ನಮ್ಮ ಆಹಾರ ಶೈಲಿ ನಮ್ಮ ಆರೋಗ್ಯವನ್ನು ಸುಧಾರಿಸುತ್ತೆ, ಹೌದು ನಾವುಗಳು ತಿನ್ನುವಂತ ಆಹಾರ ನಮ್ಮ ಆರೋಗ್ಯವನ್ನು ವೃದ್ಧಿಸುತ್ತೆ ಆದ್ದರಿಂದ ಉತ್ತಮ ಪೋಷಕಾಂಶಗಳನ್ನು ಹೊಂದಿರುವಂತ ಆಹಾರಗಳನ್ನು ತಿನ್ನೋದ್ರಿಂದ ಒಳ್ಳೆಯ ಆರೋಗ್ಯವನ್ನು ಪಡೆಯಬಹುದಾಗಿದೆ. ಈ ಲೇಖನದ ಮೂಲಕ ನಾವು ಬದನೆಕಾಯಿಯಿಂದ ಸಿಗುವ ಆರೋಗ್ಯದ ವಿಚಾರವನ್ನು ತಿಳಿದುಕೊಳ್ಳೋಣ ಬನ್ನಿ.

ಹೆಚ್ಚು ಬೆವರು ಬರುವ ಸಮಸ್ಯೆ ಏನಾದ್ರು ಇದ್ರೆ ಬದನೇಕಾಯಿ ನಿವಾರಣೆ ಮಾಡಬಲ್ಲದು ಹೇಗೆ ಅನ್ನೋದನ್ನ ನೋಡುವುದಾದರೆ, ಕೆಲವರಿಗೆ ಕೈಗಳಲ್ಲಿ ಹೆಚ್ಚು ಬೆವರು ಬರುತ್ತಿರುತ್ತದೆ. ಇಂತಹ ಸಮಸ್ಯೆಗೆ ಬದನೇಕಾಯಿ ನೆನೆಸಿದ ನೀರನ್ನು ಬಳಸಿ ಕೈಗಳನ್ನು ತೊಳೆದರೆ ಹೆಚ್ಚು ಬೆವರು ಬರುವ ಸಮಸ್ಯೆ ಇರೋದಿಲ್ಲ.

ವಿಜ್ಞಾನಿಗಳ ಪ್ರಕಾರ ನೀಲಿ ಬಣ ಹೊಂದಿರುವಂತ ಬದನೇಕಾಯಿ ಹೆಚ್ಚು ಆರೋಗ್ಯಕಾರಿ ಅನ್ನೋದನ್ನ ಹೇಳಲಾಗುತ್ತದೆ ಯಾಕೆಂದರೆ ನೀಲಿ ಬಣ್ಣದ ಬದನೇಕಾಯಿ ಸೂರ್ಯನ ಕಿರಣಗಳನ್ನು ಹೆಚ್ಚು ಇರಿಕೊಂಡಿರುತ್ತವೆ ಆದ್ದರಿಂದ ಈ ಬದನೇಕಾಯಿ ಪೋಷಕಾಂಶಗಳನ್ನು ಹೆಚ್ಚಾಗಿ ಹೊಂದಿರುತ್ತದೆ ಅನ್ನೋದನ್ನ ಹೇಳಲಾಗತ್ತದೆ. ಇವು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ನೂರು ಗ್ರಾಂ ಬದನೆಕಾಯಿಯಲ್ಲಿ 24 ಕ್ಯಾಲರಿ ಮಾತ್ರ ಇರುವುದರಿಂದ ದೇಹದ ತೂಕ ಹೆಚ್ಚಾಗುವುದಿಲ್ಲ.

ಅಷ್ಟೇ ಅಲ್ದೆ ಬದನೆಕಾಯಿಯಲ್ಲಿ ಆಟೋ ಸಯನಿನ್ ಎಂಬ ಪದಾರ್ಥ ನಿಶಕ್ತಿಯನ್ನು ದೂರ ಮಾಡಿ ಉತ್ಸಾಹ ತುಂಬುತ್ತದೆ. ಬದನೆಕಾಯಿ ಇಂದ ಕ್ಯಾನ್ಸರ್ ಅನ್ನು ನಿಯಂತ್ರಣಕ್ಕೆ ಬರುತ್ತದೆ. ಬದನೆಕಾಯಿಯಲ್ಲಿನ ನೀರು, ಪೊಟಾಷಿಯಂ ರಕ್ತದಲ್ಲಿ ಸೇರಿ ಕೊಬ್ಬುನ್ನು ಕಡಿಮೆ ಮಾಡುತ್ತದೆ. ಜೊತೆಗೆ ಇದು ಹಸಿವನ್ನು ನಿಯಂತ್ರಿಸಿ ತೂಕ ಹೆಚ್ಚಾಗದಂತೆ ತಡೆಯುತ್ತದೆ.

ಇನ್ನು ಊಟದಲ್ಲಿ ಅಂದರೆ ಅಡುಗೆಯಲ್ಲಿ ಬದನೆಕಾಯಿಯನ್ನು ಬಳಸಿ ತಿನ್ನೋದ್ರಿಂದ ಕಣ್ಣಿನ ಸಮಸ್ಯೆಗಳು ನಿವಾರಣೆಯಾಗುತ್ತದೆ ಹಾಗೂ ಕಣ್ಣಿನ ಆರೋಗ್ಯಕ್ಕೂ ಇದು ಉಪಯೋಗಕಾರಿ. ಒಟ್ಟಾರೆಯಾಗಿ ಬದನೆಕಾಯಿಯನ್ನು ವೈದ್ಯರ ಮೇರೆಗೆ ಅಂದರೆ ಕೆಲವರಿಗೆ ಬದನೇಕಾಯಿ ಅಲರ್ಜಿಯಾಗಬಹುದು ಅದನ್ನು ವೈದ್ಯರ ಸಲಹೆ ಪಡೆದು ಅಡುಗೆಗಳಲ್ಲಿ ಬಳಸಿ ತಿನ್ನುವುದು ಉತ್ತಮ.
ವಾರದಲ್ಲಿ ಇದನ್ನು ಎರಡು ಬಾರಿಯಾದ್ರು ತಿನ್ನೋದ್ರಿಂದ ದೇಹಕ್ಕೆ ಇದರ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. ಹೀಗೆ ಬದನೇಕಾಯಿ ಹತ್ತಾರು ಆರೋಗ್ಯಕಾರಿ ಗುಣಗಳನ್ನು ಹೊಂದಿದೆ

Leave a Reply

Your email address will not be published. Required fields are marked *