ರವಿ ಕಾಣದ್ದನ್ನು ಕವಿ ಕಂಡ ಎಂಬ ಮಾತಿನಂತೆ ಬ್ರೆಜಿಲ್ ದೇಶದಲ್ಲಿ 35 ವರ್ಷಗಳ ಕಾಲ ಮನೆ, ಮನೆಯವರನ್ನು ಕಳೆದುಕೊಂಡು ಬಿಕ್ಷೆ ಬೇಡುತ್ತಾ ಕಥೆ ಕವನ ಬರೆದು ಒಬ್ಬ ಮಹಿಳೆಯ ಮೂಲಕ ಜನಪ್ರಿಯನಾದ ಬಿಕ್ಷುಕನ ಕಥೆಯನ್ನು ಈ ಲೇಖನದ ಮೂಲಕ ತಿಳಿಯೋಣ.

ರೈಮುಂಡಾ ಅರ್ರುಡಾ ಸೊಬ್ರಿನೋ ಆಗಸ್ಟ್ 1, 1938 ರಲ್ಲಿ ಬ್ರೆಜಿಲ್ ದೇಶದ ಗೋಯಿಸ್ ಎಂಬ ಊರಿನಲ್ಲಿ ಬಡ ಕುಟುಂಬದಲ್ಲಿ ಜನಿಸಿದನು. ಈತ ಹೆಚ್ಚು ಓದಿದವನಲ್ಲ. ಹೊಟ್ಟೆಪಾಡಿಗಾಗಿ ಕೂಲಿ ಕೆಲಸ ಮಾಡುತ್ತಿದ್ದನು. ತನ್ನ 23 ನೇ ವಯಸ್ಸಿಗೆ ಬ್ರೆಜಿಲ್ ದೇಶದ ದಕ್ಷಿಣ ಭಾಗದ ಸೌತ್ ಪೋಲೊ ಎಂಬ ಪ್ರದೇಶಕ್ಕೆ ಬಂದ ಅಲ್ಲಿ ತೋಟದ ಮಾಲಿಯಾಗಿ, ಪುಸ್ತಕ ಮಾರಾಟಗಾರನಾಗಿ ಹೀಗೆ ನಾನಾ ಕೆಲಸ ಮಾಡುತ್ತಿದ್ದನು. ಅವನಿಗೆ ಪುಸ್ತಕಗಳನ್ನು ಓದುವ ಹವ್ಯಾಸವಿತ್ತು. ಬ್ರೆಜಿಲ್ ನಲ್ಲಿ ಈ ಸಮಯದಲ್ಲಿ ಶಿಸ್ತುಬದ್ಧ ಮಿಲಿಟರಿ ನಿಯಮವನ್ನು ಜಾರಿಗೊಳಿಸಲಾಯಿತು ಇದು ಸಾಮಾಜಿಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿತು. ನಂತರ ಸತತ ಹೋರಾಟದ ಫಲವಾಗಿ ಮಿಲಿಟರಿ ವುವಸ್ಥೆಯು ಕೊನೆಗೊಂಡಿತು ಆದರೆ ಹಲವರ ಬದುಕು ಬೀದಿಗೆ ಬಿದ್ದಿತು ಅವರಲ್ಲಿ ಸೊಬ್ರಿನೋ ಕೂಡ ಒಬ್ಬರು ಎಲ್ಲರನ್ನೂ ಕಳೆದುಕೊಂಡು ಬೀದಿಗೆ ಬಿದ್ದನು ಹೊಟ್ಟೆಪಾಡಿಗಾಗಿ ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದನು ಬದುಕು ಬೀದಿಗೆ ಬಿದ್ದರೂ ಸಹ ಆತನ ಸಾಹಿತ್ಯಾಸಕ್ತಿ ಹಾಗೂ ಅಭಿರುಚಿ ಕುಗ್ಗಲಿಲ್ಲ. ತನಗೆ ತೋಚಿದ್ದನ್ನು ಬರೆಯುತ್ತಿದ್ದ ಸುಮಾರು 35 ವರ್ಷಗಳ ಕಾಲ ಬಿಕ್ಷೆ ಬೇಡುತ್ತಾ ರದ್ದಿ ಹಾಳೆಯ ಮೇಲೆ ಸಾಕಷ್ಟು ಕವಿತೆಗಳನ್ನು ನೂರಾರು ಕಥೆಗಳನ್ನು ಬರೆದನು.

ಏಪ್ರೀಲ್ 2011 ರಲ್ಲಿ ಶಲ್ಲಾ ಮುಂಟೆರೋ ಸೊಬ್ರಿನೋ ಅವರ ಈ ಬರವಣಿಗೆಯನ್ನು ಗಮನಿಸಿ ಅವರ ಹತ್ತಿರ ಆತ್ಮೀಯವಾಗಿ ಮಾತನಾಡಿದರು ಆತನ ಹಿನ್ನೆಲೆ ಕೇಳಿದರು ಆದರೆ 35 ವರ್ಷದಿಂದ ಮಾತನಾಡದ ಸೊಬ್ರಿನೋ ಮೊದಲು ಮಾತನಾಡಲು ನಿರಾಕರಿಸಿದ ನಂತರ ಅವನ ಕಥೆಯನ್ನು ಹೇಳಿಕೊಂಡ ಇದನ್ನು ಕೇಳಿದ ಶಲ್ಲಾ ಮರುಕ ಪಟ್ಟರು ಫೇಸ್ ಬುಕ್ ನಲ್ಲಿ ಆತನ ಹೆಸರಿನಲ್ಲಿ ಪೇಜ್ ರಚಿಸಿ ಆತನ ಕಥೆ, ಕವನಗಳನ್ನು ಪ್ರಕಟಿಸಿದರು. ಇದು ಬೇಗ ವೈರಲ್ ಆಗಿ ಒಂದು ಲಕ್ಷ ಅನುಯಾಯಿಗಳನ್ನು ಸಂಪಾದಿಸಿತು. ದೇಣಿಗೆಯು ಸಂಗ್ರಹವಾಯಿತು ಅವನ ಬಳಿ ಅನೇಕರು ಬರಲಾರಂಭಿಸಿದರು. ಈ ಪೇಜ ನೋಡಿದ ಆತನ ಸಂಬಂಧಿಯೊಬ್ಬ ಸೊಬ್ರಿನೋ ಅವರನ್ನು ಹುಡುಕಿಕೊಂಡು ಬಂದ. ಇಂದು ಸೊಬ್ರಿನೋ ಅವರಿಗೆ ಮನೆ, ಬರೆಯಲು ವ್ಯವಸ್ಥೆ, ಶಲ್ಲಾಳ ಸಾಂಗತ್ಯವಿದೆ ಇದಕ್ಕೆಲ್ಲ ಕಾರಣಳಾದ ಶಲ್ಲಾಳಿಗೆ ನಮನಗಳು.

Leave a Reply

Your email address will not be published. Required fields are marked *