ಬ್ರಹ್ಮಚರ್ಯ ವ್ರತವನ್ನು ಪಾಲಿಸೋದು ಹೇಗೆ?

0 190

ಯಾವ ರೀತಿ ಸ್ತ್ರೀಯರಲ್ಲಿ ಆಸಕ್ತ ಪುರುಷ ತನ್ನ ಇಂದ್ರಿಯಗಳ ನಿಯಂತ್ರಣ ಕಳೆದುಕೊಂಡ ಸ್ತ್ರೀ ವ್ಯಾಮೋಹದಲ್ಲಿ ಸಿಲುಕಿಕೊಂಡು ನಿರಾಶನಾಗಿ ಜೀವನ ನಡೆಸುತ್ತಾನೆ ಅವನು ಸ್ತ್ರೀ ವ್ಯಾಮೋಹದಿಂದ ಹೊರಬರಲಾಗುವುದಿಲ್ಲ ಹಾಗೂ ಏಕಾಂತದಲ್ಲಿ ಕುಳಿತುಕೊಂಡು ಸ್ತ್ರೀಯರಬಗ್ಗೆ ವಿಚಾರ ಮಾಡುತ್ತಿರುತ್ತಾರೆ. ಮಹಾನ್ ಆಚಾರ್ಯ ಶುಕ್ರದೇವ ಈ ತರಹದ ನೀಚ ಪುರುಷರ ಬಗ್ಗೆ ತಮ್ಮ ನೀತಿಯಲ್ಲಿ ವರ್ಣನೆ ಮಾಡಿದ್ದಾರೆ.

ಈ ತರಹದ ವ್ಯಕ್ತಿಗಳು ತಮ್ಮ ನಿಯಂತ್ರಣವನ್ನು ಕಳೆದುಕೊಳ್ಳುತ್ತಾರೆ ಹಾಗೂ ಈ ತರಹ ಆದಾಗ ಅವರು ದುಷ್ಕರ್ಮದ ಹಾದಿಯಲ್ಲಿ ನಡೆಯಲು ಪ್ರಾರಂಭಿಸುತ್ತಾರೆ ಈ ತರಹದ ನೀಚ ಪುರುಷರು ಎಂದಿಗೂ ಉನ್ನತಿಯನ್ನು ಸಾಧಿಸಲು ಸಾಧ್ಯವಿಲ್ಲ. ಆದ್ದರಿಂದ ನೀವು ನಿಮ್ಮ ಜೀವನದ ನಿರಾಶೆಯನ್ನು ದೂರಮಾಡಿಕೊಳ್ಳಲು ಬಯಸುತ್ತಿದ್ದರೆ ಹಾಗೂ ಸ್ತ್ರೀ ಮೋಹದಿಂದ ಮುಕ್ತಿ ಪಡೆದುಕೊಳ್ಳಲು ಬಯಸುತ್ತಿದ್ದರೆ ನೀವು ಬ್ರಹ್ಮಚರ್ಯದ ಮಹತ್ವವನ್ನು ತಿಳಿದುಕೊಳ್ಳಿ

ಈ ವೃತ ಅಸಾಧ್ಯವಾದದ್ದನ್ನು ಸಾಧ್ಯ ಮಾಡಿ ತೋರಿಸುತ್ತದೆ ನೀವು ಕೂಡ ಒಬ್ಬ ಮಹಾನ್ ತಪಸ್ವಿಯಂತೆ ಮುಖಮಂಡಲದಲ್ಲಿ ತೇಜಸ್ಸನ್ನು ಪಡೆದುಕೊಂಡು ನಿಮ್ಮ ಜೀವನದ ಕಲ್ಯಾಣ ಮಾರ್ಗದಲ್ಲಿ ಸಹಜವಾಗಿ ನಡೆಯ ಬಹುದು. ಆದ್ದರಿಂದ ಪುರುಷರಿಗೆ ತಮ್ಮ ಕಲ್ಯಾಣಕ್ಕಾಗಿ ಜೀವನದಲ್ಲಿ ಬ್ರಹ್ಮಚರ್ಯ ವ್ರತವನ್ನು ಅನಿವಾರ್ಯವಾಗಿ ಪಾಲನೆ ಮಾಡಬೇಕಾಗುತ್ತದೆ.

ಏಕೆಂದರೆ ಒಬ್ಬ ಪುರುಷ ಸ್ತ್ರೀಯನ್ನು ಪಡೆದುಕೊಳ್ಳಲು ಬಯಸುತ್ತಾನೆ ಅಥವಾ ಕಾಮಾತುರನಾಗಿ ಈ ಸ್ತ್ರೀ ವ್ಯಾಮೋಹದಲ್ಲಿ ಬೀಳುತ್ತಾನೆ ಆಗ ಅವಳನ್ನು ಪಡೆದುಕೊಳ್ಳಲು ವ್ಯಾಕೂಲನಾಗುತ್ತಾನೆ ಹಾಗೂ ನಿರಾಶೆಯಿಂದ ಜೀವನ ನಡೆಸುತ್ತಾನೆ. ಒಂದು ವೇಳೆ ತನ್ನ ಪ್ರಯತ್ನದಿಂದ ಸ್ತ್ರೀಯನ್ನು ಪಡೆದುಕೊಂಡರು ಕೂಡ ಇನ್ನಷ್ಟು ನಿರಾಶನಾಗುತ್ತಾನೆ ಏಕೆಂದರೆ ಆ ಪುರುಷ ಸ್ತ್ರೀಯರ ಆಸೆ ಆಕಾಂಕ್ಷೆಗಳನ್ನು ಈಡೇರಿಸಲಾಗುವುದಿಲ್ಲ ಆನಂತರ ತನ್ನ ತಪ್ಪನ್ನು ಅರಿತು ಅವನಿಗೆ ದುಃಖವಾಗುತ್ತದೆ.

ಸ್ನೇಹಿತರೆ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಬ್ರಹ್ಮಚರ್ಯ ವ್ರತದಲ್ಲಿದೆ ಇದನ್ನು ಕೇವಲ ವಿದ್ಯಾರ್ಥಿಗಳಲ್ಲದೆ ವಿವಾಹಿತ ಪುರುಷರು ಪಾಲಿಸಬಹುದು ಇದರ ಜೊತೆಗೆ ಸ್ತ್ರೀಯರಿಗು ಕೂಡ ಈ ವ್ರತದ ಪಾಲನೆಯನ್ನು ಯಾವಯಾವ ಸಮಯದಲ್ಲಿ ಮಾಡಬೇಕು ಎಂಬುದರ ಬಗ್ಗೆ ನಮ್ಮ ನೀತಿ ಗ್ರಂತದಲ್ಲಿ ಹೇಳಲಾಗಿದೆ.

ಒಂದು ವೇಳೆ ನೀವು ವಿದ್ಯಾರ್ಥಿಗಳಾಗಿದ್ದರೆ ಬ್ರಹ್ಮಚರ್ಯ ಪಾಲನೆಯನ್ನು ಕಠೊರತೆಯಿಂದ ಮಾಡಿ ನೀವು ಖಂಡಿತವಾಗಿ ಸಿದ್ಧಿಯನ್ನು ಪಡೆದುಕೊಳ್ಳುತ್ತೀರಿ. ಒಂದು ವೇಳೆ ನೀವು ವಿವಾಹಿತ ಪುರುಷರಾಗಿದ್ದರೆ ಸಾಧಾರಣ ನಿಯಮಗಳನ್ನು ಪಾಲನೆ ಮಾಡಿ ನಿಮ್ಮ ವೈವಾಹಿಕ ಜೀವನದಲ್ಲೂ ಶಾಂತಿ ಮತ್ತು ಸುಖದ ಅನುಭವವನ್ನು ಪಡೆದುಕೊಳ್ಳಬಹುದು.

ಈಗ ನಾವು ಬ್ರಹ್ಮಚರ್ಯ ವ್ರತದ ಮಹತ್ವವನ್ನು ತಿಳಿದುಕೊಳ್ಳೋಣ. ಸ್ತ್ರೀಯರನ್ನು ಸ್ಪರ್ಶಿಸುವುದು ಪರ ನಾರಿಯೊಂದಿಗೆ ಇರುವುದು ಅವರ ಜೊತೆಗೆ ಯಾತ್ರೆ ಮಾಡುವುದು ಹಾಗೂ ಅವರ ಜೊತೆಗೆ ಹೋಗಿಬಂದು ಮಾಡುವುದು ಇನ್ನು ಇತ್ಯಾದಿ ಶಾರೀರಿಕ ಕರ್ಮಗಳು ಬ್ರಹ್ಮಚರ್ಯದ ನಾಶಮಾಡುತ್ತದೆ. ನಾರಿಯರ ಜೊತೆ ನೃತ್ಯ ಮಾಡುವುದು ಮುತ್ತು ಕೊಡುವುದು ಇವೆಲ್ಲ ಬ್ರಹ್ಮಚರ್ಯದ ವಿಪರೀತ ಲಕ್ಷಣಗಳಾಗಿವೆ ಈ ರೀತಿ ಕಾಮರೋಗದ ಚಿಕಿತ್ಸೆ ನಾರಿ ಮೂಲಕ ಮಾಡಲಾಗುತ್ತದೆ ಆಗ ಕಷ್ಟದಿಂದ ಕೂಡಿದ ಸಂಸಾರದ ವಿಸ್ತಾರದಲ್ಲಿ ಸಿಲುಕಿಕೊಂಡು ಮನುಷ್ಯ ಜನ್ಮ ಮರಣದ ಕಷ್ಟ ಚಕ್ರದಲ್ಲಿ ನರಳುತ್ತಿರುತ್ತಾನೆ.

ಸ್ನೇಹಿತರೆ ನೀವು ಈ ಬ್ರಹ್ಮಚರ್ಯ ವ್ರತದ ಪಾಲನೆ ಮಾಡಿದರೆ ನಿಮ್ಮ ಜೀವನದ ನಿರಾಶೆ ದೂರವಾಗುತ್ತದೆ ನೀವೆಲ್ಲರೂ ಸ್ತ್ರೀಯರನ್ನು ಗೌರವ ದೃಷ್ಟಿಯಿಂದ ನೋಡುತ್ತೀರಿ.ಸ್ತ್ರೀಯರೊಂದಿಗೆ ಮಾತನಾಡುವಾಗ ಯಾವುದೇ ಪ್ರಕಾರದ ಭಯವಿರುವುದಿಲ್ಲ ಹಾಗು ನಿಮ್ಮ ಮುಖ ಮಂಡಲದಲ್ಲಿ ಯಾವ ರೀತಿಯ ತೇಜಸ್ಸು ಕಾಂತಿ ಉತ್ಪತ್ತಿ ಆಗುತ್ತದೆ ಎಂದರೆ ಜಗತ್ತು ನಿಮ್ಮ ಮೇಲೆ ಆಕರ್ಷಿತವಾಗುತ್ತವೆ ಆದ್ದರಿಂದ ಈ ಬ್ರಹ್ಮಚರ್ಯ ವ್ರತವನ್ನು ಅತ್ಯಂತ ಕಠೊರತೆಯಿಂದ ಪಾಲನೆ ಮಾಡಿ.

ಮೊಟ್ಟ ಮೊದಲನೆಯದಾಗಿ ಈ ಮಾತನ್ನು ನೆನಪಿನಲ್ಲಿಟ್ಟುಕೊಳ್ಳಿ ನಮ್ಮ ವೈದಿಕ ಗ್ರಂಥಗಳಲ್ಲಿ ಹೇಳಲಾಗಿದೆ ಬ್ರಹ್ಮಚರ್ಯ ಪಾಲನೆ ಮಾಡುವ ಪುರುಷ ತನಗಿಂತ ಚಿಕ್ಕ ವಯಸ್ಸಿನ ಸ್ತ್ರೀಯನ್ನು ಪುತ್ರಿ ಎಂದು ತಿಳಿದುಕೊಳ್ಳಬೇಕು ಮತ್ತು ಪುತ್ರಿ ಎಂದು ಕರೆಯಬೇಕು ಮತ್ತು ತನ್ನ ಸಮ ವಯಸ್ಸಿನ ಸ್ತ್ರೀಯನ್ನು ತಂಗಿ ಎಂದು ಕರೆಯಬೇಕು ಮತ್ತು ತನಗಿಂತ ದೊಡ್ಡ ವಯಸ್ಸಿನ ಸ್ತ್ರೀಯನ್ನು ತಾಯಿ ಎಂದು ಕರೆಯಬೇಕು ಇದರಿಂದ ನಿಮ್ಮ ಮನಸ್ಸಿನಲ್ಲಿ ಸ್ತ್ರೀಯರ ಬಗ್ಗೆ ಕೆಟ್ಟವಿಚಾರಗಳು ಬರುವುದಿಲ್ಲ ಅವರನ್ನು ನೀವು ಗೌರವ ಭಾವದಿಂದ ನೋಡುತ್ತೀರಿ.

ಸ್ನೇಹಿತರೆ ನಮ್ಮ ಪ್ರಾಚೀನ ಸುಪ್ರಸಿದ್ಧ ಗ್ರಂಥ ವೇದದಲ್ಲಿ ಹೇಳಲಾಗಿದೆ ವ್ರತವನ್ನು ಧಾರಣೆ ಮಾಡಿದಂತಹ ಪುರುಷ ಸ್ವತಃ ತನ್ನ ವೀರ್ಯವನ್ನು ತಾನೇ ಎಂದಿಗೂ ನಷ್ಟ ಮಾಡಿಕೊಳ್ಳಬಾರದು ಇದಕ್ಕಾಗಿ ನಿತ್ಯ ಪ್ರಾತಃಕಾಲ ಧ್ಯಾನ ಮಾಡಬೇಕು ಆರಂಭದಲ್ಲಿ ಇದರ ಮೇಲೆ ನಿಯಂತ್ರಣ ಸಾಧಿಸುವುದು ಅತ್ಯಂತ ಕಠಿಣ ಆದರೆ ನಿಮ್ಮನ್ನು ಕಾಮದ ಪ್ರಭಾವದಲ್ಲಿ ಬೀಳಿಸುವ ವಿಷಯ ವಸ್ತುಗಳಿಂದ ದೂರ ಇರಬೇಕು.

ಯಾವಾಗ ಈ ರೀತಿಯ ವಿಚಾರಗಳು ನಿಮ್ಮ ಮನಸ್ಸಿನಲ್ಲಿ ಬರುತ್ತವೆ ಆಗ ಓಂಕಾರ ಜಪಾಮಾಡಿ ಹಾಗೂ ತಣ್ಣೀರನ್ನೂ ಕುಡಿದು ಪ್ರಭುವನ್ನು ಸ್ಮರಿಸಿ. ಗಮನವಿರಲಿ ನೀವು ಸ್ವಯಂ ಎಂದಿಗೂ ವೀರ್ಯವನ್ನು ಹಾಳುಮಾಡಿಕೊಳ್ಳಬೇಡಿ ಒಂದು ವೇಳೆ ವೀರ್ಯ ತಾನಾಗಿಯೇ ಹೊರಗೆ ಬಂದರೆ ಸ್ನಾನ ಮಾಡಿ ಪ್ರಾಣಾಯಾಮ ಮಾಡಿ ಹಾಗೂ ಗಾಯತ್ರಿ ಮಂತ್ರವನ್ನು ಜಪಿಸಿ. ಬ್ರಮಚರ್ಯದ ತಪಸ್ಸಿನಿಂದ ದೇವತೆಗಳು ಮೃತ್ಯುವಿನ ಮೇಲೆ ವಿಜಯ ಸಾಧಿಸಿದ್ದರು ಶಾರೀರಿಕ ಮತ್ತು ಮಾನಸಿಕ ಶಕ್ತಿಯನ್ನು ಸನ್ಚಯ ಮಾಡಿಕೊಳ್ಳಿ ಇದೆ ಶಕ್ತಿಯ ಫಲದಿಂದ ಮನುಷ್ಯ ಮೃತ್ಯುವಿನಿಂದ ಜಯ ಪಡೆದುಕೊಳ್ಳಬಹುದು.

ಶಕ್ತಿಹೀನಮನುಷ್ಯ ಅನೇಕ ಕಾರಣದಿಂದ ಮೃತ್ಯು ಹೊಂದುತ್ತಾನೆ ಆದ್ದರಿಂದ ಮನುಷ್ಯ ಬ್ರಹ್ಮಚರ್ಯ ವ್ರತವನ್ನು ಪಾಲನೆ ಮಾಡಬೇಕು. ನಮ್ಮ ಶಾಸ್ತ್ರಗ್ರಂಥಗಳಲ್ಲಿ ಗುಪ್ತೇಂದ್ರಿಯ ಮತ್ತು ಮೂತ್ರೆಂದ್ರಿಯದ ಮೇಲೆ ಸಯ್ಯಮ ಇಟ್ಪುಕೊಳ್ಳುವುದನ್ನು ಬ್ರಹ್ಮಚರ್ಯ ಎಂದು ಹೇಳುತ್ತವೆ.ಕಾಮವನ್ನು ಕೆರಳಿಸುವ ಕರ್ಮ ಮತ್ತು ದರ್ಶನ ಸ್ಪರ್ಶ ಏಕಾಂತಾಸೇವನೆ ಸ್ತ್ರೀಯರೊಂದಿಗೆ ಅನಾವಶ್ಯಕ ಭಾಷಣ ವಿಷಯಗಳ ಚಿಂತನೆಯಂತಹ ಕೆಲಸಗಲಿಂದ ದೂರವಿದ್ದು ಬ್ರಹ್ಮಚರ್ಯವನ್ನು ಕಠೋರತೆಯಿಂದ ಪಾಲನೆ ಮಾಡಬೇಕು ಎಂದು ನಮ್ಮ ಶಾಸ್ತ್ರಗಳು ಹೇಳುತ್ತವೆ ಅಂದರೆ ಕಾಮಭಾವವನ್ನೂ ಜಾಗ್ರತಗೊಳಿಸುವ ವಿಷಯ ವಸ್ತುಗಳಿಂದ ದೂರ ಇರಬೇಕು.

ಬೆಳಿಗ್ಗೆ ಏಳುವಾಗ ಮತ್ತು ರಾತ್ರಿ ಮಲಗುವಾಗ ಆಚಾರ್ಯ ಮತ್ತು ವೃದ್ಧ ಪೂಜ್ಯ ಜನರಿಗೆ ಪ್ರಣಾಮ ಮಾಡಬೇಕು. ವೃದ್ಧಜನರ ಆಶೀರ್ವಾಧವನ್ನು ಪಾಲಿಸುವ ವ್ಯಕ್ತಿಯ ಆಯಸ್ಸು ವಿದ್ಯೆ ಕೀರ್ತಿ ಬಲ ಮತ್ತು ಹಣದ ವೃದ್ಧಿಯಾಗುತ್ತದೆ ಒಂದು ವೇಳೆ ವ್ಯಕ್ತಿ ಅತ್ಯಂತ ಕಾಮುಕನಾಗಿದ್ದರೆ ಬ್ರಹ್ಮಚರ್ಯ ವ್ರತವನ್ನು ಏಕಾಂತ ಸ್ಥಳದಲ್ಲಿ ಮಾಡಬೇಕು ಸ್ತ್ರೀ ಕಡೆ ಎಂದಿಗೂ ನೋಡಬೇಡಿ ಹಾಗೂ ಮಾತನಾಡಬೇಡಿ.

ವಿವಾಹಿತ ಪುರುಷರು ಬ್ರಹ್ಮಚರ್ಯ ವ್ರತವನ್ನು ಧಾರಣೆ ಮಾಡುವ ಸಂದರ್ಭದಲ್ಲಿ ಈ ಮಾತನ್ನುಗಮನದಲ್ಲಿಟ್ಟು ಕೊಳ್ಳಬೇಕು ತನ್ನ ಹೆಂಡತಿಯೊಂದಿಗೆ ಸಂತಾನ ಪ್ರಾಪ್ತಿಗಾಗಿ ಕೇವಲ ಶಾರೀರಿಕ ಸಂಬಂಧವನ್ನು ಬೆಳೆಸಬೇಕು ಒಬ್ಬ ವಿವಾಹಿತ ಪುರುಷ ತನ್ನ ಹೆಂಡತಿಯನ್ನು ಹೊರತುಪಡಿಸಿ ಪರಸ್ತ್ರೀಯರನ್ನು ತಾಯಿ ತಂಗಿ ಮತ್ತು ಪುತ್ರಿ ಎಂದು ಸಂಭೋದಿಸಬೇಕಾಗಿತ್ತದೆ. ಸ್ನೇಹಿತರೆ ಈ ರೀತಿಯಾಗಿ ನೀವು ಬ್ರಹ್ಮಚರ್ಯ ವ್ರತವನ್ನು ಪಾಲನೆ ಮಾಡಬಹುದು ಹಾಗೂ ನಿಮ್ಮ ಜೀವನವನ್ನು ಕಲ್ಯಾಣಮಯ ಮಾಡಿ ಕೊಳ್ಳಬಹುದು.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave A Reply

Your email address will not be published.