Ayurvedic Tips:ಕಾಡು ಕೊತ್ತಂಬರಿ ಸೊಪ್ಪು ಬಿಳುಪು ಸಮಸ್ಯೆಗೆ ರಾಮಬಾಣವಾಗಿ ಪರಿಣಮಿಸುತ್ತದೆ. ಗಿಡಮೂಲಿಕೆ ಹಾಗೂ ಆಯುರ್ವೇದಗಳು ಮಾನವನ ರೋಗಗಳನ್ನ ಗುಣಪಡಿಸುವಲ್ಲಿ ತುಂಬಾ ಮಹತ್ವದ ಪಾತ್ರವನ್ನು ವಹಿಸುತ್ತದೆ ಆಯುರ್ವೇದ (Ayurvedic Tips)ಹಾಗೂ ಗಿಡಮೂಲಿಕೆಯಿಂದ ಗುಣಮುಖವಾದಂತಹ ಉದಾಹರಣೆಗಳು ಸಹ ಬೇಕಷ್ಟಿದೆ. ಬಿಳುಪು ಕೇವಲ ಚರ್ಮರೋಗ ಅಷ್ಟೇ ಅಲ್ಲದೆ ಮಾನವನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ ಯಾಕೆಂದರೆ ಬಿಳುಪು ಕಾಣಿಸಿಕೊಂಡ ಜನರನ್ನ ಯಾರೂ ಕೂಡ ಹತ್ತಿರಕ್ಕೆ ಕರೆಸಿಕೊಳ್ಳುವುದಿಲ್ಲ. ಜನ ಅವರನ್ನ ನೋಡುವ ರೀತಿ ಕೂಡ ಬೇರೆಯಾಗಿರುತ್ತದೆ ಆದರೆ ಈ ಕಾಯಿಲೆ ಕೇವಲ ಒಂದು ಹಾರ್ಮೋನ್ ನ ಸಮಸ್ಯೆಯಿಂದ ಉಂಟಾಗುತ್ತದೆ.
ಈ ಕಾಯಿಲೆಯು ಸೌಂದರ್ಯವನ್ನು ಕುಂಟಿಸುವ ಕಾರಣ ಬಿಳುಪು ಹೊಂದಿರುವ ಜನ ಸಮಾಜದಲ್ಲಿ ಓಡಾಡಲು ಹಿಂಜರಿಯುತ್ತಾರೆ. ಇಂತಹ ಸಮಸ್ಯೆಗೆ ಇಂಗ್ಲಿಷ್ ಮೆಡಿಸಿನ್ ಗಳಿಂದ ಚಿಕಿತ್ಸೆ ಇದ್ದರೂ ಕೂಡ ಸಮಯವನ್ನು ತೆಗೆದುಕೊಳ್ಳುತ್ತವೆ ಕೆಲವೊಮ್ಮೆ ಇದನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಾಗದೇ ಇರಬಹುದು ಆಯುರ್ವೇದದಲ್ಲಿ ಪರೀಕ್ಷಿಸಿ ನೋಡಿದಾಗ ಇದಕ್ಕೂ ಸಹ ಪರಿಹಾರ ಇದೆ.
ಈ ರೀತಿಯ ಔಷಧಿ ಪಡೆಯಲು ರೋಗಿಯು ಪಥ್ಯ ಮಾಡಬೇಕಾಗುತ್ತದೆ ನಾಟಿ ಚಿಕಿತ್ಸೆ ತೆಗೆದುಕೊಳ್ಳುವ ಸಂದರ್ಭಗಳಲ್ಲಿ ಹಲವಾರು ಆಹಾರಗಳನ್ನ ತ್ಯಜಿಸಬೇಕಾಗುತ್ತದೆ ಉದಾಹರಣೆಗೆ ಟೀ ಕಾಫಿ ಬಿಡಬೇಕಾಗುತ್ತದೆ ಅಷ್ಟೇ ಅಲ್ಲದೆ ಧೂಮಪಾನ ಹಾಗೂ ಮಧ್ಯಪಾನವನ್ನು ಮಾಡುವ ಹವ್ಯಾಸ ಉಳ್ಳವರು ಸಹ ಅವುಗಳನ್ನ ತ್ಯಜಿಸಬೇಕಾಗುತ್ತದೆ. ಅಷ್ಟಕ್ಕೂ ಯಾವ ರೀತಿ ಔಷಧಿಯನ್ನ ನೀಡಲಾಗುತ್ತದೆ ಎಂದು ನೋಡುವುದಾದರೆ.
ತ್ರಿಫಲ ಚೂರ್ಣವನ್ನು ಲೋಳೆಸರದ ಜೊತೆ ಮಿಕ್ಸ್ ಮಾಡಿ ಪ್ರತಿದಿನ ತಪ್ಪದೆ ಸೇವಿಸಬೇಕು. ಕಾಡು ಕೊತ್ತಂಬರಿ ಸೊಪ್ಪು ಎನ್ನುವ ಔಷಧಿ ಗುಣವುಳ್ಳ ಈ ಬಿಳುಪಿಗೆ ಔಷಧಿಯಾಗಿ ಕೆಲಸ ಮಾಡುತ್ತದೆ. ಈ ಕಾಡು ಕೊತ್ತಂಬರಿ ಸೊಪ್ಪನ್ನ ತೊಳೆದು ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು ನಂತರ ಅದನ್ನು ಒಂದು ಕಾಟನ್ ಬಟ್ಟೆಯಲ್ಲಿ ಹಾಕಿಕೊಂಡು ಚೆನ್ನಾಗಿ ಹಿಂಡಿ ರಸವನ್ನ ಶೋಧಿಸಿ ತೆಗೆದುಕೊಂಡಿರಬೇಕು ಆ ರಸಕ್ಕೆ ಅಷ್ಟೇ ಪ್ರಮಾಣದ ಕೊಬ್ಬರಿ ಎಣ್ಣೆಯನ್ನು ಬೆರೆಸಿ ಒಂದು ಗಾಜಿನ ಬಾಟಲಿಯಲ್ಲಿ ತುಂಬಿ ಗಟ್ಟಿಯಾಗಿ ಮುಚ್ಚಿಡಬೇಕು ಸ್ವಲ್ಪ ಹೊತ್ತಿನ ನಂತರ ಅದನ್ನು ಅಲುಗಾಡಿಸಿ ಚೆನ್ನಾಗಿ ಬೆರೆಯುವಂತೆ ಮಾಡಿ ಪ್ರತಿದಿನ ಸೂರ್ಯೋದಯದ ಸಮಯಕ್ಕೆ ಅದನ್ನ ಬಿಸಿಲು ಬರುವ ಜಾಗಕ್ಕೆ ಇಡಬೇಕು ಹೀಗೆ 20 ದಿನಗಳ ವರೆಗೂ ಬಿಸಿಲಿನಲ್ಲಿ ಅದನ್ನ ಒಣಗಿಸಬೇಕು.
ನಂತರ ನಿಮ್ಮ ದೇಹದಲ್ಲಿ ಎಲ್ಲೆಲ್ಲಿ ಬಿಳುಪು ಕಾಣಿಸಿಕೊಂಡಿದೆಯೋ ಅಲ್ಲಿ ಚೆನ್ನಾಗಿ ಲೇಪನ ಮಾಡಬೇಕು ಮೂರು ತಿಂಗಳವರೆಗೆ ಪ್ರತಿದಿನ ಈ ಲೇಪನವನ್ನ ತಪ್ಪದೇ ಮಾಡಿದರೆ ನಿಮ್ಮ ಬಿಳುಪು ಸಮಸ್ಯೆ ಕ್ರಮೇಣ ಕಡಿಮೆಯಾಗುತ್ತಾ ಬರುತ್ತದೆ ಅಷ್ಟೇ ಅಲ್ಲದೆ ಇದನ್ನು ಹಚ್ಚಿಕೊಂಡು ನೀವು ನಿಮ್ಮ ಕೆಲಸಗಳಲ್ಲಿ ತೊಡಗಿ ಕೊಳ್ಳಬಹುದು ಇದರಿಂದ ಯಾವುದೇ ಅಡ್ಡಿ ಕೂಡ ಆಗುವುದಿಲ್ಲ ಜೊತೆಗೆ ಯಾವ ಅಡ್ಡ ಪರಿಣಾಮವೂ ಇರುವುದಿಲ್ಲ ಇದನ್ನೂ ಓದಿ Heart Attack Symptoms: ಹೃದಯಾಘಾತದ ಈ ಲಕ್ಷಣಗಳು ಕಂಡು ಬಂದರೆ ತಕ್ಷಣ ಎಚ್ಚೆತ್ತುಕೊಳ್ಳಿ, ನಿರ್ಲಕ್ಷ್ಯ ಬೇಡ