ನಂಬರ್ 1 ಆ್ಯಂಕರ್ ಅನುಶ್ರೀ ಅವರ ಜೀವನ ಹೇಗಿತ್ತು ಅವರು ಎಲ್ಲಿಯವರು ಎಂಬೆಲ್ಲ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಕನ್ನಡದ ನಂಬರ್ 1 ನಿರೂಪಕಿ ಅನುಶ್ರೀ ಅವರು ಇಂದು ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದ್ದಾರೆ ಆದರೆ ಒಂದು ಕಾಲದಲ್ಲಿ ತುತ್ತು ಅನ್ನಕ್ಕೂ ಗತಿ ಇರಲಿಲ್ಲ. ಓದಿದ್ದು ಕಡಿಮೆ ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದರು. ತಮ್ಮ ಇನ್ನು ತುಂಬಾ ಚಿಕ್ಕವನು ಅಮ್ಮನನ್ನು ಸಾಕಬೇಕಿತ್ತು. ತಮ್ಮನನ್ನು ಓದಿಸಬೇಕಿತ್ತು ಹೀಗೆ ಹಲವಾರು ದೊಡ್ಡ ದೊಡ್ಡ ಜವಾಬ್ದಾರಿಗಳನ್ನು ಬೆನ್ನಿಗೆ ಕಟ್ಟಿಕೊಂಡು, ಎಲ್ಲ ಆಸೆಗಳನ್ನು ಕಣ್ಣಲ್ಲಿ ತುಂಬಿಕೊಂಡು ಬೆಂಗಳೂರಿಗೆ ಬಂದು ಇಳಿದರು. ಅನುಶ್ರೀ ಅವರು ಮಂಗಳೂರಿನಲ್ಲಿ ತುಳು ಮಾತನಾಡುವ ಕುಟುಂಬದಲ್ಲಿ ಹುಟ್ಟಿದವರು. ಇವರ ತಂದೆ ಸಂಪತ್ ತಾಯಿ ಶಶಿಕಲಾ ಇವರಿಗೆ ಅಭಿಜಿತ್ ಎಂಬ ತಮ್ಮನಿದ್ದಾನೆ. ಅನುಶ್ರೀ ಅವರು ಚಿಕ್ಕವರಿದ್ದಾಗಲೇ ತಂದೆ ತಾಯಿ ದೂರವಾದರು. ಹೆಂಡತಿ ಮಕ್ಕಳನ್ನು ನೋಡಿಕೊಳ್ಳಲು ಆಗದೆ ಅನುಶ್ರೀ ಅವರ ತಂದೆ ಬಿಟ್ಟುಹೋದರು. ಅನುಶ್ರೀ ಮನೆಯ ಹಿರಿಯ ಮಗಳು ಆದಕಾರಣ ಚಿಕ್ಕ ವಯಸ್ಸಿನಲ್ಲಿ ಮನೆಯ ಜವಾಬ್ದಾರಿಯೊಂದಿಗೆ ಅಮ್ಮ ಮತ್ತು ತಮ್ಮನನ್ನು ಸಾಕುವ ಜವಾಬ್ದಾರಿ ಹೊತ್ತುಕೊಂಡರು. ಈ ದೊಡ್ಡ ಜವಾಬ್ಧಾರಿಯನ್ನು ನಿಭಾಯಿಸಲು ಅನುಶ್ರೀ ಓದನ್ನು ನಿಲ್ಲಿಸಬೇಕಾಯಿತು. ಅಮ್ಮ ಮತ್ತು ತಮ್ಮನನ್ನು ಸಾಕಲು ಒಂದು ಹೊತ್ತಿನ ಊಟಕ್ಕಾಗಿ ಕೂಲಿ ಕೆಲಸ ಮಾಡಿ ಜೀವನ ನಡೆಸಿದ್ದು ಇದೆ. ಶಾಲೆಯಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಸ್ಟೇಜ್ ಮೇಲೆ ಆ್ಯಂಕರಿಂಗ್ ಮಾಡಿ ಸೈ ಎನಿಸಿಕೊಂಡಿದ್ದ ಅನುಶ್ರೀ ನಂತರ ಮಾತನ್ನೇ ಬಂಡವಾಳ ಮಾಡಿಕೊಂಡರು.

ಅನುಶ್ರೀ ಅವರು ನಮ್ಮ ಟಿ.ವಿ ಎಂಬ ಮಂಗಳೂರಿನ ಚಾನೆಲ್ ಒಂದರಲ್ಲಿ ಆ್ಯಂಕರಿಂಗ್ ಶುರು ಮಾಡಿದರು. ಅಲ್ಲಿಂದ ಖುಲಾಯಿಸಿತು ಅನುಶ್ರೀ ಅವರ ಅದೃಷ್ಟ ಅಲ್ಲಿಯವರೆಗೆ ಅನುಶ್ರೀ ಅವರ ಸಂಭಾವನೆ ಕೇವಲ 250ರೂ. ಇಂದು ಇವರ ಸಂಬಳ ಲಕ್ಷಗಳಲ್ಲಿ ಇದೆ. ನಂತರ ಈ ಟಿ.ವಿ ಕನ್ನಡದಲ್ಲಿ ಡಿಮ್ಯಾಂಡಪ್ಪೊ ಡಿಮ್ಯಾಂಡ್ ಕಾರ್ಯಕ್ರಮದ ನಿರೂಪಕಿಯಾದರು. ಬಿಗ್ ಬಾಸ್ ಸೀಸನ್ 1 ರಲ್ಲಿ ಸ್ಪರ್ಧಿಯಾದರು ಅಲ್ಲಿ 80 ದಿನಗಳನ್ನು ಕಳೆದರು ನಂತರ ವಿವಿಧ ಟಿ.ವಿ ಚಾನೆಲ್ ಗಳಲ್ಲಿ ಕೆಲಸ ಮಾಡುತ್ತಾ ನಂತರ ಜೀ ಕನ್ನಡದ ಸರಿಗಮಪ ಹೋಸ್ಟ್ ಮಾಡಿದಾಗ ಅಲ್ಲಿಂದ ಇವರ ಜೀವನವೇ ಬದಲಾಯಿತು ಇವರ ಸಂಭಾವನೆಯು ಏರಿ ನಂಬರ್ 1 ನಿರೂಪಕಿಯಾದರು ಅಲ್ಲದೇ ಅನುಶ್ರೀ ಅವರು ಯೂ ಟ್ಯೂಬ್ ಚಾನೆಲ್ ನಲ್ಲಿದ್ದು ಅಲ್ಲಿಂದನು ಒಳ್ಳೆ ಸಂಪಾದನೆ ಮಾಡುತ್ತಿದ್ದಾರೆ. ಒಂದು ಕಾಲದಲ್ಲಿ ಹೋಟೆಲ್ ನಲ್ಲಿ ಉಳಿದುಕೊಳ್ಳುತ್ತಿದ್ದ ಅನುಶ್ರೀ ಈಗ ಬೆಂಗಳೂರಿನಲ್ಲಿ ಸ್ವಂತ ಮನೆ ಮಾಡಿಕೊಂಡಿದ್ದಾರೆ. ನಮ್ಮಲ್ಲಿ ಟ್ಯಾಲೆಂಟ್ ಇದ್ದರೆ ಸಾಕು ಹಣದ ಆವಶ್ಯಕತೆ ಇಲ್ಲದೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಅನುಶ್ರೀ ಅವರು ಉತ್ತಮ ಉದಾಹರಣೆ. ಅನುಶ್ರೀ ಅವರು ಹೆಣ್ಣುಮಕ್ಕಳಿಗೆ ಮಾದರಿಯಾಗಿದ್ದಾರೆ.

By

Leave a Reply

Your email address will not be published. Required fields are marked *