ಕಾನ್ಸರ್ ಗೆ ಮದ್ದು ಕಂಡುಹಿಡಿದ ಮಂಗಳೂರು ವಿಜ್ಞಾನಿಗಳು ಈ ಗಿಡ ಮೂಲಿಕೆ ಯಾವುದು ಗೊತ್ತೆ..

0 105

ಪ್ರಕೃತಿಯನ್ನು ತಾಯಿಗೆ ಹೋಲಿಸಲಾಗುತ್ತದೆ. ಪ್ರಕೃತಿಯಲ್ಲಿ ಸಿಗುವ ಗಿಡಮೂಲಿಕೆಗಳಿಂದ ಔಷಧಿಗಳನ್ನು ತಯಾರಿಸಿ ಮಾರಕ ರೋಗಗಳನ್ನು ಗುಣಪಡಿಸಿಕೊಳ್ಳಬಹುದು. ಆಯುರ್ವೇದ ಪದ್ಧತಿಯಲ್ಲಿ ಗಿಡಮೂಲಿಕೆಗಳನ್ನು ಹೆಚ್ಚಾಗಿ ಬಳಸಲಾಗುತ್ತಿತ್ತು. ಇಂದಿನ ಆಧುನಿಕ ಯುಗದಲ್ಲಿ ಪ್ರಕೃತಿಯ ನಾಶಮಾಡುತ್ತಿರುವ ಮಾನವ ರೋಗದಿಂದ ಸಾಯುತ್ತಿದ್ದಾನೆ. ಪ್ರಕೃತಿಯಲ್ಲಿ ಸಿಗುವ ಹಡೆಬಳ್ಳಿಯು ಮಾರಕ ರೋಗ ಕ್ಯಾನ್ಸರ್ ವಿರುದ್ಧ ಹೋರಾಡುವ ಅಂಶವನ್ನು ಹೊಂದಿದೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಕರ್ನಾಟಕ ನೈಸರ್ಗಿಕ ಸಂಪತ್ತಿನಲ್ಲಿ ಶ್ರೀಮಂತ ರಾಜ್ಯವಾಗಿದೆ ಎಂಬುದು ತಿಳಿದಿರುವ ವಿಷಯವಾಗಿದೆ. ನಮ್ಮ ನಾಡು ಸಸ್ಯಕಾಶಿ ಇಲ್ಲಿನ ಸಸ್ಯಗಳು ಒಂದಲ್ಲ ಒಂದು ಔಷಧೀಯ ಗುಣಗಳನ್ನು ಹೊಂದಿವೆ ಆದರೆ ಇತ್ತೀಚಿನ ದಿನಗಳಲ್ಲಿ ಅದರ ಮಹತ್ವವನ್ನು ನಾವು ಮರೆಯುತ್ತಿದ್ದೇವೆ. ಇಲ್ಲೊಬ್ಬರು ಮನೆಯ ಹಿತ್ತಲ ಗಿಡದಲ್ಲಿ ಕ್ಯಾನ್ಸರ್​ ನಿವಾರಕ ಔಷಧ ಕಂಡುಹಿಡಿದು ಮರೆಯಾದ ಸಸ್ಯಕಾಶಿಯ ಮಹತ್ವವನ್ನು ಮತ್ತೊಮ್ಮೆ ಎಲ್ಲರಿಗೂ ತಿಳಿಸಿದ್ದಾರೆ.

ನಮ್ಮ ಹಿರಿಯರು ಪ್ರಕೃತಿಯನ್ನು ಪೂಜಿಸುತ್ತಾ ಪ್ರಕೃತಿಯನ್ನು ಉಸಿರಾಗಿಸಿಕೊಂಡು ಬದುಕಿದ್ದರು. ಹಸಿರನ್ನು ಉಸಿರಾಗಿಸಿ ಬದುಕು ಸಾಗಿಸಿದವರು ಯಾವುದೆ ಆರೋಗ್ಯ ಸಮಸ್ಯೆಗೆ ಒಳಗಾಗಿಲ್ಲ, ಪ್ರಕೃತಿಯಲ್ಲಿಯೆ ನೈಸರ್ಗಿಕ ಮದ್ದು ಕಂಡುಹಿಡಿದರು. ಆಧುನಿಕತೆ ಬೆಳೆದಂತೆ ಪ್ರಕೃತಿಯೊಂದಿಗಿನ ಸಂಬಂಧ ಕಳೆಯುತ್ತಾ ಬಂದಿತು ಆದರೆ ನಮ್ಮ ಜೀವನ ಪ್ರಕೃತಿಯನ್ನು ಅವಲಂಬಿತವಾಗಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ನಮ್ಮ ಹಿತ್ತಲಲ್ಲಿ ಅಡ್ಡಾದಿಡ್ಡಿ ಬೆಳೆಯುವ ಹಡೆಬಳ್ಳಿ ಮಾರಕ ರೋಗ ಕ್ಯಾನ್ಸರ್ ನಿವಾರಕ ಔಷಧವಾಗಿದೆ. ಮಂಗಳೂರಿನ ವಿಜ್ಞಾನಿಗಳು ಹಿತ್ತಲ ಗಿಡವೆ ಮದ್ದು ಎಂಬುದನ್ನು ಸಾಕ್ಷಿ ಸಮೇತ ನಿರೂಪಿಸಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ಸಂಶೋಧಕರಾದ ಪ್ರೊ .ಕೆ ಆರ್ ಚಂದ್ರಶೇಖರ್ ಹಾಗೂ ಪ್ರೊ. ಭಾಗ್ಯ ನಕ್ರೆಕಲಾಯ ಅವರು ಹಡೆಬಳ್ಳಿಯ ಬಗ್ಗೆ ಸಂಶೋಧನೆ ಮಾಡಿದ್ದಾರೆ. ಸದ್ಯ ಇವರು ಮಂಗಳೂರು ವಿಶ್ವವಿದ್ಯಾಲಯದಿಂದ ನಿವೃತ್ತರಾಗಿದ್ದು ಖಾಸಗಿ ಕಾಲೇಜಿನಲ್ಲಿ ಸಸ್ಯಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮಹಿಳೆಯರನ್ನು ಕಾಡುತ್ತಿರುವ ಸ್ತನ ಕ್ಯಾನ್ಸರ್​ಗೆ ಮಾರಕವಾಗುವ ಅಂಶಗಳನ್ನು ಸಂಶೋಧಿಸಿ ಶುದ್ಧೀಕರಣಗೊಳಿಸಿ ಸ್ತನ ಕ್ಯಾನ್ಸರ್​ಗೆ ರಾಮ ಬಾಣವಾಗುವ ಅಂಶವನ್ನು ಹಡೆಬಳ್ಳಿಯಲ್ಲಿ ವಿಜ್ಞಾನಿಗಳು ಪತ್ತೆ ಹೆಚ್ಚಿದ್ದಾರೆ. 2017ರಲ್ಲಿ ಸಂಶೋಧನೆ ನಡೆಸಿ ಪೇಟೆಂಟ್ ಗಾಗಿ ಅರ್ಜಿ ಸಲ್ಲಿಸಲಾಗಿತ್ತು ನಂತರ ಸುದೀರ್ಘ ಸಮಯದ ಬಳಿಕ ಭಾರತ ಸರ್ಕಾರ ಸಂಶೋಧನೆಗೆ ಪೇಟೆಂಟ್ ನೀಡಿದೆ.

ಈ ಸಂಶೋಧನಾ‌ ಅಂಶ ಬಳಸಿ ಬ್ರೆಸ್ಟ್ ಕ್ಯಾನ್ಸರ್​​ಗೆ ಔಷಧ ತಯಾರು ಮಾಡಬಹುದಾಗಿದೆ. ಈ ಹಿಂದೆ ಚೀನಾದಲ್ಲಿಯೂ ಈ ಬಳ್ಳಿಯ ಬಗ್ಗೆ ಅಲ್ಲಿಯ ವಿಜ್ಞಾನಿಗಳು ಸಂಶೋಧನೆ ನಡೆಸಿದ್ದರು ಅಲ್ಲಿನ ಬಳ್ಳಿಯಲ್ಲೂ ಟೆಂಟ್ರಾಡ್ರೈನ್ ಅಂಶವನ್ನು ಪತ್ತೆ ಮಾಡಿದ್ದರು. ಪೃಕೃತಿಯಲ್ಲಿನ ಸಸ್ಯ ಪ್ರಬೇಧಗಳಿಂದ ಹಲವು ಮಾರಕ ರೋಗಗಳಿಗೆ ಚಿಕಿತ್ಸೆಯನ್ನು ನೀಡಬಹುದು ಎಂಬುದನ್ನು ಇಬ್ಬರು ಕನ್ನಡಿಗರು ಸಾಬೀತು ಪಡಿಸಿದ್ದಾರೆ. ಒಟ್ಟಿನಲ್ಲಿ ನಮ್ಮ ಹಿರಿಯರು ನಡೆದುಕೊಂಡು ಬಂದ ದಾರಿಯಲ್ಲಿ ಇನ್ನು ಮುಂದಾದರೂ ನಡೆಯೋಣ, ಆರೋಗ್ಯವನ್ನು ಪ್ರಕೃತಿಯ ಮಡಿಲಲ್ಲಿ ಕಾಪಾಡೋಣ.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.