Ultimate magazine theme for WordPress.

ರಾಜ್ಯದ ಜನರ ಕಷ್ಟಕ್ಕೆ ಸ್ಪಂದಿಸಲು 1610 ಕೋಟಿ ರೂಪಾಯಿ: ಮಾನ್ಯ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಂದ ಯಾರಿಗೆಲ್ಲ ಬಂಪರ್ ಕೊಡುಗೆ ಸಿಗಲಿದೆ ಗೊತ್ತೇ?

0 0

ನಮ್ಮ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪನವರು ಕೋವಿಡ್19 ವಿರುದ್ಧ ಜನರ ಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ.ಅವರು ಜನರ ಕಷ್ಟ ಕ್ಕಾಗಿ ವಿನಿಯೋಗಿಸಿದ ಹಣ ಮತ್ತು ಅವರ ಮಾತುಗಳು ಮತ್ತು ಸಂದೇಶಗಳನ್ನು ನಾವು ಎಂದು ತಿಳಿಯೋಣ.

ಕಳೆದ ಒಂದೂವರೆ ತಿಂಗಳಿನಿಂದ ಲಾಕ್ ಡೌನ್ ಮಾಡಿದ ಪರಿಣಾಮವಾಗಿ ಎಲ್ಲಾ ವ‌ರ್ಗದ ಜನರು ಸಂಕಷ್ಟದಲ್ಲಿ ಇರುವ ಸಂಗತಿ ಎಲ್ಲರಿಗೂ ತಿಳಿದಿದೆ.ನಾವು ಕಳೆದ ಮೂರು ದಿನಗಳ ಹಿಂದೆ ಸರಳಗೊಳಿಸಿದ್ದೇವೆ. ಇದನ್ನು ಯಾರೂ ದುರುಪಯೋಗ ಮಾಡಿಕೊಳ್ಳಬಾರದು.ಅಂತರವನ್ನು ಕಾಪಾಡಿಕೊಳ್ಳಬೇಕು.‌ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಬೇಕೆಂದು ವಿನಂತಿ ಮಾಡಿಕೊಳ್ಳುತ್ತೇನೆ.ಯಾವ ಕಾರ್ಮಿಕರು ತಮ್ಮ ತಮ್ಮರಾಜ್ಯಗಳಿಗೆ ಹೋಗಬೇಕೆಂದು ಅಪೇಕ್ಷೆಪಡುತ್ತಿದ್ದಾರೆ ಅಂಥವರನ್ನು ರೈಲು ಮತ್ತು ಬಸ್ಸುಗಳಲ್ಲಿ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ.

ಹಣಕಾಸು ಇಲಾಖೆ ಜೊತೆ ಸಮಾಲೋಚನೆ ನಡೆಸಿ ಹಣಕಾಸಿನ ಪರಿಸ್ಥಿತಿ ಸರಿಯಾಗಿಲ್ಲದಿದ್ದರೂ ಜನರ ನೆರವಿಗೆ ಬರುವುದು ಸರ್ಕಾರದ ಕರ್ತವ್ಯ ಎಂದು ತಿಳಿದು 1610 ಕೋಟಿರೂಪಾಯಿಗಳ ಹಣವನ್ನು ವಿನಿಯೋಗಿಸಬೇಕು” ಎಂದು ಮಾನ್ಯ ಮುಖ್ಯಮಂತ್ರಿಗಳು ಹೇಳಿದ್ದಾರೆ. ನಂತರ ಸಂದೇಶಗಳು ಹೀಗಿವೆ.ಲಾಕ್ ಡೌನ್ ನಿಂದಾಗಿ ಮದುವೆ ಸಮಾರಂಭಗಳು ನಡೆಯಲಿರುವುದರಿಂದ ಎಲ್ಲ ದೇವಾಲಯಗಳು ಮುಚ್ಚಿರುವುದರಿಂದ ವಿಶೇಷವಾಗಿ ಯಾರು ಹೂವುಗಳನ್ನು ದೊಡ್ಡಪ್ರಮಾಣದಲ್ಲಿ ಬೆಳೆದು ಅಂತಹವರು ಬೇಡಿಕೆ ಇಲ್ಲದೆ ಸಂಕಷ್ಟ ಅನುಭವಿಸಿದ್ದಾರೆ.ಆದ್ದರಿಂದ ಒಂದು ಹೆಕ್ಟೇರ್ ಪ್ರದೇಶಕ್ಕೆ ಸುಮಾರು 25 ಸಾವಿರ ರೂಪಾಯಿಗಳನ್ನು ಕೊಡಲು ನಿರ್ಧರಿಸಲಾಗಿದೆ.

ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ಕ್ಷೌರಿಕರು ಬಟ್ಟೆಯನ್ನು ಇಸ್ತ್ರಿ ಮಾಡುವವರು ಇಂತಹವರು ತಮ್ಮ ದುಡಿಮೆಯನ್ನು ಮಾಡಲಾಗದೆ ತಮ್ಮ ದೈನಂದಿನ ಆದಾಯವನ್ನು ಕಳೆದುಕೊಂಡಿದ್ದಾರೆ.2,30,000 ಜನರಿಗೆ ಕ್ಷೌರಿಕ ವೃತ್ತಿಯವರಿಗೆ ಒಂದು ಬಾರಿ ಐದು ಸಾವಿರ ರೂಪಾಯಿಗಳನ್ನು ಕೊಡಬೇಕೆಂದು ನಿರ್ಧರಿಸಲಾಗಿದೆ.ಆಟೋ ಚಾಲಕರು ಮತ್ತು ಟ್ಯಾಕ್ಸಿ ಚಾಲಕರು ಅವರು ತಮ್ಮ ದೈನಂದಿನ ಆದಾಯವನ್ನು ಕಳೆದುಕೊಂಡಿದ್ದಾರೆ. ಸುಮಾರು ನಮ್ಮ ರಾಜ್ಯದಲ್ಲಿ 7,75,000 ಚಾಲಕರು ಇದ್ದಾರೆ.ಅವರಿಗೂ ಸಹ ಐದು ಸಾವಿರ ರೂಪಾಯಿಯನ್ನು ಕೊಡಬೇಕೆಂದು ನಿರ್ಧರಿಸಲಾಗಿದೆ.ಅತಿ ಸಣ್ಣ ಮತ್ತು ಮಧ್ಯಮ ಉದ್ಯಮಿಗಳು ತಮ್ಮ ಉದ್ಯಮ ನಡೆಸಲಾಗದೆ ಕಷ್ಟದದಲ್ಲಿರುವವರಿಗೆ ಎರಡು ತಿಂಗಳ ಕಾಲ ಅವರ ವಿದ್ಯುತ್ ಬಿಲ್ ನಲ್ಲಿ ಕಡಿತಗೊಳಿಸಲಾಗುವುದು.ಬೃಹತ್ ಕೈಗಾರಿಕೆಗಳಿಗೆ 2ತಿಂಗಳು ವಿದ್ಯುತ್ ಬಿಲ್ ಕಟ್ಟದಿದ್ದರೆ ಬಡ್ಡಿ ಇಲ್ಲ.

Leave A Reply

Your email address will not be published.