ತಮ್ಮ ದಡೂತಿ ದೇಹ, ವಿಭಿನ್ನ ನಟನೆಯ ಮೂಲಕ ಎಲ್ಲರನ್ನೂ ನಕ್ಕು ನಗಿಸುತ್ತಿದ್ದ ಬುಲೆಟ್ ಪ್ರಕಾಶ ಕಾಲವಾಗಿ ವರ್ಷಗಳು ಕಳೆದಿವೆ. ದಶಕಗಳ ವರೆಗೆ ಕನ್ನಡ ಸಿನಿ ರಸಿಕರನ್ನು ನಗೆಗಡಲಿನಲ್ಲಿ ತೇಲಿಸಿದ ಈ ನಟನ ಕುಟುಂಬದ ಕುಡಿಯೊಂದು ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡುತ್ತಿದೆ. ದಿವಂಗತ ನಟ ಬುಲೆಟ್ ಪ್ರಕಾಶ್ ಅವರ ಪುತ್ರ ರಕ್ಷಕ್ ಇದೀಗ ಬೆಳ್ಳಿ ಪರದೆ ಮೇಲೆ ಮಿಂಚಲು ಸಕಲ ಸನ್ನದ್ದನಾಗಿದ್ದಾನೆ. ಈ ಸ್ಟಾರ್ ಕಿಡ್ ಅದೃಷ್ಟ ಪರೀಕ್ಷೆಗಾಗಿ ಚಂದನವನದ ಅಂಗಳಕ್ಕೆ ಕಾಲಿಡುತ್ತಿದ್ದಾನೆ. ಈ ಮೂಲಕ ಹಾಸ್ಯ ನಟ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಬಣ್ಣದ ಲೋಕಕ್ಕೆ ಎಂಟ್ರಿ ಕೊಡೋದು ಪಕ್ಕಾ ಆಗಿದೆ. ಈಗಾಗಲೇ ಒಂದು ಶೆಡ್ಯೂಲ್ ಕಂಪ್ಲೀಟ್ ಮಾಡಿಕೊಂಡು ಬಂದಿರು ರಕ್ಷಕ್ ಮುಂದಿನ ಕೆಲಸಕ್ಕೆ ಸಜ್ಜಾಗುತ್ತಿದ್ದಾರೆ. ಬುಲೆಟ್ ಪ್ರಕಾಶ್ ಅವರ ಮಗ ಯಾವ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶ ಮಾಡಲಿದ್ದಾರೆ ಯಾರೆಲ್ಲ ಈ ಒಂದು ಚಿತ್ರದಲ್ಲಿ ಅಭಿನಯಿಸುತ್ತಾ ಇದ್ದಾರೆ ಇದೆಲ್ಲದರ ಬಗ್ಗೆ ನಾವು ಈ ಲೇಖನದಲ್ಲಿ ಮಾಹಿತಿಯನ್ನು ತಿಳಿದುಕೊಳ್ಳೋಣ.

ಬುಲೆಟ್ ಪ್ರಕಾಶ್ ಒಬ್ಬ ಕನ್ನಡದ ನಟ. ಹಾಸ್ಯ ಪಾತ್ರಗಳನ್ನು ಚಿತ್ರಿಸಲು ಹೆಸರುವಾಸಿಯಾದ ಪ್ರಕಾಶ್ ಇವರು ಸುಮಾರು 325 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಅವರು ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕನ್ನು ಬಳಸುತ್ತಿದ್ದರಿಂದ, ಅವರು “ಬುಲೆಟ್” ಎಂಬ ಅಡ್ಡಹೆಸರನ್ನು ಗಳಿಸಿದರು. ಪ್ರಕಾಶ್‌ರವರು ಕನ್ನಡದ ಸುವರ್ಣ ಚಾನಲ್‌ನಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋನಲ್ಲಿ ಬಿಗ್‌ಬಾಸ್ ಎರಡನೇ ಋತುವಿನಲ್ಲಿ ಪಾಲ್ಗೊಂಡಿದ್ದರು. ಯಕೃತ್ತಿನ ಸೋಂಕಿನಿಂದಾಗಿ ೬ ಏಪ್ರಿಲ್ ೨೦೨೦ ರಂದು 44 ನೇ ವಯಸ್ಸಿನಲ್ಲಿ ವಿಧಿವಶರಾದರು. ಹಾಗೂ ಇವರು ಕನ್ನಡ ಚಿತ್ರರಂಗವನ್ನು , ಅಪಾರ ಕನ್ನಡ ಹಾಸ್ಯ ಅಭಿಮಾನಿಗಳನ್ನು ವಿಧಿವಶರಾಗಿ ಸುಮಾರು ಒಂದು ವರ್ಷವೇ ಕಳೆದಿರುವುದು ನಮಗೆಲ್ಲ ತಿಳಿದ ಸಂಗತಿಯೇ. ಅವರ ಹಾಗೇ ಈಗ ಅವರ ಮಗ ಕೂಡಾ ಚಿತ್ರರಂಗದಲ್ಲಿ ತಂದೆಯ ಹಾಗೆ ಮಗನೂ ಸಹ ತನ್ನ ಛಾಪು ಮೂಡಿಸಲು ಸಿದ್ಧನಾಗುತ್ತಾನೆ.

ಮಗನನ್ನ ಹೀರೋ ಮಾಡಬೇಕು ಅಂತ ಬುಲೆಟ್ ಪ್ರಕಾಶ್ ದೊಡ್ಡ ಕನಸು ಕಂಡಿದ್ದರು. ಅದಕ್ಕೆಂದೇ ಫೈಟ್, ಡ್ಯಾನ್ಸ್, ಜಿಮ್ ಅಂತ ಆಗಲೇ ತಯಾರಿ ಕೂಡಾ ಆರಂಭಿಸಿದ್ದರು. ಆದರೆ ಮಗ ಬಣ್ಣ ಹಚ್ಚುವ ಮೊದಲೇ ಅನಾರೋಗ್ಯದಿಂದ ಬುಲೆಟ್ ಪ್ರಕಾಶ್ ನಿಧನರಾದರು. ಅಪ್ಪನ ಆಸೆಯಂತೆ ಬುಲೆಟ್ ಸ್ನೇಹಿತರ ಮಾರ್ಗದರ್ಶನದಂತೆ ಮೊದಲ ಸಿನಿಮಾಗೆ ರಕ್ಷಕ್ ಬಣ್ಣ ಹಚ್ಚಿದ್ದಾರೆ. ಗುರುಶಿಷ್ಯರು ಹಿರಿಯನಟ ದ್ವಾರಕೀಶ್ ನಟಿಸಿ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ದಾಖಲಾಗಿರುವ ಸೂಪರ್ ಹಿಟ್ ಸಿನಿಮಾ. ಈ ಟೈಟಲ್‍ನಲ್ಲಿ ಶರಣ್ ಮತ್ತು ತಂಡದವರು ಹೊಸ ಕಥೆ ಹೇಳು ಹೊರಟಿದ್ದಾರೆ. ಜಡೇಶ್ ಗುರುಶಿಷ್ಯರು ಕಥೆಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ತರುಣಿ ಸುಧೀರ್ ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಶರಣ್ ಶಿಷ್ಯನ ಪಾತ್ರ ಮಾಡ್ತಿದ್ದಾರೆ ರಕ್ಷಕ್. ನೆನಪಿರಲಿ ಪ್ರೇಮ್ ಪುತ್ರ ಏಕಾಂತ್ ಕೂಡ ಗುರುಶಿಷ್ಯರು ಸಿನಿಮಾಗಾಗಿ ಬಣ್ಣ ಹಚ್ಚಿದ್ದಾರೆ. ಇದಲ್ಲದೆ ಬಹಳಷ್ಟು ಕಲಾವಿದರು ಮಕ್ಕಳು ಗುರುಶಿಷ್ಯರು ಸಿನಿಮಾದಲ್ಲಿ ನಟಿಸಿದ್ದಾರೆ ಅನ್ನೊ ಮಾಹಿತಿ ಸಿಕ್ಕಿದೆ. ಹಾಸ್ಯ ನಟ ಶರಣ್ ಅವರು ನಟಿಸುತ್ತಿರುವ ಗುರು ಶಿಷ್ಯರು ಸಿನಿಮಾದಲ್ಲಿ ಅಭಿನಯಿಸುವ ಮೂಲಕ ರಕ್ಷಕ ಮುಖಕ್ಕೆ ಬಣ್ಣ ಹಾಕುತ್ತಿದ್ದಾರೆ. ಅವರು ಈ ಸಿನಿಮಾದಲ್ಲಿ ಶರಣ್ ಶಿಷ್ಯನ ಪಾತ್ರ ಮಾಡುತ್ತಿದ್ದಾರೆ.

ಇನ್ನು ಈ ವಿಷಯ ತಿಳಿದ ಬುಲೆಟ್ ಪ್ರಕಾಶ್ ಅವರ ಅಭಿಮಾನಿಗಳು ಎಲ್ಲಾ ಅವರ ಮಗನಿಗೆ ಚಿತ್ರಕ್ಕೆ ಒಳ್ಳೆಯದಾಗಲಿ ತಂದೆಯಂತೆ ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಮಾಡಲಿ ಎಂದು ಆಶಿಸುತ್ತಾ ಇದ್ದಾರೆ.

Leave a Reply

Your email address will not be published. Required fields are marked *