ಮಿಥುನ ರಾಶಿ ಜುಲೈ ತಿಂಗಳಳಲ್ಲಿ ಬುಧಾದಿತ್ಯ ಯೋಗ ರಾಜಯೋಗ ಏನೆಲ್ಲಾ ಶುಭಫಲಗಳಿವೆ ನೋಡಿ

0 7

ಜಾತಕದಲ್ಲಿ ಗ್ರಹಗಳ ಸ್ಥಾನ ಮತ್ತು ಸ್ಥಿತಿಯನ್ನು ಪರಿಶೀಲಿಸಿ ಭವಿಷ್ಯದ ಬಗ್ಗೆ ಹೇಳಬಹುದು. ಜಾತಕದಲ್ಲಿರುವ ಯೋಗಗಳ ಬಗ್ಗೆಯೂ ತಿಳಿಯಬಹುದು. ರಾಜಯೋಗವಿದ್ದರೆ ಆ ವ್ಯಕ್ತಿಯು ಜೀವನದಲ್ಲಿ ಹೆಚ್ಚು ಸುಖವಾಗಿರುತ್ತಾನೆ. ಸಂಸಾರ ಜೀವನದಲ್ಲಿ ಯಾವುದಕ್ಕೂ ಕೊರತೆ ಬರುವುದಿಲ್ಲ. ರಾಜನಂತೆ ವೈಭೋಗದ ಜೀವನ ನಡೆಸುತ್ತಾನೆ ಎಂದರ್ಥ. ಜಾತಕದಲ್ಲಿ ಒಂಭತ್ತನೇ ಮನೆಯನ್ನು ಭಾಗ್ಯಸ್ಥಾನವೆಂದು, ಹತ್ತನೇ ಮನೆಯನ್ನು ಕರ್ಮಸ್ಥಾನವೆಂದು ಹೇಳುತ್ತಾರೆ.

ಈ ಎರಡು ಸ್ಥಾನಗಳಲ್ಲಿ ಗ್ರಹಗಳ ಸ್ಥಿತಿ ಶುಭವಾಗಿದ್ದರೆ ರಾಜಯೋಗವೆಂದು ಹೇಳಲಾಗುತ್ತದೆ. ನಿಮ್ಮ ಜನ್ಮ ಕುಂಡಲಿಯಲ್ಲಿ ರವಿ ಬುಧ ಗ್ರಹಗಳು ಒಂದೇ ರಾಶಿ ಮನೆಯಲ್ಲಿದ್ದರೆ ಇದನ್ನು “ಬುಧಾದಿತ್ಯ ಯೋಗ” ಅಥವಾ “ನಿಪುಣ ಯೋಗ” ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ. ಈ “ಬುಧಾದಿತ್ಯ ಯೋಗ” ಉಳ್ಳವರು ತುಂಬಾ ಜಾಣರು ಕಷ್ಟದಲ್ಲಿದ್ದಾಗ ಎದುರಿಸಿ ಚಾಣಕ್ಷತನದಿಂದ ಪಾರಾಗಿ ಬರುವರು. ಧೈರ್ಯದಿಂದ ಎದುರಿಸಿ ಹೋರಾಡುವರು. ಇವರು ತುಂಬಾ ಮಾತನಾಡುವ ವಾಕ್ಚಾತುರ್ಯ ಹೊಂದಿರುತ್ತಾರೆ. ಲಗ್ನ ಒಂದನೇ ಸ್ಥಾನದಲ್ಲಿ ರವಿ ಬುಧ ಇದ್ದರೆ ಪ್ರತಿಷ್ಠೆಯ ಕುಟುಂಬ ಅಥವಾ ಸಮಾಜದಲ್ಲಿ ಪ್ರತಿಷ್ಠೆ ವ್ಯಕ್ತಿಯಾಗುತ್ತಾನೆ.

ಲಗ್ನದಿಂದ ಎರಡನೇ ಸ್ಥಾನದಲ್ಲಿ ರವಿ ಬುಧ ಇದ್ದರೆ ತುಂಬಾ ಬುದ್ಧಿವಂತನು, ಉತ್ತಮ ಮಾತುಗಾರನು ,ಬೋಧನಾ ಪ್ರಿಯರು, ಸಾಹಿತಿಗಳ ಆಗುವರು. ಲಗ್ನದಿಂದ ಮೂರನೇ ಸ್ಥಾನದಲ್ಲಿ ರವಿ ಬುಧ ಇದ್ದರೆ ಮೇಲಾಧಿಕಾರಿ ಆಗುವರು. ಲಗ್ನದಿಂದ 4,5 ಸ್ಥಾನದಲ್ಲಿ ರವಿ ಬುಧ ಇದ್ದರೆ ಉನ್ನತ ಪದವಿ ಪಡೆಯುತ್ತಾರೆ. ಲಗ್ನದಿಂದ 6,7,8 ಸ್ಥಾನದಲ್ಲಿ ಬುದ್ಧ ರವಿ ಇದ್ದರೆ ಅದಿ ಯೋಗ” ಪ್ರಾಪ್ತಿ.ರಾಜಕೀಯ ಪ್ರವೇಶ ಸೇರಿ ಮಂತ್ರಿಯಾಗುತ್ತಾರೆ.

ಸಕ್ರಿಯವಾಗಿ ರಾಜಕೀಯ ಕ್ಷೇತ್ರದಲ್ಲಿ ಭಾಗಿಯಾಗುತ್ತಾರೆ. ಲಗ್ನದಿಂದ 9 ,10ನೇ ಸ್ಥಾನದಲ್ಲಿ ರವಿ ಬುಧ ಇದ್ದರೆ ನ್ಯಾಯ, ನೀತಿ ,ಧರ್ಮ ಪಾಲನೆ ಪಾಲಿಸುವವರು. ಲಗ್ನದಿಂದ 11ನೇ ಸ್ಥಾನದಲ್ಲಿ ರವಿ ಬುಧ ಇದ್ದರೆ ಅತ್ಯಂತ ಶ್ರಮದಿಂದ ಅಪಾರ ಹಣ ಸಂಪಾದನೆ ಮಾಡುವರು. ಆಸ್ತಿ ಪಾಸ್ತಿ ಹೊಂದುವರು. ಲಗ್ನದಿಂದ 12ನೇ ಸ್ಥಾನದಲ್ಲಿ ರವಿ ಬುಧ ಇದ್ದರೆ ವಿದೇಶ ಪ್ರವಾಸ ,ತಂತ್ರಜ್ಞಾನ ಯೋಗ ಪ್ರಾಪ್ತಿ ಸುಲಭವಾಗುತ್ತದೆ.

ವೈದಿಕ ಜ್ಯೋತಿಷ್ಯದ ಪ್ರಕಾರ, ಯಾವುದೇ ರಾಶಿ ಚಕ್ರದಲ್ಲಿ ಸೂರ್ಯ ಮತ್ತು ಬುಧ ಸಂಯೋಗವು ಇದ್ದಾಗ ಬುಧಾದಿತ್ಯ ಯೋಗವು ರೂಪುಗೊಳ್ಳುತ್ತದೆ. ಈ ಯೋಗವನ್ನು ಅತ್ಯಂತ ಮಂಗಳಕರ ಮತ್ತು ಫಲಪ್ರದವೆಂದು ಪರಿಗಣಿಸಲಾಗಿದೆ. ಜುಲೈ 16 ರಿಂದ ಮಿಥುನ ರಾಶಿಯವರಿಗೆ ಈ ಯೋಗವು 15 ದಿನಗಳ ಕಾಲ ಕಟಕ ರಾಶಿಯಲ್ಲಿ ಇರುತ್ತದೆ. ಬುಧಾದಿತ್ಯ ಯೋಗವು ಬುಧ ಮತ್ತು ಆದಿತ್ಯರ ಸಂಯೋಗದಿಂದ ರೂಪುಗೊಂಡಿದೆ.

ಆದಿತ್ಯ ಎಂದರೆ ಸೂರ್ಯ. ಅಂದರೆ ಸೂರ್ಯ ಮತ್ತು ಬುಧ ಸಂಯೋಗದಿಂದ ಈ ಯೋಗವು ರೂಪುಗೊಂಡಿದೆ. ಬುಧಾದಿತ್ಯ ಎಂಬ ಹೆಸರಿನಿಂದ ಕರೆಯಲ್ಪಡುವ ಈ ಯೋಗವು ವಿವಿಧ ಮನೆಗಳಲ್ಲಿ ವಿಶೇಷ ಫಲಿತಾಂಶಗಳನ್ನು ನೀಡುತ್ತದೆ. ಮಿಥುನ ರಾಶಿಯವರ ಜಾತಕದಲ್ಲಿ ಬುಧಗ್ರಹವು ಭಾಗ್ಯ ಸ್ಥಾನದಲ್ಲಿ ಮತ್ತು ಶನಿಗ್ರಹವು ಕರ್ಮಸ್ಥಾನದಲ್ಲಿದ್ದು ಶುಭ ಪ್ರಭಾವವನ್ನು ಬೀರುತ್ತಿದ್ದರೆ ಅಂಥ ಜಾತಕದ ವ್ಯಕ್ತಿಯು ರಾಜನಂತೆ ಜೀವನವನ್ನು ನಡೆಸುತ್ತಾನೆ. ಕರ್ಕ ರಾಶಿಯಲ್ಲಿ ರೂಪುಗೊಂಡ ಬುಧಾದಿತ್ಯ ಯೋಗವು ಮಿಥುನ ರಾಶಿಯವರಿಗೆ ಹಣದ ಜೊತೆಗೆ ಅನೇಕ ವಿಷಯಗಳಲ್ಲಿ ಶುಭ ಫಲಿತಾಂಶಗಳನ್ನು ನೀಡುತ್ತದೆ.

ಅವರು ತಮ್ಮ ವೃತ್ತಿಜೀವನದಲ್ಲಿ ಸಾಕಷ್ಟು ಯಶಸ್ಸನ್ನು ಪಡೆಯುತ್ತಾರೆ. ನೀವು ದೊಡ್ಡ ಸಾಧನೆಗಳನ್ನು ಮಾಡಬಹುದು. ಈ ಯೋಗ ಇದ್ದರೆ ಖಂಡಿತ ದೊಡ್ಡ ರಾಜಕಾರಣಿ, ಸಮಾಜ ಸೇವಕ, ಜಿಲ್ಲಾಧಿಕಾರಿ, ಸಾಹಿತಿಗಳು, ಗಾಯಕರು, ದೇಶ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟು ಆಗುವ ಸಂಭವ ಹೆಚ್ಚಿರುತ್ತದೆ. ರಾಜಕೀಯಕ್ಕೆ ಸಂಬಂಧಿಸಿದ ಜನರು ಪ್ರತಿಷ್ಠೆಯನ್ನು ಪಡೆಯಬಹುದು. ಕೇವಲ ಮಾತಿನ ಆಧಾರದ ಮೇಲೆ, ನೀವು ಸುಲಭವಾಗಿ ದೊಡ್ಡ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತದೆ.

ಸೂರ್ಯ-ಬುಧ ಗ್ರಹಗಳ ಅನುಗ್ರಹದಿಂದ ಮಿಥುನ ರಾಶಿಯವರಿಗೂ ಸಾಕಷ್ಟು ಲಾಭವಾಗಲಿದೆ. ಉದ್ಯೋಗ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತವೆ. ಆದಾಯವು ಹೆಚ್ಚಾಗುತ್ತದೆ ಮತ್ತು ಪ್ರಗತಿಯ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ಹಣವು ಹಠಾತ್ತಾಗಿ ಸಿಗುತ್ತದೆ ಮತ್ತು ಖರ್ಚುಗಳು ಸಹ ನಿಯಂತ್ರಣದಲ್ಲಿರುತ್ತವೆ. ಹತ್ತನೇ ಮನೆಯಲ್ಲಿ ಸೂರ್ಯ ಮತ್ತು ಬುಧದ ಈ ಸಂಯೋಗವು ವೃತ್ತಿಪರ ಜೀವನದಲ್ಲಿ, ವಿಶೇಷವಾಗಿ ಸರ್ಕಾರಿ ವಲಯ ಮತ್ತು ಚಿಕಿತ್ಸೆ ಕ್ಷೇತ್ರದಲ್ಲಿ ಅದ್ಭುತ ಫಲಿತಾಂಶಗಳನ್ನು ಹೊಂದಿರುವ ವ್ಯಕ್ತಿಗಳಿಗೆ ಅನುಕೂಲಕರವಾಗಿರುತ್ತದೆ. ನಿಮ್ಮ ನಾಯಕತ್ವ ಮತ್ತು ನಿರ್ವಹಣೆಯ ಗುಣಮಟ್ಟವನ್ನು ಪ್ರಶಂಸಿಸಲಾಗುತ್ತದೆ.ತನ್ನ ಸ್ವಂತ ರಾಶಿಯಲ್ಲಿ ಬುಧನು ಸೂರ್ಯನೊಂದಿಗೆ ಇರುವುದರಿಂದ ಸೇವೆಯಲ್ಲಿರುವವರಿಗೆ ಬಡ್ತಿ ದೊರೆಯುತ್ತದೆ ಮತ್ತು ನಿರುದ್ಯೋಗಿಗಳಿಗೆ ಉದ್ಯೋಗವೂ ದೊರೆಯುತ್ತದೆ.

ಕೆಲಸದಲ್ಲಿ ನಿಮ್ಮ ದಾರಿಯಲ್ಲಿ ಬರುವ ಎಲ್ಲಾ ರೀತಿಯ ಅಡೆತಡೆಗಳನ್ನು ನೀವು ತೊಡೆದುಹಾಕುತ್ತೀರಿ. ತಿಂಗಳ ಮೊದಲಾರ್ಧದಲ್ಲಿ ಸಮಯವು ಹೆಚ್ಚು ಅನುಕೂಲಕರವಾಗಿರುತ್ತದೆ. ನಿಮ್ಮ ವ್ಯವಹಾರವನ್ನು ನೀವು ವಿಸ್ತರಿಸುತ್ತೀರಿ ಮತ್ತು ಅದು ಅಭಿವೃದ್ಧಿ ಹೊಂದುತ್ತದೆ. ವಿವಾಹಿತ ದಂಪತಿಗೆ ಈ ತಿಂಗಳು ಆಹ್ಲಾದಕರವಾಗಿರುತ್ತದೆ. ನಿಮ್ಮ ಕೆಲಸ ಮತ್ತು ಯೋಜನೆಗಳಿಗೆ ಸಂಬಂಧಿಸಿದಂತೆ ಸಂಗಾತಿಯ ಸಲಹೆಗೆ ತಕ್ಕ ಪ್ರಾಮುಖ್ಯತೆ ನೀಡಿ ಮತ್ತು ಅವುಗಳನ್ನು ಕಾರ್ಯಗತಗೊಳಿಸಲು ಪ್ರಯತ್ನಿಸಿ. ಆರ್ಥಿಕ ಸ್ಥಿತಿಯು ಈ ತಿಂಗಳು ಸ್ಥಿರವಾಗಿರುತ್ತದೆ. ರಾಹು ಜೊತೆ ಮಂಗಳನ ಉಪಸ್ಥಿತಿಯು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಕುಟುಂಬದ ಆರ್ಥಿಕ ಬೆಂಬಲವನ್ನು ನೀವು ಹೊಂದಿರುತ್ತೀರಿ. ನೀವು ಕಳೆದುಕೊಂಡಿರುವ ಹಣವನ್ನು ಮರಳಿ ಪಡೆಯುತ್ತೀರಿ.

ಆರನೇ ಮನೆಯ ಅಧಿಪತಿಯಾದ ಮಂಗಳನು ​​ರಾಹುವಿನೊಡನೆ ಸೇರುವುದರಿಂದ ಆರೋಗ್ಯ ಸಮಸ್ಯೆಗಳು ಮೇಲುಗೈ ಸಾಧಿಸುತ್ತವೆ. ವಿದ್ಯಾರ್ಥಿಗಳಿಗೆ ಲಾಭವಾಗುತ್ತದೆ ಮತ್ತು ವಿಶೇಷವಾಗಿ ಉನ್ನತ ವ್ಯಾಸಂಗಕ್ಕಾಗಿ ಆಕಾಂಕ್ಷಿಗಳು ಯಶಸ್ಸನ್ನು ಸಾಧಿಸುತ್ತಾರೆ. ನೀವು ಉತ್ತಮ ಶಿಕ್ಷಕರ ಮಾರ್ಗದರ್ಶನವನ್ನು ಹೊಂದಿರುತ್ತೀರಿ. ಮಾಧ್ಯಮಿಕ ಹಂತದ ವಿದ್ಯಾರ್ಥಿಗಳಿಗೆ ಈ ತಿಂಗಳು ಸರಾಸರಿಯಾಗಲಿದೆ, ಈ ತಿಂಗಳು ಕುಟುಂಬದ ವಾತಾವರಣವು ಆಹ್ಲಾದಕರವಾಗಿರುತ್ತದೆ. ನಿಮ್ಮ ಸಹೋದರರಿಂದ ಬೆಂಬಲವಿರುವುದು. ಐದನೇ ಮನೆಯಲ್ಲಿ ಕೇತು ಇರುವುದರಿಂದ ನಿಮ್ಮ ಪ್ರೇಮ ಜೀವನದಲ್ಲಿ ಕೆಲವು ತಪ್ಪುಗ್ರಹಿಕೆಗಳು ಉಂಟಾಗಬಹುದು. ನಿಮ್ಮ ಹಿರಿಯರೊಂದಿಗೆ ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಈ ಸಮಯದಲ್ಲಿ ಪರಸ್ಪರ ಹೊಂದಾಣಿಕೆ ಇರುತ್ತದೆ. ಕುಟುಂಬದೊಳಗೆ ಉತ್ತಮ ತಿಳುವಳಿಕೆಯನ್ನು ಕಾಪಾಡಿಕೊಳ್ಳುವಲ್ಲಿ ನೀವು ಯಶಸ್ವಿಯಾಗುತ್ತೀರಿ.

Leave A Reply

Your email address will not be published.