ಬೆಲ್ಲ ತಿನ್ನುವುದರಿಂದ ನಿಮ್ಮ ಕುಟುಂಬದವರ ಅರೋಗ್ಯ ಹೇಗಿರತ್ತೆ ನೋಡಿ

0 53

ನಾವು ಸಕ್ಕರೆ ಹಾಕಿದ ಆಹಾರವನ್ನು ಹೆಚ್ಚು ಇಷ್ಟಪಡುತ್ತೇವೆ ಆದರೆ ಸಕ್ಕರೆಗಿಂತ ಬೆಲ್ಲವನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು. ಬೆಲ್ಲವನ್ನು ಸೇವಿಸುವುದರಿಂದ ಆಗುವ ಆರೋಗ್ಯಕರ ಪ್ರಯೋಜನಗಳು ಯಾವುದು ಹಾಗೂ ಬೆಲ್ಲವನ್ನು ಹೇಗೆ ಸೇವಿಸಬೇಕು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಮನೆಯಲ್ಲಿ ಬೆಲ್ಲವನ್ನು ಉಪಯೋಗಿಸಿ ಪಾಯಸ, ಹೋಳಿಗೆ ಮುಂತಾದವುಗಳನ್ನು ಮಾಡುತ್ತಾರೆ. ಬೆಲ್ಲ ಆರೋಗ್ಯಕ್ಕೆ ಒಳ್ಳೆಯದು ಆದರೆ ಇತ್ತೀಚಿಗೆ ನಾವು ಎಲ್ಲ ಸಿಹಿ ತಿಂಡಿಗಳಿಗೆ ಸಕ್ಕರೆಯನ್ನು ಹಾಕುತ್ತೇವೆ. ನಮ್ಮ ಆಹಾರ ಪದ್ಧತಿ ಬದಲಾದಂತೆ ನಮಗೆ ಖಾಯಿಲೆಗಳು ಹೆಚ್ಚಾಗುತ್ತಿವೆ. ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಆಹಾರ ಪದ್ಧತಿಯಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಬೇಕು, ಸಕ್ಕರೆ ಹಾಕಿದ ಆಹಾರವನ್ನು ಕಡಿಮೆ ಸೇವಿಸಬೇಕು.

ಸಕ್ಕರೆ ಅಂಶವನ್ನು ಹೆಚ್ಚು ಸೇವಿಸುವುದರಿಂದ ದೇಹದಲ್ಲಿ ಇನ್ಸುಲಿನ್ ಅಂಶ ಕಡಿಮೆಯಾಗಿ ಡಯಾಬಿಟೀಸ್ ಸಮಸ್ಯೆ ಎದುರಾಗುತ್ತದೆ. ನಮ್ಮ ದಿನನಿತ್ಯದ ಆಹಾರದಲ್ಲಿ ಸಕ್ಕರೆ ಬದಲು ಬೆಲ್ಲವನ್ನು ಸೇರಿಸಿ ಸೇವಿಸಬಹುದು. ಸಾಮಾನ್ಯವಾಗಿ ಎಲ್ಲರೂ ಟೀ ಕುಡಿಯುತ್ತಾರೆ ಟಿಗೆ ಸಕ್ಕರೆ ಬದಲು ಬೆಲ್ಲವನ್ನು ಹಾಕಿ ಕುಡಿಯಬಹುದು. ಬಹಳಷ್ಟು ಜನರು ಬೆಳಗ್ಗೆ ಎದ್ದ ಕೂಡಲೇ ಉಗುರು ಬೆಚ್ಚಗಿನ ನೀರನ್ನು ಕುಡಿಯುತ್ತಾರೆ ಅದರ ಜೊತೆಗೆ ಬೆಲ್ಲವನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು ಇದರಿಂದ ಜೀರ್ಣ ಶಕ್ತಿ ಹೆಚ್ಚುತ್ತದೆ, ಅಸಿಡಿಟಿ, ಗ್ಯಾಸ್ ಸಮಸ್ಯೆಗಳು ನಿವಾರಣೆಯಾಗುತ್ತದೆ. ಬೆಲ್ಲದಲ್ಲಿ ಐರನ್ ಅಂಶವಿದ್ದು ಆರೋಗ್ಯಕ್ಕೆ ಒಳ್ಳೆಯದು.

ಕೆಲವರಿಗೆ ತಿಂದ ಆಹಾರ ಜೀರ್ಣವಾಗುವುದಿಲ್ಲ ಅಂತವರು ಬೆಳಗ್ಗೆ ಮತ್ತು ರಾತ್ರಿ ಮಲಗುವಾಗ ಬೆಲ್ಲವನ್ನು ಸೇವಿಸಿದರೆ ತಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ. ಯಾರಿಗೆ ವೀಕ್ ನೆಸ್ ಇರುತ್ತದೆಯೋ ಅವರು ಬೆಲ್ಲವನ್ನು ಸೇವಿಸಬೇಕು ಅದರಲ್ಲಿ ಐರನ್ ಅಂಶ ಇರುವುದರಿಂದ ರಕ್ತಹೀನತೆ, ಅನೇಮಿಯಾ ಸಮಸ್ಯೆ ನಿವಾರಣೆಯಾಗುತ್ತದೆ. ಮುಖದಲ್ಲಿ ಪಿಂಪಲ್ಸ್, ಕಪ್ಪು ಕಲೆಗಳು ಆದವರು ಬೆಲ್ಲವನ್ನು ಹೆಚ್ಚು ಸೇವಿಸಬೇಕು ಇದರಿಂದ ಮುಖ ಕಾಂತಿಯುತವಾಗುತ್ತದೆ. ಕೂದಲು ಉದುರುವ ಸಮಸ್ಯೆಗೆ ಬೆಲ್ಲ ತಿನ್ನುವುದರಿಂದ ಪರಿಹಾರವಾಗುತ್ತದೆ. ಹೆಚ್ಚು ಬಿಳಿ ಇರುವ ಬೆಲ್ಲವನ್ನು ತೆಗೆದುಕೊಳ್ಳಬಾರದು, ಸ್ವಲ್ಪ ಕಪ್ಪಾಗಿರುವ ಬೆಲ್ಲವನ್ನು ತೆಗೆದುಕೊಳ್ಳಬೇಕು ಇದರಲ್ಲಿ ಕೆಮಿಕಲ್ಸ್ ಮಿಕ್ಸ್ ಇರುವುದಿಲ್ಲ. ಜೋನಿಬೆಲ್ಲ ಎಂದು ಸಿಗುತ್ತದೆ ಅದು ಆರೋಗ್ಯಕ್ಕೆ ಬಹಳ ಒಳ್ಳೆಯದು.

ಬೆಲ್ಲವನ್ನು ಖರೀದಿಸಬೇಕಾದರೆ ನೋಡಿಕೊಂಡು ಉತ್ತಮ ಗುಣಮಟ್ಟದ ಬೆಲ್ಲವನ್ನು ಖರೀದಿಸಬೇಕು. ಬೆಲ್ಲದಲ್ಲಿ ಮ್ಯಾಗ್ನಿಷಿಯಂ, ಪೊಟ್ಯಾಶಿಯಂ, ವಿಟಮಿನ್ ಬಿ, ಬಿ6, ವಿಟಮಿನ್ ಸಿ ಅಂಶ ಹೆಚ್ಚಾಗಿ ಇದೆ. ಸಂಧಿವಾತ, ಕೈಕಾಲು ನೋವು, ಮಂಡಿ ನೋವುಗಳಿಗೆ ಬೆಲ್ಲ ಉತ್ತಮ ಔಷಧಿಯಾಗಿದೆ, ಮೂಳೆಗಳನ್ನು ಗಟ್ಟಿ ಮಾಡುವ ಗುಣ ಬೆಲ್ಲಕ್ಕೆ ಇದೆ. ಪ್ರತಿದಿನ ಬೆಲ್ಲದೊಂದಿಗೆ ಒಣಕೊಬ್ಬರಿಯನ್ನು ಸೇವಿಸುವುದು ಆರೋಗ್ಯಕ್ಕೆ ಬಹಳ ಉಪಯುಕ್ತ ಇದರಿಂದ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ಶಕ್ತಿ ಸಿಗುತ್ತದೆ.

ಹೈ ಬಿಪಿ ಇರುವವರು ಬೆಲ್ಲವನ್ನು ನಿಯಮಿತವಾಗಿ ಸೇವಿಸುವುದರಿಂದ ಬಿಪಿ ನಿಯಂತ್ರಣಕ್ಕೆ ಬರುತ್ತದೆ. ಬೆಲ್ಲದಲ್ಲಿ ಕ್ಯಾಲ್ಷಿಯಂ ಅಂಶ ಇರುವುದರಿಂದ ಹಲ್ಲಿನ ಆರೋಗ್ಯಕ್ಕೆ ಒಳ್ಳೆಯದು. ನಿದ್ರಾಹೀನತೆ ಸಮಸ್ಯೆಯಿಂದ ಬಳಲುವವರು ಬಿಸಿ ನೀರಿನೊಂದಿಗೆ ಬೆಲ್ಲವನ್ನು ಸೇರಿಸಿ ಸೇವಿಸುವುದರಿಂದ ಈ ಸಮಸ್ಯೆ ನಿವಾರಣೆಯಾಗುತ್ತದೆ. ಬೆಲ್ಲವನ್ನು ಸೇವಿಸಿದ ನಂತರ ಬಾಯಿಯನ್ನು ನೀರಿನಿಂದ ತೊಳೆದುಕೊಳ್ಳುವುದು ಅಥವಾ ಬ್ರಷ್ ಮಾಡುವುದನ್ನು ರೂಢಿಸಿಕೊಳ್ಳಬೇಕು. ಈ ಮಾಹಿತಿಯನ್ನು ತಪ್ಪದೇ ಎಲ್ಲರಿಗೂ ತಿಳಿಸಿ ಬೆಲ್ಲವನ್ನು ಸೇವಿಸಿ ಆರೋಗ್ಯವನ್ನು ಕಾಪಾಡಿಕೊಳ್ಳೋಣ.

Leave A Reply

Your email address will not be published.