ಒಂದು ಚಿಕ್ಕ ಘಟನೆಯಿಂದ ಭಿಕ್ಷುಕ ಕುಬೇರನಾದ ಕಥೆ
ಜೀವನದಲ್ಲಿ ನಡೆದ ಒಂದು ಚಿಕ್ಕ ಘಟನೆಯಿಂದ ಭಿಕ್ಷುಕನು ಲಕ್ಷಾಧಿಪತಿ ಆದ ಕಥೆಯನ್ನು ಈ ಲೇಖನದ ಮೂಲಕ ತಿಳಿಯೋಣ.
ಉತ್ತರಾಖಂಡದ ಹರಿದ್ವಾರದಲ್ಲಿ ಈ ಘಟನೆ ನಡೆದಿದೆ. ಆ ಗ್ರಾಮದಲ್ಲಿ ನಡೆದ ಘಟನೆ ಈಗ ಬೆಳಕಿಗೆ ಬಂದಿದೆ. ಒಬ್ಬ ಭಿಕ್ಷುಕನ ಜೀವನ ಒಂದೇ ಒಂದು ಚಿಕ್ಕ ಘಟನೆಯಿಂದ ಬದಲಾಗುತ್ತದೆ. ಅಷ್ಟೇ ಅಲ್ಲ ಒಬ್ಬ ತಂದೆ ಹಾಗೂ ಮಗ ಈ ಭಿಕ್ಷುಕನನ್ನು ಹುಡುಕುತ್ತಿರುತ್ತಾರೆ. ಇದಕ್ಕೆ ಕಾರಣವೆಂದರೆ ಒಬ್ಬ ಮಗ ತಂದೆಗೆ ಗೊತ್ತಿಲ್ಲದೆ ಅವರ ತಂದೆ ಮಲಗುವ ಹಾಸಿಗೆ ಹರಿದುಹೋಗಿದೆ ಅಂತ ಅದನ್ನು ಬಿಕ್ಷುಕನಿಗೆ ಕೊಟ್ಟು ಹೊಸ ಹಾಸಿಗೆ ತರುತ್ತಾನೆ. ಆದರೆ ಅವರ ತಂದೆ ಮನೆಗೆ ಬಂದು ಅವರ ಹಾಸಿಗೆ ಕಾಣದಿರುವುದನ್ನು ನೋಡಿದಾಗ ಮಗನ ಮೇಲೆ ಕೋಪದಿಂದ ಹಾಸಿಗೆ ಏನಾಯಿತು ಎಂದು ಕೇಳುತ್ತಾರೆ. ಹಾಸಿಗೆ ಹರಿದು ಹೋಗಿತ್ತಲ್ಲವಾ ಅದನ್ನು ಭಿಕ್ಷುಕನಿಗೆ ಕೊಟ್ಟು ಹೊಸ ಹಾಸಿಗೆ ತಂದಿದಿನಿ ಎಂದು ಮಗ ಹೇಳುತ್ತಾನೆ.
ಆಗ ಶಾಕ್ ಆದ ತಂದೆ ತಕ್ಷಣ ಭಿಕ್ಷುಕನನ್ನು ಹುಡುಕಲು ಪ್ರಾರಂಭಿಸುತ್ತಾರೆ. ಏಕೆಂದರೆ ಅವರ ತಂದೆ ಇಡೀ ಜೀವನ ದುಡಿದು ಉಳಿಸಿದ ಹಣವನ್ನು ಆ ಹಾಸಿಗೆಯಲ್ಲಿ ಎತ್ತಿಟ್ಟದ್ದರಂತೆ ಅದು ಬರೋಬ್ಬರಿ 40 ಲಕ್ಷ ಇರುತ್ತದೆ. ಈ ವಿಷಯವನ್ನು ಕೇಳಿ ಮನೆಯವರೆಲ್ಲರೂ ಭಿಕ್ಷುಕನನ್ನು ಹುಡುಕಲು ಪ್ರಾರಂಭಿಸುತ್ತಾರೆ.
ಪೋಲಿಸ್ ಕಂಪ್ಲೇಂಟ್ ಸಹ ಕೊಡುತ್ತಾರೆ. 3 ದಿನದ ನಂತರ ಆ ಭಿಕ್ಷುಕ ಸಿಗುತ್ತಾನೆ. ಅವನನ್ನು ಕೇಳಿದಾಗ ಭಿಕ್ಷುಕ ಹೇಳುತ್ತಾನೆ 3 ದಿನದ ಹಿಂದೆ ಇನ್ನೊಬ್ಬ ಭಿಕ್ಷುಕನಿಗೆ ಮಾರಿಬಿಟ್ಟೆ ಅಂತ. ಜೀವನದಲ್ಲಿ ಒಂದು ಚಿಕ್ಕ ಘಟನೆಯು ದೊಡ್ಡ ಬದಲಾವಣೆಯನ್ನು ತರುತ್ತದೆ. ಇದರಿಂದ ಯಾರ ಜೀವನದಲ್ಲಿ ಯಾವಾಗ ಏನಾಗುತ್ತದೆ ಎಂಬುದು ತಿಳಿಯುವುದಿಲ್ಲ.