ಇಂದಿನ ದಿನಗಳಲ್ಲಿ ಮಕ್ಕಳ ಅರೋಗ್ಯ ಹಾಳಾಗುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ, ಚಿಕ್ಕ ಮಕ್ಕಳಿಗೆ ಏನಾದರು ಸಮಸ್ಯೆ ಆದರೆ ಅದನ್ನ ಹೇಗೆ ಪರಿಹರಿಸುವುದು ಎಂಬ ಚಿಂತೆ ಶುರುವಾಗುತ್ತದೆ, ಮೊದಲು ನಾವು ಡಾಕ್ಟರ್ ಬಳಿ ಹೋಗುತ್ತೇವೆ, ಹೆಚ್ಚು ಹಣವನ್ನ ಖರ್ಚು ಮಾಡಿ ಔಷಧಿಗಳನ್ನ ತಂದು ಕುಡಿಸುತ್ತೇವೆ, ಆದರೆ ಇನ್ನು ಮುಂದೆ ಹೆಚ್ಚು ಡಾಕ್ಟರ್ ಬಳಿ ಹೋಗುವ ಅಗತ್ಯವಿಲ್ಲ ಸಣ್ಣ ಪುಟ್ಟ ಖಾಯಿಲೆಗಳಾದ ಶೀತ, ಕೆಮ್ಮು, ನೆಗಡಿಯಂತಹ ಸಮಸ್ಯೆಗಳಿಗೆ ಮನೆ ಮದ್ದನ್ನಾ ಬಳಸಿ, ಇದು ಆರೋಗ್ಯದ ದೃಷ್ಟಿಯಿಂದ ಬಹಳ ಉತ್ತಮ.
ಚಿಕ್ಕ ಮಕ್ಕಳಲ್ಲಿ ಕಂಡುಬರುವಂತಹ ಶೀತ ಕೆಮ್ಮು ಕಫದಂತಹ ಹಲವು ಸಮಸ್ಯೆಗಳಿಗೆ ನಾವಿಂದು ಮನೆ ಮದ್ದುಗಳನ್ನ ತಿಳಿಸಿಕೊಡುತ್ತೇವೆ, ಈ ಮನೆ ಔಷಧಿ ಬಳಸಿ ಮಕ್ಕಳಿಗೆ ಶೀತದಿಂದಾಗುವ ಸಮಸ್ಯೆಗಳಿಂದ ದೂರವಿಡಿ. ಇನ್ನೇನು ಚಳಿಗಾಲ ಇಂತಹ ಸಮಯದಲ್ಲಿ ಮಕ್ಕಳ ಆರೋಗ್ಯವನ್ನ ಕಾಪಾಡಿಕೊಳ್ಳುವುದು ಬಹಳ ಕಷ್ಟದ ಕೆಲಸ, ಈ ಕಷ್ಟದ ಕೆಲಸವನ್ನ ಸುಲಭ ಮಾಡಲು ಈ ಮನೆ ಮದ್ದು ಬಳಸಿಕೊಳ್ಳಿ, ಇದು ಹೆಚ್ಚು ಪ್ರಯೋನಕಾರಿಯಾಗಿದೆ, ಇದರಲ್ಲಿ ಯಾವುದೇ ಬಗೆಯ ಕೆಮಿಕಲ್ಸ್ ಇಲ್ಲ, ಇದು ಮಕ್ಕಳ ಆರೋಗ್ಯಕ್ಕೆ ತುಂಬಾ ಉತ್ತಮ.
ಮೊದಲಿಗೆ ಒಂದು ಚನ್ನಾಗಿ ತೊಳೆದ ವೀಳೇದೆಲೆಯನ್ನ ತೆಗೆದುಕೊಳ್ಳಿ, ಒಂದು ದೊಡ್ಡಪತ್ರೆ ಎಲೆ, ನಾಲ್ಕೈದು ಎಲೆ ಕಪ್ಪು ತುಳಸಿ ಎಲೆ, ಒಂದು ಎಸಳು ಜಜ್ಜಿದ ಬೆಳ್ಳುಳ್ಳಿ ಹಾಗೂ ಒಂದು ಜಜ್ಜಿದ ಕಾಳುಮೆಣಸು ಇದಕ್ಕೆ ಒಂದು ಚಿಟಿಕೆ ಉಪ್ಪನ್ನ ಹಾಕಿ, ಇವೆಲ್ಲವನ್ನ ವೀಳೇದೆಲೆಯಲ್ಲಿ ಹಾಕಿ ವೀಳೇದೆಲೆಯನ್ನ ಮಡಚಿ ಅದರಲ್ಲಿರುವ ಪದಾರ್ಥಗಳು ಹೊರಗೆ ಬರದಂತೆ ಮಡಚಿ ಅದನ್ನ ಒಂದು ಸ್ಪೋರ್ಕ್ ನ ಸಹಾಯದಿಂದ ಚುಚ್ಚಿ ನಂತರ ಗ್ಯಾಸ್ ಹಚ್ಚಿ ಸ್ಪೋರ್ಕ್ ಸಹಾಯದಿಂದ ವೀಳೇದೆಲೆಯನ್ನ ಬಿಸಿಮಾಡಿ ಹೆಚ್ಚು ಬಿಸಿಯಾಗುವುದು ಬೇಡ ಎಲೆ ಸ್ವಲ್ಪ ಕಪ್ಪು ಬಣ್ಣಕ್ಕೆ ತಿರುಗಿದರೆ ಸಾಕು, ನಂತರ ಅದು ಸ್ವಲ್ಪ ಪ್ರಮಾಣದಲ್ಲಿ ಬಿಸಿ ಇರುವಾಗಲೇ ಅದನ್ನ ಹಿಂಡಿ ರಸವನ್ನ ತೆಗೆಯಿರಿ ಆ ರಸವನ್ನ ಮಕ್ಕಳಿಗೆ ಕುಡಿಸುವದರಿಂದ ಮಕ್ಕಳ ಶೀತ ಕೆಮ್ಮು ನೆಗಡಿ ತಕ್ಷಣ ಕಡಿಮೆಯಾಗುತ್ತದೆ.