ಸಾಮಾನ್ಯವಾಗಿ ಬಹಳಷ್ಟು ಜನ ದೇಹದ ತೂಕವನ್ನು ಇಳಿಸಿಕೊಳ್ಳಲು ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ. ಆದ್ರೆ ಕೆಲವರಿಗೆ ಉತ್ತಮ ಫಲಿತಾಂಶ ಕಂಡರೆ, ಇನ್ನು ಕೆಲವರಿಗೆ ಫಲಿತಾಂಶ ದೊರೆಯದೆ ಇರಬಹುದು. ಹಿಂದಿನ ಕಾಲದಲ್ಲಿ ಸರಿಯಾಗಿ ಊಟವಿಲ್ಲದೆ ಹಾಗೂ ಸೊಪ್ಪು ತರಕಾರಿ ಹಣ್ಣು ಇತ್ಯಾದಿಗಳನ್ನು ತಿಂದು ಆರೋಗ್ಯವಂತರಾಗಿ ಬದುಕುತ್ತಿದ್ದರು ಆದ್ರೆ ಇದೀಗ ಜನ ಇರೋ ಬರೋ ಜಂಕ್ ಫುಡ್ ಸೇವನೆ ಮಾಡಿ ಅನಾರೋಗ್ಯ ಬೊಜ್ಜು ಸಮಸ್ಯೆ ಎದುರಿಸುತ್ತಿ
ನೈಸರ್ಗಿಕವಾಗಿ ಸಿಗುವಂತರ ಆಹಾರಗಳ ಸೇವನೆ ಜೊತೆಗೆ ದೇಹಕ್ಕೆ ದಣಿವು ಆಗುವಂತ ಕೆಲಸ ಮಾಡಬೇಕು ಇದರಿಂದ ದೇಹದಲ್ಲಿನ ಬೆವರು ಹೊರ ಹೋದರೆ ಶರೀರಕ್ಕೆ ರೋಗಗಳು ಕಾಯಿಲೆ ಅಂಟೋದಿಲ್ಲ ಅಲ್ಲದೆ ಬೊಜ್ಜು ಕೂಡ ಬೆಳೆಯೋದಿಲ್ಲ. ಮುಖ್ಯವಾಗಿ ಹೇಳುವುದಾದರೆ ಕುಳಿತ ಜಾಗದಲ್ಲೇ ಗಂಟೆಗಟ್ಟಲೆ ಕೆಲಸ ಮಾಡುವುದು ಹಾಗೂ ದೇಹಕ್ಕೆ ದಣಿವು ಆಗದೆ ಇರುವಂತ ಕೆಲಸ ಮಾಡುವುದರಿಂದ ಶರೀರಕ್ಕೆಅಜೀರ್ಣತೆ ಸಮಸ್ಯೆ ಹಾಗೂ ಬೊಜ್ಜು ಸಮಸ್ಯೆ ಕಾಡುತ್ತದೆ.
ಮಜ್ಜಿಗೆಯಲ್ಲಿ ಈ ಪದಾರ್ಥಗಳನ್ನು ಬೆರಸಿ ಸೇವಿಸುವುದರಿಂದ ದೇಹದ ಬೊಜ್ಜು ಬಹುಬೇಗನೆ ಇಳಿಯುತ್ತದೆ ಅನ್ನೋದನ್ನ ಹೇಳಲಾಗುತ್ತದೆ ಅಷ್ಟಕ್ಕೂ ಈ ಮನೆಮದ್ದು ಯಾವುದು ಅನ್ನೋದನ್ನ ತಿಳಿಯೋಣ ನಿಮಗೆ ಈ ಮಾಹಿತಿ ಇಷ್ಟವಾದಲ್ಲಿ ಷೇರ್ ಮಾಡಿಕೊಳ್ಳಿ.
ಮನೆಮದ್ದು: ಬೇಕಾಗವ ಸಾಮಗ್ರಿಗಳು ಕೆನೆ ಇಲ್ಲದ ಮಜ್ಜಿಗೆ- ಒಂದು ಗ್ಲಾಸ್, ಓಂಕಾಳಿನ ಪುಡಿ(ಅಜ್ವನಾ)- ಅರ್ಧ ಚಮಚ, ಶುಂಠಿ- ಎರಡು ಚಮಚ, ಕರಿಬೇವು- 6 ಎಲೆಗಳು ಇನ್ನು ಇದನ್ನು ಹೇಗೆ ತಯಾರಿಸೋದು ಅನ್ನೋದನ್ನ ನೋಡುವುದಾದರೆ ಮೊದಲನೆಯದಾಗಿ ಒಂದು ಗ್ಲಾಸ್ ಕೆನೆ ಇಲ್ಲದ ಮಜ್ಜಿಗೆಯನ್ನು ತೆಗೆದುಕೊಂಡು, ಅದಕ್ಕೆ ಶುಂಠಿ ಪೇಸ್ಟ್ ಅನ್ನು ಹಾಕಿ ಚನ್ನಾಗಿ ಮಿಶ್ರಣ ಮಾಡಿ. ನಂತರ ಓಂ ಕಾಳಿನ ಪುಡಿ ಮತ್ತು ಕರಿಬೇವನ್ನು ಬೆರೆಸಿ ನಿಮಗೆ ಬೇಕಾದಷ್ಟು ನೀರನ್ನು ಮಿಶ್ರಣ ಮಾಡಿ ಮಜ್ಜಿಗೆಯನ್ನು ಕುಡಿಯ ಬೇಕು. ನಿಮಗೆ ರುಚಿ ಬೇಕು ಎಂದರೆ ಸ್ವಲ್ಪ ಉಪ್ಪನ್ನು ಬೆರೆಸಿಕೊಳ್ಳಿ.
ಇದನ್ನು ಯಾವ ಸಮಯದಲ್ಲಿ ಕುಡಿಯಬೇಕು ಅನ್ನೋದನ್ನ ತಿಳಿಯುವುದಾದರೆ, ಬೆಳಗ್ಗೆ ಉಪಹಾರದ ನಂತರ ಈ ಮಿಶ್ರಣವನ್ನು ಒಂದು ಗ್ಲಾಸ್ ಸೇವಿಸ ಬೇಕು, ಮತ್ತು ಸಾಯಂಕಾಲದ ಸಮಯದಲ್ಲಿ ಇನ್ನೊಂದು ಗ್ಲಾಸ್ ಮಿಶ್ರಣವನ್ನು ಕುಡಿಯಬೇಕು, ಹೀಗೆ ಕ್ರಮವಾಗಿ ಸೇವಿಸುತ್ತಾ ಬಂದರೆ ಕೊಬ್ಬು ಶೀಘ್ರವಾಗಿ ಕಡಿಮೆಯಾಗುತ್ತಾ ಬರುತ್ತದೆ.
ಇದರ ವಿಶೇಷತೆ ಏನು ಅನ್ನೋದನ್ನ ನೋಡುವುದಾದರೆ, ಮಜ್ಜಿಗೆ, ಓಂ ಕಾಳು ಶುಂಠಿ, ಕರಿಬೇವು ಇವುಗಳಲ್ಲಿ ಕೊಲೆಸ್ರ್ಟಾಲ್ ಅನ್ನು ಕಡಿಮೆ ಮಾಡುವ ಗುಣವಿದೆ. ಈ ರೀತಿ ಮಾಡಿದರೆ ಶೇಕಡಾ .75 ರಷ್ಟು ಬೊಜ್ಜು ನಿವಾರಣೆ ಮಾಡಿಕೊಳ್ಳಬಹುದು. ನಿಮಗೆ ಈ ಮಾಹಿತಿ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಅಷ್ಟೇ ಅಲ್ಲದೆ ಒಂದು ಲೈಕ್ ಹಾಗೂ ಶೇರ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ ನಿಮ್ಮ ಒಂದು ಲೈಕ್ ಹಾಗೂ ಶೇರ್ ನಮಗೆ ಸ್ಪೂರ್ತಿಯಾಗಿದೆ.