ಬ್ಯಾಂಕಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಕೆಲವರಲ್ಲಿ ಕೆಲವೊಂದು ಗೊಂದಲಗಳಿರುತ್ತವೆ. ಅವುಗಳಲ್ಲಿ ಒಂದು ನಿಮ್ಮಖಾತೆಯನ್ನು ಒಂದು ಶಾಖೆಯಿಂದ ಇನ್ನೊಂದು ಶಾಖೆಗೆ ವರ್ಗಾಯಿಸುವುದು ಹೇಗೆ ಎಂಬುದು. ನಾವಿಂದು ನಿಮಗೆ ಒಂದು ನಗರದಿಂದ ಇನ್ನೊಂದು ನಗರಕ್ಕೆ ಬ್ಯಾಂಕ್ ಖಾತೆಯನ್ನು ವರ್ಗಾಯಿಸುವುದು ಹೇಗೆ ಅದರ ಪ್ರಕ್ರಿಯೆ ಹೇಗಿರುತ್ತದೆ ಬ್ಯಾಂಕ್ ಖಾತೆಯನ್ನು ವರ್ಗಾಯಿಸಬೇಕು ಎಂದರೆ ಬ್ಯಾಂಕಿಗೆ ಅರ್ಜಿಯನ್ನು ಹೇಗೆ ಬರೆಯಬೇಕು ಅರ್ಜಿಯಲ್ಲಿ ಏನೇನು ವಿಷಯ ಒಳಗೊಂಡಿರಬೇಕು ಎಂಬುದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಿಮಗೆ ತಿಳಿಸಿಕೊಡುತ್ತೇವೆ.
ಮೊಟ್ಟ ಮೊದಲು ಬ್ಯಾಂಕ್ ಖಾತೆಯನ್ನು ವರ್ಗಾಯಿಸಬೇಕು ಎಂದರೆ ಬ್ಯಾಂಕ್ ಮ್ಯಾನೇಜರಿಗೆ ಒಂದು ಅರ್ಜಿಯನ್ನು ಬರೆಯಬೇಕು. ಬಿಳಿ ಹಾಳೆಯ ಮೇಲೆ ಬ್ಯಾಂಕ್ ಮ್ಯಾನೇಜರ್ ಎಂದು ಬರೆದು ಅದರ ಕೆಳಗೆ ಬ್ಯಾಂಕಿನ ವಿಳಾಸವನ್ನು ಬರೆಯಬೇಕು ನಂತರ ವಿಷಯದಲ್ಲಿ ನನ್ನ ಖಾತೆಯನ್ನು ಬೇರೊಂದು ಶಾಖೆಗೆ ವರ್ಗಾಯಿಸುವ ಕುರಿತು ಎಂದು ಬರೆಯಬೇಕು. ನಂತರ ಮಾನ್ಯರೇ ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ (ನಿಮ್ಮ ಹೆಸರನ್ನು ಬರೆದು) ಆದ ನಾನು ನಿಮ್ಮ ಶಾಖೆಯಲ್ಲಿ ನನ್ನದೊಂದು ಉಳಿತಾಯ ಖಾತೆ ಇದೆ ಎಂದು ಬರೆದು ಅದರ ಅಕೌಂಟ್ ನಂಬರನ್ನು ಬರೆಯಬೇಕು.
ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ನಾನು ಉದ್ಯೋಗದ ನಿಮಿತ್ತವಾಗಿ ನಾನು ಇಂತಹ ಊರಿನಲ್ಲಿ(ಊರಿನ ಹೆಸರನ್ನು ಬರೆಯಬೇಕು) ವಾಸವಾಗಿದ್ದು ಬೇರೆ ಊರಿಗೆ (ವರ್ಗಾವಣೆ ಆಗಿರುವ ಊರಿನ ಹೆಸರನ್ನು ಬರೆಯಬೇಕು)ವರ್ಗಾವಣೆ ಆಗಿರುವ ಕಾರಣ ನನಗೆ ನಿಮ್ಮ ಶಾಖೆಯಲ್ಲಿ ಹಣಕಾಸು ವ್ಯವಹಾರವನ್ನು ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ.
ಆದ್ದರಿಂದ ನಿಮ್ಮ ಶಾಖೆಯಲ್ಲಿ ಇರುವ ನನ್ನ ಉಳಿತಾಯ ಖಾತೆಯನ್ನು ನಾನು ಪ್ರಸ್ತುತ ವಾಸಿಸುತ್ತಿರುವಂತಹ ನಗರದ(ಶಾಖೆಯ ವಿಳಾಸವನ್ನು ಬರೆಯಬೇಕು) ಶಾಖೆಗೆ ವರ್ಗಾವಣೆ ಮಾಡಿಕೊಡಬೇಕು ಎಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ ಎಂದು ಬರೆಯಬೇಕು. ಈ ರೀತಿಯಾಗಿ ಒಂದು ಬಿಳಿ ಹಾಳೆಯ ಮೇಲೆ ಪತ್ರವನ್ನು ಬರೆಯಬೇಕು ಮುಖ್ಯವಾಗಿ ಪತ್ರದ ಮೇಲ್ಭಾಗದ ಬಲ ಭಾಗದಲ್ಲಿ ದಿನಾಂಕವನ್ನು ಬರಬೇಕು
ಹಾಗೆಯೇ ಪತ್ರದ ಬಲಭಾಗದ ಕೆಳಬದಿಯಲ್ಲಿ ಧನ್ಯವಾದಗಳೊಂದಿಗೆ ಎಂದು ಬರೆದು ಕೆಳಗಡೆ ನಿಮ್ಮ ಹೆಸರನ್ನು ಬರೆಯಬೇಕು ಧನ್ಯವಾದಗಳೊಂದಿಗೆ ಇಂದು ಬರೆದಿರುವುದರ ಮೇಲೆ ನಿಮ್ಮ ಸಹಿಯನ್ನು ಹಾಕಬೇಕು. ಈ ರೀತಿಯ ಒಂದು ಅರ್ಜಿಯನ್ನು ಬರೆದುಕೊಂಡು ಅದನ್ನು ಬ್ಯಾಂಕಿಗೆ ಕೊಡಬೇಕು ಇದರ ಜೊತೆಗೆ ಅಲ್ಲಿ ನಿಮ್ಮ ಆಧಾರ್ ಕಾರ್ಡ್ ನ ಜೆರಾಕ್ಸ್ ಪ್ರತಿಯನ್ನು ಕೊಡಬೇಕು ಜೊತೆಗೆ ನಿಮ್ಮ ಬ್ಯಾಂಕ್ ಪಾಸ್ ಬುಕ್ ಅನ್ನು ಸಹ ಕೊಡಬೇಕಾಗಿ ಬರುತ್ತದೆ.
ಈ ರೀತಿ ನೀವು ಬ್ಯಾಂಕಿಗೆ ಅರ್ಜಿಯನ್ನು ದಾಖಲೆಗಳೊಂದಿಗೆ ಕೊಟ್ಟಾಗ ಒಂದೆರಡು ದಿನಗಳಲ್ಲಿ ನೀವು ಹೇಳಿರುವ ಶಾಖೆಗೆ ನಿಮ್ಮ ಖಾತೆಯನ್ನು ವರ್ಗಾಯಿಸಿ ನಿಮಗೆ ಒಂದು ಸ್ವೀಕೃತಿ ಚೀಟಿಯನ್ನು ಕೊಡುತ್ತಾರೆ. ಈ ಪ್ರಕ್ರಿಯೆ ಮುಗಿದ ನಂತರ ನೀವು ನಿಮ್ಮ ಹೊಸ ಶಾಖೆಗೆ ಭೇಟಿಯನ್ನು ಕೊಡಬೇಕು ಬ್ಯಾಂಕ್ ನವರು ಕೊಟ್ಟಿರುವ ಸ್ವೀಕೃತಿ ಚೀಟಿಯನ್ನು ಹೊಸ ಶಾಖೆ ಯವರಿಗೆ ಕೊಟ್ಟು ವರದಿಯನ್ನು ಖಚಿತಪಡಿಸಿಕೊಳ್ಳಬೇಕು. ಹಾಗೆ ಹೊಸ ಶಾಖೆಯಲ್ಲಿ ಹೊಸ ಮುದ್ರಿತ ಬ್ಯಾಂಕ್ ಪಾಸ್ ಬುಕ್ ಅನ್ನು ಪಡೆದುಕೊಳ್ಳಬೇಕು. ಇದಿಷ್ಟು ಬ್ಯಾಂಕ್ ಖಾತೆಯನ್ನು ಒಂದು ಶಾಖೆಯಿಂದ ಇನ್ನೊಂದು ಶಾಖೆಗೆ ಹೇಗೆ ವರ್ಗಾಯಿಸಬೇಕು ಎಂಬುದರ ಕುರಿತಾದ ಮಾಹಿತಿ ಆಗಿದೆ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದುರೊಂದಿಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರಿಗೂ ತಿಳಿಸಿರಿ.