ಪ್ರತಿಯೊಬ್ಬರ ಮನೆಯಲ್ಲೂ ಏಲಕ್ಕಿ ಇದ್ದೇ ಇರತ್ತೆ ತುಂಬಾ ಜನರಿಗೆ ಏಲಕ್ಕಿಯನ್ನ ಕೇವಲ ಮಸಾಲೆ ಪದಾರ್ಥವಾಗಿ ಅಥವಾ ಮಸಾಲ ಟೀಗಳಿಗೆ ಮತ್ತು ಸಿಹಿ ಪದಾರ್ಥಗಳಿಗೆ ಮಾತ್ರ ಬಳಸಿ ಗೊತ್ತು. ಆದರೆ ನಿಜವಾಗಿ ಹೇಳುವುದಾದರೆ ಈ ಏಲಕ್ಕಿಯಲ್ಲಿ ಎಷ್ಟೋ ಔಷಧೀಯ ಗುಣಗಳೂ ಕೂಡ ಇದೆ. ಈ ಲೇಖನದ ಮೂಲಕ ನಾವು ಹೇಗೆ ಎಷ್ಟು ಪ್ರಮಾಣದಲ್ಲಿ ತೆಗೆದುಕೊಂಡರೆ ನಮ್ಮ ಆರೋಗ್ಯಕ್ಕೆ ಒಳ್ಳೆಯದು ಅಥವಾ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ.
ಈ ಏಲಕ್ಕಿಯನ್ನ ನಾವು ತಿಳಿಸುವ ಪ್ರಮಾಣದಲ್ಲಿ ತೆಗೆದುಕೊಂಡರೆ ನಿಮ್ಮ ಆರೋಗ್ಯದಲ್ಲಿ ಏನೆಲ್ಲಾ ಲಾಭ ಪಡೆಯಬಹುದು ಅನ್ನೋದನ್ನ ನೋಡೋಣ. ಏಲಕ್ಕಿಯ ಪೊಟ್ಯಾಷಿಯಂ, ಮೆಗ್ನೀಷಿಯಂ, ಕ್ಯಾಲ್ಸಿಯಂ, ಫೈಬರ್ ಅಧಿಕವಾಗಿ ಇದೆ. ಮಲಬಧ್ಧತೆ ಸಮಸ್ಯೆ ಇರುವವರು ರಾತ್ರಿ ಮಲಗುವ ಮುನ್ನ ಒಂದೆರಡು ಏಲಕ್ಕಿಯನ್ನ ಜಗಿದು ಬಿಸಿ ನೀರು ಕುಡಿದು ಮಲಗಿದರೆ ಮಲಬಧ್ಧತೆ ಸಮಸ್ಯೆ ನಿವಾರಣೆ ಆಗುತ್ತದೆ. ಇದರಲ್ಲಿರುವ ಫೈಬರ್ ಮಲಬಧ್ಧತೆಯನ್ನ ಸಂಪೂರ್ಣವಾಗಿ ನಿವಾರಿಸತ್ತೇ.
ಎರಡು ಏಲಕ್ಕಿಯನ್ನ ಅಗೆದು ತಿನ್ನುವುದರಿಂದ ಇದರಲ್ಲಿ ಇರುವ ಪೊಟ್ಯಾಷಿಯಂ ಹ್ರದಮ ಬಡಿತವನ್ನ ಕ್ರಮಬಧ್ಧವಾಗಿಸತ್ತೆ. ಹಾಗೇ ಏಲಕ್ಕಿಯಲ್ಲಿರುವ ಪೀಚ್ ಪದಾರ್ಥ ಜೀರ್ಣ ಕ್ರಿಯೆಗೆ ಸಹಾಯ ಮಾಡತ್ತೆ. ಹೊಟ್ಟೆ ಹಸಿವನ್ನ ಹೆಚ್ಚಿಸುತ್ತದೆ. ಪ್ರತೀ ದಿನ ರಾತ್ರಿ ಮಲಗುವ ಮುನ್ನ ಕಾಯಿಸಿದ ಹಾಲಿಗೆ ಅರ್ಧ ಟೀ ಚಮಚ ಏಲಕ್ಕಿ ಪುಡಿ, ಚಿಟಕಿ ಅರಿಶಿಣ, ಸ್ವಲ್ಪ ಸಕ್ಕರೆ ಸೇರಿಸಿ ಕುಡಿಯುವುದರಿಂದ ರಕ್ತ ಹೀನತೆ ಸಮಸ್ಯೆಯನ್ನ ನಿವಾರಿಸಿಕೊಳ್ಳಬಹುದು. ಏಲಕ್ಕಿಯನ್ನ ಜಗಿದು ತಿನ್ನುವುದರಿಂದ ಬಾಯಿಯ ದುರ್ವಾಸನೆ ಕಡಿಮೆ ಆಗತ್ತೆ ಜೊತೆಗೆ ವಸಡು ಮತ್ತು ಹಲ್ಲುಗಳನ್ನ ಗಟ್ಟಿಯಾಗಿಸುತ್ತದೆ. ಏಲಕ್ಕಿಯನ್ನ ಎಣ್ಣೆಯಲ್ಲಿ ಬಿಸಿ ಮಾಡಿ ಆ ಎಣ್ಣೆಯನ್ನ ಮುಖಕ್ಕೆ ಹಚ್ಚುವುದರಿಂದ ಕಾಂತಿಯತವಾಗಿ ಇರುತ್ತದೆ. ಗಂಟಲು ನೋವು ಕಂಡುಬಂದಾಗ ೧ಗ್ಲಾಸ್ ನೀರಿಗೆ ೨/೩ ಏಲಕ್ಕಿ ಹಾಕಿ ಕುದಿಸಿ, ಉಗುರು ಬೆಚ್ಚಗೆ ಇರುವಾಗ ಕುಡಿಯುವುದರಿಂದ ಗಂಟಲು ನೋವು ಕಡಿಮೆ ಆಗುತ್ತದೆ. ೨ಏಲಕ್ಕಿಯನ್ನ ಅಗೆದು ತಿನ್ನುವುದರಿಂದ ಶರೀರದಲ್ಲಿ ಬೇಡವಾದ ವಿಷಕಾರಿ ಅಂಶವನ್ನ ತೆಗೆದುಹಾಕುತ್ತದೆ. ಏಲಕ್ಕಿ ರೋಗನಿರೋಧಕ ಶಕ್ತಿಯನ್ನ ಹೆಚ್ಚಿಸುತ್ತದೆ. ಸತತವಾಗಿ ಪ್ರತಿದಿನ ಏಲಕ್ಕಿಯನ್ನ ತಿನ್ನುವುದರಿಂದ ಮುಳೆಗಳನ್ನು ಗಟ್ಟಿಯಾಗಿಸುತ್ತದೆ.
ತಲೆಕೂದಲು ದಟ್ಟವಾಗಿ ಬೆಳೆಯಲೂ ಸಹ ಏಲಕ್ಕಿ ಸಹಾಯ ಮಾಡುತ್ತದೆ. ತಲೆ ನೋವು ಇದ್ದಾಗ ೧/೨ ಏಲಕ್ಕಿಯನ್ನ ತಿನ್ನುವುದರಿಂದ ತಲೆ ನೋವು ಕಡಿಮೆ ಆಗತ್ತೆ. ಅಸ್ಥಮ ಮತ್ತು ಉಸಿರಾಟದ ತೊಂದರೆ ಇರುವವರು ನಿಯಮಿತವಾಗಿ ಸೇವಿಸಬೇಕು. ಬಾಯಿ ಹುಣ್ಣು ಆದಾಗ ಏಲಕ್ಕಿಯನ್ನ ಅಗೆದರೆ ಬಾಯಿಹುಣ್ಣು ಕಡಿಮೆ ಆಗುತ್ತದೆ. ವಾಂತಿ, ಕೆಮ್ಮು, ಗ್ಯಾಸ್ ಟ್ರಬಲ್ ಗೆ ಏಲಕ್ಕಿ ರಾಮಬಾಣ. ಉರಿಮೂತ್ರ ಆದಾಗ ಒಂದು ಲೋಟ ನೀರಿಗೆ ಅರ್ದ ಚಮಚ ಏಲಕ್ಕಿ, ಒಂದು ಚಮಚ ನೆಲ್ಲಿಕಾಯಿ ಪುಡಿ ಸೇರಿಸಿ ತಿನ್ನುವುದರಿಂದ ಕಡಿಮೆ ಆಗುತ್ತದೆ. ಏಲಕ್ಕಿ ಮತ್ತು ಪುದೀನಾ ಎಲೆ ಸೇರಿಸಿ, ಕಶಾಯ ಮಾಡಿ ಕುಡಿಯುವುದರಿಂದ ಬಿಕ್ಕಳಿಕೆ ಕಡಿಮೆ ಆಗತ್ತೇ. ಬಾಯಿ ಹೂಣ್ಣು / ಅಲ್ಸರ್ ನ ಸಮಸ್ಯೆಗೇ ಅರ್ದ ಚಮಚ ಏಲಕ್ಕಿ ಪುಡಿ ಮತ್ತೂ ಒಂದು ಚಮಚ ಜೇನುತುಪ್ಪ ಸೇರಿಸಿ ತಿಂದರೆ ಕಡಿಮೆ ಆಗತ್ತೆ. ಶರೀರದಲ್ಲಿ ಉಷ್ಣತೆ ಅತಿಯಾಗಿದ್ದರೆ, ನಿಂಬು ಶರಬತ್ತಿನಲ್ಲಿ ಅರ್ಧ ಚಮಚ ಏಲಕ್ಕಿ ಪುಡಿಯನ್ನ ಬೆರೆಸಿ ಕುಡಿದರೆ ಕಡಿಮೆ ಆಗತ್ತೆ. ಇವಿಷ್ಟು ನಮ್ಮ ಆರೋಗ್ಯಕ್ಕೆ ಹಲವಾರು ಪ್ರಯೋಜನ ಆಗುವ ಏಲಕ್ಕಿಯ ಪ್ರಯೋಜನಗಳು.