Bike Price Hike: ಬೈಕ್ ಖರೀದಿಸೋ ಗ್ರಾಹಕರಿಗೆ ಬಿಗ್ ಶಾ’ಕ್ ಏಪ್ರಿಲ್ ತಿಂಗಳಿಂದ ಜಾಸ್ತಿ ಆಗಲಿದೆ ಈ ಬೈಕ್ ಗಳ ಬೆಲೆ

0 7

Bike Price Hike: ಸದ್ಯದ ಮಟ್ಟಿಗೆ ಭಾರತದ ದ್ವಿಚಕ್ರ (India’s two-wheeler) ಮಾರುಕಟ್ಟೆಗಳಲ್ಲಿ ಹೆಚ್ಚಾಗಿ ಎಲೆಕ್ಟ್ರಿಕ್ ವಾಹನಗಳೆ (Electric vehicle) ತುಂಬಿಕೊಂಡಿವೆ. ಪರಿಸರ ಸ್ನೇಹಿ ಆಗಿರುವಂತಹ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು (Electric two wheeler) ಭಾರತದ ಮಾರುಕಟ್ಟೆಯನ್ನು ಇತ್ತೀಚಿನ ದಿನಗಳಲ್ಲಿ ದೊಡ್ಡಮಟ್ಟದಲ್ಲಿ ಹಬ್ಬಿಕೊಂಡಿವೆ. ಅದರಲ್ಲೂ ಯುಗಾದಿ ಹಬ್ಬ ಕಳೆಯುತ್ತಿದ್ದಂತೆ ದ್ವಿಚಕ್ರ ವಾಹನ ಖರೀದಿದಾರರಿಗೆ ಒಂದು ಕಹಿ ಸುದ್ದಿ ಹೊರಬಂದಿದ್ದು ಪ್ರತಿಯೊಬ್ಬರೂ ಕೂಡ ಈ ಕುರಿತಂತೆ ಸ್ವಲ್ಪ ಮಟ್ಟಿಗೆ ತಲೆ ಕೆಡಿಸಿಕೊಳ್ಳಬೇಕಾಗಿದೆ. ಅದರಲ್ಲೂ ಈ ಕಹಿ ವಾರ್ತೆಯನ್ನು ಹೊರ ಹಾಕಿರುವುದು ಹೀರೋ ಮೋಟೋಕಾರ್ಪ್ ಸಂಸ್ಥೆ.

Bike Price Hike

ಹೊಸ ಉತ್ಪಾದನೆಯನ್ನು ಅತೀ ಶೀಘ್ರದಲ್ಲೇ ಪ್ರಾರಂಭಿಸಲಿರುವ ಈ ಸಂಸ್ಥೆಯ ವಾಹನದ ವೆಚ್ಚ ಕೂಡ ಹೆಚ್ಚಾಗಲಿದೆ. ಭಾರತದಲ್ಲಿ ಸದ್ಯಕ್ಕೆ ಎಮಿಷನ್ ನಿಯಮಗಳು ಅತ್ಯಂತ ಕಟ್ಟುನಿಟ್ಟಾಗಿರುವ ಹಿನ್ನೆಲೆಯಲ್ಲಿ ಅದಕ್ಕೆ ತೊಂದರೆ ಉಂಟಾಗದಂತೆ ಬಿಎಸ್6 ಎಂಜಿನ್ ನ ವಾಹನಗಳ ಉತ್ಪಾದನೆಯಲ್ಲಿ ಹೀರೋ ಸಂಸ್ಥೆ ತೊಡಗಿದೆ. ಹೀಗಾಗಿ ಏಪ್ರಿಲ್ 1ರಿಂದ ಹೀರೋ ಮೋಟೋಕಾರ್ಪ್ (Hero MotoCorp) ಸಂಸ್ಥೆಯ ವಿಚಾರವಾಹನಗಳು ಮುಂದಿನ ದಿನಗಳಲ್ಲಿ ಹೆಚ್ಚಳವನ್ನು ಕಾಣಲಿವೆ.

ಅಂದರೆ ಏಪ್ರಿಲ್ (April) 1ರಿಂದ ನಂತರ ಯಾರೇ ವಾಹನವನ್ನು ಬುಕ್ ಮಾಡಿದರೂ ಕೂಡ ಅದರಲ್ಲೂ ವಿಶೇಷವಾಗಿ ಹೀರೋ ಮೋಟಾರ್ (Hero MotoCorp) ಸಂಸ್ಥೆಯ ದ್ವಿಚಕ್ರ ವಾಹನಗಳು ಅಥವಾ ಸ್ಕೂಟರ್ ಅನ್ನು ಬುಕ್ ಮಾಡಿದರೆ ಈಗ ಇರುವ ಹಣಕ್ಕಿಂತ ಹೆಚ್ಚಿನ ಹಣವನ್ನು ನೀಡಬೇಕಾಗುತ್ತದೆ. ಈಗಾಗಲೇ ನೀವು ಬುಕ್ (Booking) ಮಾಡಿದ್ದರೆ ಮುಂದೆ ಬರುವಂತಹ ಡೆಲಿವರಿ ವಾಹನಗಳ ಮೊತ್ತ ಹಿಂದಿನ ಮೊತ್ತವೇ ಆಗಿರುತ್ತದೆ. ಅದರಲ್ಲಿ ಯಾವುದೇ ಚಿಂತೆ ಪಡುವ ಅಗತ್ಯತೆ ಇಲ್ಲ.

ಇದನ್ನೂ ಓದಿ..ಮಗಳ ಮದುವೆಗೆ ಯೋಚನೆ ಮಾಡಬೇಡಿ ಸರ್ಕಾರನೇ ನೀಡ್ತಿದೆ ಹಣ, ಇದರ ಸಂಪೂರ್ಣ ಮಾಹಿತಿ ಇಲ್ಲಿದೆ

ಒಟ್ಟಾರೆಯಾಗಿ ಈಗ ಇರುವ ಬೆಲೆಗಿಂತ 2%ಕ್ಕೂ ಅಧಿಕ ಬೆಲೆಯನ್ನು ಹೀರೋ ಸಂಸ್ಥೆ ತನ್ನ ದ್ವಿಚಕ್ರ ವಾಹನಗಳ ಖರೀದಿ ಮೇಲೆ ಹಾಕಲಿದೆ. ಹೀರೋ ಸಂಸ್ಥೆ ತನ್ನ ಯಾವೆಲ್ಲ ದ್ವಿಚಕ್ರ ವಾಹನಗಳ ಮೇಲೆ ಬೆಲೆ ಹೇರಿಕೆಯನ್ನು ಮಾಡಲಿದೆ ಎಂಬುದನ್ನು ಅಧಿಕೃತವಾಗಿ ಇನ್ನು ಕೂಡ ತಿಳಿಸಿಲ್ಲ ಹೀಗಾಗಿ ಮುಂದಿನ ದಿನಗಳಲ್ಲಿ ಅಧಿಕೃತ ಪ್ರಕಟಣೆಗಾಗಿ ಕಾದು ನೋಡಬೇಕಾಗಿದೆ. ಹೀಗಾಗಿ ಒಂದು ವೇಳೆ ಹೊಸ ವಾಹನವನ್ನು ಖರೀದಿ ಮಾಡಬೇಕು ಎನ್ನುವ ಯೋಚನೆಯಲ್ಲಿದ್ದರೆ ಇಂದೇ ಖರೀದಿ ಮಾಡುವುದು ಒಳ್ಳೆಯದು.

Leave A Reply

Your email address will not be published.