ಈ ರಾಶಿಯವರ ಮೇಲೆ ಶನಿದೇವನ ಅನುಗ್ರಹ ಸದಾ ಇರುತ್ತೆ, ಎಂದಿಗೂ ಕಷ್ಟ ಬರೋದಿಲ್ಲ

Astrology

Astrology on Lord Shani: ಜ್ಯೋತಿಷ್ಯದಲ್ಲಿ ಶನಿದೇವರನ್ನು ಆಪತ್ತಿನ ಸಂಕೇತ ಎಂದು ಪರಿಗಣಿಸಲಾಗುತ್ತದೆ ಆದರೆ ಶನಿ ಮಹಾತ್ಮನು ಎಲ್ಲಾ ರಾಶಿಗಳಿಗೂ ಕ್ರೂರವಾಗಿರುವುದಿಲ್ಲ ಕೆಲವೇ ಕೆಲವು ರಾಶಿಗಳಿಗೆ ಮಾತ್ರ ಋಣಾತ್ಮಕ ಪರಿಣಾಮವನ್ನು ಬೀರುತ್ತಾನೆ.

ಕೆಲವೊಂದು ರಾಶಿಗಳಿಗೆ (Shani) ಶನಿಯಿಂದ ಧನಾತ್ಮಕ ಪರಿಣಾಮಗಳು ಉಂಟಾಗುತ್ತವೆ ಶನಿಯ ಸಾಡೇಸಾತಿಯಿಂದಾಗಿ ಈ ರಾಶಿಗಳಿಗೆ ಯಾವ ಪರಿಣಾಮವು ಬೀಳುವುದಿಲ್ಲ ಇಂತಹ ಸಂದರ್ಭಗಳಲ್ಲಿ ಒಳ್ಳೆಯ ಬದಲಾವಣೆಗಳನ್ನು ಶನಿಯು ಈ ರಾಶಿಯವರಿಗೆ ತರುತ್ತಾನೆ. ಆದ್ದರಿಂದ ಇವುಗಳನ್ನು ಶನಿಯ ನೆಚ್ಚಿನ ರಾಶಿಗಳು ಎಂದು ಪರಿಗಣಿಸಲಾಗಿದೆ ಅಂತಹ ರಾಶಿಗಳು ಯಾವವು ಎಂಬುದನ್ನು ಇಲ್ಲಿ ತಿಳಿಯೋಣ.

ಇದೇ ಜನವರಿ 17 ರಿಂದ ಶನಿಯು ಕುಂಭ ರಾಶಿಯಲ್ಲಿ ಚಲಿಸುತ್ತಿದ್ದು ಶನಿ ಪರಮಾತ್ಮನು ಈ ರಾಶಿಯಲ್ಲಿ ಇರುವುದು ತುಂಬಾ ಶುಭಕರ ಎಂದು ಹೇಳಲಾಗುತ್ತದೆ ಆದರೆ ಕೆಲವೊಂದು ರಾಶಿಗಳಿಗೆ ಮಾತ್ರ ಶನಿಯ ಈ ಸಂಚಾರದಿಂದ ಸ್ವಲ್ಪಮಟ್ಟಿಗೆ ಏರುಪೇರುಗಳು ಉಂಟಾಗಬಹುದು. ಜ್ಯೋತಿಷ್ಯದ ಪ್ರಕಾರ ಶನಿ ಮಹಾತ್ಮನು ತನ್ನ ಇಷ್ಟದ ರಾಶಿಗಳಿಗೆ ಸಾಡೇಸಾತಿಯ ಸಮಯದಲ್ಲಿ ಹೆಚ್ಚಿನ ತೊಂದರೆಗಳನ್ನು ಕೊಡುವುದಿಲ್ಲ ಎಂದು ಹೇಳಲಾಗುತ್ತದೆ.

ವೃಷಭ ರಾಶಿ: (Taurus) ಶನಿಯು ವೃಷಭ ರಾಶಿಯವರಿಗೆ ತುಂಬಾ ಕರುಣಾಮಯಿ ಯಾಗಿರುತ್ತಾನೆ ವೃಷಭ ರಾಶಿಯು ಶುಕ್ರನ ರಾಶಿ ಚಕ್ರದ ಚಿನ್ಹೆಯಾಗಿರುವುದರಿಂದ ಶನಿಯು ರಾಶಿಗಳಿಗೆ ಪ್ರಯೋಜನಕಾರಿಯಾಗಿದ್ದಾನೆ ಇಂತಹ ಸಂದರ್ಭಗಳಲ್ಲಿ ಶನಿಯು ವೃಷಭ ರಾಶಿಯಲ್ಲಿ ಸಂಚಾರದಲ್ಲಿ ಇದ್ದರೂ ಸಹ ಯಾವುದೇ ರೀತಿಯ ಕೆಟ್ಟ ಪರಿಣಾಮಗಳು ಬೀಳುವುದಿಲ್ಲ ಹಾಗೆಯೇ ಇತರ ಗ್ರಹಗಳ ಸ್ಥಾನವು ಪ್ರತಿಕೂಲವಾಗಿದ್ದರೂ ಸಹ ಪರಿಣಾಮವನ್ನು ಬೀರುವುದಿಲ್ಲ.

ತುಲಾ ರಾಶಿ: (Libra) ತುಲಾ ರಾಶಿಯು ಸಹ ಶನಿಗೆ ಅತ್ಯಂತ ಪ್ರಿಯವಾದ ರಾಶಿಯಾಗಿದ್ದು ಈ ರಾಶಿಯವರು ಪ್ರಗತಿ ಹೊಂದುವಲ್ಲಿ ಶನಿಯು ಉತ್ತಮ ರೀತಿಯಲ್ಲಿ ಸಹಾಯ ಮಾಡುತ್ತಾನೆ ಅಷ್ಟೇ ಅಲ್ಲದೆ ಶನಿಯು ತುಲಾ ರಾಶಿಯಲ್ಲಿ ಯಾವಾಗಲೂ ಉತ್ತುಂಗದಲ್ಲಿ ಇರುತ್ತಾನೆ ಆದ್ದರಿಂದ ಈತನು ತುಲಾ ರಾಶಿಯವರಿಗೆ ತೊಂದರೆ ಕೊಡುವುದಿಲ್ಲ.

ಕುಂಭ ರಾಶಿ: (Aquarius) ಈ ರಾಶಿಯು ಶನಿ ದೇವರ ರಾಶಿ ಚಕ್ರದ ಚಿನ್ಹೆ ಯಾಗಿರುವುದರಿಂದ ವಾಸ್ತವವಾಗಿ ಶನಿದೇವನ ಕೋಪವೂ ಈ ರಾಶಿಯ ಮೇಲೆ ಕಡಿಮೆ ಇರುತ್ತದೆ ಜೊತೆಗೆ ಕುಂಭ ರಾಶಿಯವರಲ್ಲಿ ಶನಿದೇವನ ಕೃಪೆ ಇರುವುದರಿಂದ ಹಣದ ಸಮಸ್ಯೆ ಬರುವುದಿಲ್ಲ. ವಿಶೇಷವಾಗಿ ಶನಿಯ ಪರಿಣಾಮವು ಕಡಿಮೆ ಇದ್ದು, ಒಳ್ಳೆಯ ಪ್ರಭಾವಗಳು ದೀರ್ಘಕಾಲದ ವರೆಗೆ ಕುಂಭ ರಾಶಿಯಲ್ಲಿ ಇರುತ್ತವೆ.

ಧನು ರಾಶಿ : (Sagittarius) ಧನು ರಾಶಿಯು ಶನಿದೇವನಿಗೆ ಅತ್ಯಂತ ಪ್ರಿಯವಾದ ರಾಶಿಯಾಗಿದ್ದು ಶನಿಯು ಇವರಿಗೆ ಯಾವುದೇ ತೊಂದರೆಗಳನ್ನು ನೀಡುವುದಿಲ್ಲ ಶನಿಯ ಗುರು ಗ್ರಹದೊಂದಿಗೆ ಸಂಬಂಧವನ್ನು ಹೊಂದಿರುವುದರಿಂದ ಅರೇ ಅರ್ಥ ಮತ್ತು ಧೈರ್ಯದ ಸಮಯದಲ್ಲಿ ಹೆಚ್ಚಿನ ತೊಂದರೆಗಳನ್ನು ನೀಡುವುದಿಲ್ಲ ಬದಲಾಗಿ ಹೆಚ್ಚು ಗೌರವ ಮತ್ತು ಸಂಪತ್ತನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾನೆ.

ಮಕರ ರಾಶಿ (Capricorn) ಶನಿದೇವನು ಮಕರ ರಾಶಿಯ ಅಧಿಪತಿಯಾಗಿದ್ದಾನೆ ಆದ್ದರಿಂದ ಮಕರ ರಾಶಿಯವರಿಗೆ ಶನಿದೇವನು ಯಾವುದೇ ರೀತಿಯ ತೊಂದರೆಯನ್ನು ನೀಡುವುದಿಲ್ಲ ಮಕರ ರಾಶಿಯವರು ಯಾವುದೇ ಕೆಲಸವನ್ನಾದರೂ ಛಲ ಬಿಡದೆ ಮಾಡುತ್ತಾರೆ ಆದ್ದರಿಂದ ಯಾವುದೇ ದುಷ್ಪರಿಣಾಮಗಳನ್ನು ಎದುರಿಸುವ ಅವಶ್ಯಕತೆ ಇರುವುದಿಲ್ಲ.

ಇದನ್ನೂ ಓದಿ..ಮಿಥುನ ರಾಶಿಯವರು ಯುಗಾದಿ ಆದ್ಮೇಲೆ, ಈ ವಿಷಯದಲ್ಲಿ ಎಚ್ಚರವಹಿಸಿ ಎಲ್ಲ ಒಳ್ಳೇದಾಗುತ್ತೆ

ಶನಿದೇವನನ್ನು ಕಂಡರೆ ಪ್ರತಿಯೊಬ್ಬರಿಗೂ ಭಕ್ತಿಯ ಜೊತೆಗೆ ಭಯವೂ ಜಾಸ್ತಿ. ಏಕೆಂದರೆ ಈತ ಮಾನವನ ಕರ್ಮಗಳಿಗೆ ಅನುಗುಣವಾಗಿ ಪ್ರತಿಫಲವನ್ನು ನೀಡುತ್ತಾನೆ ಈತನ ಕೃಪೆಗೆ ಪಾತ್ರರಾಗುವ ಮಾನವರು ಅದೃಷ್ಟಶಾಲಿಗಳು ಆಗಿರುತ್ತಾರೆ ಎಂದು ಹೇಳಲಾಗುತ್ತದೆ.

Leave a Reply

Your email address will not be published. Required fields are marked *