ಭಾರತ ಸರ್ಕಾರವು ಇಂದು ಭಾರತೀಯ ಕಾನೂನು ಆಧಾರಿತ ಮೀಸಲಾತಿಯ ಸೌಲಭ್ಯವನ್ನು ಶೇಕಡಾವಾರು ಪ್ರಮಾಣದ ಮೇಲೆ ಸರ್ಕಾರಿ ಮತ್ತು ಸಾರ್ವಜನಿಕ ಕಂಪನಿಗಳ ನೇಮಕಾತಿಯಲ್ಲಿ ಸೇವಾವಕಾಶವನ್ನು ಒದಗಿಸುತ್ತಿದೆ. ಅಷ್ಟೇ ಅಲ್ಲದೇ ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿಯೂ ಮೀಸಲಾತಿ ನೀಡುತ್ತದೆ. ಆದರೆ ಧಾರ್ಮಿಕ/ಭಾಷಾ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳನ್ನು ಈ ನಿಯಮಗಳಿಂದ ಹೊರತುಪಡಿಸಲಾಗಿದೆ. ಮನೆಯಲ್ಲೇ ಕುಳಿತುಕೊಂಡು ಆದಾಯ ಮತ್ತು ಜಾತಿ ಪ್ರಮಾಣ ಪತ್ರದ ರಿ ಪ್ರಿಂಟ್ ಅನ್ನು ಹೇಗೆ ಪಡೆಯುವುದು ಎಂಬ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಪ್ರಮುಖವಾದುದ್ದೆಂದರೆ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳಿಗೆ ಅಂದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಸಾಮಾಜಿಕ ಹಿಂದುಳಿದಿರುವಿಕೆಯನ್ನು ಹೋಗಲಾಡಿಸಲು ಸರ್ಕಾರ ಇದನ್ನು ಜಾರಿಗೊಳಿಸಿದೆ. ಇದನ್ನು ನೀಡುವ ಕಾರಣವೆಂದರೆ ಅವರು ಇಂತಹ ಸೇವಾವಲಯಗಳಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಸೂಕ್ತ ಪ್ರಮಾಣದ ಪ್ರಾತಿನಿಧಿತ್ವ ಹೊಂದಿರುವುದಿಲ್ಲ.ಈ ಕೊರತೆ ನೀಗಿಸಲು ಭಾರತ ಸರ್ಕಾರವು ಈ ಕೋಟಾ ಪದ್ದತಿಯನ್ನು ಜಾರಿಗೊಳಿಸಿದೆ. ಇಂತಹ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಆ ವ್ಯಾಪ್ತಿಯ ನಾಡಕಚೇರಿಯಲ್ಲಿ ನೀಡಲಾಗುತ್ತದೆ. ಇದನ್ನು ಜೆರಾಕ್ಸ್ ರೂಪದಲ್ಲಿ ನೀಡಲು ಸಾಧ್ಯವಿಲ್ಲ. ಆದಕಾರಣ ಇದರ ಪ್ರತಿಯನ್ನು ಮತ್ತೆ ಪಡೆಯಲು ನಾಡಕಚೇರಿಗೆ ತೆರಳಬೇಕಾಗುತ್ತದೆ.
ಇಂತಹ ಸಮಸ್ಯೆಯನ್ನು ನೀಗಿಸಲು ಭಾರತ ಸರ್ಕಾರವೇ ಆನ್ಲೈನ್ ಅಪ್ಲಿಕೇಶನ್ ಗಳ ಮೂಲಕ ಎಷ್ಟು ಬಾರಿಯಾದರು ಸಹ ಇದನ್ನು ಪಡೆಯಲು ಅವಕಾಶವನ್ನು ನೀಡಿದೆ. ಕರ್ನಾಟಕ ಸರಕಾರದ ವೆಬ್ ಸೈಟ್ ದೊರಕುತ್ತದೆ. ಅದನ್ನು ಕ್ಲಿಕ್ ಮಾಡಿದಾಗ ನಾಡಕಛೇರಿ ಅಫಿಶಿಯಲ್ ವೆಬ್ ಸೈಟ್ ಓಪನ್ ಆಗುತ್ತದೆ. ಈ ಸೈಟ್ ಓಪನ್ ಆದಮೇಲೆ ಅದರೊಳಗೆ ಆನ್ಲೈನ್ ಅಪ್ಲಿಕೇಶನ್ ಎಂಬ ಆಪ್ಷನ್ ದೊರಕುತ್ತದೆ. ಅದ್ರೊಳಗೆ ಅಪ್ಲೈ ಆನ್ಲೈನ್ ಆಪ್ಷನ್ ಅನ್ನು ಕ್ಲಿಕ್ ಮಾಡಬೇಕಾಗುತ್ತದೆ. ಕ್ಲಿಕ್ ಮಾಡಿದ ತಕ್ಷಣ ಮೊಬೈಲ್ ನಂಬರ್ ಅನ್ನು ಕೇಳುತ್ತದೆ. ಅಲ್ಲಿ ಮೊಬೈಲ್ ನಂಬರ್ ಮತ್ತು ಕ್ಯಾಪ್ಚರ್ ಕೋಡ್ ಅನ್ನು ಹಾಕಿ ಸೈಟ್ ಲಾಗಿನ್ ಆಗಬೇಕಾಗುತ್ತದೆ. ಇದನ್ನು ಲಾಗಿನ್ ಆದ ತಕ್ಷಣ ಎಲ್ಲ ಬಗೆಯ ಆಪ್ಷನ್ ದೊರಕುತ್ತದೆ.
ಹೊಸ ಅಪ್ಲಿಕೇಶನ್ಗಳನ್ನು ಹಾಕಲು ಮತ್ತು ಹಾಕಿದ ಅಪ್ಲಿಕೇಶನ್ ರಿಪ್ರಿಂಟನ್ನು ಪಡೆಯುವ ಎಲ್ಲಾ ಆಪ್ಷನ್ ಗಳು ದೊರೆಯುತ್ತದೆ. ಇದರಲ್ಲಿ ಬರುವ ಪ್ರಿಂಟ್ ಆಪ್ಷನ್ ನಲ್ಲಿ ಹೋಗಿ ಅದರೊಳಗೆ ರಿಪ್ರಿಂಟ್ ಅಪ್ಲಿಕೇಶನ್ ಎಂಬ ಆಕ್ಷನ್ ಅನ್ನು ಕ್ಲಿಕ್ ಮಾಡಿದಾಗ ಅಕ್ನಲೆಜ್ಮೆಂಟ್ ನಂಬರ್ ಅನ್ನು ಕೇಳುತ್ತದೆ. ಅಕ್ನಾಲೆಜ್ಮೆಂಟ್ ಮೊದಲು ಅಪ್ಲಿಕೇಶನ್ ನೀಡಿದಾಗ ಅದಕ್ಕೆ ದೊರೆತಿರುತ್ತದೆ. ಅಕ್ನಲೆಜ್ಮೆಂಟ್ ನಂಬರ್ ಹಾಕಿ ಸರ್ಚ್ ಅನ್ನು ನೀಡಿದಾಗ ಅದರೊಳಗೆ ನಿಮ್ಮ ಆದಾಯ ಮತ್ತು ಜಾತಿ ಪ್ರಮಾಣ ಪತ್ರದ ವಿವರಗಳು ದೊರಕುತ್ತದೆ. ಇದರ ರಿಪ್ರಿಂಟ್ ಪಡೆಯಲು ಹಣವನ್ನು ತುಂಬಬೇಕಾಗುತ್ತದೆ. ಅದಕ್ಕಾಗಿ ಪೇ ಸರ್ವಿಸ್ ಫೀಸ್ ಎಂಬ ಆಯ್ಕೆಯನ್ನು ಪಡೆದಾಗ ಅದರೊಳಗೆ ಆರ್ .ಡಿ. ನಂಬರ್ ದೊರಕುತ್ತದೆ.
ಅದರ ಮೇಲೆ ಓಕೆ ಎಂದು ಕ್ಲಿಕ್ ಮಾಡಿ 25 ರೂ ಸರ್ವಿಸ್ ಚಾರ್ಜ್ ಅನ್ನು ಹಾಕಿ ಕೆಳಗೆ ಕೊಟ್ಟಿರುವ ನೀತಿ-ನಿಯಮಗಳ ಪಟ್ಟಿಯನ್ನು ಓಕೆ ಎಂದು ಕ್ಲಿಕ್ ಮಾಡಿ ನಿಮ್ಮ ಆನ್ಲೈನ್ ಪೇಮೆಂಟ್ ಆಕ್ಷನ್ ನ ಮೂಲಕ ಪೇಮೆಂಟ್ ಅನ್ನು ಮಾಡಬಹುದು. ಇದಾದನಂತರ ಪೇಮೆಂಟ್ ಸಕ್ಸೆಸ್ಫುಲ್ ಎಂಬ ಆಪ್ಷನ್ ಬಂದಮೇಲೆ ಪ್ರಿಂಟ ಆಪ್ಷನ್ ದೊರೆಯುತ್ತದೆ. ಇದನ್ನು ಕ್ಲಿಕ್ ಮಾಡಿದಾಗ ಇದನ್ನು ಪ್ರಿಂಟ್ ರೂಪದಲ್ಲಾದರೂ ಪಡೆಯಬಹುದು ಅಥವಾ ಪಿಡಿಎಫ್ ರೂಪದಲ್ಲಿ ಇಟ್ಟುಕೊಂಡು ಬೇಕಾದ ಸಮಯದಲ್ಲಿ ಪ್ರಿಂಟ್ ಅನ್ನು ತೆಗೆದುಕೊಳ್ಳಬಹುದು. ಹೀಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ರಿಪ್ರಿಂಟ್ ಅನ್ನು ಮನೆಯಲ್ಲಿಯೇ ಕುಳಿತು ಪಡೆದುಕೊಳ್ಳಬಹುದಾಗಿದೆ.