ಬಹಳಷ್ಟು ಜನರಿಗೆ ನರಗಳ ದೌರ್ಬಲ್ಯ ಅಥವಾ ನರಗಳ ಬಲಹೀನತೆ ಸಮಸ್ಯೆ ಇರುತ್ತದೆ. ಇದನ್ನು ಸಹ ನಾವು ಡಾಕ್ಟರ್ ಗಳ ಹತ್ತಿರ ಹೋಗಿ ಮಾತ್ರೆ ತೆಗೆದುಕೊಳ್ಳುವ ಬದಲು ಮನೆಮದ್ದು ಮಾಡಿಕೊಳ್ಳುವ ಮೂಲಕ ಹೇಗೆ ಸರಿ ಮಾಡಿಕೊಳ್ಳಬಹುದು ಅನ್ನೋದನ್ನ ತಿಳಿದುಕೊಳ್ಳೋಣ.

ನರಗಳಲ್ಲಿ ಬಲಹೀನತೆ ಇರುವ ವ್ಯಕ್ತಿಗಳಿಗೆ ಕುತ್ತಿಗೆ ಕೈಕಾಲು ಈ ಭಾಗಗಳಲ್ಲಿ ಹಿಡಿದ ಹಾಗೆ ಅನುಭವ ಉಂಟಾಗುತ್ತದೆ. ಈ ರೀತಿ ನರಗಳಲ್ಲಿ ತೊಂದರೆ ಉಂಟಾದಾಗ ಮೆದುಳಿನ ಕಾರ್ಯಕ್ಷಮತೆ ಕಡಿಮೆಯಾಗುತ್ತದೆ.ಈ ದೋಷದಿಂದಾಗಿ ನಾವು ಕೆಲವೊಮ್ಮೆ ಚಿಕ್ಕ ವಸ್ತುವನ್ನು ಕೈಯಲ್ಲಿ ಎತ್ತಿ ಹಿಡಿದರು ಸಹ ತುಂಬಾ ಭಾರ ಇರುವಂತೆ ಅನುಭವ ಉಂಟಾಗುತ್ತದೆ. ಅಂಥ ಸಂದರ್ಭಗಳಲ್ಲಿ ಕೈಯಲ್ಲಿರುವ ವಸ್ತುವನ್ನು ಕೈ ಬಿಟ್ಟುಬಿಡುತ್ತೇವೆ ಈ ರೀತಿ ನರದೋಷ ಇದ್ದರೆ ಮಾತ್ರ ಉಂಟಾಗುತ್ತದೆ. ದೇಹದಲ್ಲಿರುವ ಎಲ್ಲಾ ನರಕೋಶಗಳಿಗೆ ಸಮರ್ಪಕವಾಗಿ ರಕ್ತಸಂಚಾರ ಆಗದೇ ಇದ್ದಾಗ ತಲೆ ಬಾರ ಆಗುವುದು ತಲೆನೋವು ಬರುವುದು ತಲೆ ಸುತ್ತಿದಂತೆ ಅನುಭವ ಉಂಟಾಗುತ್ತದೆ. ಈ ರೀತಿ ನರಗಳ ಸಮಸ್ಯೆ ಉಂಟಾದಾಗ ನಾವು ಕಾಲಕ್ಕೆ ತಕ್ಕಂತೆ ಸರಿಯಾದ ಚಿಕಿತ್ಸೆಯನ್ನು ಮಾಡಿಕೊಳ್ಳಬೇಕಾಗುತ್ತದೆ ಇಲ್ಲವಾದರೆ ವಯಸ್ಸಾದಂತೆ ನರಗಳಲ್ಲಿ ಬಲಹೀನತೆ ಮತ್ತು ಹೆಚ್ಚಾಗುತ್ತ ಹೋಗುತ್ತದೆ ಕೆಲವರಿಗೆ ಎಷ್ಟೇ ಮಾತ್ರಗಳನ್ನು ತೆಗೆದುಕೊಂಡರೂ ಸಹ ನರದೌರ್ಬಲ್ಯ ಕಡಿಮೆಯಾಗುವುದಿಲ್ಲ. ಅಂತವರು ಪಾತ್ರೆಗಳ ಬದಲಾಗಿ ಮನೆಮದ್ದು ಮಾಡುವ ಮೂಲಕ ಹಾಗೂ ಸೂರ್ಯನಿಂದ ಬರುವಂತಹ ವಿಟಮಿನ್ ಡಿಯನ್ನು ಪಡೆದುಕೊಳ್ಳುವುದರ ಮೂಲಕ ನರಗಳಲ್ಲಿ ಉಂಟಾಗುವ ಬಲಹೀನತೆಯನ್ನು ಕಡಿಮೆ ಮಾಡಿಕೊಳ್ಳಬಹುದು.

ಈ ರೀತಿಯಾಗಿ ಮಾಡುವುದರಿಂದ ನಮಗೆ ಎಷ್ಟೇ ವಯಸ್ಸಾದರೂ ಸಹ ನೆನಪಿನ ಶಕ್ತಿ ಕುಂದುವುದಿಲ್ಲ ನಮ್ಮ ಮೆದುಳು ಚುರುಕಾಗಿ ಇರುವಂತೆ ನೋಡಿಕೊಳ್ಳಬಹುದು. ಎಲ್ಲರಿಗೂ ತಿಳಿದಿರುವ ಹಾಗೆ ನಮ್ಮ ಮೆದುಳಿನ ಕಾರ್ಯಗಳು ನಿರ್ಧಾರವಾಗುವುದು ನಮ್ಮ ನರಕೋಶಗಳ ಮೇಲೆ. ನರ ಕೋಶಗಳ ಆರೋಗ್ಯದ ಮೇಲೆ ಯಾವಾಗ ಏನಾದರೂ ತೊಂದರೆ ಉಂಟಾಗುತ್ತದೆ ಆಗಾಗ ನರ ದೌರ್ಬಲ್ಯ ಉಂಟಾಗುತ್ತದೆ. ನರಕೋಶಗಳ ಶಕ್ತಿಯನ್ನು ಹೆಚ್ಚಿಸಲು ಕೆಲವೊಂದಿಷ್ಟು ಆಹಾರ ಪದಾರ್ಥಗಳಿವೆ ಅನ್ನುವುದರ ಬಗ್ಗೆ ತಿಳಿದುಕೊಳ್ಳೋಣ.

ನಮ್ಮ ನರಗಳ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಈ ಮನೆಮದ್ದನ್ನು ಮಾಡೋಣ. ಈ ಮನೆಮದ್ದು ಮಾಡಲು ೧೦ಗ್ರಾಂ ಅಗಸೆ ಬೀಜ, ವಾಲ್ನಟ್ ಇದರಲ್ಲಿ ಒಮೆಗಾ ತ್ರಿ ಇರುತ್ತೆ, ಸಾಕಷ್ಟು ಪ್ರಮಾಣದಲ್ಲಿ ಆಂಟಿಆಕ್ಸಿಡೆಂಟ್ ಇರುತ್ತೆ ಇದು ಮೆದುಳಿನ ಬೆಳವಣಿಗೆಗೆ ತುಂಬಾ ಸಹಾಯಕಾರಿ ಆಗಿರುತ್ತದೆ ನರಕೋಶಗಳ ಮತ್ತು ಮೆದುಳಿನ ಆರೋಗ್ಯಕ್ಕೆ ಇದು ಬಹಳಷ್ಟು ಒಳ್ಳೆಯದು. ಕಾಳುಮೆಣಸು 5 ಗ್ರಾಂ , 2 ಸ್ಪೂನ್ ಕಲ್ಲು ಸಕ್ಕರೆ , ಚಕ್ಕೆ 1 ಇಂಚ್ ಅಷ್ಟು, ಒಣ ಕೊಬ್ಬರಿ 10 ಗ್ರಾಂ ಅಥವಾ ಹೆಚ್ಚಿಗೆ ಬೇಕಾದರೂ ತೆಗೆದುಕೊಳ್ಳಬಹುದು ಶುಗರ್ ಇರುವವರು ಕಲ್ಲುಸಕ್ಕರೆ ಯನ್ನೂ ಬಿಡಬೇಕು. ನಂತರ ಎಲ್ಲಾ ಪದಾರ್ಥಗಳನ್ನು ಒಟ್ಟಿಗೆ ಸೇರಿಸಿ ಮಿಕ್ಸ್ ಮಾಡಿ ನುಣ್ಣಗೆ ಪೌಡರ್ ಮಾಡಿಕೊಳ್ಳಬೇಕು. ಈ ಪದಾರ್ಥಗಳಲ್ಲಿ ಒಣಕೊಬ್ಬರಿ ಹಾಗೂ ವಾಳ್ನಟ್ಗಳಲ್ಲಿ ಎಣ್ಣೆಯ ಅಂಶವಿರುವುದರಿಂದ ಪೌಡರ್ ಸ್ವಲ್ಪ ಉದುರುದುರಾಗಿ ಇರಲ್ಲಾ.

ನಂತರ ಈ ಪೌಡರನ್ನು ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ 1 ಸ್ಪೂನ್ ತೆಗೆದುಕೊಂಡು ಆಂಟಿಸ್ ಪೋನ್ ಪೌಡರನ್ನು ತಿಂದು ಒಂದು ಲೋಟ ನೀರು ಒಂದು ಲೋಟ ಹಾಲನ್ನು ಕುಡಿಯಬಹುದು. ಜೀರ್ಣಶಕ್ತಿ ಹೆಚ್ಚಾಗಿರುವವರು ಒಂದು ಲೋಟ ಹಾಲನ್ನು ಬೇಕಿದ್ದರೂ ಕುಡಿಯಬಹುದು. ಈ ಪೌಡರ್ ತೆಗೆದುಕೊಂಡು ಒಂದು ಗಂಟೆಯವರೆಗೂ ಕಾಫಿ ತಿಂಡಿ ಯಾವುದನ್ನು ಸೇವಿಸಬಾರದು. ಹತ್ತು ದಿನಗಳವರೆಗೂ ಈ ಪುಡಿಯನ್ನು ಸೇವಿಸುತ್ತ ಬಂದರೆ ನಿಮಗೆ ನಿಧಾನವಾಗಿ ಇದರ ಪರಿಣಾಮ ಬೀರಲು ಆರಂಭವಾಗುತ್ತದೆ ನರಗಳಲ್ಲಿ ದೌರ್ಬಲ್ಯ ಇರುವುದು ಕಡಿಮೆಯಾಗುತ್ತ ನರಗಳಲ್ಲಿ ಶಕ್ತಿ ಬರುತ್ತದೆ. ಹಾಗೆ ಇವುಗಳ ಜೊತೆಗೆ ನಮ್ಮ ದಿನ ನಿತ್ಯದ ಆಹಾರದ ಜೊತೆಗೆ ಸ್ಟ್ರಾಬೆರಿ ರಸ್ಬೇರಿ ಅಂತ ಹಣ್ಣುಗಳನ್ನು ಸಹ ಸೇವಿಸಬೇಕು. ಮುಖ್ಯವಾಗಿ ಪ್ರತಿದಿನ ಪ್ರಾಣಾಯಾಮ ಯೋಗ ವಾಕಿಂಗ್ ಮುಂತಾದವುಗಳನ್ನು ಮಾಡಬೇಕು. ಇದರಿಂದಲೂ ಸಹ ನರಕೋಶಗಳಲ್ಲಿ ಸಮಸ್ಯೆ ಇದ್ದರೆ ಅದು ಪರಿಹಾರ ಆಗುತ್ತದೆ.

By

Leave a Reply

Your email address will not be published. Required fields are marked *