ವಿಶ್ವದ ಹೆಚ್ಚಿನ ಎಲ್ಲಾ ಭಾಗಗಳಲ್ಲಿ ಲಭ್ಯವಿರುವ ಹಾಗೂ ಬೆಳೆಯಲ್ಪಡುವಂತಹ ಬಾಳೆಹಣ್ಣಿನಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ಬಾಳೆಹಣ್ಣು ದೇಹಕ್ಕೆ ಶಕ್ತಿ ನೀಡುವುದು. ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಕೂಡ ಸೇರಿಕೊಂಡಿದೆ.
ಪೋಷಕಾಂಶಗಳ ವಿಚಾರಕ್ಕೆ ಹೋಲಿಸಿದರೆ, ಆಗ ಬಾಳೆಹಣ್ಣಿನಲ್ಲಿ ಸೇಬಿಗಿಂತಲೂ ಹೆಚ್ಚಿನ ಪೋಷಕಾಂಶಗಳು ಇವೆ. ಇದರಲ್ಲಿ ವಿಟಮಿನ್ ಎ, ಪೋಸ್ಪರಸ್, ಕಾರ್ಬೋಹೈಡ್ರೇಟ್ಸ್ ಮತ್ತು ಕಬ್ಬಿನಾಂಶವು ಸೇಬಿಗಿಂತಲೂ ಹೆಚ್ಚಾಗಿದೆ. ಬಾಳೆಹಣ್ಣಿನಲ್ಲಿ ಹಲವಾರು ಪೋಷಕಾಂಶಗಳು ಇರುವ ಕಾರಣದಿಂದಾಗಿ ಇದನ್ನು ಒಂದು ಅದ್ಭುತ ಆಹಾರ ಎಂದು ಪರಿಗಣಿಸಲಾಗಿದೆ.
ವರ್ಷವಿಡೀ ಲಭ್ಯವಾಗುವಂತಹ ಹಣ್ಣು ಎಂದರೆ ಅದು ಬಾಳೆಹಣ್ಣು, ಹಾಗಾಗಿ ಇದರ ಸಂಪೂರ್ಣ ಲಾಭ ಪಡೆಯಲು ದಿನಕ್ಕೊಂದು ಬಾಳೆಹಣ್ಣು ತಿಂದರೂ ಸಾಕು, ಜೀರ್ಣಕ್ರಿಯೆಯು ಸರಾಗವಾಗಿ ಆಗುವುದು, ರಕ್ತದೊತ್ತಡ ನಿಯಂತ್ರಣದಲ್ಲಿರುವುದು, ಅಲ್ಲದೇ ಅತಿಯಾಗಿ ತಿನ್ನುವುದನ್ನು ನಿಯಂತ್ರಿಸುವುದರ ಜೊತೆಗೆ ಹಠಾತ್ ಶಕ್ತಿ ನೀಡುವಲ್ಲಿ ಕೂಡ ಇದು ಪ್ರಮುಖ ಪಾತ್ರ ನಿರ್ವಹಿಸುವುದು. ಹಾಗಿದ್ದರೆ ಪ್ರತೀ ದಿನ ಎರಡು ಬಾಳೆಹಣ್ಣು ತಿನ್ನುವುದರಿಂದ ನಮಗೆ ಏನೆಲ್ಲಾ ಪ್ರಯೋಜನಗಳು ಇವೆ ಎಂಬುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಬಾಳೆಹಣ್ಣು ತೂಕ ಇಳಿಸಲು ಮತ್ತು ಬೊಜ್ಜು ನಿವಾರಣೆ ಮಾಡಲು ನೆರವಾಗುವುದು. ಬಾಳೆಹಣ್ಣು 100ಗ್ರಾಂ ನಲ್ಲಿ ಸುಮಾರು 90 ಕೆ ಕ್ಯಾಲರಿ ನೀಡುವುದು ಮತ್ತು ಇದರಿಂದ ಹೊಟ್ಟೆ ತುಂಬಿದಂತೆ ಮಾಡುವುದು. ಇದರಲ್ಲಿರುವ ನಾರಿನಾಂಶವು ನೈಸರ್ಗಿಕವಾಗಿ ಹೀರಿಕೊಳ್ಳುವಂತದ್ದಾಗಿದೆ ಮತ್ತು ಜೀರ್ಣಕ್ರಿಯೆಗೆ ವೇಗ ನೀಡುವುದು ಮತ್ತು ಹೊಟ್ಟೆ ತುಂಬಿದಂತೆ ಮಾಡುವುದು. ಇದರಿಂದ ಹೆಚ್ಚಿನ ತೂಕ ಇಳಿಸಲು ನೆರವಾಗುವುದು.
ಇನ್ನೊಂದು ಕಡೆಯಲ್ಲಿ ಬಾಳೆಹಣ್ಣು ತೂಕ ಹೆಚ್ಚಿಸಿಕೊಳ್ಳಲು ಕೂಡ ನೆರವಾಗುವುದು. ಬಾಳೆಹಣ್ಣಿನಲ್ಲಿ ಸಕ್ಕರೆ ಅಂಶವಾಗಿರುವಂತಹ ಫ್ರಾಕ್ಟೋಸ್ ಮತ್ತು ಸುಕ್ರೋಸ್ ಇದೆ ಮತ್ತು ಇದು ತಕ್ಷಣವೇ ಶಕ್ತಿ ನೀಡುವುದು. ಬಾಳೆಹಣ್ಣನ್ನು ಹಾಲಿನ ಜತೆಗೆ ಸೇರಿಸಿ ಕುಡಿದರೆ ಆಗ ಅದು ತೂಕ ಹೆಚ್ಚಿಸಲು ಸಹಕಾರಿ. ಯಾಕೆಂದರೆ ಹಾಲಿನಲ್ಲಿ ಪ್ರೋಟೀನ್ ಇದೆ ಮತ್ತು ಬಾಳೆಹಣ್ಣಿನಲ್ಲಿ ಸಕ್ಕರೆ ಇದೆ. ಬಾಳೆಹಣ್ಣಿನಲ್ಲಿ ಫೈಬರ್, ವಿಟಮಿನ್ ಅಂತಹ ಸಾಕಷ್ಟು ಶಕ್ತಿಯುತ ಅಂಶಗಳು ಇರುತ್ತವೆ. ಈ ಕಾರಣಕ್ಕೆ ಸಾಮಾನ್ಯವಾಗಿ ವೈದ್ಯರೂ ಸಹ ಬೆಳಗಿನ ಉಪಹಾರದ ಜೊತೆಗೆ ಬಾಳೆಹಣ್ಣನ್ನು ತಿನ್ನಲು ಸಲಹೆ ನೀಡುತ್ತಾರೆ.
ಸಾಮಾನ್ಯವಾಗಿ ಕಪ್ಪು ಚಿಕ್ಕೆಗಳಾಗಿರುವ ಬಾಳೆಹಣ್ಣು ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ಆದರೆ ಇದನ್ನು ಸಾಮಾನ್ಯವಾಗಿ ಎಲ್ಲಾ ಜನರೂ ಬೇಡವೆಂದು ಪಕ್ಕಕ್ಕೆ ಇಡುವುದೇ ಹೆಚ್ಚು. ಈ ಕಪ್ಪು ಚುಕ್ಕೆಗಳು ಆಗಿರುವ ಬಾಳೆಹಣ್ಣಿನಲ್ಲಿ ಸಾಕಷ್ಟು ಪೋಷಕಾಂಶಗಳು ಇರುತ್ತವೆ. ಇದರಲ್ಲಿ ಆಂಟಿ ಆಕ್ಸಿಡೆಂಟ್ ಹೆಚ್ಚಾಗಿ ಇರುವುದರಿಂದ ನಮ್ಮ ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ನೀಡುತ್ತದೆ. ಅಲ್ಲದೆ ಬಿಳಿ ರಕ್ತ ಕಣಗಳನ್ನು ಹೆಚ್ಚಿಸುತ್ತದೆ. ಇನ್ಫೆಕ್ಷನ್ ಕ್ಯಾನ್ಸರ್ ಗಳು ಬಾರದ ಹಾಗೆ ತಡೆಯುತ್ತದೆ. ಇದರಲ್ಲಿ ನೈಸರ್ಗಿಕವಾಗಿ ಆಂಟಿ ಆಸಿಡ್ ಕೂಡಾ ಇರುವುದರಿಂದ ಹಾರ್ಟ್ ಬರ್ನ್ ಆಗುವುದನ್ನು ನಿವಾರಣೆ ಮಾಡುತ್ತದೆ. ಅಷ್ಟೇ ಅಲ್ಲದೆ ಬಾಳೆಹಣ್ಣಿನಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಾಗಿ ಇರುತ್ತದೆ ಸೋಡಿಯಂ ಅಂಶ ಇರುವುದಿಲ್ಲ.
ಹಾಗಾಗಿ ಇದು ಹೃದಯಕ್ಕೆ ಬಹಳ ಒಳ್ಳೆಯದು. ದಿನಕ್ಕೆ ಎರಡು ಬಾಳೆಹಣ್ಣು ಸೇವನೆ ಮಾಡುವುದರಿಂದ ಬ್ಲಡ್ ಪ್ರಶರ್ ನಿಯಂತ್ರಣಕ್ಕೆ ಬರುವುದು ಮಾತ್ರವಲ್ಲದೇ ಸ್ಟ್ರೋಕ್, ಹಾರ್ಟ್ ಅಟ್ಟ್ಯಾಕ್ ಆಗದಂತೆ ತಡೆಯುತ್ತದೆ. ರಕ್ತ ಹೀನತೆಯ ಸಮಸ್ಯೆ ಇರುವವರು ಬಾಳೆಹಣ್ಣನ್ನು ತಪ್ಪದೆ ಸೇವಿಸಲೇಬೇಕು. ಇದು ರಕ್ತ ಹೀನತೆಯ ಸಮಸ್ಯೆಗೆ ಉತ್ತಮ ಔಷಧ ಎಂದು ಹೇಳಬಹುದು. ಅಷ್ಟೇ ಅಲ್ಲದೆ ನಮ್ಮ ಓವರೀಸ್ ಗೆ ಬೇಕಾಗುವಂತಹ ಕಬ್ಬಿಣದ ಅಂಶವನ್ನು ಸಹ ಒದಗಿಸುತ್ತದೆ.
ಹಿಮೋಗ್ಲೋಬಿನ್ ಅನ್ನು ಹೆಚ್ಚಿಸಿ ರಕ್ತ ಸಂಚಾರವನ್ನು ಸಹ ಹೆಚ್ಚಿಸುತ್ತದೆ. ಅಲ್ಸರ್ ಉಂಟಾದಾಗ ಹೊಟ್ಟೆಯಲ್ಲಿ ಬಹಳ ನೋವು , ಉರಿ ಉಂಟಾಗುತ್ತದೆ ಹಾಗಿದ್ದಾಗ ಅಲ್ಸರ್ ಇರುವವರು ಬಾಳೆ ಹಣ್ಣು ತಿನ್ನುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು. ಅಷ್ಟೇ ಅಲ್ಲದೆ ಡಿಪ್ರೆಶನ್ ಇದ್ದವರಿಗೆ ಕೂಡಾ ಬಾಳೆಹಣ್ಣು ಉತ್ತಮ ಔಷಧ. ಹೀಗೆ ಬಾಳೆಹಣ್ಣು ಸೇವನೆ ಮಾಡುವುದರಿಂದ ಇಷ್ಟೇ ಅಲ್ಲದೆ ಇನ್ನೂ ಹೆಚ್ಚಿನ ಲಾಭವನ್ನು ನಾವು ಪಡೆಯಬಹುದು.
ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430