ಕುರಿ ಸಾಕಣೆ ಮಾಡಲು ಯಾವ ಶೇಡ್ ಉತ್ತಮ?

0 6

ಕೃಷಿ ಮಾಡುವುದರೊಂದಿಗೆ ರೈತರು ಕುರಿ ಸಾಕಾಣಿಕೆ, ಪಶು ಸಾಕಾಣಿಕೆ, ಕೋಳಿ ಸಾಕಾಣಿಕೆ ಮಾಡುತ್ತಾರೆ. ಕುರಿಗಳಿಗೆ ಯಾವ ಆಹಾರ ಕೊಡಬೇಕು, ಯಾವ ತಳಿಯ ಕುರಿಗಳನ್ನು ಸಾಕಬೇಕು ಎಂಬ ಮುಂತಾದವುಗಳ ಬಗ್ಗೆ ಕುರಿಸಾಕಾಣಿಕೆ ಮಾಡಿದ ರೈತನ ಮಾತುಗಳನ್ನು ಈ ಲೇಖನದಲ್ಲಿ ನೋಡೋಣ.

ಯಾದಗಿರಿ ತಾಲೂಕಿನ ಒಂದು ಗ್ರಾಮದಲ್ಲಿ ಸಿದ್ದರಾಮ ಎಂಬುವವರು 6 ವರ್ಷದಿಂದ ಕುರಿ ಸಾಕಾಣಿಕೆ ಮಾಡಿದ್ದಾರೆ. ಅವರು ಹೈಟೆಕ್ ಶೆಡ್ ಮತ್ತು ಅದರ ಕೆಳಗೆ ನೆಲದ ಮೇಲೆ ಸಾಮಾನ್ಯ ಶೆಡ್ ನಿರ್ಮಿಸಿದ್ದಾರೆ. ಹೈಟೆಕ್ ಶೆಡ್ ನಿರ್ಮಿಸಲು 8-9 ಲಕ್ಷ ರೂಪಾಯಿ ಹಣ ಖರ್ಚಾಗುತ್ತದೆ, ಇದು 40 ಫೀಟ್ ಉದ್ದವಿದೆ, ಕೆಳಗಡೆ ನೆಲದ ಮೇಲೆ ಶೆಡ್ ನಿರ್ಮಿಸಲು 3 ಲಕ್ಷ ರೂಪಾಯಿ ಖರ್ಚಾಗಿದೆ. ಎರಡು ಶೆಡ್ ನಲ್ಲಿ 130 ಮರಿಗಳಿವೆ. ಕುರಿ ಸಾಕಾಣಿಕೆ ಮಾಡಲು ಹೈಟೆಕ್ ಶೆಡ್ ಉತ್ತಮ ಎಂದು ಸಿದ್ದರಾಮ ಅವರು ಹೇಳಿದರು. ಅವರು ಕುರಿಯನ್ನು 4 ತಿಂಗಳು ಸಾಕುತ್ತಾರೆ. ಅವರು 5-6,000 ರೂಪಾಯಿವರೆಗಿನ ಮರಿಗಳನ್ನು ಸಂತೆಯಿಂದ ತಂದು ಸಾಕುತ್ತಾರೆ. ಮರಿಯನ್ನು ಸಾಕಿ ಒಂದು ಕುರಿಗೆ 9,000-10,000 ರೂಪಾಯಿಯವರೆಗೆ ಮಾರಾಟ ಮಾಡುತ್ತಾರೆ. ಖರ್ಚು ತೆಗೆದು 2 ಲಕ್ಷ ರೂಪಾಯಿ ಹಣ ಲಾಭವಾಗುತ್ತದೆ. ಕೆಲವರು ಮನೆಗೆ ಬಂದು ವ್ಯಾಪಾರ ಮಾಡುತ್ತಾರೆ ಮಾರ್ಕೆಟಿನಲ್ಲಿ ಕುರಿ ವ್ಯಾಪಾರ ಮಾಡುತ್ತಾರೆ. ಬೇರೆ ಬೇರೆ ಬಿಸಿನೆಸ್ ಮಾಡಿಕೊಂಡು ಕುರಿ ಸಾಕಾಣಿಕೆ ಮಾಡಿದರೆ ಲಾಸ್ ಆಗುತ್ತದೆ ಎಂದು ಅವರು ಕುರಿ ಸಾಕಾಣಿಕೆ ಮಾಡುವವರಿಗೆ ಸಲಹೆ ನೀಡಿದ್ದಾರೆ. ಟೆಂಗೂರಿ ತಳಿಯ ಕುರಿಗಳನ್ನು ಅವರು ಸಾಕಿದ್ದಾರೆ. ಈ ತಳಿಯ ಕುರಿಗಳಿಗೆ ಹೆಚ್ಚು ಬೇಡಿಕೆ ಇದೆ ಮತ್ತು ಇಲ್ಲಿಯ ವಾತಾವರಣಕ್ಕೆ ಹೊಂದಿಕೊಳ್ಳುತ್ತವೆ. ಹುಲ್ಲು, ಶೇಂಗಾ ಹೊಟ್ಟು, ತೊಗರು ಹೊಟ್ಟುಗಳನ್ನು ಮಿಕ್ಸ್ ಮಾಡಿ ಕುರಿಗಳಿಗೆ ಕೊಡುತ್ತಾರೆ. 4 ಜನ ಕೆಲಸಗಾರರು ಶೆಡ್ ನ್ನು ನಿರ್ವಹಣೆ ಮಾಡುತ್ತಾರೆ. ಕುರಿಗಳನ್ನು ಹೊರಗೆ ಬಿಡುತ್ತಾರೆ. ಕುರಿಗಳಿಗೆ ಪಿಪಿಆರ್ ಮುಂತಾದ ಲಸಿಕೆಯನ್ನು ವೈದ್ಯರಿಂದ ಹಾಕಿಸಲಾಗಿದೆ.

ಸಾಮಾನ್ಯವಾಗಿ 100 ಮರಿಯಲ್ಲಿ 10 ಮರಿ ಸತ್ತು ಹೋಗುತ್ತವೆ. ಮರಿಗಳನ್ನು ತಂದು ಲಸಿಕೆಗಳನ್ನು ಸರಿಯಾಗಿ ಹಾಕಿದಾಗ ಮರಿಗಳು ಸಾಯುವ ಪ್ರಮಾಣ ಕಡಿಮೆ ಆಗುತ್ತದೆ. ಮೊದಲಿನಿಂದಲೂ ಇವರು ಕುರಿ ಸಾಕಾಣಿಕೆ ಮಾಡುತ್ತಿದ್ದರು ಈಗ ದೊಡ್ಡ ಪ್ರಮಾಣದಲ್ಲಿ ಮಾಡುತ್ತಿದ್ದಾರೆ. 16 ಇಂಚಿನ ಪೈಪಿನಲ್ಲಿ ಕುರಿಗಳಿಗೆ ಫುಡ್ ಹಾಕಲಾಗುತ್ತದೆ. ಬೇರೆ ರಾಜ್ಯದ ತಳಿಗಳ ಕುರಿಗಳನ್ನು ತಂದರೆ ಅವುಗಳನ್ನು ನಿರ್ವಹಣೆ ಮಾಡಲು ಕಷ್ಟವಾಗುತ್ತದೆ. ಅವರು ಸಂತೆಯಲ್ಲಿ ಆರೋಗ್ಯವಂತ, ಲಕ್ಷಣ ಇರುವ ಮರಿಗಳನ್ನು ನೋಡಿ ಖರೀದಿಸಬೇಕು ಎಂದು ಹೇಳಿದರು. ಕುರಿ ಸಾಕಾಣಿಕೆ ಮಾಡುವವರು ಲಕ್ಷ್ಯ ಕೊಟ್ಟು ಕುರಿಗಳನ್ನು ಸಾಕಿದರೆ ಉತ್ತಮ ಲಾಭವನ್ನು ಗಳಿಸಬಹುದು ಎಂದು ಹೊಸದಾಗಿ ಕುರಿ ಸಾಕಾಣಿಕೆ ಮಾಡುವವರು ಸಲಹೆ ನೀಡಿದ್ದಾರೆ.

Leave A Reply

Your email address will not be published.