ರೈತರಿಗಾಗೇ ಇರುವ ಸುಲಭ ಸಾಲ ಸೌಲಭ್ಯಗಳಿವು

0 3

ರೈತರು ವರ್ಷಗಳಿಗೆ ಒಂದೊ ಅಥವಾ ಎರಡೊ ಬೆಳೆಗಳನ್ನು ಬೆಳೆಯುತ್ತಾರೆ. ಬೆಳೆ ಬೆಳೆಯುವ ಸಮಯದಲ್ಲಿ ಬೇಕಾದ ಬೀಜ, ಗೊಬ್ಬರ, ಕೀಟನಾಶಕ, ಕಳೆನಾಶಕ ಔಷಧಗಳಿಗಾಗಿ ಬೆಳೆಸಾಲ ಕೇಳಲು ಸೊಸೈಟಿ ಇಲ್ಲವೇ ಬ್ಯಾಂಕುಗಳ ಮೊರೆ ಹೋಗುತ್ತಾರೆ. ಆದರೆ ರೈತರಿಗೆ ಬೆಳೆ ಸಾಲದ ಹೊರತಾಗಿಯೂ ಬೇರೆ ಬೇರೆ ಸಾಲಗಳು ದೊರೆಯುತ್ತವೆ. ಅವು ಯಾವುದು? ಅದನ್ನು ಪಡೆದುಕೊಳ್ಳಲು ಏನು ಮಾಡಬೇಕು? ಎಂಬೆಲ್ಲದರ ಮಾಹಿತಿ ಇಲ್ಲಿದೆ. ರೈತರಿಗೆ ಬ್ಯಾಂಕುಗಳಲ್ಲಿ ಸಿಗುವ ಸಾಲಗಳಲ್ಲಿ ಮೊದಲನೆಯದು ಬೆಳೆ ಸಾಲ. ಈ ಬೆಲೆ ಸಾಲವನ್ನು ಸರ್ಕಾರ ಬ್ಯಾಂಕ್ ಅಥವಾ ಸೊಸೈಟಿಗಳ ಮೂಲಕ ಕೊಡುತ್ತದೆ. ಸರ್ಕಾರ ಎಕರೆಗೆ ಇಂತಿಷ್ಟು ಎಂದು ಸೆಟ್ ಮಾಡಿ ಸೊಸೈಟಿಗೆ ಇಲ್ಲವೇ ಬ್ಯಾಂಕ್ ಗೆ ಕಳುಹಿಸುತ್ತದೆ. ಒಂದು ವರ್ಷದಲ್ಲಿ ಅದನ್ನು ವಾಪಸ್ಸು ರೈತರು ತುಂಬಬೇಕು. ಆದರೆ ಕೆಲವು ಸೊಸೈಟಿಗಳಲ್ಲಿ ಇದರಲ್ಲಿ ಮೋಸ ಮಾಡುವವರು ಇದ್ದಾರೆ. ಹೇಗೆಂದರೆ ಕೆಲವು ಸೊಸೈಟಿಗಳಲ್ಲಿ ರೈತರು ಸಾಲ ತೆಗೆದುಕೊಂಡಾಗ ವರ್ಷದ ಹದಿನೈದು ದಿನಗಳಲ್ಲಿ ಹಣವನ್ನು ತಿರುಗಿ ಕಟ್ಟಬೇಕು ಎಂದು ನಿಯಮವಿರುತ್ತದೆ. ಅದರೆ ಆ ಸಮಯದಲ್ಲಿ ರೈತರ ಬಳಿ ಹಣವಿಲ್ಲದೆ ಹೋದಲ್ಲಿ ಸೊಸೈಟಿಯವರೆ ರೈತರಿಗೆ ಹೇಳುತ್ತಾರೆ ನಿಮ್ಮ ಪರವಾಗಿ ಸಾಲ ನಾವು ಕಟ್ಟುತ್ತೆವೆ ಎಂದು ಹೇಳಿ ಬಡ್ಡಿಯನ್ನು ತಮಗೆ ನೀಡಲು ಹೇಳುತ್ತಾರೆ..

ಕೆಲವು ಬೆಳೆ ಸಾಲಗಳಿಗೆ ಬಡ್ಡಿ ಇರುವುದಿಲ್ಲ. ಕೆಲವು ಬೆಳೆ ಸಾಲಕ್ಕೆ 4% ಬಡ್ಡಿ ಮಾತ್ರ ಇರುತ್ತದೆ. ಇದನ್ನು ಉಪಯೋಗಿಸಿಕೊಂಡು ಸೊಸೈಟಿಯವರು ರೈತರಿಂದ ಬಡ್ಡಿ ವಸೂಲಿ ಮಾಡುತ್ತಾರೆ ಇದಕ್ಕಾಗಿ ಸರ್ಕಾರ ಕಿಸಾನ್ ಕ್ರೆಡಿಟ್ ಕಾರ್ಡ್ ಮಾಡಿದೆ. ಕಿಸಾನ್ ಕಾರ್ಡ್ ನಲ್ಲಿ ಒಂದೆ ದಿನ ಎಲ್ಲಾ ಹಣ ತೆಗೆದುಕೊಳ್ಳಬೇಕು ಅಂತ ಇಲ್ಲ. ಬೆಳೆಸಾಲದಲ್ಲಾದರೆ ಒಂದೆ ದಿನ ಎಷ್ಟು ಹಣ ಜಾರಿಯಾಗಿದೆಯೊ ಅಷ್ಟನ್ನು ತೆಗೆದುಕೊಳ್ಳಬೇಕು. ಒಂದುವೇಳೆ ತೆಗೆದುಕೊಂಡ ಹಣವನ್ನು ಬಳಸದೆ ಹೋದರು ಬಡ್ಡಿ ಕಟ್ಟಲೆಬೇಕು. ಆದರೆ ಕಿಸಾನ್ ಕಾರ್ಡ್ ನಲ್ಲಿ ಒಂದು ಮಿತಿ ಇಟ್ಟಿರುತ್ತಾರೆ ಒಂದು ಲಕ್ಷ, ಐವತ್ತು ಸಾವಿರ ಹೀಗೆ. ಹಾಗೆ ಮಿತಿ ಸೆಟ್ ಮಾಡಿದ ನಂತರ ರೈತರಿಗೆ ಬೇಕಾದ ದಿನ, ಎಷ್ಟು ಬೇಕು ಅಷ್ಷನ್ನೆ ಅವರು ಬಳಸಬಹುದು. ಒಂದು ವೇಳೆ ಕೈಗೆ ಹಣ ಬಂದರೆ ಅದನ್ನು ಕಿಸಾನ್ ಕಾರ್ಡ್ ನಲ್ಲಿ ತುಂಬಬಹುದು. ಒಂದು ವರ್ಷದ ವರೆಗೂ ಇದು ಇರುತ್ತದೆ ‌ ಒಂದು ವರ್ಷದ ನಂತರ ಸರಿಯಾದ ಸಮಯಕ್ಕೆ ಹಣ ಹಿಂದಿರುಗಿಸಿದರೆ ವರ್ಷಕ್ಕೆ ಕೇವಲ 3% ಬಡ್ಡಿ ಹಾಕುತ್ತಾರೆ ಇಲ್ಲೆ ಸಮಯಕ್ಕೆ ಹಿಂದಿರುಗಿದೆ ಹೋದರೆ ವರ್ಷಕ್ಕೆ ಕೇವಲ 7% ಬಡ್ಡಿ. ಇದು ಬೆಳೆ ಸಾಲಕ್ಕಿಂತ ಕಿಸಾನ್ ಕಾರ್ಡ್ ಉತ್ತಮ. ಬೆಳೆ ಮಾರಿದಾಗ ಬಂದ ಹಣವನ್ನು ಕಿಸಾನ್ ಕಾರ್ಡ್ ನಲ್ಲಿಯೆ ಜಮಾ ಮಾಡಿದರೆ. ಸಾಲ ತಿರಿ ಹೆಚ್ಚುಳಿದ ಹಣಕ್ಕೆ ಬ್ಯಾಂಕ್ ಬಡ್ಡಿಯನ್ನು ರೈತರಿಗೆ ನೀಡುತ್ತದೆ.

ಎರಡನೆಯದಾಗಿ ಅರ್ಗಿಕಲ್ಚರ್ ಟರ್ಮ್ ಲೋನ್. ಇದನ್ನು ದೊಡ್ಡ ದೊಡ್ಡ ಕೆಲಸಗಳಿಗಾಗಿ ಕೊಡಲಾಗುತ್ತದೆ ಉದಾಹರಣೆಗೆ ಜಮೀನಿಗೆ ಬೇಲಿ ಹಾಕಿಸುವುದು. ಒಂದು ಲಕ್ಷದ ವರೆಗೆ ಯಾವುದೆ ಸೆಕ್ಯೂರಿಟಿ ಕೊಡುವ ಅವಶ್ಯಕತೆ ಇರುವುದಿಲ್ಲ ಆದರೆ ಒಂದು ಲಕ್ಷದ ಮೇಲೆ ಹಣ ಬೇಕಾದಲ್ಲಿ ಕೊಲ್ಯಾಟ್ರಲ್ ಕೊಡಬೇಕಾಗುತ್ತದೆ ಅಂದರೆ ಜಮೀನಿಗೆ 10 ಲಕ್ಷ ಬೆಲೆ ಇದ್ದರೆ ಅದರ ಮೇಲೆ 15 ರಿಂದ 25% ಅಷ್ಟು ಹಣ ಕೊಡುತ್ತಾರೆ. ಈ ಸಾಲದಲ್ಲಿ ಬಡ್ಡಿದರ 8.9 ರಿಂದ 14% ಇರುತ್ತದೆ. ಈ ಸಾಲವನ್ನು ರೈತರು ತಕ್ಷಣವೇ ಕಟ್ಟುವ ಅವಶ್ಯಕತೆ ಇರುವುದಿಲ್ಲ 3 ರಿಂದ 15 ವರ್ಷಗಳ ವರೆಗೆ ಸಮಯ ನೀಡುತ್ತಾರೆ ಹಂತ ಹಂತವಾಗಿ ಸಾಲ ತೀರಿಸುವ ವ್ಯವಸ್ಥೆ ಇದಾಗಿದೆ. ಈ ಸಾಲಗಳನ್ನು ದುರ್ಬಳಕೆ ಮಾಡಿಕೊಳ್ಳಬಾರದು. ಮೂರನೆಯದಾಗಿ ಅರ್ಗಿಕಲ್ಚರ್ ವರ್ಕಿಂಗ್ ಕೆಪಿಟಲ್ ಲೋನ್. ಇದರಲ್ಲಿ ಯಾವುದೇ ಒಂದು ಸಣ್ಣ ಪುಟ್ಟ ಯಂತ್ರಗಳು, ಇಲ್ಲವೇ ಏನಾದರೂ ಹೊಸದಾಗಿ ಮಾಡುವ ವ್ಯವಸಾಯದ ಕೆಲಸಕ್ಕೆ ಇರುವ ಸಾಲ ಇದು ಬ್ಯಾಂಕುಗಳು ಕೊಡುತ್ತವೆ. ನಾಲ್ಕನೆಯದಾಗಿ ಅರ್ಗಿಕಲ್ಚರ್ ಗೋಲ್ಡ್ ಲೋನ್. ರೈತರು ಬಂಗಾರ ಅಡ ಇಟ್ಟು ಅದಕ್ಕೆ 12 ರಿಂದ 14% ಬಡ್ಡಿಯನ್ನು ಕಟ್ಟುತ್ತಿದ್ದರು. ಈಗ ಸರಕಾರ ಹೊಸ ಯೋಜನೆ ಜಾರಿಗೆ ತಂದಿದೆ ಅದೇನೆಂದರೆ ರೈತರ ಬಳಿ ಬಂಗಾರ ಇದ್ದರೆ ಅದರ ಮೇಲೆ ಬ್ಯಾಂಕುಗಳಲ್ಲಿ ಬಂಗಾರದ ಮೊತ್ತದ 75% ಸಾಲ ಕೊಡುತ್ತಾರೆ ಅದು 4% ಬಡ್ಡಿಗೆ‌. ಬೇರೆ ಕಡೆಯಲ್ಲಿ ಮೂರು ಲಕ್ಷಕ್ಕೆ 7% ಬಡ್ಡಿ ಹಾಕುತ್ತಾರೆ. ಒಂದುವೇಳೆ ಅದಕ್ಕಿಂತಲೂ ಹೆಚ್ಚು ಬೇಕಾದಲ್ಲಿ 10% ಬಡ್ಡಿ ಹಾಕುತ್ತಾರೆ. ಈ ಸಾಲದ ಸಮಯಾವಕಾಶ 1-3 ವರ್ಷ.

ಐದನೆದಾಗಿ ಪಾರ್ಮ್ ಮೆಕನೈಸೆಶನಲ್ ಲೋನ್. ಜಮೀನಿನ ಅಭಿವೃದ್ಧಿಗಾಗಿ ಯಂತ್ರಗಳನ್ನು ಬಳಸುವುದಕ್ಕೆ ಅಥವಾ ನೀರಿನ ಸೌಲಭ್ಯ ಕಲ್ಪಿಸಿಕೊಳ್ಳಲು ಈ ಸಾಲಗಳನ್ನು ಕೊಡಲಾಗುತ್ತದೆ. ಉದಾಹರಣೆಗೆ ಬೇಳೆ ಕಟಾವು ಯಂತ್ರ, ಬೆಳೆ ಸಂರಕ್ಷಣಾ ಯಂತ್ರ, ಕಾಳು ಬಿತ್ತನೆ ಯಂತ್ರ, ಡ್ರಿಪ್ ಹಾಗೂ ಜೆಟ್ ಗಳ ಅಳವಡಿಕೆ ಮುಂತಾದವು. ಕೆಲವು ಯಂತ್ರಗಳಿಗೆ ಸಬ್ಸಿಡಿ ಕೂಡ ಇರುತ್ತದೆ. ಆರನೆಯದು ಹಾರ್ಟಿಕಲ್ಚರ್ ಲೋನ್. ಹಾರ್ಟಿಕಲ್ಚರ್ ಲೋನ್ ಎಂದರೆ ತೋಟಗಾರಿಕೆಗೆ ನೀಡುವ ಸಾಲವಾಗಿದೆ. ತೋಟಗಳನ್ನು ಹಾಕಿದಾಗ ತುಂಬಾ ವರ್ಷಗಳು ಬೇಕಾಗುತ್ತವೆ ಫಸಲು ಬರಲು ಅದಕ್ಕಾಗಿ ಸರ್ಕಾರ ಹದಿನೈದು ವರ್ಷಗಳ ವರೆಗಿನ ಸಾಲವನ್ನು ನೀಡುವ ವ್ಯವಸ್ಥೆ ಮಾಡಿದೆ. ಐವತ್ತು ಲಕ್ಷದ ವರೆಗೆ ಸಾಲ ಕೊಡುತ್ತಾರೆ. ಕೆಲವೊಂದು ರೈತರು ತಿಳಿದುಕೊಂಡಿರುತ್ತಾರೆ ಬಡ್ಡಿಯ ಮೇಲೆ ಸಾಲ ನೀಡುವವರು 4-5% ಗೆ ಸಾಲ ಕೊಡುತ್ತಾರೆ. ಆದರೆ ಬ್ಯಾಂಕ್ ಗಳಲ್ಲಿ 12% ಬಡ್ಡಿ ಕೊಡಬೇಕು ಎಂದು. ಇಂತಹ ತಪ್ಪು ಮಾಡಬಾದು ಯಾಕೆಂದರೆ ಬಡ್ಡಿಯ ಮೇಲೆ ಸಾಲ ಕೊಡುವವರು ತಿಂಗಳಿಗೆ 4-5% ಬಡ್ಡಿ ಹಾಕುತ್ತಾರೆ ಆದರೆ ಬ್ಯಾಂಕ್ ನಲ್ಲಿ ಒಂದು ವರ್ಷಕ್ಕೆ 12% ಬಡ್ಡಿ ಹಾಕುತ್ತಾರೆ. ಸಾಲದ ವಿಷಯವಾಗಿ ಮಾಹಿತಿ ಬೇಕಾದಲ್ಲಿ ಫೈನಾಶಿಯಲ್ ಪ್ರೀಡಂ ಪುಸ್ತಕ ಓದಿ ಈ ಪುಸ್ತಕದಲಿ ಎಲ್ಲಾ ತರಹದ ಸಾಲದ ಮಾಹಿತಿ ಸಿಗುತ್ತದೆ. ಹಾಗೂ ಪೈನಾಶಿಯಲ್ ಪ್ರೀಡಂ ವರ್ಕ್ ಶೋಪ್ ಅನ್ನು ಅಟೆಂಡ್ ಆಗಿ.

Leave A Reply

Your email address will not be published.