ಬಿಗ್ ಬಾಸ್ ಸ್ಪರ್ಧಿ ರಘು ಗೌಡ ಅವರ ಮುದ್ದಾದ ಫ್ಯಾಮಿಲಿ ಹೇಗಿದೆ ನೋಡಿ

0 1

ಕೆಲವೊಂದು ಕಾರ್ಯಕ್ರಮಗಳು ಒಂದಷ್ಟು ಸಮಯದವರೆಗೆ ನಡೆಯುತ್ತವೆ. ವರ್ಷದಲ್ಲಿ 365ದಿನಗಳವರೆಗೂ ಇರುವುದಿಲ್ಲ. ಆದರೆ ಆ ಕಾರ್ಯಕ್ರಮ ಬಂದರೆ ಅತಿ ಹೆಚ್ಚು ವೀಕ್ಷಣೆಯನ್ನು ಕಾಣುತ್ತದೆ. ಹಾಗೆಯೇ ಅತಿ ಹೆಚ್ಚು ಟಿ.ಆರ್.ಪಿ.ಗಳನ್ನು ಸಹ ಪಡೆಯುತ್ತವೆ. ಅಂತಹವುಗಳಲ್ಲಿ ಬಿಗ್ಬಾಸ್ ಕೂಡ ಒಂದು. ಬಿಗ್ಬಾಸ್ ಸುಮಾರು 7 ಸೀಸನ್ ಗಳನ್ನು ಮುಗಿಸಿದೆ. ಈಗ 8ನೇ ಸೀಸನ್ ಶುರುವಾಗಿದೆ. ಆದ್ದರಿಂದ ನಾವು ಇಲ್ಲಿ 8ನೇ ಸೀಸನ್ ನ ಸದಸ್ಯನಾದ ರಾಘು ಗೌಡ ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ರಘು ಗೌಡ ಅವರು ಬಿಗ್ ಬಾಸ್ ಸದಸ್ಯರಾಗಿದ್ದಾರೆ. ಇವರು ರಾಜಾಜಿನಗರದ ಶಿವನಳ್ಳಿ ಎಂಬಲ್ಲಿ ಜನಿಸಿದ್ದಾರೆ. ಇವರಿಗೆ ಚಿಕ್ಕ ವಯಸ್ಸಿನಿಂದಲೂ ಬಹಳ ಬೈದು ಬೆಳೆಸಿದ್ದಾರೆ. ಈಗ ಇವರಿಗೆ ಮದುವೆ ಆಗಿದೆ. ಇವರಿಗೆ ಒಬ್ಬ ಮಗ ಇದ್ದಾನೆ. ಇವರ ಹೆಂಡತಿ ಬಹಳ ಸುಂದರವಾಗಿ ಇದ್ದಾರೆ. ಇವರ ತಂದೆ ಮತ್ತು ತಾಯಿ ಬಹಳ ಮಾನಸಿಕವಾಗಿ ಅಸ್ವಸ್ಥ ಹೊಂದಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಹತ್ತನೇ ತರಗತಿಯವರೆಗೆ ಬಹಳ ಚೆನ್ನಾಗಿ ಓದಿದ್ದಾರೆ.

ನಂತರದಲ್ಲಿ ಕಾಲೇಜಿಗೆ ಮನೆ ಬಿಟ್ಟು ಹೊರಗಡೆ ಹೋದರು. ಆಗ ಇವರು ಮತ್ತು ಇವರ ಶೈಲಿಗಳು ಬಹಳ ಬದಲಾವಣೆ ಆದವು. ಆದರೂ ಕೊನೆಯದಾಗಿ ಕಾಲೇಜನ್ನು ಮುಗಿಸಿದರು. ನಂತರದಲ್ಲಿ ವಿಡಿಯೋಗಳನ್ನು ಮಾಡುವ ಹವ್ಯಾಸವನ್ನು ಬೆಳೆಸಿಕೊಂಡರು. ಆದರೆ ಮೊದಲು ಇವರಿಗೆ ಭಯವಿತ್ತು. ನಂತರದಲ್ಲಿ ಇವರಿಗೆ ಇದು ಬಹಳ ಚೆನ್ನಾಗಿ ಕೈ ಹಿಡಿಯಿತು. ಇದೇ ಇವರ ಉದ್ಯೋಗ ಆಯಿತು. ಒಳ್ಳೆಯ ಆದಾಯವನ್ನು ಪಡೆಯುವುದನ್ನು ಕಲಿತರು.

ಹಾಗೆಯೇ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಬಹಳ ಚೆನ್ನಾಗಿ ಅವರು ಆಟವನ್ನು ಆಡಿಕೊಂಡು ಹೋಗುತ್ತಿದ್ದಾರೆ. ಯಾವುದೇ ರೀತಿಯ ಕಲಹಗಳು ಮತ್ತು ವಾದಗಳನ್ನು ಇಷ್ಟಪಡುವುದಿಲ್ಲ. ಹಾಗೆಯೇ ಯಾರ ಸುದ್ದಿಗೂ ಇವರು ಹೆಚ್ಚಾಗಿ ಹೋಗುವುದಿಲ್ಲ. ಅವರ ಪಾಡಿಗೆ ಅವರು ಇರುತ್ತಾರೆ. ಆಟಗಳಲ್ಲಿ ಚೆನ್ನಾಗಿ ಹೊಂದಿಕೊಂಡು ತಮ್ಮ ಪ್ರದರ್ಶನವನ್ನು ಅತ್ಯುತ್ತಮವಾಗಿ ತೋರಿಸುತ್ತಿದ್ದಾರೆ. ಹಾಗಾಗಿ ಅವರು ಇನ್ನೂ ಹೆಚ್ಚಿನ ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಉಳಿಯಲಿ ಎಂದು ನಾವೆಲ್ಲರೂ ಹಾರೈಸೋಣ.

Leave A Reply

Your email address will not be published.