ಚಿಕ್ಕ ಮಕ್ಕಳು ಬೆರಳು ಚೀಪುವ ಅಭ್ಯಾಸ ಹೊಂದಿರುತ್ತಾರೆ, ಆದ್ರೆ, ಇದು ಯಾಕೆ ಅನ್ನೋದು ಬಹಳಷ್ಟು ಜನಕ್ಕೆ ಗೊತ್ತಿರೋದಿಲ್ಲ ಇದಕ್ಕೆ ಕಾರಣವೇನು ಹಾಗು ಇದನ್ನು ಬಿಡಿಸುವ ಉಪಾಯ ಹೇಗೆ ಅನ್ನೋದನ್ನ ಈ ಮೂಲಕ ತಿಳಿಯೋಣ.
ಈ ಪ್ರಕ್ರಿಯೆ ಹುಟ್ಟಿನಿಂದಲೇ ಬಂದಿರುತ್ತದೆ ಹೌದು ಚೀಪುವ ಪ್ರಕ್ರಿಯೆ ಎಲ್ಲ ಸ್ತನ್ಯಪಾನ ನೀಡುವ ಸಸ್ತನಿಗಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತದೆ. ಸುಮಾರು ನಾಲ್ಕು ತಿಂಗಳವರೆಗೆ ಈ ಪ್ರಕ್ರಿಯೆ ನಿರಾಂತಂಕವಾಗಿ ಮುಂದುವರಿಯುತ್ತದೆ ಅದರಲ್ಲಿ ದೊರಕುವ ನೆಮ್ಮದಿ, ಸಾಂತ್ವನ, ಸಂತಸದಿಂದಾಗಿ ಈ ಅಭ್ಯಾಸ ಹವ್ಯಾಸವಾಗಿ ಮುಂದುವರಿಯುತ್ತದೆ. ಹಾಗಾಗಿ ಮಕ್ಕಳು ಇದನ್ನು ಅಬ್ಯಸ ಮಾಡಿಕೊಂಡಿರುತ್ತಾರೆ. ಕೆಲ ಮಕ್ಕಳು ಇದನ್ನು ಮುಂದುವರೆಸಿಕೊಂಡು ಬರುತ್ತಾರೆ ಇದನ್ನು ನಿಲ್ಲಿಸೋದು ಹೇಗೆ ಅನ್ನೋದನ್ನ ಮುಂದೆ ನೋಡಿ.
ಮಕ್ಕಳು ಮುಗ್ದ ಮನಸ್ಸಿನವರು ಅವರನ್ನು ಯಾವುದೇ ಕಾರಣಕ್ಕೂ ಹೊಡೆದು ಅವಹೇಳನ ಮಾಡಿ ಬುದ್ದಿ ಹೇಳದೆ ಉತ್ತಮ ರೀತಿಯಲ್ಲಿ ತಿಳಿ ಹೇಳಬೇಕು. ಮೊದಲನೆಯದಾಗಿ ಮಕ್ಕಳು ಬೆರಳು ಚೀಪುವುದಕ್ಕೆ ಕಾರಣವಾದ ಅಂಶಗಳನ್ನು ಮನನ ಮಾಡಬೇಕು. ತಾಯಂದಿರಿಂದ ದೂರವಿದ್ದು ಮಾನಸಿಕವಾಗಿ ಕುಗ್ಗಿದ್ದಲ್ಲಿ, ಮಗುವನ್ನು ತಾಯಂದಿರ ಬಳಿ ಹೆಚ್ಚು ಇರುವಂತೆ ನೋಡಿಕೊಳ್ಳಿ.
ಬೆರಳು ಚೀಪುವ ಮಕ್ಕಳಿಗೆ ಈ ಅಭ್ಯಾಸ ನಿಲ್ಲಿಸಿದರೆ ಉಡುಗೊರೆ, ಬಹುಮಾನ ನೀಡಿ, ಮಗುವಿನ ಆತ್ಮವಿಶ್ವಾಸ ವೃದ್ಧಿಸುವಂತೆ ಮಾಡಿ. ಅಷ್ಟೇ ಅಲ್ಲದೆ ಮಗುವನ್ನು ಯಾವತ್ತೂ ಒಂಟಿಯಾಗಿ ಇರದಂತೆ ನೋಡಿಕೊಳ್ಳಿ. ಮಗು ಸದಾ ನಗುತ್ತಾ, ಚಟುವಟಿಕೆಯಿಂದ ಇರುವಂತಹ ಸನ್ನಿವೇಶಗಳನ್ನು ಸೃಷ್ಟಿ ಮಾಡಿ. ಮಕ್ಕಳು ಬೆರಳು ಚೀಪುತ್ತವೆ ಅನ್ನೋ ಕಾರಣಕ್ಕೆ ಕೈ ಬೆರಳಿಗೆ ಬಟ್ಟೆ ಕಟ್ಟುವುದು, ಮುಲಾಮು ಹಚ್ಚುವುದು, ಗದರಿಸುವುದು, ಶಿಕ್ಷೆ ನೀಡುವುದು ಮಾಡಲೇಬಾರದು. ಯಾಕೆಂದರೆ ಬಹಳಷ್ಟು ಜನ ಈ ರೀತಿಯ ಕೊಟ್ಟು ಮಕ್ಕಳಿಗೆ ಬೆರಳು ಚೀಪುವುದನ್ನು ಬಿಡಿಸಲು ಪ್ರಯತ್ನಿಸುತ್ತಾರೆ. ಮೇಲೆ ತಿಳಿಸಿದ ಯಾವುದೇ ಉಪಾಯಗಳಿಗೆ ಸ್ಪಂದಿಸದಿದ್ದಲ್ಲಿ ಮೊದಲು ದಂತ ವೈದ್ಯರ ಬಳಿ ತೋರಿಸಿಕೊಳ್ಳಿ.