ಕಪ್ಪಗೆ ಇರುವ ಅಂಡರ್ ಆರ್ಮ್ಸ್ ಅನ್ನು ಹೇಗೆ ಬೆಳ್ಳಗೆ ಮಾಡಿಕೊಳ್ಳುವುದು ಅನ್ನೋದನ್ನ ನೋಡೋಣ.ಬೆವರು ಜಾಸ್ತಿ ಇರುವುದರಿಂದ ಅಂಡರ್ ಆರ್ಮ್ಸ್ ಅಲ್ಲೇ ಹಾಗೇ ಕಪ್ಪಾಗಿ ಇರುತ್ತದೆ. ಯಾವಾಗಿನಿಂದ ಅಂಡರ್ ಆರ್ಮ್ಸ್ ನಲ್ಲಿ ಕೂದಲ ಬೆಳವಣಿಗೆ ಆಗಳು ಆರಂಭ ಆಗುತ್ತದೆಯೋ ಆಗಿನಿಂದ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಕ್ಲೀನ್ ಇದ್ರೆ ನಮ್ಮ ಮುಖದ ಹಾಗೆ ಬೆಳ್ಳಗೆ ಇರತ್ತೆ. ಮಾರ್ಕೆಟ್ ಗಳಲ್ಲಿ ಲೇಡೀಸ್ ಗಳಿಗೆ ಎಂದೇ ಹಲವಾರು ರೀತಿಯ ರೇಜರ್ ಗಳು ಲಭ್ಯವಿರುತ್ತೆ ಅಂಡರ್ ಆರ್ಮ್ಸ್ ನ ಕೂದಲನ್ನು ತೆಗೆಯಲು ರೇಜರ್ ಗಳನ್ನು ಬಳಕೆ ಮಾಡಬೇಕು.
ಸೋಪ್ ಅಥವಾ ಯಾವುದೇ ಕ್ರೀಮ್ ಗಳನ್ನು ಬಳಸುವುದರ ಬದಲು ಅವ್ರ ಅಂತಹ ಜೆಲ್ ಬಳಸಿ ಕ್ಲೀನ್ ಮಾಡಿಕೊಳ್ಳಬೇಕು. ಅಲೋವೆರ ಜೆಲ್ ಬಳಸುವುದರಿಂದ ಚರ್ಮವನ್ನು ಮೃದುವಾಗಿಸುತ್ತೆ ಜೊತೆಗೆ ಕಪ್ಪು ಕಲೆಗಳನ್ನು ತೆಗೆದು ಬೆಳ್ಳಗೆ ಮಾಡಲು ಸಹಾಯ ಮಾಡುತ್ತದೆ.
ಅಂಡರ್ ಆರ್ಮ್ಸ್ ಕ್ಲೀನ್ ಮಾಡುವಾಗ ಮುಂಚಿನ ದಿನವೇ ಜೆಲ್ ಹಚ್ಚಿಟ್ಟುಕೊಳ್ಳಬೇಕು. ನಂತರ ರೇಜರ್ ನಿಂದ ಶೇವ್ ಮಾಡುವಾಗ ಕೂದಲು ಇರುವ ವಿರುದ್ಧ ದಿಕ್ಕಿನಿಂದ ಸ್ವಚ್ಛ ಮಾಡುತ್ತಾ ಬರಬೇಕು ನಂತರ ನೇರವಾಗಿ ಮಾಡಬೇಕು. ನಂತರ ಶೇವ್ ಮಾಡಿಕೊಂಡ ನಂತರ ಅಂಡರ್ ಆರ್ಮ್ಸ್ ಬೆಳ್ಳಗೆ ಆಗಲು ಮನೆ ಮದ್ದನ್ನು ಮಾಡೋದು. ಹೇಗೆ ಮಾಡೋದು ಅನ್ನೋದನ್ನ ನೋಡೋಣ. ಒಂದು ಬೌಲ್ ಗೆ ಅಲೋವೆರ ಜೆಲ್ , ಕೋಲ್ಗೇಟ್ ಬಿಳಿ ಪೇಸ್ಟ್ 1 ಸ್ಪೂನ್ ಅಷ್ಟು, ಅಡುಗೆ ಸೋಡಾ ಅರ್ಧ ಸ್ಪೂನ್ ಅಷ್ಟು, ನಿಂಬೆ ಹಣ್ಣಿನ ರಸ ಅರ್ಧ ಭಾಗ. ಈ ಎಲ್ಲಾ ಪದಾರ್ಥಗಳೂ ಸಹ ನಮ್ಮ ಚರ್ಮವನ್ನು ಬೆಳ್ಳಗೆ ಮಾಡಲು ಸಹಾಯ ಮಾಡುತ್ತದೆ ಜೊತೆಗೆ ಬೆವರಿನ ವಾಸನೆ ಹಾಗೂ ಬೆವರಿನ ಕಲೆಗಳನ್ನು ತೆಗೆಯಲು ಸಹಾಯ ಮಾಡುತ್ತವೆ. ಇವೆಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಅಂಡರ್ ಆರ್ಮ್ಸ್ ಗೆ ಹಚ್ಚಬೇಕು.
ಆದರೆ ಒಂದು ನೆನಪಿನಲ್ಲಿಡಬೇಕಾದ ವಿಷಯ ಎಂದರೆ, ಇದನ್ನು ಹಚ್ಚುವ ಒಂದು ದಿನ ಮೊದಲು ಶೇವಿಂಗ್ ಮಾಡಿಟ್ಟುಕೊಳ್ಳಬೇಕು ಯಾಕಂದ್ರೆ ಇದರಲ್ಲಿ ನಿಂಬೆ ಹಣ್ಣಿನ ರಸ ಎಲ್ಲ ಇರುವುದರಿಂದ ಶೇವ್ ಮಾಡಿದ ದಿನವೇ ಬಳಸಿದರೆ ಉರಿ ಆಗುವ ಸಾಧ್ಯತೆ ಇರುತ್ತದೆ. ಮೊದಲು ಅಂಗೈ ಗೆ ಹಚ್ಚಿ ನೋಡಿ ಟೆಸ್ಟ್ ಮಾಡಿಕೊಂಡು ಉರಿ ಆಗದೆ ಇದ್ದಲ್ಲಿ ಬಳಸಬಹುದು. ನಂತರ ಅಂಡರ್ ಆರ್ಮ್ಸ್ ಗೆ ಹಚ್ಚಬೇಕು. ನಂತರ 10 ನಿಮಿಷ ಆರಲು ಬಿಟ್ಟು ತಣ್ಣಗಿನ ನೀರಿನಲ್ಲಿ ತೊಳೆದು ಒಂದು ಬಟ್ಟೆಯಿಂದ ಒರೆಸಬೇಕು ನಂತರ ಯಾವುದೇ ಮೊಯಿಶ್ಚರೈಸರ್ ಹಚ್ಚಬೇಕು.