Caste and Income Certificate: ಕಾಸ್ಟ್ ಮತ್ತು ಇನ್ಕಮ್ ಸರ್ಟಿಫಿಕೇಟ್ ಅನ್ನು ರಿನಿವಲ್ ಮಾಡುವುದು ಹೇಗೆ ಎಂದು ಈ ಲೇಖನದ ಮೂಲಕ ತಿಳಿದುಕೊಳ್ಳಬಹುದು. ಈ ಲೇಖನವನ್ನು ಪೂರ್ತಿಯಾಗಿ ನೋಡಿ ನಿಮಗೆ ತುಂಬಾ ಉಪಯೋಗಕಾರಿಯಾಗುತ್ತದೆ ಎಂದು ಅಂದುಕೊಂಡಿದ್ದೇವೆ.

ಜಾತಿ ಮತ್ತು ಆದಾಯ ಪ್ರಮಾಣ ಪತ್ರವು (Caste and Income Certificate) ಪ್ರತಿಯೊಬ್ಬ ನಾಗರಿಕನ ಬಳಿ ಇರಬೇಕು. ಸರ್ಕಾರಿ ನೌಕರಿಗೆ ಅರ್ಜಿ ಸಲ್ಲಿಸುವಾಗ ನಿಮ್ಮ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಕೇಳುತ್ತಾರೆ ಹಾಗೂ ಜಾತಿ ಆಧಾರದ ಮೇಲೆ ಮೀಸಲಾತಿ ನೀಡಿರುತ್ತಾರೆ ಅಷ್ಟೇ ಅಲ್ಲದೆ ಶಾಲಾ-ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಕೇಳುತ್ತಾರೆ.

ಈ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು 5 ವರ್ಷಕ್ಕೊಮ್ಮೆ ರಿನಿವಲ್ ಮಾಡಿಸಬೇಕಾಗುತ್ತದೆ ಮಾಡಿಸದಿದ್ದರೆ ರದ್ದುಗೊಳ್ಳುತ್ತದೆ. ರಿನಿವಲ್ ಮಾಡಲು ನೀವು ತಹಶೀಲ್ದಾರ್ ಕಚೇರಿಗೆ ಹೋಗಬೇಕಂತಿಲ್ಲ ನೀವೇ ನಿಮ್ಮ ಮೊಬೈಲ್ ನಲ್ಲಿ ಕೂಡ ರಿನಿವಲ್ ಮಾಡಬಹುದು. ಅದು ಹೇಗೆ ಎಂದು ನೋಡೋಣ.

ಈ https://nadakacheri.karnataka.gov.in/ajsk ವೆಬ್ಸೈಟ್ ಗೆ ಭೇಟಿ ನೀಡಿ. ನಂತರ ಅಲ್ಲಿ ಆನ್ಲೈನ್ ಅಪ್ಲಿಕೇಶನ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ನಂತರ ನಿಮ್ಮ ಮೊಬೈಲ್ ಸಂಖ್ಯೆಯನ್ನು ನೊಂದಾಯಿಸಿ, ಹೋಂ ಬಟನ್ ಮೇಲೆ ಕ್ಲಿಕ್ ಮಾಡಿ. ಅಲ್ಲಿ ಸರ್ಕಾರದ ಹಲವು ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸುವ ಆಯ್ಕೆಗಳು ಇರುತ್ತವೆ, ಅದರಲ್ಲಿ ನಾವು ಮೊದಲಿಗೆ ಜಾತಿ ಪ್ರಮಾಣ ಪತ್ರವನ್ನು ಆಯ್ಕೆ ಮಾಡಿಕೊಂಡು ಈ ಪ್ರಕ್ರಿಯೆ ಪೂರ್ತಿ ಮುಗಿದ ಮತ್ತೊಮ್ಮೆ ಆದಾಯ ಪ್ರಮಾಣ ಪತ್ರಕ್ಕೂ ಕೂಡ ಅರ್ಜಿ ಸಲ್ಲಿಸಿ.

ಅಲ್ಲಿ ಕೇಳಿರುವಂತಹ ಎಲ್ಲ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿ ಹಾಗೂ ಅಲ್ಲಿ ಕೇಳಿರುವಂತಹ ದಾಖಲಾತಿಯ ಸಾಫ್ಟ್ ಕಾಪಿಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕಾಗುತ್ತದೆ. ಕೆಲವೊಂದು ಕಾಲಂ ಕಡ್ಡಾಯವಾಗಿರುತ್ತದೆ ಅದನ್ನು ತಪ್ಪದೇ ಪೂರ್ತಿ ಮಾಡಬೇಕು. ಸೇವ್ ಬಟನ್ ಒತ್ತಿ ನಿಮ್ಮ ಮೊಬೈಲ್ಗೆ ಎಸಿಕೆ ನಂಬರ್ ಹೋಗುತ್ತದೆ ನಂತರ ಇದನ್ನು ಸ್ಕ್ರೀನ್ ಮೇಲೆ ಕೇಳಿರುವ ಆಪ್ಷನ್ ಅಲ್ಲಿ ಫೀಲ್ ಮಾಡಿ.

ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿದ ನಂತರ ಆನ್ಲೈನ್ ಬ್ಯಾಂಕಿಂಗ್ ಮೂಲಕ ಕನಿಷ್ಠ ಶುಲ್ಕವನ್ನು ಪಾವತಿ ಮಾಡಬೇಕು ಅಲ್ಲಿಗೆ ನಿಮ್ಮ ಅರ್ಜಿ ಸಲ್ಲಿಕೆ ಪೂರ್ತಿಯಾಗುತ್ತದೆ. ಜೊತೆಗೆ ಒಂದು ರೆಫರೆನ್ಸ್ ನಂಬರ್ ಸಿಗುತ್ತದೆ ಆ ನಂಬರ್ ಮೂಲಕ ನೀವು ನಿಮ್ಮ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು.

Leave a Reply

Your email address will not be published. Required fields are marked *