ನಿಮ್ಮ ಊರಿನಲ್ಲಿ ಬೀದಿ ದೀಪಗಳು ಹಾಳಾಗಿ ಹೋದರೆ ಅಥವಾ ನಿಮ್ಮ ಮನೆಯ ಪಕ್ಕದಲ್ಲಿರುವ ಕಂಬದ ಬೀದಿದೀಪ ಹಾಳಾಗಿ ಹೋದರೆ ಅಥವಾ ಕಂಬದಲ್ಲಿರುವ ಬಲ್ಫ್ ಕೆಲಸಮಾಡುತ್ತಿಲ್ಲ ಎಂದರೆ ಅದನ್ನು ಸರಿಪಡಿಸುವುದಕ್ಕೆ ನೀವು ನಿಮ್ಮ ಮೊಬೈಲ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಹಾಗಾದರೆ ಅದಕ್ಕೆ ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಸಬೇಕು ಎಂಬುದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ.

ಮೊದಲಿಗೆ ನಿಮ್ಮ ಮೊಬೈಲ್ ನಲ್ಲಿ ಗೂಗಲ್ ಅನ್ನು ತೆರೆದು ಅಲ್ಲಿ panchatantra.kar.nic.in ಎಂದು ಟೈಪ್ ಮಾಡಿ ಹುಡುಕಬೇಕು ಆಗ ನಿಮ್ಮ ಮುಂದೆ ಒಂದು ವೆಬ್ಸೈಟ್ ಕಾಣಿಸಿಕೊಳ್ಳುತ್ತದೆ. ಅದು ಕರ್ನಾಟಕ ಸರ್ಕಾರದ ವೆಬ್ಸೈಟ್ ಆಗಿರುತ್ತದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಎಂದು ಕಾಣಿಸುತ್ತದೆ. ಅಲ್ಲಿ ಕೆಳಗಡೆ ನೋಟಿಫಿಕೇಶನ್ ಎಂಬುದು ಇರುತ್ತದೆ ಅದರ ಕೆಳಗೆ ಆನ್ಲೈನ್ ಸರ್ವಿಸ್ ಎಂದು ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆನ್ಲೈನ್ ಸರ್ವಿಸ್ ನಲ್ಲಿ ನಿರ್ವಹಣೆ ಸಂಬಂಧಿತ ಎರಡನೇ ಸಾಲಿನಲ್ಲಿ ಬೀದಿ ದೀಪಗಳ ನಿರ್ವಹಣೆ ಎಂಬುದು ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು. ಅರ್ಜಿ ಸಲ್ಲಿಸುವ ಮೊದಲು ಅಲ್ಲಿ ನೀಡಿರುವ ಮಾಹಿತಿಯನ್ನು ಒಮ್ಮೆ ಪರಿಶೀಲಿಶೀಲನೆ ಮಾಡಬೇಕು.

ನೀವು ಅರ್ಜಿಯನ್ನು ಸಲ್ಲಿಸಿದ ಮೂರು ದಿನಗಳ ಒಳಗಾಗಿ ಸೇವೆಯನ್ನು ಮುಗಿಸಬೇಕು ಎಂದು ಅಲ್ಲಿ ತಿಳಿಸಿರುತ್ತಾರೆ. ಅರ್ಜಿ ಶುಲ್ಕ ಹತ್ತು ರೂಪಾಯಿ ಎಂದು ಕೂಡ ಅಲ್ಲಿ ನಮೂದಿಸಿದ್ದಾರೆ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಯಾವ ದಾಖಲೆಗಳು ಬೇಕು ಎಂದರೆ ಐಡಿ ಕಾರ್ಡ್ ಅಥವಾ ಪಡಿತರ ಚೀಟಿ ಮತ್ತು ನಿಮ್ಮ ಗ್ರಾಮ ಪಂಚಾಯಿತಿಯಿಂದ ಪಡೆದ ನಿರಾಕ್ಷೇಪಣಾ ಪತ್ರ ಇವುಗಳನ್ನು ಸ್ಕ್ಯಾನ್ ಮಾಡಿಟ್ಟುಕೊಳ್ಳಬೇಕು ಅರ್ಜಿ ಸಲ್ಲಿಸಿದ ನಂತರ ಸೇವಾ ಪ್ರಕ್ರಿಯೆ ಯಾವ ರೀತಿಯಾಗಿ ಇರುತ್ತದೆ ಎಂಬುದನ್ನು ಕೂಡ ಅಲ್ಲಿ ತಿಳಿಸಿದ್ದಾರೆ ಮೊದಲಿಗೆ ಅರ್ಜಿ ಪರಿಶೀಲನೆ ಯಾಗುತ್ತದೆ ಎರಡನೆಯದಾಗಿ ಕ್ಷೇತ್ರ ಪರಿಶೀಲನೆ ಯಾಗುತ್ತದೆ ಮೂರನೆಯದಾಗಿ ಅರ್ಜಿ ಸಲ್ಲಿಸಿರುವ ಕುರಿತು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಅಲ್ಲಿ ತಿಳಿಸಿದ್ದಾರೆ.

ನಂತರ ಅಲ್ಲಿ ಕೆಳಗಡೆ ಮುಂದುವರೆ ಎನ್ನುವುದು ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲ್ಲಿ ನಿಮ್ಮ ಮೊಬೈಲ್ ನಂಬರ್ ಕೇಳುತ್ತದೆ ನಿಮ್ಮ ಮೊಬೈಲ್ ನಂಬರನ್ನು ಹಾಕಿ ಗೊ ಇನ್ನೊಬ್ಬರ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಮೊಬೈಲ್ ನಂಬರ್ ಗೆ ಒಂದು ಓಟಿಪಿ ಬರುತ್ತದೆ ಅದನ್ನು ಅಲ್ಲಿ ನಮೂದಿಸಬೇಕು ನಂತರ ವೆರಿಫೈ ಎನ್ನುವುದು ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು. ಮುಂದಿನ ಹಂತದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಅಭಿವೃದ್ಧಿ ಸೇವಾ ವಿನಂತಿ ನಮೂನೆ ಕಾಣಿಸುತ್ತದೆ. ಅದರಲ್ಲಿ ಯಾರು ಅರ್ಜಿಯನ್ನು ಸಲ್ಲಿಸುತ್ತಿದ್ದಾರೆ ಅವರ ಹೆಸರು ಅವರ ತಂದೆಯ ಹೆಸರು ವಿಳಾಸ ಮೊಬೈಲ್ ನಂಬರ್ ಇಮೇಲ್ ಮನೆ ನಂಬರ್ ಅಥವಾ ಸೈಟ್ ನಂಬರ್ ಊರಿನ ಹೆಸರು ಮತ್ತು ಅಂಚೆ ವಿಳಾಸ ಇರುತ್ತದೆ ಅಲ್ಲಿ ನಿಮ್ಮ ಊರಿನ ಪಿನ್ ಕೋಡ್ ಅನ್ನು ಹಾಕಿ ನಂತರ ಮೇಲೆ ಕಾಣಿಸುವ ಆಸ್ತಿ ವಿವರಗಳ ಮೇಲೆ ಕ್ಲಿಕ್ ಮಾಡಬೇಕು.

ಅಲ್ಲಿ ನಿಮ್ಮ ಜಿಲ್ಲೆ ತಾಲೂಕು ಗ್ರಾಮ ಪಂಚಾಯಿತಿ ಹಳ್ಳಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ದಾಖಲೆಗಳನ್ನು ಅಪ್ಲೋಡ್ ಮಾಡಿ ಎಂಬುದು ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ದಾಖಲೆ ವಿಧ ಎಂದು ಕಾಣಿಸುತ್ತದೆ ಅದರಲ್ಲಿ ನಿಮ್ಮ ಐಡಿ ಕಾರ್ಡನ್ನು ಆಯ್ಕೆಮಾಡಿಕೊಳ್ಳಬೇಕು ಡಾಕ್ಯುಮೆಂಟ್ ವಿವರಣೆಯಲ್ಲಿ ಐಡಿ ಕಾರ್ಡ್ ಎಂದು ಟೈಪ್ ಮಾಡಬೇಕು ನಂತರ ನಿಮ್ಮ ಐಡಿ ಕಾರ್ಡನ್ನು ಆಯ್ಕೆ ಮಾಡಿಕೊಂಡು ಅದನ್ನು ಅಪ್ಲೋಡ್ ಮಾಡಬೇಕು. ಅದೇರೀತಿ ಮತ್ತೆ ದಾಖಲೆ ವಿಧದಲ್ಲಿ ಗ್ರಾಮಪಂಚಾಯತ್ ನಿರಾಕ್ಷೇಪಣ ಪತ್ರವನ್ನು ಆಯ್ಕೆಮಾಡಿಕೊಳ್ಳಬೇಕು ಡಾಕ್ಯುಮೆಂಟ್ ವಿವರಣೆಯಲ್ಲಿ ಗ್ರಾಮ ಪಂಚಾಯತಿ ಎಂದು ಬರೆಯಬೇಕು ನಂತರ ಅದರ ಸ್ಕ್ಯಾನ್ ಕಾಫಿಯನ್ನು ಅಪ್ಲೋಡ್ ಮಾಡಬೇಕು.

ಅದಾದನಂತರ ಉಳಿಸು ಎನ್ನುವುದರ ಮೇಲೆ ಕ್ಲಿಕ್ ಮಾಡಬೇಕು ಆಗ ಅರ್ಜಿ ಸಂಪೂರ್ಣವಾಗಿ ಸಲ್ಲಿಕೆಯಾಗುತ್ತದೆ ನಂತರ ನಿಮಗೆ ಅರ್ಜಿ ಸಲ್ಲಿಕೆಯಾಗಿರುವ ಕುರಿತು ಒಂದು ಅಕ್ನಾಲೆಜ್ ಮೆಂಟ್ ಸಿಗುತ್ತದೆ ಅದರಲ್ಲಿ ನಿಮ್ಮ ಅರ್ಜಿ ಸಂಖ್ಯೆ ಇರುತ್ತದೆ. ಅದನ್ನು ನೀವು ಬರೆದಿಟ್ಟುಕೊಳ್ಳಬೇಕು ಈ ರೀತಿಯಾಗಿ ಸುಲಭವಾಗಿ ಆನ್ಲೈನ್ನಲ್ಲಿ ನೀವು ಬೀದಿದೀಪಗಳ ನಿರ್ವಹಣೆಗಾಗಿ ಅರ್ಜಿಯನ್ನು ಸಲ್ಲಿಸಬಹುದು ನೀವು ಕೂಡ ನಿಮ್ಮ ಮನೆಯ ಪಕ್ಕದಲ್ಲಿ ಅಥವಾ ನಿಮ್ಮ ಹಳ್ಳಿಯಲ್ಲಿ ಯಾವುದಾದರೂ ಬೀದಿದೀಪ ಹಾಳಾಗಿದ್ದರೆ ಅದನ್ನು ಸರಿಪಡಿಸುವುದಕ್ಕೆ ನೀವೆ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ಪರಿಚಿತರು ಹಾಗೂ ಸ್ನೇಹಿತರಿಗೂ ತಿಳಿಸಿರಿ.

Leave a Reply

Your email address will not be published. Required fields are marked *