Ultimate magazine theme for WordPress.

ಮದುವೆಯಾದ ಪುರುಷರು ಮತ್ತೊಬ್ಬರ ಹೆಂಡತಿ ಕಡೆಗೆ ಹೆಚ್ಚು ಆಕರ್ಷಣೆ ಆಗೋದು ಯಾಕೆ, ಅವರು ನಿಜಕ್ಕೂ ಬಯಸೋದೇನು ಗೊತ್ತಾ

0 1,086

ಗಂಡು‌ ಹೆಣ್ಣು ಎರಡೂ ಈ ಸೃಷ್ಟಿಯ ಅವಿಭಾಜ್ಯ ಅಂಗವಾಗಿದ್ದು ಗಂಡು ಹೆಣ್ಣು ಇದ್ದರೆ ಮಾತ್ರ ಜೀವ ಸೃಷ್ಟಿ ಸಾಧ್ಯ.‌ ಇಂತಹ ಒಂದು‌ ಭಾಂಧವ್ಯಕ್ಕೆ ಬೆಸುಗೆ ಹಾಕುವುದೇ ಮದುವೆ. ಒಂದು ಗಂಡಿಗೆ ಹಾಗೂ ಹೆಣ್ಣಿಗೆ ಮದುವೆ ಅನ್ನುವುದು ಸ್ವರ್ಗದಲ್ಲಿ ನಿಶ್ಚಯ ಆಗಿರುತ್ತದೆ ಎಂದು‌‌ ಹೇಳಲಾಗುತ್ತದೆ. ಆದರೆ ಈಗಿನ‌ ಕಾಲದಲ್ಲಿ ಈ‌ ಮದುವೆಗೆ ಅರ್ಥವೇ ಇಲ್ಲದಂತಾಗಿದೆ. ಪ್ರೀತಿಸಿ ಮದುವೆ ಆದರೂ, ಅಥವಾ ಅರೆಂಜ್ಡ್ ಮದುವೆ ಆದರೂ ಕೇವಲ‌‌ ನಾಲ್ಕು ದಿನದ ಆಟ ಅನ್ನುವಂತಾಗಿದೆ.‌ ಇದಕ್ಕೆ ಪೂರಕ ಎನ್ನುವ ಹಾಗೆ ಮದುವೆಯಾದ ಪುರುಷರು ಮತ್ತೊಬ್ಬರ ಹೆಂಡತಿಯ ಕಡೆಗೆ ಆಕರ್ಷಣೆ ಆಗುತ್ತಾರೆ. ಈ ರೀತಿ ಆಗುವುದು ಯಾಕೆ ಗೊತ್ತಾ? ಎನ್ನುವುದನ್ನು ನಾವಿಲ್ಲಿ ನೋಡೋಣ.

ಈ‌ ಜಗತ್ತು ಅನ್ನುವುದೇ ಒಂದು ವಿಸ್ಮಯ. ಜಗತ್ತಿನ ಸೃಷ್ಟಿಯಲ್ಲಿ ಭಾಗವಾದ ಮಾನವ ಜನ್ಮ ಕೂಡ ಒಂದು ಅದ್ಭುತವೇ.‌ ಈ ಗಂಡು–ಹೆಣ್ಣು ಪರಸ್ಪರ ಆಕರ್ಷಣೆಗೆ‌ ಒಳಗಾಗುವುದು ನೈಸರ್ಗಿಕ ಪ್ರಕ್ರಿಯೆ ಎಂದೇ ಹೇಳಬಹುದು.‌ ಮನುಷ್ಯಜೀವನವನ್ನು ಧರ್ಮಾರ್ಥ-ಕಾಮ-ಮೋಕ್ಷ ಗಳೆಂಬ ಪುರುಷಾರ್ಥಗಳಲ್ಲಿ ಅರ್ಥೈಸಲಾಗುತ್ತದೆ. ಸ್ತ್ರೀ-ಪುರುಷ ಸಂಬಂಧದ ವಿಷಯದಲ್ಲೂ ಅಷ್ಟೆ. ವಿವಾಹಿತರನ್ನೂ ಅವಿವಾಹಿತರನ್ನೂ ರಕ್ಷಿಸುವ ಒಂದು ಸಭ್ಯಸುಂದರ ಚೌಕಟ್ಟು ‘ವಿವಾಹ’ ಗಂಡು-ಹೆಣ್ಣು ಈ ಸಂಬಂಧದಲ್ಲಿ ಬದ್ಧರಾಗುವಾಗ, ಆಜೀವನವೂ ಪರಸ್ಪರ ಮೈತ್ರಿ-ನಿಷ್ಠೆ ಪ್ರಾಮಾಣಿಕತೆಗಳನ್ನು ಪಾಲಿಸುತ್ತೇವೆಂದು ಪ್ರತಿಜ್ಞೆಯನ್ನು ಮಾಡುತ್ತಾರೆ.

ಇದು ಗುರುಹಿರಿಯರ, ಬಂಧುಮಿತ್ರರ, ಕುಲದೇವರ ಮತ್ತು ಅಗ್ನಿಯ ಸಾಕ್ಷಿಯಾಗಿ ನಡೆಯುತ್ತದೆ. ಇವೆಲ್ಲ ಮೂಢನಂಬಿಕೆಗಳಲ್ಲ. ಮನಸ್ಸುಬುದ್ಧಿಗಳಿಗೆ ಅಪಾರ ಸಂಸ್ಕಾರವನ್ನು ನೀಡುವಂತಹ ಸಾಂಸ್ಕೃತಿಕ ಬೋಧಕಗಳು ದ್ಯೋತಕಗಳು. ಆದರೆ ಇತ್ತೀಚಿನ ದಿನಗಳಲ್ಲಿ ಗಂಡು ಹೆಣ್ಣು ಮದುವೆ ಆಗಿ‌ ಕೆಲವು ತಿಂಗಳುಗಳ ಕಾಲ ಅಥವಾ‌ ಕೆಲವು ವರ್ಷಗಳ ಕಾಲ ಚೆನ್ನಾಗಿರುತ್ತಾರೆ, ಆ‌‌ ನಂತರ ಪರಸ್ಪರ ಜಗಳ, ಕಿತ್ತಾಟ, ಮನಸ್ತಾಪ ಶುರುವಾಗಿ ಬಿಡುತ್ತದೆ.

ಇದಕ್ಕೆ ಹೆಚ್ಚಾಗಿ ಪುರುಷನು ಇನ್ನೊಬ್ಬಳ ಸಂಗಡ ಮಾಡುವುದೇ ಕಾರಣ ಆಗಿರುತ್ತದೆ.‌ ಹೆಚ್ಚಿನ‌ ಗಂಡಸರು ತನ್ನನ್ನೆ ನಂಬಿ ಬಂದ ಸುಂದರವಾದ ಹೆಂಡತಿ ಇದ್ದರೂ, ಪರಸ್ತ್ರೀಯ ಜೊತೆ ಸಂಪರ್ಕ ಇಟ್ಟುಕೊಂಡಿರುತ್ತಾರೆ.‌ ಆ ಸ್ತ್ರೀಗಾಗಿ ತನ್ನ ಹೆಂಡತಿಯನ್ನು ಮೂಲೆ ಗುಂಪು ಮಾಡುತ್ತಾನೆ. ಆದರೆ ಈ ರೀತಿ ಗಂಡಸರು ಬದಲಾಗಲು ಕಾರಣ ಇದೆ. ಹೆಚ್ಚಿನ ಗಂಡಸರಿಗೆ ಒಂದು ವೀಕ್ನೆಸ್ ಇರುತ್ತದೆ. ಅವರಿಗೆ ಯಾವುದೇ ಒಂದು ವಸ್ತುವಿನ ಮೇಲಿನ ಆಸಕ್ತಿ ಬಹಳ ಬೇಗ ಕಡಿಮೆ ಆಗಿ ಬಿಡುತ್ತದೆ. ಒಂದು ವಸ್ತು ಬೋರ್ ಅನ್ನಿಸಿದಾಗ ಬೇರೆ ವಸ್ತುವಿನ ಕಡೆ ಆಕರ್ಷಿತರಾಗುತ್ತಾರೆ.

ಅದೇ ರೀತಿ ತನ್ನ‌ ಪತ್ನಿಯ ಜೊತೆ ಇದ್ದು ಆಕೆಯ ಜೊತೆ ಸುಖ ಅನುಭವಿಸಿ ಕೊನೆಗೆ ಆತ ಆಕೆಯಿಂದ ಬೋರ್ ಆಗಿ ಬೇರೆ ಸ್ತ್ರೀಯ ಸಂಗಡ ಮಾಡುತ್ತಾನೆ. ಇಂತಹ ಪುರುಷರು ಸದಾ ಬದಲಾವಣೆ ಬಯಸುತ್ತಲೇ ಇರುತ್ತಾರೆ. ಇದು ಕೇವಲ ಗಂಡಸರಷ್ಟೇ ಅಲ್ಲ ಕೆಲ ಮಹಿಳೆಯರು ಕೂಡ ಇದೇ ರೀತಿಯ ವೀಕ್ನೆಸ್ ಹೊಂದಿರುತ್ತಾರೆ. ಕೆಲವರದ್ದು ವೀಕ್ ನೆಸ್ ಆದರೆ ಇನ್ನು ಕೆಲವರದ್ದು ಚಟ ಆಗಿರುತ್ತದೆ. ಹೀಗಿರುವಾಗಲೇ ಸಂಸಾರ ಮುರಿದು ಬೀಳುವುದು.

ಈ ರೀತಿ ಮಾಡುವ ಬದಲು ಕಟ್ಟಿಕೊಂಡ ಹೆಂಡತಿ ಅಥವಾ ಗಂಡನನ್ನು ಪ್ರೀತಿಯಿಂದ ನೋಡಿಕೊಂಡರೆ ಅದಕ್ಕಿಂತ ದೊಡ್ಡ ಸ್ವರ್ಗ ಇನ್ನೊಂದಿಲ್ಲ. ಕೇವಲ ಕ್ಷಣಿಕ ಸುಖಕ್ಕಾಗಿ ಬದುಕನ್ನು ಹಾಳು ಮಾಡಿಕೊಳ್ಳುವ ಬದಲು ಇರುವ ಜೀವನವನ್ನು ತನ್ನನ್ನು ನಂಬಿಕೊಂಡು ತಾಯಿ ತಂದೆ ಮನೆಯವರನ್ನು ಬಿಟ್ಟು ಬಂದ ಹೆಂಡತಿಯನ್ನು ಜೀವನಪೂರ್ತಿ ಸುಖವಾಗಿ ನೋಡಿಕೊಂಡರೆ ದೇವರು ಕೂಡ ಮೆಚ್ಚುತ್ತಾನೆ.

Leave A Reply

Your email address will not be published.