Ultimate magazine theme for WordPress.

SC ಹಾಗೂ ST ಉದ್ಯಮಿಗಳಿಗೆ 1 ಕೋಟಿವರೆಗೂ ಸಾಲ ಪಡೆಯಲು ಬಡ್ಡಿದರ ಸಹಾಯಧನ ಯೋಜನೆಯಲ್ಲಿ ಅವಕಾಶ ಆಸಕ್ತರು ಅರ್ಜಿ ಸಲ್ಲಿಸಿ

0 2

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರು ತಮ್ಮನ್ನು ತಾವು ಬೆಳವಣಿಗೆ ಮಾಡಿಕೊಳ್ಳಲು ಸರ್ಕಾರ ಅನೇಕ ಯೋಜನೆ, ಪ್ರೋಗ್ರಾಂಗಳನ್ನು ಜಾರಿಗೆ ತಂದಿದೆ. ಅದರಂತೆ ಕಡಿಮೆ ಬಡ್ಡಿದರ ಯೋಜನೆಯ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.

ಕರ್ನಾಟಕದಲ್ಲಿ ಬಡ್ಡಿದರ ಸಹಾಯಧನ ಯೋಜನೆಯಲ್ಲಿ ಹಲವಾರು ಜನರಿಗೆ ಗರಿಷ್ಠ ಒಂದು ಕೋಟಿ ಹಣದ ಸಹಾಯಧನವನ್ನು ನೀಡಬೇಕು ಎಂದು ಹೊಸ ಕಾರ್ಯಕ್ರಮವನ್ನು ಜಾರಿಗೆ ತರಲಾಯಿತು. ಈ ಹಣವನ್ನು ಉದ್ಯೋಗಕ್ಕಾಗಿ ಬಳಸಿಕೊಳ್ಳಬಹುದು ಅದರೊಂದಿಗೆ ವ್ಯಾಪಾರಿಗಳ ಚಟುವಟಿಕೆಗಳಿಗೆ ಅಥವಾ ಕೃಷಿ ಪ್ರಾಂಚೈಸಿ ಸ್ಥಾಪನೆಗೆ ಹಣವನ್ನು ಬಳಸಿಕೊಳ್ಳಬಹುದು.

ಎಸ್ಸಿ, ಎಸ್ಟಿ ಉದ್ಯಮಿಗಳಿಗೆ ಸಾಲ ಪಡೆಯಲು ಅವಕಾಶವಿದೆ. 2021-22 ನೇ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿಗಳಿಗಾಗಿ ಜಾರಿಯಲ್ಲಿರುವ 4 ಶೇಕಡರಷ್ಟು ಬಡ್ಡಿ ಸಹಾಯಧನ ಯೋಜನೆಯು ವಾಣಿಜ್ಯ ಮತ್ತು ವ್ಯಾಪಾರ ಚಟುವಟಿಕೆಗಳ ಮಳಿಗೆ ಡೀಲರ್‌ಶಿಪ್ ಫ್ರಾಂಚೈಸಿ ಮತ್ತು ಹೋಟೆಲ್ ಉದ್ಯಮಗಳನ್ನು ಪ್ರಾರಂಭಿಸಲು ಸಹ ವಿಸ್ತರಿಸಲಾಗಿದೆ.

ಈ ಯೋಜನೆಯಡಿ ಗರಿಷ್ಠ 1 ಕೋಟಿ ರೂಪಾಯಿ ಶೆಡ್ಯೂಲ್ಡ್ ಬ್ಯಾಂಕ್ ಗಳಿಂದ ಸಾಲ ಪಡೆಯಲು ಅವಕಾಶ ಕಲ್ಪಿಸಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿಗಳು ಸದರಿ ಯೋಜನೆಯ ಸದುಪಯೋಗ ಪಡದುಕೊಳ್ಳಲು ಯಾದಗಿರಿ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಅಲ್ಲದೆ ಹೆಚ್ಚಿನ ಮಾಹಿತಿಗಾಗಿ ಯಾದಗಿರಿ ಸಮಾಜ ಕಲ್ಯಾಣ ಇಲಾಖೆ , ಸಹಾಯಕ ನಿರ್ದೇಶಕರು ದೂರವಾಣಿ ಸಂಖ್ಯೆ  08473-251530 ಶಹಾಪೂರ ಸಹಾಯಕ ನಿರ್ದೇಶಕರು ದೂರವಾಣಿ ಸಂಖ್ಯೆ 08479-240245 , ಸುರಪುರ ಸಹಾಯಕ ನಿರ್ದೇಶಕರು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ದೂರವಾಣಿ ಸಂಖ್ಯೆ 08443-258762 ಸಂಪರ್ಕಿಸಬಹುದು.

ಮೇಲ್ಕಾಣಿಸಿದ ವಿಷಯದಂತೆ ಮತ್ತು ಅರ್ಹರಾಗಿರುವವರು ನೀಡಿರುವ ಆಸಕ್ತಿಯ ದೂರವಾಣಿ ಸಂಖ್ಯೆಗಳಿಗೆ ಫೋನ್ ಮಾಡುವ ಮೂಲಕ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಕೇಳಿ ಸರಿಯಾಗಿ ದಾಖಲೆಗಳನ್ನು ಸಲ್ಲಿಸಿ ಗರಿಷ್ಠ ಒಂದು ಕೋಟಿಯಷ್ಟು ಸಹಾಯಧನವನ್ನು ಪಡೆದುಕೊಳ್ಳಬಹುದು.

ಈ ಸಹಾಯಧನ ಶೇಕಡಾ 4 ರ ಬಡ್ಡಿದರದಲ್ಲಿ ಇರುತ್ತದೆ. ಹೀಗಾಗಿ ನೀವು ಉತ್ತಮ ಕೆಲಸಕ್ಕಾಗಿ ಪ್ರಮುಖವಾಗಿ ಕೃಷಿ ಪ್ರಾಂಚೈಸಿ ಮಾಡುವುದಕ್ಕೆ ಬಳಸಿದರೆ ತುಂಬಾ ಅನುಕೂಲವಾಗುತ್ತದೆ ಹಾಗೂ ಲಾಭವಾಗುತ್ತದೆ. ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಿಳಿಸುವ ಅಗತ್ಯವಿದೆ ಹಾಗೂ ಎಲ್ಲರೂ ಸರ್ಕಾರದ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು.

Leave A Reply

Your email address will not be published.