ಭಾರತೀಯ ಮನೆಗಳಲ್ಲಿ ತಾಮ್ರದ ಪಾತ್ರೆಯನ್ನು ಹೆಚ್ಚು ಬಳಸುತ್ತಾರೆ. ಈ ಪಾತ್ರೆಯನ್ನು ತೊಳೆದಿಡುವ  ಕೆಲಸ ತುಂಬಾ ಪ್ರಾಯಾಸಕರವಾಗಿರುತ್ತದೆ ಮತ್ತು ಜೀವನದಲ್ಲಿ ಇದರ ಅನುಭವ ನಿಮಗೆ ಖಂಡಿತ ಉಂಟಾಗಿರುತ್ತದೆ. ನಿರಂತರ ಬಳಕೆ ಮತ್ತು ಗಾಳಿಗೆ ಹೆಚ್ಚು ಒಡ್ಡಿಕೊಳ್ಳುವುದರಿಂದ ತಾಮ್ರದ ಪಾತ್ರೆ ಅದರ ಹೊಳಪನ್ನು ಕಳೆದುಕೊಂಡು ಕಪ್ಪಾಗುತ್ತದೆ. ಮಾರುಕಟ್ಟೆಯಲ್ಲಿ ತಾಮ್ರದ ಪಾತ್ರೆಯನ್ನು ಸ್ವಚ್ಛಗೊಳಿಸುವ ಕೆಲವೊಂದು ಸಾಮಗ್ರಿಗಳು ಲಭ್ಯವಿದೆ. ಆದರೆ ಮಾರುಕಟ್ಟೆ ಉತ್ಪನ್ನಗಳನ್ನು ಸೋಲಿಸುವ ಕೆಲವೊಂದು ಸಾಮಗ್ರಿಗಳು ನಮ್ಮ ಮನೆಯಲ್ಲೇ ಇದ್ದು ಅದರಿಂದ ತಾಮ್ರದ ಪಾತ್ರೆಯನ್ನು ಸ್ವಚ್ಛಗೊಳಿಸಬಹುದು ಮತ್ತು ಹೊಳೆಯುವಂತೆ ಮಾಡಬಹುದು.

ನಿಮ್ಮ ತಾಮ್ರದ ಪಾತ್ರೆ ಹಾನಿ ಉಂಟುಮಾಡದೆ ಮತ್ತು ಅದರಲ್ಲಿ ಹಾಕಿಟ್ಟ ಆಹಾರ ಪದಾರ್ಥಗಳು ಕೆಡದಂತೆ ನಾವು ಮಾರುಕಟ್ಟೆಯಲ್ಲಿ ಪಾತ್ರೆ ಸ್ವಚ್ಛಗೊಳಿಸುವುದನ್ನು ತೆಗೆದುಕೊಳ್ಳಬೇಕು. ಆದರೆ ನೈಸರ್ಗಿಕವಾಗಿ ರುವ ನಮ್ಮ ಮನೆಯ ಅಡುಗೆ ಕೋಣೆಯಲ್ಲಿ ದೊರಕುವ ವಸ್ತುಗಳು ತಾಮ್ರದ ಪಾತ್ರೆಯನ್ನು ಸ್ವಚ್ಛಗೊಳಿಸಬಹುದು. ಇವುಗಳು ನಿಮ್ಮ ತಾಮ್ರದ ಪಾತ್ರೆಯನ್ನು ಹೊಸದರಂತೆ ಹೊಳೆಯಿಸುತ್ತದೆ.

ಲಿಂಬೆ ರಸಕ್ಕೆ ಉಪ್ಪು ಸೇರಿಸಿ ತಾಮ್ರದ ಪಾತ್ರೆಯನ್ನು ಸ್ವಚ್ಛಗೊಳಿಸಬಹುದು. ಇದನ್ನು ಪಾತ್ರೆಗೆ ಚನ್ನಾಗಿ ಉಜ್ಜಿ ನಂತರ ನೀರಿನಲ್ಲಿ ಅದನ್ನು ತೊಳೆಯಿರಿ. ಒಂದು ಚಮಚದಷ್ಟು ಉಪ್ಪು ಹಾಗೂ ಒಂದು ಕಪ್ ನಷ್ಟು ವಿನೇಗರ್ ಅನ್ನು ಚನ್ನಾಗಿ ಮಿಶ್ರ ಮಾಡಿ. ನಂತರ ಅದಕ್ಕೆ ಸ್ವಲ್ಪ ಹಿಟ್ಟನ್ನು ಸೇರಿಸಿ ಅದನ್ನು ಪೇಸ್ಟ್ ನಂತೆ ಮಾಡಿಕೊಳ್ಳಿ. ಈ ಮಿಶ್ರಣವನ್ನು ಹದಿನೈದು ನಿಮಿಷಗಳ ಕಾಲ ಪಾತ್ರೆಯಲ್ಲಿ ಇರುವಂತೆ ನೋಡಿಕೊಳ್ಳಿ. ನಂತರ ಬೆಚ್ಚನೆಯ ನೀರಿನಲ್ಲಿ ತೊಳೆದು ಪಾಲಿಷ್ ಮಾಡಿ. ತಾಮ್ರದ ಪಾತ್ರೆಗಳನ್ನು ಶುಚಿ ಮಾಡಲು ನಿಂಬೆ ಮತ್ತು ಉಪ್ಪನ್ನು ಬಳಸಿ. ಇದು ಯಾವುದೇ ಅಡುಗೆ ಮನೆಯಲ್ಲೂ ಲಭ್ಯವಿದೆ. ನಿಂಬೆ ಗೆ ಸ್ವಲ್ಪ ಉಪ್ಪು ಹಾಕಿ ಅದನ್ನು ಉಪಯೋಗಿಸಿ ಪಾತ್ರೆಯನ್ನು ಸ್ವಚ್ಛಗೊಳಿಸಿ.

ಅಥವಾ ಒಂದು ಬೌಲ್ ನಲ್ಲಿ ಹುಳಿಯಾಗಿರೊ ಮಜ್ಜಿಗೆಯನ್ನು ಹಾಕಿ ಅದಕ್ಕೆ ಒಂದು ಚಮಚ ಅಡುಗೆ ಸೋಡಾ ಅಥಾವ ಸೋಡಾ ಪುಡಿಯನ್ನು ಹಾಕಿ ಹಾಗೂ ಅದಕ್ಕೆ ಒಂದು ಚಮಚ ಉಪ್ಪನ್ನು ಹಾಕಿ ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಅದಕ್ಕೆ ಒಂದು ಅರ್ಧ ಹೊಳು ನಿಂಬೆ ಹಣ್ಣಿನ ರಸವನ್ನು ಹಿಂಡಿ ಆ ಹೊಳನ್ನು ಅದರಲ್ಲಿ ಹಾಕಬೇಕು. ಈ ಮಿಶ್ರಣದಲ್ಲಿ ಕಲೆಯಾಗಿರುವ  ತಾಮ್ರದ ಪಾತ್ರೆಯನ್ನು ಹಾಕಿ ಅರ್ಧ ಗಂಟೆ ನೆನಸಿಡಬೇಕು. ಈ ರೀತಿ ಮಾಡುವುದರಿಂದ ತಾಮ್ರದ ಪಾತ್ರೆ ಪಳ ಪಳ ಹೊಳೆಯುವಂತೆ ಆಗುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!