ಬಾಳೆಹಣ್ಣು ಪೌಷ್ಟಿಕಾಂಶ ಭರಿತವಾದ ಹಣ್ಣಾಗಿದೆ ಇದನ್ನು ಯಾವ ವೇಳೆಯಲ್ಲಿ ಆದ್ರೂ ಕೂಡ ಸೇವನೆ ಮಾಡಬಹುದಾಗಿದೆ. ಕೆಲವರು ಹಸಿವು ಆದಾಗ ಇನ್ನು ಕೆಳವರು ಊಟದ ನಂತರ ಹಾಗೂ ಬೆಳಗ್ಗೆ ಸಮಯದಲ್ಲಿ ಸೇವನೆ ಮಾಡುವಂತ ಅಭ್ಯಾಸ ಕೆಲವರಿಗೆ ಇದ್ದೆ ಇರುತ್ತದೆ. ಆದ್ರೆ ಯಾವ ಸಮಯದಲ್ಲಿ ಸೇವನೆ ಮಾಡಿದರು ಕೂಡ ಉತ್ತಮ ಆರೋಗ್ಯವನ್ನು ಈ ಹಣ್ಣಿನಿಂದ ಪಡೆದುಕೊಳ್ಳಬಹುದಾಗಿದೆ.

ಆರೋಗ್ಯಕ್ಕೆ ಬಾಳೆಹಣ್ಣಿನಿಂದ ಏನು ಕೊಡುಗೆ ಇದೆ ಅನ್ನೋದನ್ನ ನೋಡುವುದಾದರೆ ಇದರಲ್ಲಿ ವಿಟಮಿನ್ ಎ ಅಂಶವಿದೆ ಇದರಿಂದ ಕಣ್ಣಿನ ದೃಷ್ಟಿಗೆ ಪೂರಕವಾಗಿದೆ, ಅಷ್ಟೇ ಅಲ್ದೆ ರಾತ್ರಿ ಕುರುಡು ಸಮಸ್ಯೆ ಇರೋರು ಪ್ರತಿದಿನ ಬಾಳೆಹಣ್ಣು ಸೇವನೆ ಮಾಡುವ ರೂಡಿ ಇದ್ರೆ ಉತ್ತಮ. ಇನ್ನು ಮಲಬದ್ಧತೆ ಸಮಸ್ಯೆ ಇರೋರು ಊಟದ ನಂತರ ಬಾಳೆಹಣ್ಣು ಸೇವನೆ ಮಾಡುವ ಅಭ್ಯಾಸ ಇದ್ರೆ ಉತ್ತಮ ಅನ್ನೋದನ್ನ ಹೇಳಲಾಗುವುದು ಯಾಕೆಂದರೆ ಮಲಬದ್ಧತೆ ಇರೋರಿಗೆ ಇದರ ಸೇವನೆಯಿಂದ ಜೀರ್ಣಕ್ರಿಯೆ ಉತ್ತಮ ರೀತಿಯಲ್ಲಿ ನಡೆಯುತ್ತದೆ ಹಾಗೂ ಮಲ ವಿಸರ್ಜನೆ ವೇಳೆ ರಕ್ತಸ್ರಾವ ಆಗೋದಿಲ್ಲ ಉತ್ತಮ ರೀತಿಯಲ್ಲಿ ಯಾವುದೇ ತೊಂದರೆಯಿಲ್ಲದೆ ಸರಾಗವಾಗಿ ಆಗುವುದು.

ಇನ್ನು ಮಹಿಳೆಯರಲ್ಲಿ ಕಾಡುವಂತ ಕೆಲವು ಸಮಸ್ಯೆಗಳು ಅಂದರೆ ಬಿಳಿ ಸೆರಗು ಅಥವಾ ಅತಿ ರಕ್ತಸ್ರಾವ ಆಗುವಂತ ಸಮಸ್ಯೆಗಳಿಗೆ ಕಡಿವಾಣ ಹಾಕುತ್ತದೆ ಈ ಬಾಳೆಹಣ್ಣು ಹೇಗೆ ಅನ್ನೋದಾದರೆ ನೆಲ್ಲಿಕಾಯಿ ರಸದೊಂದಿಗೆ ಜೇನುತುಪ್ಪವನ್ನು ಬೆರಸಿ ಸೇವಿಸುವುದರಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ. ಹೀಗೆ ಹತ್ತಾರು ಪ್ರಯೋಜನಗಳನ್ನು ಬಾಳೆಹಣ್ಣಿನಿಂದ ಪಡೆದುಕೊಳ್ಳಬಹುದಾಗಿದೆ, ಇಂತಹ ಸಮಸ್ಯೆಗಳು ಏನಾದ್ರು ನಿಮ್ಮ ಆತ್ಮೀಯರಿಗೆ ಇದ್ರೆ ಇದನ್ನು ಹಂಚಿಕೊಳ್ಳಿ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ.

Leave a Reply

Your email address will not be published. Required fields are marked *