ಪುರುಷರು ಈ ನಾಲ್ಕು ವಿಷಯಗಳನ್ನು ಯಾರೊಂದಿಗೆ ಹೇಳಕೂಡದು ಎಂದು ಚಾಣಿಕ್ಯ ಹೇಳಿದ್ದು ಯಾಕೆ ಗೊತ್ತೇ

0 1

ಚಾಣಕ್ಯನು ಭಾರತದ ಹೆಮ್ಮೆ. ಚಾಣಕ್ಯನ ಚಾಣಕ್ಯ ನೀತಿ ಪುಸ್ತಕಕ್ಕೆ ಸರಿಸಾಟಿಯಾಗಿ ಬೇರೆ ಯಾವ ಪುಸ್ತಕವು ರಚನೆಯಾಗಿಲ್ಲ. ಒಬ್ಬ ಸಾಮಾನ್ಯ ಬಾಲಕನಾಗಿದ್ದ ಚಂದ್ರಗುಪ್ತನನ್ನು ಮೌರ್ಯ ಸಾಮ್ರಾಜ್ಯದ ದೊರೆಯಾಗಿ ಮಾಡಿದ ಬುದ್ದಿವಂತ ಚಾಣಕ್ಯ. ಚಾಣಕ್ಯ ರಚಿಸಿದ ಚಾಣಕ್ಯ ನೀತಿಯನ್ನು ಓದಿದವರ ಜೀವನದಲ್ಲಿ ಸುಖ, ಸಮೃದ್ದಿ, ಇರುತ್ತದೆ ಎಂದು ಹೇಳುತ್ತಾರೆ. ಚಾಣಕ್ಯ ನೀತಿಯ ಪ್ರತಿಯೊಂದು ಸಿದ್ದಾಂತವು ಪ್ರತಿಯೊಬ್ಬರ ಜೀವನಕ್ಕೆ ಹೋಲಿಕೆಯಾಗುತ್ತದೆ. ಅಮನತಹ ಸಿದ್ಧಾಂತಗಳಲ್ಲಿ ಒಂದು ಸಿದ್ದಾಂತ ಇಲ್ಲಿದೆ.

ಅರ್ಥ ನಾಶ ಮನಸ್ತಾಪಂ
ಗ್ರಹಿನ್ಯಾಶ್ಚರಿತಾನಿ ಚ
ನಿಚಂ ವಾಕ್ಯಂ ಚಾಪಮಾನಂ
ಮತಿಮಾತ್ರ ಪ್ರಕಾಶಯೆತ

ಪುರುಷರು ಈ ನಾಲ್ಕು ವಿಷಯವನ್ನು ಯಾವುದೆ ಕಾರಣಕ್ಕೂ ಯಾರಿಗೂ ಹೇಳಬಾರದು ಎಂದು ಈ ಸಿದ್ದಾಂತದಲ್ಲಿ ಚಾಣಕ್ಯ ಹೇಳಿದ್ದಾನೆ. ಹಾಗಾದರೂ ಆ ನಾಲ್ಕು ಯಾವುದು.. ಮೊದಲನೆಯದಾಗಿ ನಷ್ಟವಾದ ಹಣದ ಬಗ್ಗೆ ಯಾರಿಗೂ ಹೇಳಬಾರದು. ಹಣದ ನಷ್ಟ ಆದಾಗ, ಹಣದ ಅವಶ್ಯಕತೆ ಇದ್ದಾಗ ಯಾರು ನಮ್ಮ ಸಹಾಯಕ್ಕೆ ಬರುವುದಿಲ್ಲ. ಯಾಕೆಂದರೆ ಹಣ ಕೊಟ್ಟರೆ ಆ ಹಣ ತಿರುಗಿ ಬರುತ್ತದೆ ಎಂಬ ನಂಬಿಕೆ ಅವರಿಗಿರುವುದಿಲ್ಲ. ಆದ್ದರಿಂದ ದೂರವೇ ಉಳಿಯುತ್ತಾರೆ.

ಎರಡನೆಯದಾಗಿ ದುಃಖವನ್ನು ಯಾರೊಂದಿಗೂ ಹೇಳಿಕೊಳ್ಳಬಾರದು. ಜನರಿಗೆ ಮಾತನಾಡಲು ಹಾಗೂ ಆಡಿಕೊಳ್ಳಲು ವಿಷಯ ಬೇಕಾಗಿರುತ್ತದೆ. ಯಾರಾದರೂ ದುಃಖದಲ್ಲಿ ಇದ್ದಾರೆ ಎಂದಾಗ ಆಡಿಕೊಳ್ಳುತ್ತಾರೆ ವಿನಹಃ ಸಮಾಧಾನ ಮಾಡುವುದಿಲ್ಲ. ಆದರೆ ನಮ್ಮ ಹಿತ ಕೋರುವವರ ಬಳಿ ಹೇಳಿಕೊಳ್ಳಬಹುದು ಎನ್ನುವುದು ಒಂದು ಅಭಿಪ್ರಾಯ.

ಮೂರನೆಯದಾಗಿ ಪತ್ನಿಯ ಬಗ್ಗೆ ಯಾರೊಂದಿಗೂ ಮಾತನಾಡಬಾರದು. ಒಂದು ವೇಳೆ ಹಂಚಿಕೊಂಡಲ್ಲಿ ಆಡಿಕೊಳ್ಳುವವರ ಬಾಯಿಗೆ ಆಹಾರವಾಗಿರುತ್ತೆವೆ. ಅದು ಒಬ್ಬರಿಂದ ಒಬ್ಬರಿಗೆ ಹರಡಿ ಕೆಟ್ಟ ಅಂತೆ ಕಂತೆಗಳು ಹರಡಬಹುದು. ಅದು ಜೀವನಕ್ಕೆ ಹಾನಿಕಾರಕವಾಗಿ ಬದಲಾಗಬಹುದು. ನಾಲ್ಕನೆಯ ವಿಷಯ ಏನೆಂದರೆ ಒಬ್ಬ ಮೂರ್ಖ ವ್ಯಕ್ತಿ ಮಾಡಿದ ಅವಮಾನ. ಯಾರೋ ಒಬ್ಬ ಮೂರ್ಖ ಅವಮಾನ ಮಾಡಿದಲ್ಲಿ ಅದನ್ನು ಅಲ್ಲೆ ಮರೆತುಬಿಡಬೇಕು ಯಾರೊಂದಿಗೂ ಹೇಳಬಾರದು ಯಾಕೆಂದರೆ ಚೆಷ್ಟೆಯ ವಿಷಯವಾಗಿ ಬಿಡುತ್ತೆವೆ ಜನರ ಬಾಯಲ್ಲಿ. ಈ ಸಿದ್ದಾಂತದ ಉದ್ದೇಶ ಹಾಗೂ ಈ ನಾಲ್ಕು ವಿಚಾರಗಳನ್ನು ಹೇಳಿಕೊಳ್ಳಬಾರದು ಎಂಬುದರ ಉದ್ದೇಶ ಇಷ್ಟೇ ಎಲ್ಲರಿಗೂ ಅವರವರದೆ ಆತ್ಮ ಸಮ್ಮಾನ ಇರುತ್ತದೆ. ಒಮ್ಮೆ ಜನರ ಬಾಯಿಗೆ ನಾವು ಆಹಾರವಾದರೆ ಕುಗ್ಗಿಬಿಡುತ್ತೆವೆ. ಯಾರ ಮುಂದೆಯೂ ನಮ್ಮ ಆತ್ಮ ಸಮ್ಮಾನ ಬಿಟ್ಟುಕೊಡಬಾರದು ಎಂಬುದೆ ಈ ಸಿದ್ಧಾಂತದ ಆಶಯ.

Leave A Reply

Your email address will not be published.