ಕೆಲವೊಂದು ಕಾರ್ಯಕ್ರಮಗಳು ಒಂದಷ್ಟು ಸಮಯದವರೆಗೆ ನಡೆಯುತ್ತವೆ. ವರ್ಷದಲ್ಲಿ 365ದಿನಗಳವರೆಗೂ ಇರುವುದಿಲ್ಲ. ಆದರೆ ಆ ಕಾರ್ಯಕ್ರಮ ಬಂದರೆ ಅತಿ ಹೆಚ್ಚು ವೀಕ್ಷಣೆಯನ್ನು ಕಾಣುತ್ತದೆ. ಹಾಗೆಯೇ ಅತಿ ಹೆಚ್ಚು ಟಿ.ಆರ್.ಪಿ.ಗಳನ್ನು ಸಹ ಪಡೆಯುತ್ತವೆ. ಅಂತಹವುಗಳಲ್ಲಿ ಬಿಗ್ಬಾಸ್ ಕೂಡ ಒಂದು. ಬಿಗ್ಬಾಸ್ ಸುಮಾರು 7 ಸೀಸನ್ ಗಳನ್ನು ಮುಗಿಸಿದೆ. ಈಗ 8ನೇ ಸೀಸನ್ ಶುರುವಾಗಿದೆ. ಆದ್ದರಿಂದ ನಾವು ಇಲ್ಲಿ 8ನೇ ಸೀಸನ್ ನ ಸದಸ್ಯನಾದ ರಾಜೀವ್ ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಬಿಗ್ ಬಾಸ್ ರಿಯಾಲಿಟಿ ಶೋ ಅತ್ಯುತ್ತಮವಾದ ಪ್ರೇಕ್ಷಕರನ್ನು ಹೊಂದಿದೆ. ಈ ರಿಯಾಲಿಟಿ ಶೋದ ನಿರೂಪಣೆಯನ್ನು ಕಿಚ್ಚ ಸುದೀಪ್ ಅವರು ನಡೆಸಿಕೊಡುತ್ತಾರೆ. ಬಿಗ್ ಬಾಸ್ ಈಗ ಎಂಟನೇ ಸೀಸನ್ ಅನ್ನು ಆರಂಭಿಸಿದೆ. ಈ ಸೀಸನ್ ನಲ್ಲಿ ಕೂಡ ಅತ್ಯುತ್ತಮ ಆಟವಾಡುವ ಸೆಲೆಬ್ರಿಟಿಗಳನ್ನು ಆಯ್ಕೆ ಮಾಡಿದ್ದಾರೆ. ಧನುಶ್ರೀ ಶುಭಪೂಂಜಾ, ಶಂಕರ್ ಅಶ್ವಥ್, ವೈಷ್ಣವಿ ಗೌಡ, ವಿಶ್ವನಾಥ್ ಹಾವೇರಿ, ಅರವಿಂದ ಕೆಪಿ, ನಿಧಿ ಸುಬ್ಬಯ್ಯ, ಶಮಂತ ಗೌಡ, ಗೀತಾ ಭಟ್ ಅವರು ಇದ್ದಾರೆ.

ಹಾಗೆಯೇ ಮಂಜು ಪಾವಗಡ, ದಿವ್ಯ ಸುರೇಶ್, ಚಂದ್ರಕಲಾ ಮೋಹನ್, ರಾಘು ಗೌಡ, ಪ್ರಶಾಂತ್ ಸಂಬರ್ಗಿ, ದಿವ್ಯ ಉರುಡುಗ, ರಾಜೀವ್, ನಿರ್ಮಲ ಹೀಗೆ 16 ಸೆಲೆಬ್ರಿಟಿಗಳು ಆಯ್ಕೆಯಾಗಿದ್ದಾರೆ. ಬಿಗ್ ಬಾಸ್ ಸೀಸನ್ 8ರಲ್ಲಿ ರಾಜೀವ್ ಸಹ ಒಬ್ಬ ಸ್ಪರ್ಧಿಯಾಗಿದ್ದಾರೆ. ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಮೂಲಕವೇ ಹೆಚ್ಚು ಗುರುತಿಸಿಕೊಂಡಿರುವ ರಾಜೀವ್ ಇನ್ನು ಬಿಗ್ ಬಾಸ್ ಮನೆಯಲ್ಲಿ ಬೌಂಡರಿ ಸಿಕ್ಸರ್ ಬಾರಿಸಲು ಮುಂದಾಗಿದ್ದಾರೆ. ರಾಜೀವ್ CCLನಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಂಡದಲ್ಲಿ ಕಾಣಿಸಿಕೊಂಡವರು. ಇವರು ತಮ್ಮ ಪತ್ನಿಯ ಜೊತೆ ಇರುವ ಫೋಟೋಗಳನ್ನು ಯೂಟ್ಯೂಬ್ ನಲ್ಲಿ ನೋಡಬಹುದು.

ಹಾಗೆಂದು ರಾಜೀವ್ ಕೇವಲ ಕ್ರಿಕೆಟ್ ಆಟಗಾರ ಮಾತ್ರವಲ್ಲ. ಹಾಗೆಯೇ ಉತ್ತಮ ನಟರೂ ಹೌದು. ಅಮಾವಾಸ್ಯೆ, ಆರ್​ಎಕ್ಸ್ ಸೂರಿ, ಬೆಂಗಳೂರು 560023, ಜಿಂದಗಿ ಸಿನಿಮಾಗಳಲ್ಲಿ ಅಭಿಮಾನಿಗಳ ಮನಗೆದ್ದಿದ್ದಾರೆ. ದರ್ಶನ್ ಅಭಿನಯದ ಸ್ನೇಹನಾ ಪ್ರೀತಿನಾ ಸಿನಿಮಾದಲ್ಲೂ ರಾಜೀವ್ ಮಿಂಚಿದ್ದಾರೆ. ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 8ರ 16ನೇ ಸ್ಪರ್ಧಿಯಾಗಿ ರಾಜೀವ್ ಮನೆ ಪ್ರವೇಶಿಸಿದ್ದಾರೆ. ಈಗಿನ ದಿನಗಳಲ್ಲಿ ಇವರು ಬಿಗ್ಬಾಸ್ ಮನೆಯ ನಾಯಕನಾಗಿ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಹಾಗೆಯೇ ತಮ್ಮ ನಾಯಕತ್ವವನ್ನು ಬಹಳ ಚೆನ್ನಾ

Leave a Reply

Your email address will not be published. Required fields are marked *