ಒಂದು ಎಕರೆ ಜಮೀನಿನಲ್ಲಿ 5 ರಿಂದ 7ಲಕ್ಷ ರೂ ಆಧಾಯ ಕೊಡುವ ಏಕೈಕ ಬೆಳೆ

0 2,622

ಬೆಣ್ಣೆ ಹಣ್ಣು ( ಬಟರ್ ಫ್ರುಟ್ ) ಇದೊಂದು ವಿದೇಶಿ ಹಣ್ಣಿನ ಬೆಳೆಯಾಗಿದ್ದು ಇತ್ತೀಚಿನ ದಿನಗಳಲ್ಲಿ ಭಾರತದ ಹಲವು ರಾಜ್ಯಗಳಲ್ಲಿ ಬೆಳೆಯಲಾಗುತ್ತಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ.

ಬೆಣ್ಣೆ ಹಣ್ಣು ಉತ್ತರ ಅಮೇರಿಕಾದ ಮೆಕ್ಸಿಕೋ ರಾಷ್ಟ್ರದ ಮೂಲದಿಂದ ಬಂದ ಹಣ್ಣಾಗಿದೆ. ನಂತರದ ದಿನಗಳಲ್ಲಿ ಜಗತ್ತಿನಾದ್ಯಂತ ಪ್ರಸಿದ್ದವಾಗುತ್ತದೆ. ಬೆಣ್ಣೆ ಹಣ್ಣಿನ ಮೇಲೆ ಹಲವಾರು ಸಂಶೋಧನೆಗಳು ನಡೆದು ಹೊಸ ತಳಿಗಳನ್ನು ಅಭಿವೃದ್ಧಿಪಡಿಸಲಾಯಿತು. ಬೇರೆ ಬೇರೆ ದೇಶಗಳ ಮೂಲಕ ಸಾಗಿ ಈಗ ಭಾರತದಲ್ಲಿಯೂ ಕೂಡ ಇದನ್ನು ಬೆಳೆಯಲಾಗುತ್ತಿದೆ. ದಕ್ಷಿಣ ಭಾರತದಲ್ಲಿ ಕೇರಳ ಮತ್ತು ಕರ್ನಾಟಕ ರಾಜ್ಯದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಉತ್ತರ ಭಾರತದ ಸಿಕ್ಕಿಂನಲ್ಲಿ ಈ ಬೆಳೆಯನ್ನು ಬೆಳೆಯಲು ಪ್ರಾರಂಭಿಸಿದ್ದಾರೆ. ಈ ಬೆಳೆಯಲ್ಲಿ ಸಾಮನ್ಯವಾಗಿ 7 ತಳಿಗಳು ಸಿಗುತ್ತಿದ್ದು ಅದರಲ್ಲಿ ಹಸ್, ರೌಂಡ್, ಗ್ರೀನ್, ಲೋಂಗ್ ಮಾರುಕಟ್ಟೆಗಳಲ್ಲಿ ಈಗ ದೊರೆಯುತ್ತಿರುವ ಮುಖ್ಯವಾದ ತಳಿಗಳಾಗಿವೆ. ಹಸ್ ತಳಿಯಲ್ಲಿ ತಾಪಮಾನ ಹಾಗೂ ಹವಾಮಾನದ ಅನುಗುಣವಾಗಿ 2 ಸಲ ಇಳುವರಿ ಸಿಗುವ ಸಾಧ್ಯತೆ ಇರುತ್ತದೆ. ಮಲೇಷಿಯನ್ ಗ್ರೀನ್ ಎಂದು ತಿಳಿದುಕೊಳ್ಳಬಹುದು.

ಸಾಮಾನ್ಯವಾಗಿ ಬೆಚ್ಚಗಿನ ಹಾಗೂ ತೇವಾಂಶವಿರುವ ವಾತಾವರಣದಲ್ಲಿ ಈ ಬೆಳೆಯನ್ನು ಬೆಳೆಯಲು ಪೂರಕವಾಗಿದೆ. ಗಿಡದ ಎಲೆಯಿಂದ ನೀರು ಆವಿಯಾಗಿ ಹೋಗುವುದು ಕಡಿಮೆಮಾಡಲು ತೇವಾಂಶವಿರುವ ಪ್ರದೇಶದಲ್ಲಿ ಬೆಳೆಯುವುದು ಸೂಕ್ತವಿರುತ್ತದೆ. ಹೊಲದಲ್ಲಿ ಒಳ್ಳೆಯ ಪ್ರಮಾಣದ ನೀರಿದ್ದರೆ ಉಷ್ಣ ಪ್ರದೇಶದಲ್ಲಿಯೂ ಕೂಡ ಬೆಳೆಯಬಹುದು. ಗಿಡಕ್ಕೆ ತೇವಾಂಶ ಹಾಗೂ ನೆರಳು ಬೇಕಾಗುವುದರಿಂದ ಬೇಸಿಗೆ ಸಂದರ್ಭದಲ್ಲಿ ಬರಡು ಭೂಮಿಯಂತಾಗುವ ಪ್ರದೇಶವು ಈ ಬೆಳೆಗೆ ಸೂಕ್ತವಲ್ಲ. ಈ ಬೆಳೆಗೆ ಕೆಂಪು ಮಣ್ಣು ಉತ್ತಮವಾಗಿರುತ್ತದೆ ಒಂದು ವೇಳೆ ನೀರು ನಿಲ್ಲುವಂತ ಮಣ್ಣಿನ ಪ್ರದೇಶವಾಗಿದ್ದರೆ ಗಿಡ ಹಾಳಾಗುತ್ತದೆ. ಅಡಿಕೆ ಮತ್ತು ತೆಂಗಿನ ಮರದ ರೀತಿಯಲ್ಲಿ ನೀರನ್ನು ತಡೆದುಕೊಳ್ಳುವುದಿಲ್ಲ ಆದರೆ ಇದಕ್ಕೆ ನೀರಿನ ಅವಶ್ಯಕತೆ ತುಂಬ ಇರುತ್ತದೆ. ಕಪ್ಪು ಮಣ್ಣಿನಲ್ಲಿ ನೀರು ನಿಲ್ಲುವ ಸಾಧ್ಯತೆ ಇರುವುದರಿಂದ ಈ ರೀತಿಯ ಮಣ್ಣು ಅಷ್ಟಾಗಿ ಸೂಕ್ತವಲ್ಲ. ಮಣ್ಣಿನ ಪಿ ಎಚ್ ಉತ್ತಮ ಇಳುವರಿಗೆ 5 – 7 ಮಾತ್ರ ಇರಬೇಕು . ಪಿಎಚ್ ಹೆಚ್ಚಿದರೆ ಜೆಪ್ ಸಮ್ ಉಪಯೋಗಿಸಿ ಕಡಿಮೆ ಮಾಡಬಹುದು ಕಡಿಮೆ ಇದ್ದರೆ ಹೆಚ್ಚು ಕೂಡಾ ಮಾಡಬಹುದು. ಈ ಕೃಷಿಗೆ ಉಪ್ಪಿನ ನೀರು ಅಷ್ಟಾಗಿ ಸೂಕ್ತವಲ್ಲ. ಈ ಹಣ್ಣಿನ ಬೆಳೆಗೆ ಹೆಚ್ಚು ನೀರಿನ ವ್ಯವಸ್ಥೆ ಇದ್ದಲ್ಲಿ ಉಷ್ಣ ವಾತಾವರಣದಲ್ಲಿ ಕೂಡ ಬೆಳೆಯಬಹುದು. ತೆಂಗಿನತೋಟ ,ಮಹಾಗನಿ ಇದ್ದಲ್ಲಿ ಇದನ್ನು ಬೆಳೆಯಬಹುದು.

15 ಬೈ 15 ಅಂತರದಲ್ಲಿ ಎಕರೆಗೆ 200 ಸಸಿಗಳನ್ನು ನೆಡಬಹುದು ಬೀಜದ ಮೂಲಕ ಮಾಡುವುದಾದರೆ 20 ಬೈ 20 ರಂತೆ ಅಂತರ ಇರಬೇಕು . ಇದು ದೊಡ್ಡಮರವಾಗಿ ಬೆಳೆಯುವುದರಿಂದ ಒಂದು ಎಕರೆಗೆ ನೂರು ಸಸಿಗಳನ್ನು ನೆಡಬಹುದು. ಈ ಸಸಿಗಳಿಗೆ ಮಲ್ಚಿಂಗ್ ಮಾಡುವುದು ಅನಿವಾರ್ಯವಾಗಿದೆ. ತೆಂಗಿನ ನಾರು, ಕೊಟ್ಟಿಗೆ ಗೊಬ್ಬರ, ಕಟ್ಟಿಗೆ ಪುಡಿ , ಮೆಕ್ಕೆಜೋಳದ ತ್ಯಾಜ್ಯ ಹಾಕುವುದರಿಂದ ತೇವಾಂಶವಿರುತ್ತದೆ ಕಡಿಮೆ ನೀರಿದ್ದರೂ ನಿರ್ವಹಿಸಬಹುದು. ಹನಿ ನೀರಾವರಿ ಮಾಡುವುದಾದರೆ ಒಂದು ದಿನಕ್ಕೆ 10 ರಿಂದ 20 ಲೀಟರ್ ನೀರು ಪ್ರತಿ ಗಿಡಕ್ಕೆ ಬೇಕಾಗುತ್ತದೆ. ಪ್ರೂನ್ನಿಂಗ್ ಮಾಡುವ ಅವಶ್ಯಕತೆ ಇರುವುದಿಲ್ಲ. ಮೊದಲ ಎರಡು ವರ್ಷ ಶೇಪಿಂಗ್ ಮಾಡಲಾಗುತ್ತದೆ . ಗೋಲಾಕಾರದ ಶೇಪಿಂಗ್ ಮಾಡುವುದರಿಂದ ಎಲ್ಲಾ ಕಡೆಯಲ್ಲೂ ಸೂರ್ಯನ ಬೆಳಕು ತಾಗಲು ಸಹಾಯ ಮಾಡುತ್ತದೆ ಮತ್ತು ರೆಂಬೆ ಕೊಂಬೆಗಳು ಅತ್ತಿತ್ತಕಡೆ ಬೆಳೆಯದೆ ಸರಿಯಾಗಿ ಬೆಳೆಯಲು ಸಹಾಯ ಮಾಡುತ್ತದೆ. ಗಿಡವನ್ನು ಎಡಭಾಗ ಮತ್ತು ಬಲಭಾಗದವರೆಗೆ 1.5 ಅಡಿ ಅಗಲವಾಗಿ ಹಾಗೂ 2 ಅಡಿ ಆಳದ ಗುಂಡಿ ಮಾಡಬೇಕಾಗುತ್ತದೆ. ಗುಂಡಿಯಲ್ಲಿ 5 ಕೆಜಿ ಕೊಟ್ಟಿಗೆ ಗೊಬ್ಬರ, 20 ಗ್ರಾಂ ಸ್ತೇಕೊಟರ್ಮ, 20 ಗ್ರಾಂ ಸೋಡೋಮಾನಸ್, ಹಾಗೂ 10 ಗ್ರಾಂ ಅಷ್ಟು ಡಿಎಪಿ ಬಳಸಬೇಕು. ಇದು ದೊಡ್ಡದಾಗಿ ಬೆಳೆಯುವ ಗಿಡವಾದ್ದರಿಂದ ಹೆಚ್ಚಾಗಿ ಪೋಷಕಾಂಶಗಳು ಬೇಕಾಗುತ್ತದೆ ಆದ್ದರಿಂದ ಮೊದಲೇ ಪೋಷಕಾಂಶಗಳನ್ನು ಹಾಕಿ ಬೆಳೆಸುವುದು ಉತ್ತಮವಾಗುತ್ತದೆ. ಎರೆಹುಳು ಗೊಬ್ಬರ ತುಂಬಾ ಒಳ್ಳೆಯದಾಗಿದ್ದು ಇದು ಸಿಗದಿದ್ದರೆ ಕೊಟ್ಟಿಗೆ ಗೊಬ್ಬರವನ್ನು 5 ರಿಂದ 6 ಕೆಜಿ ಹಾಕಬೇಕು.

ಇದರ ಇಳುವರಿ 3 ವರ್ಷದ ಗಿಡದಿಂದ 30 ವರ್ಷದವರೆಗೆ ಸಿಗುತ್ತದೆ. ಒಂದು ಗಿಡದಿಂದ ಕಡಿಮೆಯೆಂದರೂ 50 ಕೆಜಿ ಹಣ್ಣನ್ನು ಪಡೆಯಬಹುದು. ಇದಕ್ಕಿಂತ ಹೆಚ್ಚು ಇಳುವರಿಯನ್ನೂ ಪಡೆಯಬಹುದು. ವರ್ಷಕ್ಕೆ 200 ಮರಗಳಿಂದ ಸರಿಸುಮಾರು 10 ಟನ್ ಇಳುವರಿ ದೊರೆಯುತ್ತದೆ. ಪ್ರತಿ ಕೆಜಿಗೆ ಈಗಿನ ಮಾರುಕಟ್ಟೆಯ ದರ 70 ರೂಪಾಯಿ ಎಂದು ಭಾವಿಸಿ ಮಾರಿದರೂ ಎಕರೆಗೆ 7 ಲಕ್ಷ ರೂಪಾಯಿ ಪಡೆಯಬಹುದು. ಇದು ಲಾಭದಾಯಕ ಬೆಳೆಯಾಗಿದೆ.

Leave A Reply

Your email address will not be published.