ಕೆಲವೊಂದು ಕಾರ್ಯಕ್ರಮಗಳು ಒಂದಷ್ಟು ಸಮಯದವರೆಗೆ ನಡೆಯುತ್ತವೆ. ವರ್ಷದಲ್ಲಿ 365ದಿನಗಳವರೆಗೂ ಇರುವುದಿಲ್ಲ. ಆದರೆ ಆ ಕಾರ್ಯಕ್ರಮ ಬಂದರೆ ಅತಿ ಹೆಚ್ಚು ವೀಕ್ಷಣೆಯನ್ನು ಕಾಣುತ್ತದೆ. ಹಾಗೆಯೇ ಅತಿ ಹೆಚ್ಚು ಟಿ.ಆರ್.ಪಿ.ಗಳನ್ನು ಸಹ ಪಡೆಯುತ್ತವೆ. ಅಂತಹವುಗಳಲ್ಲಿ ಬಿಗ್ಬಾಸ್ ಕೂಡ ಒಂದು. ಬಿಗ್ಬಾಸ್ ಸುಮಾರು 7 ಸೀಸನ್ ಗಳನ್ನು ಮುಗಿಸಿದೆ. ಈಗ 8ನೇ ಸೀಸನ್ ಶುರುವಾಗಿದೆ. ಆದ್ದರಿಂದ ನಾವು ಇಲ್ಲಿ 8ನೇ ಸೀಸನ್ ನ ಸದಸ್ಯನಾದ ಅರವಿಂದ್ ಕೆ.ಪಿ. ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಅರವಿಂದ್ ಕೆ.ಪಿ. ಅವರು ಬಿಗ್ ಬಾಸ್ ಸದಸ್ಯರಾಗಿದ್ದಾರೆ. ಇವರು ಮೂಲತಃ ಮಣಿಪಾಲದವರಾಗಿದ್ದಾರೆ. ಇವರ ತಂದೆಯ ಹೆಸರು ಪ್ರಭಾಕರ ಉಪಾಧ್ಯ ಮತ್ತು ತಾಯಿಯ ಹೆಸರು ಉಷಾ ಪ್ರಭಾಕರ್ ಆಗಿದೆ. ಇವರಿಗೆ ಇಂದು ಮದುವೆ ಆಗಲಿಲ್ಲ. ಯಾವುದೇ ರೀತಿಯ ಗರ್ಲ್ ಫ್ರೆಂಡ್ ಕೂಡ ಇಲ್ಲ. ಇವರು ಬೈಕ್ ರೇಸರ್ ಆಗಿದ್ದಾರೆ. ಇವರಿಗೆ ಈಗ 35 ವರ್ಷ ವಯಸ್ಸು ಆಗಿದೆ. ಇವರು 5.10 ಇಂಚು ಎತ್ತರ ಇದ್ದಾರೆ. ಹಾಗೆಯೇ 70 ಕೆಜಿ ತೂಕವನ್ನು ಹೊಂದಿದ್ದಾರೆ.

ಇವರಿಗೆ ಪ್ರಶಾಂತ್ ಕೆ.ಪಿ. ಎನ್ನುವ ಸಹೋದರ ಇದ್ದಾರೆ. ಒಬ್ಬ ಬೈಕ್ ರೇಸರ್ ಆಗುವುದು ಸಾಮಾನ್ಯ ವಿಷಯವಲ್ಲ. ಏಕೆಂದರೆ ಸ್ಪರ್ಧೆಯಲ್ಲಿ ಯಾವುದೋ ದಾರಿಯನ್ನು ಕೊಟ್ಟಿರುತ್ತಾರೆ. ಹಾಗೆಯೇ ಸರ್ಕಸ್ ಬಂದರೂ ಅದನ್ನು ಎದುರಿಸುವ ಮತ್ತು ಅದನ್ನು ಗೆದ್ದು ದಾರಿಯನ್ನು ದಾಟುವ ಧೈರ್ಯ ಇರಬೇಕಾಗುತ್ತದೆ. ಆದ್ದರಿಂದ ಯಾರೂ ಹೆಚ್ಚಾಗಿ ಬೈಕ್ ರೇಸರ್ ಆಗಲು ಇಷ್ಟಪಡುವುದಿಲ್ಲ. ಆದರೆ ಇವರು ಬೈಕ್ ರೇಸರ್ ಆಗಿರುವುದು ಒಂದು ಆಶ್ಚರ್ಯವೇ ಸರಿ.

ಹಾಗೆಯೇ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಬಹಳ ಚೆನ್ನಾಗಿ ಅವರು ಆಟವನ್ನು ಆಡಿಕೊಂಡು ಹೋಗುತ್ತಿದ್ದಾರೆ. ಯಾವುದೇ ರೀತಿಯ ಕಲಹಗಳು ಮತ್ತು ವಾದಗಳನ್ನು ಇಷ್ಟಪಡುವುದಿಲ್ಲ. ಹಾಗೆಯೇ ಯಾರ ಸುದ್ದಿಗೂ ಇವರು ಹೆಚ್ಚಾಗಿ ಹೋಗುವುದಿಲ್ಲ. ಅವರ ಪಾಡಿಗೆ ಅವರು ಇರುತ್ತಾರೆ. ಆಟಗಳಲ್ಲಿ ಚೆನ್ನಾಗಿ ಹೊಂದಿಕೊಂಡು ತಮ್ಮ ಪ್ರದರ್ಶನವನ್ನು ಅತ್ಯುತ್ತಮವಾಗಿ ತೋರಿಸುತ್ತಿದ್ದಾರೆ. ಹಾಗಾಗಿ ಅವರು ಇನ್ನೂ ಹೆಚ್ಚಿನ ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಉಳಿಯಲಿ ಎಂದು ನಾವೆಲ್ಲರೂ ಹಾರೈಸೋಣ.

Leave a Reply

Your email address will not be published. Required fields are marked *