ರೈತರು ಹೀಗೆ ಮಾಡಿದ್ರೆ ನೀರಿನ ಸಮಸ್ಯೆನೇ ಇರೋದಿಲ್ಲ, ಪ್ರತಿ ರೈತರು ತಿಳಿದುಕೊಳ್ಳುವುದು ಉತ್ತಮ

0 3,194

ಹಿಂದಿನ ಕಾಲದಿಂದಲೂ ಪಂಚಭೂತಗಳಲ್ಲಿ ನೀರು ಕೂಡ ಒಂದು. ಹಿಂದಿನ ಕಾಲದಲ್ಲಿ ಕಾಲ ಕಾಲಕ್ಕೆ ಮಳೆ ಬೆಳೆ ಆಗುತಲಿದ್ದು ಜನರು ಯಾವುದೇ ಚಿಂತೆಯಿಲ್ಲದೆ ತಮ್ಮ ಜೀವನವನ್ನು ಸಂತೋಷದಿಂದ ಸಾಗಿಸುತ್ತಿದ್ದರು. ದಿನೇ ದಿನೇ ಋತುಮಾನ ಬದಲಾದಂತೆ ಜನ ಸಾಮಾನ್ಯರು ತಮ್ಮನ್ನು ಆಧುನಿಕ ಜಗತ್ತಿಗೆ ಹೊಂದಿಕೊಂಡು ಎಲ್ಲೆಂದರಲ್ಲಿ ಕಟ್ಟಡಗಳು ಮನೆಗಳನ್ನು ನಿರ್ಮಾಣ ಮಾಡಿರುವ ಪರಿಣಾಮ ಅಂತರ್ ಜಲ ನೀರಿನ ಕೊರತೆ ಉಂಟಾಗಿದೆ. ಮನೆಗೆ ಬೆಂಕಿ ಬಿದ್ದಮೇಲೆ ಬಾವಿ ತೋಡಿದರಂತೆ ಎಂಬ ಗಾದೆಯಂತೆ ಮುಂದೆಂದು ದಿನ ನೀರಿಗಾಗಿ ಹಾಹಾಕಾರ ಪಡುವ ದಿನ ದೂರ ಇಲ್ಲ ಎಂಬುದು ವಿಷಾದನೀಯ. ಪ್ರತಿಯೊಂದು ಜೀವಿಗಳಿಗೆ ನೀರು ತನ್ನ ಜೀವನದ ಅತಿ ಮೂಲ್ಯವಾಗಿದ್ದು ಅದರಲ್ಲೂ ರೈತರಿಗೆ ವ್ಯವಸಾಯಕ್ಕೆ ನೀರು ಅತ್ಯಗತ್ಯ ಇಂದು ಸಿಹಿ ನೀರು ಅಂತರ್ಜಾಲ ಕೊಳವೆ ಬಾವಿ ಕೆರೆ ನದಿಯಿಂದ ಸಿಗುತೆ ಆದರೆ ಇಂದು ಮಹಾನಗರದಲ್ಲಿ ಆಧುನಿಕ ಜೀವನ ಹೊಂದಿಕೊಂಡು ತಮ್ಮ ಅತಿಯಾಸೆಗೆ ಬಲಿಯಾಗಿ ಕೆರೆ ಕೊಳ ಕಣ್ಮರೆಯಾಗಿದೆ.

ಇವಾಗಲೇ ಎತ್ತೆಚ್ಚುಕೊಂಡ್ರೆ ಮುಂದೆ ಆಗುವ ಪರಿಣಾಮದಿಂದ ಆದಷ್ಟು ಜಾಗ್ರತೆಯಾಗಿ ಇರಬಹುದು.
ದಿನದಿಂದ ದಿನಕ್ಕೆ ಕಟ್ಟಡ ಮನೆ ಜಾಸ್ತಿ ಆಗಿದೂ ಪ್ರತಿಯೊಂದು ಮನೆಯಲ್ಲೂಕೊಳವೆ ಬಾವಿಯಿಂದ ನೀರಿನ ಮೇಲೆತ್ತುವ ಪ್ರಮಾಣವು ಜಾಸ್ತಿ ಆಗಿದು ಅಂತರ್ಜಾಲ ನೀರಿನ ಪ್ರಮಾಣ ಕಡಿಮೆ ಆಗಿದೆ . ಹಾಗಾಗಿ ಆದಷ್ಟು ನೀರಿನ ಉಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಇತ್ತೀಚಿನ ದಿನದಲ್ಲಿ ಮಳೆನೀರಿನ ಕೊಯ್ಲು ತಂತ್ರಜ್ಞಾನ ಮೂಲಕ ನೀರನ್ನು ಸಂರಕ್ಷಣೆ ಮಾಡ್ಬಹುದು. ಆಗಸದಿಂದ ಬಿದ್ದ ಮಳೆನೀರು ಭೂಮಿ ಮೇಲೆ ಬಿದ್ದು ಪೋಲಾಗುವುದನ್ನು ತಡೆದು ನೀರನ್ನು ಸಂಗ್ರಹಿಸಿ ಬಳಕೆಗೆ ಅಥವಾ ಅಂತರ್ಜಾಲಕ್ಕೆ ಸೇರಿಸುವ ಪ್ರಕ್ರಿಯೆ ಮಳೆ ನೀರು ಕೊಯ್ಲು.

ನಗರದ ಜನನಿಬಿಡ ಪ್ರದೇಶದಲ್ಲಿ ತಮ್ಮ ಲಾಭಕೊಸ್ಕರ ಕೆರೆ ಕಟ್ಟೆಗಳಲ್ಲಿ ಕೈಗಾರಿಕೆಯ ತ್ಯಾಜ್ಯ ನೀರನ್ನು ಬಿಟ್ಟು ಕಲುಷಿತ ಮಾಡಿ ಕೊಳವೆ ಬಾವಿ ಕೊರೆದು ಕೆರೆಕಟ್ಟೆಗಳು ಒತ್ತುವರಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಇಂದಿನ ಲೇಖನದಲ್ಲಿ ವಾಟರ್ ಗಾಂಧಿ ಎಂದು ಹೆಸರುವಾಸಿಯಾಗಿರುವ ಐಯ್ಯಪ್ಪಾ ಮಸಾಗಿ ಅವರು ಮಳೆನೀರಿನ ಕೊಯ್ಲು ಬಗ್ಗೆ ಸಂಪೂರ್ಣಮಾಹಿತಿ ಕೊಟ್ಟಿದಾರೆ. ಇವರು ಮಳೆ ನೀರನ್ನು ಇಂಗುವ ಹಾಗ್ ಮಾಡಿ ಅಲ್ಲಲಿ ಹೊಂಡ ನಿರ್ಮಿಸಿ ಮಳೆನೀರನ್ನು ಸಂಗ್ರಿಸುವ ಕಾರ್ಯ ಮಾಡಿದ್ದಾರೆ.

ಮಳೆ ನೀರಿನಲ್ಲಿ ನಾಲ್ಕು ವಿಧವಿದ್ದು ಮೊದಲನೆಯದು ಸಬ್ಸುಸುರ್ರ್ಫೇಸ್ ಅಂದರೆ ಮನೆ ಮಾಳಿಗೆ ನೀರಿನ ಸಂಗ್ರಹ ಎರಡನೆಯದ್ದು ಸಾಯಿಲ್ ವಾಟರ್ ಅಂದ್ರೆ ಬಾವಿ ನೀರು ಡೀಪ್ ಸಾಹಿಲ್ ಇದು ಕೊಳವೆ ಬಾವಿ ನೀರು ಕೊನೆಯದು ಗ್ರೌಂಡ್ ವಾಟರ್ H2o ನೀರಿನ ವಿಜ್ಞಾನ ಸಂಕೇತ ಆದರೆ ನೀರನ್ನು ಲ್ಯಾಬ್ ನಲ್ಲಿ ಮಾಡಲು ಅಸಾಧ್ಯ.ಕಾಡನ್ನು ಉಳಿಸಿ ಬೆಳೆಸಿದರೆ ನಿನ್ನ ಕಾಲಕ್ಕೆ ತಕ್ಕಂತೆ ಮಳೆ ಬೀಳುವುದು ಮಳೆಯಿಂದ ಮಾತ್ರ ನೀರು ಸಂಗ್ರಹಿಸಲು ಸಾಧ್ಯ ಬಿದ್ದಮಳೆಯ 30ರಿಂದ 40 ಪರ್ಸೆಂಟ್ ನೀರನ್ನು ಸಂರಕ್ಷಿಸಿದರೆ ಉತ್ತಮ ಈ ಕಾರ್ಯವನ್ನು ಕಂಪಾರ್ಟ್ಮೆಂಟ್ ಬಿಲ್ಡಿಂಗ್ ಎನ್ನುತ್ತಾರೆ. ಇನ್ನು ರೈತನ ಜಮೀನಿನ ಆದಾರದ ಮೇಲೆ ಸ್ಲೋಪ್ ಮಾಡಿಕೊಂಡು ಎಕ್ರೆಗೆ ಅಂಥ ಗುಂಡಿ ತೆಗೆಯಬೇಕು.

ಇಂದಿನ ಆಧುನಿಕ ಜಗತ್ತಿನಲ್ಲಿ ನೀರನ್ನು ತುಂಬಾ ಪೋಲು ಮಾಡುತ್ತಿದ್ದೇವೆ ಇದರಿಂದಾಗಿ ಮಳೆಯ ಚಕ್ರದಲ್ಲಿ ವ್ಯತ್ಯಾಸ ಕಾಣಬಹುದು ನಮ್ಮ ದುಡಿಮೆ ಚೆನ್ನಾಗಿದ್ದಾಗ ನಾವು ಹೇಗೆ ಹಣವನ್ನು ಡೆಪೋಸಿಟ್ f&d ಇನ್ವೆಸ್ಟ್ಮೆಂಟ್ ಮಾಡುತ್ತೇವೆ ಹಾಗೆಯೇ ನೀರನ್ನು ಪೋಲು ಮಾಡದೆ ಸಮಯ ಸಿಕ್ಕಾಗ ನೀರನ್ನು ಸಂರಕ್ಷಣೆ ಮಾಡುತ ಹೋದರೆ ಹೇಗೆ ದುಡ್ಡು ಬ್ಯಾಂಕ್ ಅಲ್ಲಿ ಡಬ್ಬಲ್ ಆಗಿ ಕಷ್ಟಕ್ಕೆ ಉಪಯೋಗ ಆಗುವುದೋ ಹಾಗೆಯೇ ನೀರು ಕೂಡ ಬಡ್ಡಿ ಸಮೇತ ಭೂಮಿ ಅನ್ನೋ ಬ್ಯಾಂಕ್ ನೀಡುವುದರಲ್ಲಿ ಎರಡು ಮಾತಿಲ್ಲ ನಮ್ಮ ಮಾರ್ಗದರ್ಶಕರ ಪ್ರಕಾರ 1 ಹೆಕ್ಟರ್ಗೆ 1 ಗುಂಟೆ ಕೆರೆ ನೀರು ಹಾಯಿಸಲು ರೈತ ಯೋಚಿಸಿದೇ ಆದಲ್ಲಿ ಅವರ ಎಲ್ಲ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ. ಹಿಂದಿನ ಕಾಲದಲ್ಲಿ ಹಿರಿಕರು ಕರ್ನಾಟಕದಲ್ಲಿ 40000 ಕೆರೆಯ ನಿರ್ಮಾಣ ಮಾಡಿದ್ದು, ಹಾಸನದಲ್ಲಿ ಸೊಳೆ ಸಂಕವ್ವ ಎಂಬ ಮಹಿಳೆ ಸುಮಾರು 8 ಕೆರೆಯ ನಿರ್ಮಾಣ ಮಾಡಿದ್ದು ಇಂದಿಗೂ ಆ ಕೆರೆಯು ಸೊಳೆ ಸಂಕವ್ವ ಎಂದು ಹೆಸರುವಾಸಿಯಾಗಿದೆ. ಆದರೆ ಇಂದಿನ ಕಾಲದಲ್ಲಿ ಸುಮಾರು 90% ಕೆರೆ ಮುಚ್ಚಿ 10% ಕೆರೆಯ ಅಳಿವಿನ ಅಂಚಿನಲ್ಲಿದೆ.

1982 ಬೆಂಗಳೂರು ಕೆಂಪೇಗೌಡರ ಕಾಲದಲ್ಲಿ ಬಾವಿಯಿಂದ ನೀರು ಸಿಗ್ತಾ ಇತ್ತು ಇಂದು ಬಾವಿ ಕಣ್ಮರೆ ಯಾಗಿದ್ದ್ದು ಪ್ರತಿಯೊಬ್ಬರ ಮನೆಯಲ್ಲಿ ಕೊಳವೆಬಾವಿ ಇದೆ. ಹಿರೀಕರ ಮಾತಿನಂತೆ ಊರಿಗೊಂದು ಕೆರೆ ಬೋರು ಬಾವಿಗಳಿಗೆ ಇಲ್ಲ ಸೆಲೆ ಜೀವರಾಶಿಗಳಿಗೆ ಎಲ್ಲ ನೆಲೆ ನೆಲ ಜಲ ಜೀವ ರಾಶಿಗಳಿಗೆ ಬೆಲೆ ಎಂಬ ಹಾಗೆ ಕೆರೆಯನ್ನು ನಮ್ಮ ಹೃದಯ ಹೋಲಿಸಲಾಗಿದೆ ಹೃದಯ ಕೆಟ್ಟ ರಕ್ತವನ್ನು ತೆಗೆದುಕೊಂಡು ಅದರಲ್ಲಿನ ಕಲ್ಮಶ ತೆಗೆದು ಹಾಕಿ ಶುದ್ಧ ರಕ್ತ ದೇಹದ ಎಲ್ಲ ಭಾಗಗಳಿಗೆ ಹೇಗೆ ಸರಬರಾಜು ಮಾಡುತ್ತೋ ಹಾಗೆ ಕೆರೆ ನೀರು ಕೂಡ ಅದರಲ್ಲಿನ ಮಣ್ಣು ಕೆಟ್ಟ ನೀರನ್ನು ಕಸ ಕಡ್ಡಿಯನ್ನು ಶೋಧಿಸಿ ಉತ್ತಮ ನೀರನ್ನು ಕೊಳವೆ ಬಾವಿ ವರ್ಗಾವಣೆ ಮಾಡುತದೆ.

ಒಂದು ಗುಂಡಿಯಿಂದ ಇನ್ನೊಂದು ಗುಂಡಿಗೆ 30 ಅಡಿ ಅಂತರ ಇದ್ದು ಒಂದು ಗುಂಡಿ ಸುಮಾರು 10 ಅಡಿ ಅಳವಿರ್ಬೇಕು ಹೀಗೆ ಮಾಡಿದಲ್ಲಿ ಸುಮಾರು 10 ಗುಂಡಿ ಇದ್ದು ಇದರಿಂದ ಒಂದು ವರ್ಷ ಕ್ಕೆ 1 ಎಕರೆ ಅಲ್ಲಿ ಸುಮಾರು 1ಲಕ್ಷ ನೀರು ಕುಡಿಯುತ್ತದೆ . ಇನ್ನೊಂದು 8 ಅಡಿಯ ಗುಂಡಿಯಿಂದ ಗುಂಡಿಗೆ ಸುಮಾರು 25 ಅಡಿ ಅಂತರವಿರ್ಬೇಕು.

ಇನ್ನು ಕೈಗಾರಿಕಾ ಪ್ರದೇಶ ಜನನಿಬಿಡ ನಗರ ಪ್ರತಿಯೊಬ್ಬರ ಮನೆಯಲ್ಲಿ ಮೇಲ್ಛಾವಣಿ ಮಳೆನೀರು ಸಂಗ್ರಹ ಹಾಗೂ ಮನೆಗೊಂದು ಇಂಗೂ ಬಾವಿಯನ್ನು ನಿರ್ಮಿಸಿದರೆ ನೀರಿನ ಸಮಸ್ಯೆ ಮುಕ್ತಿ ಪಡೆಯಬಹುದು.ಮೇಲ್ಛಾವಣಿ ಮೂಲಕ ಮಳೆನೀರು ಸಂಗ್ರಹ ವಾದಲ್ಲಿ ಅದರಮೇಲೆ ಸುಮಾರು ಒಂದು ಲಕ್ಷದ 25 ಸಾವಿರ ಲೀಟರ್ ಅಷ್ಟು ಮಳೆ ಸಂಗ್ರಹವಾಗುವುದು. ಇದುನ್ನ ಆನ್ಲೈನ್ ಫಿಲ್ಟರ್ ಎಂದು ನಗರ ಪ್ರದೇಶ ಮನೆಗಳಿಗೆ ಮಾತ್ರ ಈ ವ್ಯವಸ್ಥೆ ಮಾಡಬಹುದು 30/40 ಮನೆಯೊಂದಕ್ಕೆ 6500 ಚಾರ್ಜ್ ಮಾಡಲಾಗುವುದು.

ಪ್ರಕ್ರತಿಗೆ ನಾವು ಏನು ನೀಡುತ್ತೇವೆ ಅದುನ್ನೆ ನಮಗೆ ವಾಪಸ್ಸು ನೀಡುವುದು ಉದಹಾರಣೆ ಜಾಲಿ ಮರದಲ್ಲಿ ಮಾವಿನ ಹಣ್ಣನ್ನು ತಿನ್ನಲು ಸಾದ್ಯ ಇಲ್ಲ ಹಾಗೆಯೇ ನಾವು ಆದಷ್ಟು ನೀರನ್ನು ಪೋಲು ಮಾಡುವುದನ್ನು ಕಡಿಮೆ ಮಾಡಿದ್ದೆ ಆದಲ್ಲಿ ಮುಂದಿನ ಪೀಳಿಗೆ ಕಷ್ಟ ಪಡುವುದು ತಪ್ಪುತ್ತದೆ ನೀರನ್ನು ಉಳಿಸಿ ಎಂದು ಭಾಷಣ ಮಾಡುವ ಬದಲು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ.

Leave A Reply

Your email address will not be published.