ಬ್ರಾಹ್ಮಿ ಅಥವಾ ಒಂದೆಲಗ ಎನ್ನುವುದು ಹಲವಾರು ವಿಧದ ಔಷಧೀಯ ಗುಣಗಳನ್ನು ಹೊಂದಿರುವಂತಹ ಒಂದು ಸೊಪ್ಪು ಎಂದು ಹೇಳಬಹುದು. ಇದನ್ನು ಹಿಂದಿನಿಂದಲೂ ಆಹಾರ ಕ್ರಮ ಹಾಗೂ ಔಷಧಿಯಾಗಿ ಬಳಕೆ ಮಾಡಿಕೊಂಡು ಬರಲಾಗುತ್ತಿದೆ. ಇದರಲ್ಲಿ ಮನಸ್ಸಿಗೆ ಶಮನ ನೀಡುವಂತಹ ಗುಣಗಳು ಕೂಡ ಇವೆ ಎಂದು ಕಂಡುಕೊಳ್ಳಲಾಗಿದೆ. ಇಂದಿನ ಕೊರೊನಾ ಸಮಯದಲ್ಲಿ ಪ್ರತಿಯೊಬ್ಬರು ಮನೆಯಲ್ಲಿ ಕೂಡಿ ಹಾಕಲ್ಪಟ್ಟ ಪರಿಸ್ಥಿತಿಯಲ್ಲಿ ಇರುವ ಕಾರಣದಿಂದಾಗಿ ಮಾನಸಿಕ ಒತ್ತಡವು ಅತಿಯಾಗುತ್ತಿದೆ. ಮಾನಸಿಕ ಒತ್ತಡವು ಹೆಚ್ಚಾದರೆ ಅದು ಇನ್ನಿತರ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುವುದು.

ಈ ಕಾರಣ ಮಾನಸಿಕ ಒತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಅತೀ ಅಗತ್ಯ. ಮಾನಸಿಕ ಒತ್ತಡವನ್ನು ನಿಯಂತ್ರಿಸಲು ಆಯುರ್ವೇದದಲ್ಲಿ ಬ್ರಾಹ್ಮಿಯನ್ನು ಬಳಸಲಾಗಿದೆ. ಬ್ರಾಹ್ಮಿ ತುಂಬಾ ಪರಿಣಾಮಕಾರಿ ಔಷಧಿಯಾಗಿದ್ದು, ಇದು ಚಿಕಿತ್ಸಕ ಗುಣವನ್ನು ಹೊಂದಿದೆ ಹಾಗೂ ಮನಸ್ಸಿಗೆ ಕೂಡ ಶಮನ ನೀಡುವುದು. ಇದು ನಮ್ಮ ನರವ್ಯವಸ್ಥೆಯನ್ನು ಸುಧಾರಣೆ ಮಾಡಿಕೊಂಡು ಮೆದುಳಿನ ಕಾರ್ಯವನ್ನು ಉತ್ತಮಪಡಿಸುವುದು. ಬ್ರಾಹ್ಮಿ ಅಥವಾ ಒಂದೆಲಗದ ಎಲೆಗಳನ್ನು ತಿನ್ನುವುದರಿಂದ ನಮಗೆ ಸಿಗುವ ಆರೋಗ್ಯಕರ ಲಾಭಗಳ ಬಗ್ಗೆ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಸಸ್ಯ ಶಾಸ್ತ್ರದ ಪ್ರಕಾರ, ಒಂದೆಲಗ ಅಥವಾ ಬ್ರಾಹ್ಮೀ ಎಲೆಯು ಸರಸ್ವತಿಯ ಔಷಧೀಯ ಆಹಾರವಾಗಿಯೂ ಉಪಯೋಗಕ್ಕೆ ಬರುವ ಒಂದು ಸಸ್ಯ. ಒಂದೆಲಗ ಇದರ ಹೆಸರು ಸೂಚಿಸುವ ಹಾಗೆ ಒಂದೇ ಎಲೆಯನ್ನು ಇದು ಹೊಂದಿರುತ್ತದೆ. ನೆಲದಿಂದ ನೀರಿನ ನೆಲೆ ಇರುವಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಈ ಗಿಡದ ಕಾಂಡವೂ ನೆಲದ ಮೇಲೆ ಬಳ್ಳಿಯಂತೆ ಹರಡಿಕೊಂಡಿದ್ದು, ಮೂರು ನಾಲ್ಕು ಅಂಗುಲದಷ್ಟು ಎತ್ತರ ಬೆಳೆಯುತ್ತದೆ. ಎಲೆಗಳು ಹಸಿರಾಗಿ ಇರುತ್ತವೆ. ಏಷ್ಯಾ ಒಂದೆಲಗ ಸಸ್ಯದ ಮೂಲ ಸ್ಥಾನವಾಗಿದ್ದು ಚೀನಾ ಹಾಗೂ ಆಫ್ರಿಕಾ ಗಳಲ್ಲಿ ಕೂಡಾ ಔಷಧೀಯ ಸಸ್ಯವಾಗಿ ಬಳಕೆ ಮಾಡಲಾಗುತ್ತದೆ.

ಪ್ರಾಚೀನ ಕಾಲದಿಂದಲೂ ಔಷಧೀಯ ಸಸ್ಯವೆಂದು ಗುರುತಿಸಿಕೊಂಡ ಈ ಸಸ್ಯದ ಎಲ್ಲಾ ಭಾಗಗಳೂ ಪ್ರಯೋಜನಕ್ಕೆ ಬರುತ್ತದೆ. ಇದರ ವಿಶಿಷ್ಟ ರಾಸಾಯನಿಕ ಗುಣಗಳು ಬೇಕೊಸೈಡ್ ಎ ಮತ್ತು ಬೀ ರಾಸಾಯನಿಕಗಳು ನಮ್ಮ ಮೆದುಳಿನ ನೆನಪಿನ ಶಕ್ತಿಗೆ ಸಂಬಂಧಿಸಿದ ಜೀವಕೋಶಗಳಿಗೆ ಆಧಾರವಾಗಿದ್ದು ನರಗಳಿಗೆ ದಿವ್ಯ ಔಷಧಿಯ ಹಾಗೆ ಕೆಲಸ ಮಾಡುತ್ತದೆ ಎಂದು ಆಯುರ್ವೇದದಲ್ಲಿ ಉಲ್ಲೇಖವಿದೆ. ಸುಮಾರು ಎರಡು ಸಾವಿರ ವರ್ಷಕ್ಕೂ ಮೊದಲೇ ಇದನ್ನು ಔಷಧಿಯಾಗಿ ಬಳಕೆ ಮಾಡಲಾಗುತ್ತಿತ್ತು ಎಂದು ಆಯುರ್ವೇದದಲ್ಲಿ ಹಾಗೂ ವೇದಗಳಲ್ಲಿ ಉಲ್ಲೇಖವಿದೆ. ಇದರ ಕುರಿತಾಗಿ ಹಿಂದಿನ ಕಾಲದ ಋಷಿ ಮುನಿಗಳು ಸಹ ಪ್ರಸ್ತಾಪಿಸಿದ್ದಾರೆ.

ಋಷಿ ಮುನಿಗಳ ಪ್ರಕಾರ ಈ ಒಂದೆಲಗ ಅಥ್ವಾ ಬ್ರಾಹ್ಮೀ ಗಿಡದಲ್ಲಿ ಇರುವ ಔಷಧೀಯ ಗುಣಗಳು ಎಂದರೆ, ಇದು ನಮ್ಮ ನೆನಪಿನ ಶಕ್ತಿಯನ್ನು ಹೆಚ್ಚಿಸುವ ಗುಣವನ್ನು ಹೊಂದಿದೆ. ನಮ್ಮ ಆಯಸ್ಸನ್ನು ಸಹ ವೃದ್ಧಿಸುತ್ತದೆ. ಬೌತಿಕ ಸಾಮರ್ಥ್ಯ , ಸ್ವರ ಮತ್ತು ದೇಹದ ಕಾಂತಿಯನ್ನು ವೃದ್ಧಿಸುವ ಗುಣವನ್ನು ಇದು ಹೊಂದಿದೆ. ನಮ್ಮ ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಇದನ್ನು ಪ್ರತೀ ದಿನ ಒಂದೆಲಗದ ಎರಡು ತಾಜಾ ಎಲೆಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಇದರಿಂದ ಮೆದುಳಿಗೆ ಸಂಬಂಧಿಸಿದ ಅದೆಷ್ಟೋ ಕಾಯಿಲೆಗಳು ಸಹ ಮಾಯವಾಗುತ್ತವೆ. ಮಕ್ಕಳಿಗೆ ಇದನ್ನು ನೀಡಲು ಒಂದೆಲಗದ ಎಲೆಗಳನ್ನು ಒಣಗಿಸಿ ಪುಡಿ ಮಾಡಿ ಇಟ್ಟುಕೊಳ್ಳಬೇಕು.

ಇದರ ಜೊತೆಗೆ ಹುರಿದ ಬಾದಾಮಿ ಪುಡಿ, ಏಲಕ್ಕಿ ಪುಡಿ ಸೇರಿಸಿ ಒಂದು ಲೋಟ ಹಾಲಿಗೆ ಎರಡು ಚಮಚ ಈ ಮಿಶ್ರಣದ ಪುಡಿಯನ್ನು ಸೇರಿಸಿ ಕಲ್ಲುಸಕ್ಕರೆ ಸೇರಿಸಿ ನೀಡಬೇಕು. ತಂಪಾದ ಹಾಲು ಆಗಿದ್ದರೆ ಕಲ್ಲು ಸಕ್ಕರೆಯ ಬದಲು ಜೇನುತುಪ್ಪವನ್ನು ಸೇರಿಸಬಹುದು. ಪ್ರತೀ ದಿನ ಬೆಳಿಗ್ಗೆ ಮಕ್ಕಳಿಗೆ ಹಾಲಿನಲ್ಲಿ ಹೀಗೇ ಮಿಶ್ರಣ ಮಾಡಿ ಕೊಡುವುದರಿಂದ ಮಕ್ಕಳ ಆರೋಗ್ಯ ವೃದ್ಧಿ ಆಗುತ್ತದೆ. ಇನ್ನೂ ಮಲಬದ್ಧತೆ ಇರುವವರು ಇದರ ಪಲ್ಯ ಅಥವಾ ಚಟ್ನಿ ಮಾಡಿ ಸೇವಿಸಬೇಕು. ಬೇಸಿಗೆಯಲ್ಲಿ ದೇಹವನ್ನು ತಂಪಾಗಿ ಇಡಲು ಊಟದಲ್ಲಿ ಒಂದೆಲಗದ ಚಟ್ನಿ ಅಥವಾ ತಂಬುಳಿ ಬಳಕೆ ಮಾಡುವುದು ಉತ್ತಮ.

ಇಷ್ಟೇ ಅಲ್ಲದೆ ಇನ್ನೂ ಕೆಲವು ಪ್ರಯೋಜನಗಳು ಇವೆ. ಅವುಗಳಲ್ಲಿ , ಇಂದಿನ ದಿನಗಳಲ್ಲಿ ಹೆಚ್ಚಿನ ಜನರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಯೆಂದರೆ ಒತ್ತಡ ಹಾಗೂ ಆತಂಕ. ಕೊರೊನಾ ಸಾಂಕ್ರಾಮಿಕ ಅಥವಾ ಲಾಕ್ ಡೌನ್ ನಿಂದಾಗಿ ಇದು ಹೆಚ್ಚಾಗಿದೆ. ಅಧ್ಯಯನಗಳು ಕೂಡ ಹೇಳಿರುವ ಪ್ರಕಾರ ಜನರಲ್ಲಿ ಒತ್ತಡ ಹಾಗೂ ಆತಂಕವು ತೀವ್ರವಾಗಿದೆ.

ಒಂದೆಲಗ ಅಥವಾ ಬ್ರಾಹ್ಮಿ ಎಲೆಗಳನ್ನು ತಿಂದರೆ ಅದರಿಂದ ಪರಿಹಾರವನ್ನು ಪಡೆದುಕೊಳ್ಳಬಹುದು. ಇದರಲ್ಲಿ ಒತ್ತಡ ನಿವಾರಕ ಹಾಗೂ ಖಿನ್ನತೆ ದೂರ ಮಾಡುವ ಲಕ್ಷಣಗಳು ಇವೆ. ಇದು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುವುದು. ವಯಸ್ಸಾದವರಲ್ಲಿ ಅಲ್ಝೈಮರ್ ಸಮಸ್ಯೆಯ ಅಪಾಯವು ಹೆಚ್ಚಾಗಿರುವುದು. ಇದೊಂದು ಗಂಭೀರ ಸಮಸ್ಯೆ ಮತ್ತು ಇದನ್ನು ನಿವಾರಣೆ ಮಾಡುವುದು ಅಸಾಧ್ಯ ಹಾಗೂ ವಯೋವೃದ್ಧರು ಇದರ ಅಪಾಯಕ್ಕೆ ಸಿಲುಕುವುದು ಹೆಚ್ಚು.

ಇವರು ಕೇವಲ ನೆನಪು ಶಕ್ತಿ ಕಳೆದುಕೊಳ್ಳುವುದು ಮಾತ್ರವಲ್ಲದೆ, ಖಿನ್ನತೆ ಹಾಗೂ ಭ್ರಮೆಯಂತಹ ಸಮಸ್ಯೆಗೆ ಒಳಗಾಗುವರು. ಇದನ್ನು ನಿಭಾಯಿಸುವುದು ತುಂಬಾ ಕಷ್ಟ.ನಿಮ್ಮೊಂದಿಗೆ ವಯೋವೃದ್ಧರು ವಾಸಿಸುತ್ತಿದ್ದರೆ ಆಗ ಅವರಿಗೆ ಇಂತಹ ಸಮಸ್ಯೆಗಳ ಅಪಾಯ ಕಡಿಮೆ ಮಾಡಲು ಬಾಹ್ಮಿಯನ್ನು ಪ್ರತಿನಿತ್ಯವೂ ನೀಡಿ. ಮಾನಸಿಕವಾಗಿ ಕುಗ್ಗುವುದು ಮತ್ತು ನೆನಪಿನ ಶಕ್ತಿ ಕುಂದುವುದನ್ನು ಬ್ರಾಹ್ಮಿ ನಿವಾರಿಸುವುದು ಎಂದು ಅಧ್ಯಯನಗಳು ಹೇಳಿವೆ.

ಆಘಾತ ಚಿಕಿತ್ಸೆಗೆ ಬ್ರಾಹ್ಮಿ ತುಂಬಾ ಸಹಕಾರಿ ಎಂದು ಹೇಳಲಾಗಿದೆ. ಅಧ್ಯಯನಗಳು ಹೇಳುವ ಪ್ರಕಾರ ಅಪಸ್ಮಾರದಂತಹ ಸಮಸ್ಯೆಗಳು ಇರುವವರಲ್ಲಿ ಬ್ರಾಹ್ಮಿಯು ಉರಿಯೂತ ನಿಯಂತ್ರಿಸುವುದು, ನರವ್ಯವಸ್ಥೆ ಸರಿಪಡಿಸಿ ಆಘಾತವನ್ನು ತಡೆಯುವುದು. ಅಪಸ್ಮಾರವು ಯಾವಾಗ ಬೇಕಾದರೂ ಬರಬಹುದಾಗಿರುವ ಕಾರಣದಿಂದಾಗಿ ಅದು ಪ್ರಾಣಹಾನಿ ಉಂಟು ಮಾಡುವ ಬದಲು ಅದಕ್ಕೆ ನೈಸರ್ಗಿಕದತ್ತವಾದ ಆಯುರ್ವೇದಿಕ್ ಗಿಡಮೂಲಿಕೆಯನ್ನು ಸೇವನೆ ಮಾಡುವುದು ತುಂಬಾ ಒಳ್ಳೆಯದು.

ಯಾವುದೇ ಒತ್ತಡ ಹಾಗೂ ಚಿಂತೆಯು ಇಲ್ಲದೆ ಇರುವಂತಹ ಶಾಂತ ಹಾಗೂ ಆರಾಮ ಮನಸ್ಥಿತಿಯು ಸಿಗಬೇಕು ಎಂದು ನಾವೆಲ್ಲರೂ ಬಯಸುತ್ತೇವೆ. ಬ್ರಾಹ್ಮಿಯು ನರ ವ್ಯವಸ್ಥೆಯನ್ನು ಶಾಂತವಾಗಿಟ್ಟು, ಆರಾಮ ನೀಡುವುದು ಹಾಗೂ ಆಮ್ಲಜನಕವನ್ನು ಉತ್ತಮಪಡಿಸುವುದು. ದಿನಿವಿಡೀ ದಣಿದಿದ್ದರೂ ಅದರ ಪ್ರಭಾವವು ತಿಳಿದುಬರದು. ಹೃದಯದ ಮತ್ತು ಶ್ವಾಸಕೋಶದ ಆರೋಗ್ಯವನ್ನು ಇದು ಕಾಪಾಡುವುದು.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *