ ಇವುಗಳಿಂದ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದಾಗಿದೆ. ಈ ಸಮಾಜದಲ್ಲಿ ಉತ್ತಮವಾಗಿ ಬದುಕಬೇಕು ಎಂದರೆ ಚಾಣಕ್ಯರ ನೀತಿಗಳನ್ನು ಪಾಲಿಸಬೇಕು. ನಾವು ಇಲ್ಲಿ ಕೆಲವು ಚಾಣಕ್ಯರ ನೀತಿಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಮೊದಲನೆಯದು ಮೂರ್ಖರಿಗೆ ಉಪದೇಶ ಮಾಡಬೇಡಿ ಎಂದು ಚಾಣಕ್ಯರು ಹೇಳಿದ್ದಾರೆ. ಯಾವ ವ್ಯಕ್ತಿ ಜ್ಞಾನಿಗಳ ಮಾತು ಕೇಳದೇ ತಾನೇ ಸರಿ ಎಂದು ವಾದ ಮಾಡುತ್ತಾರೋ ಅವರನ್ನು ಮೂರ್ಖರು ಎಂದು ಕರೆಯಲಾಗುತ್ತದೆ. ಅಂತಹವರಿಗೆ ಉಪದೇಶ ಮಾಡಲು ಹೋದರೆ ಕೋಪ ಮತ್ತು ವಾದಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ.

ಎರಡನೆಯದು ಸ್ವಾರ್ಥವಿಲ್ಲದ ಸ್ನೇಹವಿಲ್ಲ. ಚಾಣಕ್ಯರ ಪ್ರಕಾರ ಕೆಲವರ ಸ್ನೇಹದಲ್ಲಿ ಸ್ವಾರ್ಥ ಅಡಗಿರುತ್ತದೆ. ಆದ್ದರಿಂದ ಸ್ನೇಹಿತರೊಂದಿಗೆ ಮಾತನಾಡುವಾಗ ಮತ್ತು ಅವರ ಜೊತೆ ಇರುವಾಗ ಅವರನ್ನು ಗಮನಿಸಬೇಕಾಗುತ್ತದೆ. ಅವಶ್ಯಕತೆಗೆ ಉಂಟಾದ ಸ್ನೇಹ ಸ್ವಾರ್ಥದ ಸ್ನೇಹವಾಗುತ್ತದೆ.

ಮೂರನೆಯದು ನಿಮ್ಮ ಸಿಹಿಮಾತುಗಳು ಕಾರ್ಯಗಳಲ್ಲಿ ನಿಮ್ಮನ್ನು ಯಶಸ್ವಿಗೊಳಿಸುತ್ತದೆ. ಯಾರೊಂದಿಗಾದರೂ ಮಾತನಾಡುವಾಗ ಸೌಮ್ಯದಿಂದ ನಗುಮುಖದೊಂದಿಗೆ ಮಾತನಾಡಬೇಕು. ಏಕೆಂದರೆ ಮಾತು ಜೀವನದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ.

ನಾಲ್ಕನೆಯದು ಯಾವುದೇ ಕಾರಣಕ್ಕೂ ಇತರರಿಗೆ ನಿಮ್ಮ ದುರ್ಬಲತೆಯ ಪ್ರದರ್ಶನ ಮಾಡಬೇಡಿ. ಕೆಲವೊಮ್ಮೆ ಹಣ ಇರುವವರೊಂದಿಗೆ ಅಥವಾ ಅಧಿಕಾರ ಇರುವವರೊಂದಿಗೆ ದುರ್ಬಲತೆಯನ್ನು ಪ್ರದರ್ಶನ ಮಾಡುವ ಸಂಭವ ಬರುತ್ತದೆ. ಇದರಿಂದ ವ್ಯಕ್ತಿಗಳು ಕೀಳರಿಮೆಯಿಂದ ನೋಡುವ ಸಂಭವ ಇರುತ್ತದೆ.

ಐದನೆಯದು ನಿಮ್ಮ ರಹಸ್ಯಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ. ಕೆಲವೊಮ್ಮೆ ಕೆಲವು ವ್ಯಕ್ತಿಗಳು ಆಪ್ತರು ಎನಿಸಿದರೆ ರಹಸ್ಯಗಳನ್ನು ಹಂಚಿಕೊಳ್ಳುವುದು ಸಹಜ. ಕಾರಣ ಅವರ ಮೇಲಿನ ನಂಬಿಕೆ. ಆದರೆ ಅವರೂ ಸಹ ಇದನ್ನು ಬಳಸಿಕೊಳ್ಳುವ ಸಾಧ್ಯತೆ ಇರುತ್ತದೆ.

ಆರನೆಯದು ಸಂದರ್ಭಕ್ಕೆ ತಕ್ಕಂತೆ ಯೋಚನೆ ಮಾಡಿ ಮಾತನಾಡಬೇಕು. ಚಾಣಕ್ಯರ ಪ್ರಕಾರ ಮಾತಿನಲ್ಲಿ ಹಿಡಿತವಿರಬೇಕು. ಯಾವಾಗ ಏನು ಮಾತನಾಡಬೇಕು ಎನ್ನುವ ತಾಳ್ಮೆ ಮತ್ತು ಜಾಣ್ಮೆ ಎರಡೂ ಇರಬೇಕು. ಮನಸಿಗೆ ಬಂದಂತೆ ಮಾತನಾಡಿದರೆ ಕೆಲವು ವ್ಯಾಜ್ಯಗಳು ಸಂಭವಿಸುತ್ತವೆ.

ಏಳನೆಯದು ಜೀವನದಲ್ಲಿ ಮೂರು ಮಂತ್ರಗಳು ಇವೆ. ಒಂದು ಬಹಳ ಖುಷಿಯಾಗಿದ್ದಾಗ ಭರವಸೆ ನೀಡಬಾರದು. ಎರಡು ಕೋಪದಲ್ಲಿದ್ದಾಗ ಉತ್ತರ ನೀಡಬಾರದು. ಮೂರು ಬಹಳ ಖುಷಿಯಾಗಿದ್ದಾಗ ತಕ್ಷಣ ನಿರ್ಧಾರ ತೆಗೆದುಕೊಳ್ಳಬಾರದು. ಎಂಟನೆಯದು ಕೆಲವೊಂದು ವಿಚಾರಗಳನ್ನು ಕೇಳಿದರೂ ಕೂಡ ಕಿವುಡರಂತೆ ಇರಬೇಕು. ಇಂತಹ ಒಳ್ಳೊಳ್ಳೆಯ ನೀತಿಗಳನ್ನು ಚಾಣಕ್ಯ ಅವರು ನಮಗೆ ನೀಡಿ ಹೋಗಿದ್ದಾರೆ.

Leave A Reply

Your email address will not be published.