ದೇಹದಲ್ಲಿ ಸ್ವಲ್ಪ ಏನಾದ್ರು ವ್ಯತ್ಯಾಸ ಆದ್ರೆ ಅನಾರೋಗ್ಯ ಸಮಸ್ಯೆ ಕಾಡುತ್ತದೆ ಹಾಗಾಗಿ ದೇಹದ ಸ್ಥಿತಿ ವಟನಾರಣಕ್ಕೆ ತಕ್ಕಂತೆ ಹೊಂದಿಕೊಳ್ಳಬೇಕೆಳು ಒಂದು ವೇಳೆ ಹೊಂದಿಕೊಳ್ಳದಿದ್ದರೆ ಸಾಮಾನ್ಯ ಸಮಸ್ಯೆಗಳು ದೈಹಿಕವಾಗಿ ಉಂಟಾಗುತ್ತದೆ. ಈ ಬಿಸಿಗೆಯಲ್ಲಿ ದೇಹವನ್ನು ತಂಪು ಮಾಡಿಕೊಳ್ಳಲು ಹಲವು ಹಣ್ಣು ಹಂಪಲುಗಳನ್ನು ತಿನ್ನುತ್ತೇವೆ ಹಾಗು ಮನೆಯಲ್ಲಿಯೇ ಒಂದಿಷ್ಟು ಮನೆಮದ್ದುಗಳನ್ನು ತಯಾರಿಸಿ ದೇಹವನ್ನು ತಂಪು ಮಾಡಿಕೊಳ್ಳಲು ಬಯಸುತ್ತವೆ. ಆದ್ರೆ ಬೇಸಿಗೆಯಲ್ಲಿ ಎಳನೀರು ಮಜ್ಜಿಗೆ ಮೊಸರು ಕಲ್ಲಂಗಡಿ ಇಂತಹ ಆಹಾರಗಳನ್ನು ಸೇವಿಸುವುದರಿಂದ ದೇಹಕ್ಕೆ ತಂಪು ಪಡೆಯಬಹುದು ಜೊತೆಗೆ ಈ ಬಾಳೆಹಣ್ಣು ಹಾಗೂ ಖರ್ಜುರದ ಮಿಲ್ಕ್ ಶೇಕ್ ಕೂಡ ದೇಹಕ್ಕೆ ಪ್ರೊಟೀನ್ ನೀಡುವದರ ಜೊತೆಗೆ ದೇಹಕ್ಕೆ ತಂಪು ನೀಡಲು ಹೆಚ್ಚು ಸಹಕಾರಿ ಇದನ್ನು ಹೇಗೆ ತಯಾರಿಸೋದು ಅನ್ನೋದನ್ನ ಮುಂದೆ ನೋಡಿ.

ಕಾರ್ಜುರ್ರ ಹಾಗೂ ಬಾಳೆಹಣ್ಣಿನ ಮಿಲ್ಕ್ ಶೇಕ್ ತಯಾರಿಸಲು ಬೇಕಾಗುವ ಪದಾರ್ಥಗಳು ಮೊದಲು ಖರ್ಜೂರ 10 ಬಾಳೆಹಣ್ಣು 2 ಸಕ್ಕರೆ ನಾಲ್ಕು ಟೀ ಚಮಚ ಐಸ್‌ಕ್ಯೂಬ್ ಸ್ವಲ್ಪ, ಗಟ್ಟಿ ಹಾಲು ಅರ್ಧ ಲೀಟರ್ ಇಷ್ಟು ಪದಾರ್ಥಗಳು ಬೇಕಾಗುತ್ತದೆ ಇನ್ನು ಇದನ್ನು ಹೇಗೆ ತಯಾರಿಸೋದು ಅನ್ನೋದನ್ನ ನೋಡುವುದಾದರೆ ಮೊದಲನೆಯದಾಗಿ ಮಿಕ್ಸಿಯಲ್ಲಿ ಬೀಜ ತೆಗೆದ ಖರ್ಜೂರ, ಸಕ್ಕರೆ ಮತ್ತು ಹಾಲನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ಅದಕ್ಕೆ ಬಾಳೆಹಣ್ಣನ್ನು ಸೇರಿಸಿ ಮತ್ತು ಐಸ್‌ಕ್ಯೂಬ್ ಅನ್ನು ಸೇರಿಸಿ ಸ್ವಲ್ಪ ನುಣ್ಣಗಾಗಿಸಿಕೊಳ್ಳಬೇಕು ಅದನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಇಷ್ಟೆಲ್ಲ ಆದಮೇಲೆ ಒಂದು ಗ್ಲಾಸ್ ನಲ್ಲಿ ಹಾಕಿ ಸೇವಿಸಲು ಕೊಡಬೇಕು.

ನೀವು ಬಯಸಿದ ಬಾಳೆಹಣ್ಣು ಹಾಗೂ ಖರ್ಜುರದ ಮಿಲ್ಕ್ ಶೇಕ್ ದೇಹಕ್ಕೆ ಉತ್ತಮ ಆರೋಗ್ಯವನ್ನು ವೃದ್ಧಿಸುವುದರ ಜೊತೆಗೆ ದೇಹಕ್ಕೆ ಪ್ರೊಟೀನ್ ಅಂಶವನ್ನು ಒದಗಿಸುತ್ತದೆ ಬಾಳೆಹಣ್ಣು ಹಾಗೂ ಖರ್ಜುರ ಎರಡು ಕೂಡ ತನ್ನದೆಯಾದ ವಿಶೇಷತೆ ಹಾಗೂ ಮಹತ್ವವನ್ನು ಹೊಂದಿದೆ. ಆರೋಗ್ಯದ ದೃಷ್ಟಿಯಿಂದ ಇದನ್ನು ಮನೆಯಲ್ಲೇ ಅತಿ ಸುಲಭವಾಗಿ ಮಾಡಿ ಸವಿಯಿರಿ.

Leave a Reply

Your email address will not be published. Required fields are marked *