ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಬಿಗ್ ಬಾಸ್ ರಿಯಾಲಿಟಿ ಶೋ ಅತ್ಯುತ್ತಮವಾದ ಪ್ರೇಕ್ಷಕರನ್ನು ಹೊಂದಿದೆ. ಈ ರಿಯಾಲಿಟಿ ಶೋದ ನಿರೂಪಣೆಯನ್ನು ಕಿಚ್ಚ ಸುದೀಪ್ ಅವರು ನಡೆಸಿಕೊಡುತ್ತಾರೆ. ಬಿಗ್ ಬಾಸ್ ಈಗ ಎಂಟನೇ ಸೀಸನ್ ಅನ್ನು ಆರಂಭಿಸಿದೆ. ಈ ಸೀಸನ್ ನಲ್ಲಿ ಕೂಡ ಅತ್ಯುತ್ತಮ ಆಟವಾಡುವ ಸೆಲೆಬ್ರಿಟಿಗಳನ್ನು ಆಯ್ಕೆ ಮಾಡಿದ್ದಾರೆ. ಧನುಶ್ರೀ ಶುಭಪೂಂಜಾ, ಶಂಕರ್ ಅಶ್ವಥ್, ವೈಷ್ಣವಿ ಗೌಡ, ವಿಶ್ವನಾಥ್ ಹಾವೇರಿ, ಅರವಿಂದ ಕೆಪಿ, ನಿಧಿ ಸುಬ್ಬಯ್ಯ, ಶಮಂತ ಗೌಡ, ಗೀತಾ ಭಟ್, ಮಂಜು ಪಾವಗಡ, ದಿವ್ಯ ಸುರೇಶ್, ಚಂದ್ರಕಲಾ ಮೋಹನ್, ರಾಘು ಗೌಡ, ಪ್ರಶಾಂತ್ ಸಂಬರ್ಗಿ, ದಿವ್ಯ ಉರುಡುಗ, ರಾಜೀವ್, ನಿರ್ಮಲ ಹೀಗೆ 16 ಸೆಲೆಬ್ರಿಟಿಗಳು ಆಯ್ಕೆಯಾಗಿದ್ದಾರೆ. ಬಿಗ್ಬಾಸ್ ನ ಕಠಿಣ ಸ್ಪರ್ಧಿಗಳು ಯಾರು ಎನ್ನುವುದರ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಬಿಗ್ ಬಾಸ್ ಸೀಸನ್ 8 ಆರಂಭವಾಗಿದ್ದು ಇದರಲ್ಲಿ ರಾಜೀವ್ ಮತ್ತು ಅರವಿಂದ ಅವರು ಇದ್ದಾರೆ. ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಮೂಲಕವೇ ಹೆಚ್ಚು ಗುರುತಿಸಿಕೊಂಡಿರುವ ರಾಜೀವ್ ಇನ್ನು ಬಿಗ್ ಬಾಸ್ ಮನೆಯಲ್ಲಿ ಬೌಂಡರಿ ಸಿಕ್ಸರ್ ಬಾರಿಸಲು ಮುಂದಾಗಿದ್ದಾರೆ. ರಾಜೀವ್ ನು CCLನಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಂಡದಲ್ಲಿ ಕಾಣಿಸಿಕೊಂಡವರು. ಹಾಗೆಂದು ರಾಜೀವ್ ಕೇವಲ ಕ್ರಿಕೆಟ್ ಆಟಗಾರ ಮಾತ್ರವಲ್ಲ. ಉತ್ತಮ ನಟರೂ ಹೌದು. ಅಮಾವಾಸ್ಯೆ, ಆರ್​ಎಕ್ಸ್ ಸೂರಿ, ಬೆಂಗಳೂರು 560023, ಜಿಂದಗಿ ಸಿನಿಮಾಗಳಲ್ಲಿ ಅಭಿಮಾನಿಗಳ ಮನಗೆದ್ದಿದ್ದಾರೆ.

ದರ್ಶನ್ ಅಭಿನಯದ ಸ್ನೇಹನಾ ಪ್ರೀತಿನಾ ಸಿನಿಮಾದಲ್ಲೂ ರಾಜೀವ್ ಮಿಂಚಿದ್ದಾರೆ. ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 8ರ 16ನೇ ಸ್ಪರ್ಧಿಯಾಗಿ ರಾಜೀವ್ ಮನೆ ಪ್ರವೇಶಿಸಿದ್ದಾರೆ. ಹಾಗೆ ಇನ್ನೊಬ್ಬ ಕಂಟೆಸ್ಟೆಂಟ್ ಉಡುಪಿ ಮೂಲದವರಾದ ಅರವಿಂದ್ ಕೆ.ಪಿ. ಪ್ರವೇಶ ಪಡೆದಿದ್ದಾರೆ. ಕಳೆದ ಹಲವು ವರ್ಷಗಳಿಂದ ವತ್ತಿಪರ ಬೈಕರ್ ಆಗಿ ವಿವಿಧ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ರ್ಯಾಲಿಗಳಲ್ಲಿ ಪ್ರಶಸ್ತಿ ಗೆದ್ದಿರುವ ಟಿವಿಎಸ್ ರೇಸಿಂಗ್ ತಂಡದ ರೈಡರ್ ಅರವಿಂದ್ ಈ ಬಾರಿಯ ಬಿಗ್​ಬಾಸ್​ ಪ್ರಶಸ್ತಿ ಗೆಲ್ಲುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ. ಅರವಿಂದ್ ಕೆ.ಪಿ. ಬಿಗ್ ಬಾಸ್ ಮನೆಗೆ 6ನೇ ಕಂಟೆಸ್ಟೆಂಟ್ ಆಗಿ ಪ್ರವೇಶಿಸಿದ್ದಾರೆ.

ಬಿಗ್ ಬಾಸ್ ಸೀಸನ್ ಎಂಟರಲ್ಲಿ ರಾಜೀವ್ ಮತ್ತು ಅರವಿಂದ್ ಅವರು ಅದ್ಭುತವಾದ ಪೈಪೋಟಿಯನ್ನು ನೀಡುತ್ತಿದ್ದಾರೆ. ಇದರಲ್ಲಿ ಅರವಿಂದ್ ಅವರು ತುಂಬಾ ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿದ್ದಾರೆ. ಜೊತೆಗೆ ಅರವಿಂದ ಅವರು ಕೂಡ ಉತ್ತಮವಾಗಿ ಆಟವನ್ನು ಆಡಿ ಪೈಪೋಟಿಯನ್ನು ನೀಡುತ್ತಿದ್ದಾರೆ. ಎರಡು ಕಂಟೆಸ್ಟೆಂಟ್ ಗಳು ಕೂಡ ಮನೆಯಲ್ಲಿ ಅತ್ಯುತ್ತಮವಾಗಿ ಹೊಂದಿಕೊಂಡು ಹೋಗುತ್ತಿದ್ದಾರೆ. ಎಲ್ಲಾ ಕೆಲಸಗಳಲ್ಲಿಯೂ ಸಮನಾಗಿ ಭಾಗವಹಿಸುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ನಡೆಸಿದ ಒಂದರಲ್ಲಿ ಅರವಿಂದ್ ಅವರೇ ಹೆಚ್ಚು ಟಫ್ ಕಂಟೆಸ್ಟೆಂಟ್ ಎಂದು ಹೇಳುತ್ತಿದೆ. ಯಾರು ಅತ್ಯುತ್ತಮವಾಗಿ ಆಟವಾಡಿ ಗೆಲುವನ್ನು ಪಡೆಯುತ್ತಾರೆ ಎಂಬುದನ್ನು ಕಾದುನೋಡಬೇಕಾಗಿದೆ.

Leave a Reply

Your email address will not be published. Required fields are marked *