ನಾವು ಪ್ರತೀ ನಿತ್ಯ ಅಡುಗೆಗೆ ಬೆಳೆಸುವಂತಹ ಹೂಕೋಸಿನ ಕೆಲವು ಆರೋಗ್ಯಕಾರಿ ಅಂಶಗಳ ಬಗ್ಗೆ ನಾವಿಲ್ಲಿ ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ಹೂಕೋಸು ಭಾರತೀಯ ಖಾದ್ಯಗಳಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದೆ. ಇದನ್ನು ಬಳಸಿ ಹಲವಾರು ರೀತಿಯ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಆದರೆ ಹೂಕೋಸಿನಿಂದ ನಮಗೆ ನಮ್ಮ ದೇಹಕ್ಕೆ ಆಗುವ ಹಲವಾರು ಆರೋಗ್ಯಕರ ಲಾಭಗಳ ಬಗ್ಗೆ ನಮಗೆ ತಿಳಿದಿರದು. ಹೂಕೋಸಿನಲ್ಲಿ ಸಲ್ಫರ್ ಅಂಶ ಹೇರಳವಾಗಿದ್ದು ಜಠರದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುವಲ್ಲಿ ಸಹಕಾರಿಯಾಗಿರುತ್ತದೆ. ಇದರ ಜ್ಯೂಸ್ ಕುಡಿಯುವುದರಿಂದ ಹಲವಾರು ರೀತಿಯ ಕ್ಯಾನ್ಸರ್ ಗಳನ್ನು ನಮಗೆ ಬರದಂತೆ ತಡೆಯುತ್ತದೆ. ಹೂಕೋಸಿನಲ್ಲಿ ಜಿಂಕ್, ಫಾಸ್ಫರಸ್, ಮೆಗ್ನೀಷಿಯಂ, ಸೆಲೆನಿಯಂ ಹಾಗೂ ಸೋಡಿಯಂ ಹೇರಳವಾಗಿದೆ. ಇದರಲ್ಲಿರುವ ಜಿಂಕ್ ಅಂಶ ಗಾಯಗಳನ್ನು ಬೇಗನೆ ಗುಣ ಮಾಡಿದರೆ ಸೋಡಿಯಂ ಅಂಶ ಮೂಳೆಗಳ ಬೆಳವಣಿಗೆಗೆ ಸಹಾಯಕಾರಿ ಆಗಿದೆ. ಹಾಗೆ ಅದೇ ರೀತಿ ಸೆಲೆನಿಯಮ್ ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯಕಾರಿ ಆದರೆ , ಮೆಗ್ನೀಷಿಯಂ ಹಾರ್ಮೋನುಗಳನ್ನು ಉತ್ಪತ್ತಿ ಮಾಡುವ ಪ್ಯಾರಾ ಥೈರಾಯ್ಡ್ ಗ್ಲಾನ್ ನ ಕಾರ್ಯ ವೈಶಿಷ್ಟ್ಯವನ್ನು ವರ್ಧಿಸುತ್ತದೆ. ಸೋಡಿಯಂ ದೇಹದಲ್ಲಿ ಇರುವ ಫ್ಲೂಯಿಡ್ ಗಳನ್ನೂ ಸರಿ ದೂಗಿಸಲು ಸಹಾಯಕಾರಿ ಆಗಿದೆ.

ಹೂಕೋಸಿನ ಇನ್ನೂ ಉತ್ತಮ ಅಂಶಗಳನ್ನು ನೋಡುವುದಾದರೆ, ಇದು ತೂಕ ಇಳಿಸಲು ಸಹಾಯಕಾರಿ ಆಗಿದೆ. ಹೂಕೋಸಿನಲ್ಲಿ ಇರುವ ಫಾಲೆಟ್ ಅಂಶವು ತೂಕ ಇಳಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ. ಒಂದು ಕಪ್ ಹುಕೊಸಿನಲ್ಲಿ 30 ಗ್ರಾಂ ಅಷ್ಟು ಕ್ಯಾಲೋರಿಯನ್ನು ಒಳಗೊಂಡಿರುತ್ತದೆ. ಕ್ಯಾನ್ಸರ್ ತಡೆಗಟ್ಟುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತವೆ ಎನ್ನುವುದು ಹಲವಾರು ಅಧ್ಯಯನಗಳಿಂದ ಸಾಬೀತು ಆಗಿದೆ. ಮಲಬದ್ಧತೆ ಸಮಸ್ಯೆ ಇದ್ದವರು ಈ ಹೂಕೋಸಿನ ಜ್ಯೂಸ್ ಸೇವಿಸುವುದು ಒಳ್ಳೆಯದು. ನಮ್ಮ ಜೀರ್ಣ ಕ್ರಿಯೆಯ ವ್ಯವಸ್ಥೆಯನ್ನು ಉತ್ತಮಗೊಳಿಸಿ ಈ ಮೂಲಕ ಮಲಬದ್ಧತೆಯನ್ನು ನಿವಾರಣೆ ಮಾಡುತ್ತದೆ. ಹೂಕೋಸು ಇದು ಹೃದಯಕ್ಕೆ ಒಳ್ಳೆಯದಾಗಿ ಇರುವ ಒಂದು ತರಕಾರಿ ಆಗಿದ್ದು ಹೃದಯವನ್ನು ಸುಸ್ಥಿತಿಯಲ್ಲಿ ಇಡಲು ಸಹಾಯಕಾರಿ ಆಗಿದೆ. ಇದರಲ್ಲಿ ಇರುವ ವಿಟಮಿನ್ ಏ, ವಿಟಮಿನ್ ಬಿ ಇವು ಹೊಸ ಕೋಶಗಳ ಬೆಳವಣಿಗೆಗೆ ಸಹಾಯಕಾರಿ ಆಗಿದೆ. ಗರ್ಭಿಣಿ ಸ್ತ್ರೀಯರಿಗೆ ಕೂಡಾ ಉತ್ತಮ ಆಹಾರ ಆಗಿದೆ. ಉತ್ಕರ್ಷಣ ವಿರೋಧಿ ಅಂಶವನ್ನು ಇದು ಹೊಂದಿದ್ದು , ಉತ್ತಮ ಸದೃಢ ನಿರೋಧಕ ಶಕ್ತಿಯನ್ನು ಉತ್ಪಾದಿಸುತ್ತದೆ. ಹುಕೋಸಿನಲ್ಲಿ ಇರುವಂತಹ ಕ್ಯಾಲ್ಸಿಯಂ ಅಂಶಗಳು ನಮ್ಮ ಮೂಳೆಗಳ ಬೆಳವಣಿಗೆಗೆ ಸಹಾಯಕಾರಿ ಆಗಿದೆ. ಇವಿಷ್ಟು ಅಲ್ಲದೆ ಹೂಕೋಸಿನಿಂದ ನಮಗೆ ಇನ್ನೂ ಸಾಕಶ್ಟು ಲಾಭಗಳು ಇವೆ.

By

Leave a Reply

Your email address will not be published. Required fields are marked *