Astrology Zodiac Signs 2023: ಹಿಂದೂ ಪಂಚಾಗದ ಪ್ರಕಾರ ಯುಗಾದಿ (Ugadi) ಹೊಸ ವರ್ಷ 2023 ಪ್ರಾರಂಭವಾಗಿದೆ. ಹೊಸ ವರ್ಷ (New year) 2023 ಪ್ರತಿಯೊಬ್ಬರಿಗೂ ಹೊಸ ಭರವಸೆಗಳು, ಹೊಸ ಕನಸುಗಳು, ಹೊಸ ಗುರಿಗಳು ಮತ್ತು ಸವಾಲುಗಳನ್ನು ಎದುರಿಸುವ ವರ್ಷವಾಗಿರುತ್ತದೆ. ಹೊಸ ವರ್ಷ 2023 ಪ್ರತಿಯೊಬ್ಬರ ಜೀವನದಲ್ಲಿ ಸಾಕಷ್ಟು ಭರವಸೆಗಳನ್ನು ತರುವ ವರ್ಷವಾಗಿರುತ್ತದೆ. ಕಳೆದ ವರ್ಷ ಅಪೂರ್ಣವಾಗಿ ಉಳಿದಿರುವ ನಮ್ಮ ಕೆಲಸ ಮುಂಬರುವ ಹೊಸ ವರ್ಷದಲ್ಲಿ ಪೂರ್ಣಗೊಳ್ಳಬೇಕು ಎಂದು ಎಲ್ಲರೂ ಭಾವಿಸುತ್ತಾರೆ.

Astrology Zodiac Signs

ಹೊಸ ವರ್ಷದಲ್ಲಿ, (New Year) ವೃತ್ತಿಜೀವನದಲ್ಲಿ ಹೊಸ ಮೈಲಿಗಲ್ಲು ಸಾಧಿಸಲಾಗುತ್ತದೆ, ಇನ್ನೂ ಹಚ್ಚಿನ ಶುಭ ಸುದ್ದಿಗಳು ಈ ವರ್ಷದಲ್ಲಿ ಸಿಗಲಿ ಎಂಬ ಹಾರೈಕೆಯೊಂದಿಗೆ ನಿಮ್ಮ (Dwadasa Rashi) ದ್ವಾದಶ ರಾಶಿಗಳಲ್ಲಿ ಮೊದಲ ಮೂರು ರಾಶಿಗಳ ಭವಿಷ್ಯದ (Rashi prediction) ಬಗ್ಗೆ ಸಂಪೂರ್ಣವಾಗಿ ಈ ಲೇಖನದ ಮೂಲಕ ತಿಳಿದುಕೊಳ್ಳೋಣ

ಜೀವನದಲ್ಲಿ ಹಣಕ್ಕೆ (Money) ಸಂಬಂಧಿಸಿದ ಎಲ್ಲಾ ರೀತಿಯ ಅಡೆತಡೆಗಳು ಮುಂಬರುವ ವರ್ಷದಲ್ಲಿ ಉಳಿಯುವುದಿಲ್ಲ ಮತ್ತು ಪ್ರೀತಿಪಾತ್ರರ ಪ್ರೀತಿಯು ಹೊಸ ವರ್ಷದಲ್ಲಿ ಕಂಡುಬರುತ್ತದೆ. ಮುಂಬರುವ ಹೊಸ ವರ್ಷದಲ್ಲಿ ಉದ್ಯೋಗ, (Job) ವ್ಯಾಪಾರ, (Business) ಸಂಪತ್ತು, ಐಷಾರಾಮಿ, ವಿದ್ಯೆ, (Education) ಪ್ರೀತಿ, ( Love) ಆರೋಗ್ಯ (Health) ಹೇಗಿರಲಿದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ನಮ್ಮೆಲ್ಲರ ಮನದಲ್ಲಿ ಸದಾ ಇದ್ದೇ ಇರುತ್ತದೆ. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ತಿಳಿಯಲು ಜ್ಯೋತಿಷ್ಯದ ಮೂಲಕ ವಾರ್ಷಿಕ ಜಾತಕದ ಸಹಾಯವನ್ನು ತೆಗೆದುಕೊಳ್ಳಲಾಗುತ್ತದೆ.

ಇದನ್ನೂ ಓದಿ..ಈ ರಾಶಿಯವರ ಮೇಲೆ ಶನಿದೇವನ ಅನುಗ್ರಹ ಸದಾ ಇರುತ್ತೆ, ಎಂದಿಗೂ ಕಷ್ಟ ಬರೋದಿಲ್ಲ

ಮೇಷ ರಾಶಿಗೆ (Aries) ಈ ಸಂವತ್ಸರದಲ್ಲಿ ಅನೇಕವಾಗಿರುವಂತಹ ಶುಭಫಲಗಳು ದೊರೆಯಲಿದೆ. ಅಂದರೆ ಶುಭಯೋಗ ಪರಿವರ್ತನೆ ಎನ್ನಬಹುದು. ಚಂಚಲವಾಗಿರುವಂತಹ ಮನಸ್ಥಿತಿಗಳು ಒಂದು ದೃಢತೆಗೆ ಬರುತ್ತದೆ. ಒಟ್ಟಿನಲ್ಲಿ ಮೇಷರಾಶಿಯವರಿಗೆ ರಾಜ ಸಂಯೋಗ ಫಲವಿದೆ. ಮೇಷರಾಶಿಯವರಿಗೆ ಗುರು ಆಸ್ಥಾನ ಪ್ರಬಲವಾಗಿದೆ. ಇದರಿಂದ ಅವರಿಗೆ ಶುಭವಾಗುತ್ತದೆ

ವೃಷಭ ರಾಶಿ (Taurus) ಯವರಿಗೆ ವ್ಯಯದಲ್ಲಿ ರಾಹು ಮತ್ತು ಗುರುವಿನ ಸಂಚಾರ ವರ್ಷವಾಗಿರುವುದರಿಂದ ಆರಂಭ ದಲ್ಲಿ 4 ತಿಂಗಳು ಸ್ವಲ್ಪ ಸಮಸ್ಯೆ ಇರುತ್ತದೆ. ಕೇಂದ್ರದಲ್ಲಿ ಶನಿಯ ಯೋಗವಿದೆ. ಏಪ್ರಿಲ್‌ ತಿಂಗಳಿನಿಂದ ಎಲ್ಲಾ ಕಾರ್ಯ ಸಿದ್ದಿಗಳಾಗುತ್ತದೆ. ವ್ಯವಹಾರಗಳಲ್ಲಿ ಹಿನ್ನೆಡೆಯಾಗುತ್ತದೆ. ಗೊಂದಲಗಳು ಜಾಸ್ತಿ. ನಿದ್ರಾಹೀನತೆ, ಆರ್ಥಿಕ ಸ್ಥಾನ ಅಷ್ಟು ಚೆನ್ನಾಗಿರುವುದಿಲ್ಲಾ. ಖರ್ಚು ಹೆಚ್ಚು. ಆರೋಗ್ಯ ಸ್ಥಿತಿಯಲ್ಲಿ ಮಂದಗತಿ. ಮನೆಕಟ್ಟುವವರಿಗೆ ಹಾಗೂ ಶೇರು ಮಾರುಕಟ್ಟೆಯವರಿಗೆ ಒಳ್ಳೆಯದಾಗುತ್ತದೆ. ಮಹಿಳೆಯರು ಹೆಚ್ಚು ಜಾಗೃತವಾಗಿರಬೇಕು. ಗೊಂದಲ ಮನಸ್ಥಿತಿ, ಶತ್ರುಭಯಾದಿ ಚಿಂತೆ.

ಇದನ್ನೂ ಓದಿ..Pisces Horoscope Today: ಮೀನ ರಾಶಿಯರಿಗೆ ದೈವ ಬಲ ಇರುವುದರಿಂದ ಇನ್ಮುಂದೆ ಹಣಕಾಸಿನ ಸ್ಥಿತಿ ಹೇಗಿರತ್ತೆ ಗೊತ್ತಾ..

ಮಿಥುನ ರಾಶಿ (Gemini) ಯವರಿಗೆ ಅತ್ಯಂತ ಶುಭ ಸುದ್ದಿಗಳನ್ನು ಕೇಳುತ್ತೀರಿ. ಹೊಸ ಹೊಸ ಆಯ್ಕೆಗಳಿಗೆ ಮುನ್ನುಡಿಯಾಗಲಿದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಅವಕಾಶಗಳಿವೆ. ನೀವು ಅಂದುಕೊಂಡಿದ್ದನ್ನು ನಿಮ್ಮ ಪರಿಶ್ರಮಕ್ಕೆ ತಕ್ಕಂತಹ ಫಲ ಸಿಗುತ್ತದೆ. ಶನಿಯ ವಕ್ರೀ ಸಂಚಾರದ ಸಮಯದಲ್ಲಿ ಕೆಲವು ಬಾರಿ ವ್ಯತ್ಯಾಸಗಳಾಗಬಹುದು. ಅದರ ಹೊರತಾಗಿ ಎಲ್ಲಾ ಶುಭ ಫಲಗಳಿವೆ. ಗುರುವಿನ ಆಸ್ಥಾನ ಚೆನ್ನಾಗಿದೆ. ವ್ಯಾಪಾರ ವ್ಯವಹಾರಗಳಲ್ಲಿ ಹಿನ್ನೆಡೆ. ಕೌಟುಂಬಿಕ ಕಲಹ, ಮೋಸ, ಸೋಲು ರಾಜಕೀಯವಾಗಿರುವಂತಹ ಜನರಿಗೆ ಹೆಚ್ಚು ಅವಲಂಬಿತವಾಗಿರುತ್ತದೆ. ಶುಭ ಕಾರ್ಯಗಳಿಗೆ ತಡೆ ನಿಧಾನ ಶತ್ರುಭೀತಿ, ಇರುತ್ತದೆ.

By

Leave a Reply

Your email address will not be published. Required fields are marked *