ಜನವರಿ 31ರ ನಂತರ ಸರ್ಕಾರಿ ನೌಕರರಿಗೆ ಸಿಗಲಿದೆ ಸಿಹಿ ಸುದ್ದಿ

0 1

Central govt employees latest news: ಕೇಂದ್ರ ಸರ್ಕಾರದ 2023 ಹಾಗೂ 24ರ ಬಜೆಟ್ ಮಂಡನೆ ಇದೇ ಫೆಬ್ರವರಿ 1ರಂದು ನಡೆಯಲಿದ್ದು ಕೇಂದ್ರ ಸರ್ಕಾರದ ಕಡೆಯಿಂದ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ಸಿಗಲಿದೆ ಎಂಬುದಾಗಿ ತಿಳಿದುಬಂದಿದೆ. ಮೂಲಗಳ ಪ್ರಕಾರ ಸರ್ಕಾರಿ ನೌಕರರ ಸಂಬಳ (Salary of Govt) ಜನವರಿ 31ರ ನಂತರ ಹೆಚ್ಚಳವಾಗಲಿದೆ. ಹಣಕಾಸು ಸಚಿವೆ ಆಗಿರುವ ನಿರ್ಮಲ ಸೀತಾರಾಮನ್ (Nirmala Sitharaman) ಅವರು ಬಜೆಟ್ ಭಾಷಣ ಮಾಡುವಾಗ ಸರ್ಕಾರಿ ನೌಕರರ ಸಂಬಳ ಹೆಚ್ಚಾಗುವ ಕುರಿತಂತೆ ಮಾತನಾಡಲಿದ್ದಾರೆ ಎಂದು ತಿಳಿದುಬಂದಿದೆ.

ಸದ್ಯಕ್ಕೆ ಸರ್ಕಾರಿ ನೌಕರರ (Government employees) ತುಟ್ಟಿಭತ್ಯೆ 38% ಇದ್ದು, ಇದನ್ನು 3% ಹೆಚ್ಚು ಮಾಡುವ ಅಂದರೆ ಒಟ್ಟಾರೆಯಾಗಿ 41% ಮಾಡುವ ಯೋಚನೆಯಲ್ಲಿ ಕೇಂದ್ರ ಸರ್ಕಾರ ಇದೆ ಎಂದು ತಿಳಿದುಬಂದಿದೆ. ಈ ಮೂಲಕ ಸರ್ಕಾರಿ ನೌಕರರ ಸಂಬಳ ಭಾರಿ ಪ್ರಮಾಣದಲ್ಲಿ ಹೆಚ್ಚಾಗುವ ನಿರೀಕ್ಷೆ ಇದೆ. ಉದಾಹರಣೆಗೆ ಉದ್ಯೋಗಿ 18 ಸಾವಿರ ರೂಪಾಯಿ ಮೂಲ ಸಂಬಳವನ್ನು ತಿಂಗಳಿಗೆ ಪಡೆಯುತ್ತಿದ್ದರೆ, 38% ದಂತೆ ತುಟ್ಟಿಭತ್ಯೆ 6840 ಠೇವಣಿ ಸಿಗಲಿದೆ. 41% ಆದ ನಂತರ ಇದು ತಿಂಗಳಿಗೆ 540 ರೂಪಾಯಿಯಂತೆ ವರ್ಷಕ್ಕೆ 7380 ರೂಪಾಯಿ ಹೆಚ್ಚಳ ಆಗುತ್ತದೆ.

18000 ರೂಪಾಯಿಯ ಮೂಲ ವೇತನವನ್ನು ಹೊಂದಿರುವ ನೌಕರರಿಗೆ ಈಗಾಗಲೇ ವರ್ಷಕ್ಕೆ 6480 ರೂಪಾಯಿ ಯ ಲಾಭ ದೊರಕುತ್ತಿದೆ. ಕಳೆದ ವರ್ಷದ ಮಾರ್ಚ್ ನಲ್ಲಿಯೇ ಸರ್ಕಾರ ತುಟ್ಟಿಭತ್ಯೆಯನ್ನು ಪರಿಷ್ಕರಿಸಿತ್ತು ಈ ಕಾರಣದಿಂದಾಗಿ ಸರ್ಕಾರದ ಮೇಲೆ 12 ಸಾವಿರ ಕೋಟಿಗೂ ಅಧಿಕ ಹೊರೆ ಬಿದ್ದಿದ್ದರೂ ಕೂಡ 48 ಲಕ್ಷಕ್ಕೂ ಅಧಿಕ ಫಲಾನುಭವಿಗಳು ಇದರಿಂದ ಲಾಭವನ್ನು ಪಡೆದುಕೊಂಡಿದ್ದಾರೆ.

ಇದನ್ನೂ ಓದಿ..ಬರಿ SSLC ಓದಿದ್ರೆ ಸಾಕು, ಇಲ್ಲಿದೆ ನೋಡಿ ಕೈ ತುಂಬಾ ಸಂಬಳ ಸಿಗುವ ಕೆಲಸ

ಪಿಂಚಣಿಯನ್ನು ಪಡೆಯುತ್ತಿರುವವರೆಗೂ ಕೂಡ 34 ರಿಂದ 38 ಪ್ರತಿಶತ ತುಟ್ಟಿಭತ್ಯೆಯನ್ನು ಹೆಚ್ಚಿಸುವ ಯೋಜನೆ ಸಿದ್ಧವಾಗಿದೆ ಎಂಬುದಾಗಿ ಕೂಡ ಕೇಳಿ ಬರುತ್ತಿದೆ. ಇದರಿಂದಾಗಿ 68 ಲಕ್ಷಕ್ಕೂ ಅಧಿಕ ಪಿಂಚಣಿದಾರರು ಲಾಭವನ್ನು ಪಡೆಯುತ್ತಿದ್ದಾರೆ. ಒಟ್ಟಾರೆಯಾಗಿ ಮುಂಬರುವ ದಿನಗಳಲ್ಲಿ ಕೇಂದ್ರ ಸರ್ಕಾರದ ಘೋಷಣೆಯಿಂದಾಗಿ ಸರ್ಕಾರಿ ನೌಕರರು ಲಾಭವನ್ನು ಪಡೆದುಕೊಳ್ಳುವುದಂತು ಸತ್ಯ. ನೀವು ಒಂದು ವೇಳೆ ಕೇಂದ್ರ ಸರ್ಕಾರದ ನೌಕರರು ಆಗಿದ್ದರೆ ನಿಮ್ಮ ಅಭಿಪ್ರಾಯಗಳನ್ನು ಈ ಬಗ್ಗೆ ನಮ್ಮೊಂದಿಗೆ ಹಂಚಿಕೊಳ್ಳಿ.

Leave A Reply

Your email address will not be published.