ನಿಮ್ಮ ಊರಿನ ಗ್ರಾಮ ಪಂಚಾಯಿತಿಯಲ್ಲಿ ಆಶ್ರಯ ಯೋಜನೆ ಅಡಿಯಲ್ಲಿ ಯಾರು ಯಾರ ಹೆಸರಿಗೆ ಮನೆಗಳು ಬಂದಿದೆ ಅದನ್ನು ಪರಿಶೀಲನೆ ಮಾಡುವುದು ಹೇಗೆ ಎಂಬುದರ ಕುರಿತಾದ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ. ಅದನ್ನು ತಿಳಿದುಕೊಂಡ ನಂತರ ನೀವೇ ಸ್ವತಹ ನಿಮ್ಮ ಕೈಯಾರೆ ನಿಮ್ಮ ಊರಿನ ಗ್ರಾಮ ಪಂಚಾಯತಿಯಲ್ಲಿ ಯಾರ ಯಾರ ಹೆಸರಿಗೆ ಮನೆಗಳು ಬಂದಿವೆ ಎಂಬುದನ್ನು ಕಂಡುಕೊಳ್ಳಬಹುದಾಗಿದೆ. ಹಾಗಾದರೆ ಅದನ್ನು ಯಾವ ರೀತಿಯಾಗಿ ಪರಿಶೀಲನೆ ಮಾಡುವುದು ಎಂಬುದನ್ನು ಈಗ ತಿಳಿದುಕೊಳ್ಳೋಣ.

ನಿಮ್ಮ ಗ್ರಾಮ ಪಂಚಾಯಿತಿಯಲ್ಲಿ ಯಾರ ಯಾರ ಹೆಸರಿಗೆ ಮನೆಗಳು ಬಂದಿದೆ ಎಂಬುದನ್ನು ನೋಡುವುದಕ್ಕೆ ನೀವು ಮೊದಲು ನಿಮ್ಮ ಮೊಬೈಲ್ ನಲ್ಲಿ ಗೂಗಲ್ ನನ್ನು ತೆರೆದು ಅಲ್ಲಿ ಪಂಚತಂತ್ರ ಎಂದು ಟೈಪ್ ಮಾಡಿ ಹುಡುಕಬೇಕು. ಆಗ ನಿಮಗೆ ಕೆಳಗಡೆ ಒಂದು ಲಿಂಕ್ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿದಾಗ ನಿಮಗೆ ಒಂದು ವೆಬ್ಸೈಟ್ ಕಾಣಿಸಿಕೊಳ್ಳುತ್ತದೆ ಅಲ್ಲಿ ಪಂಚಮಿತ್ರ ಪಂಚಾಯತಿ ಅಂತರ್ಜಾಲತಾಣ ಎನ್ನುವುದು ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು. ನಿಮ್ಮ ಎದುರು ಮತ್ತೊಂದು ಪುಟ ತೆರೆದುಕೊಳ್ಳುತ್ತದೆ ಅಲ್ಲಿ ನಿಮಗೆ ಕರ್ನಾಟಕದ ನಕ್ಷೆ ಕಾಣಿಸುತ್ತದೆ ಅಲ್ಲಿ ನೀವು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು ಆಗ ಪಕ್ಕದಲ್ಲಿ ತಾಲೂಕುಗಳ ಹೆಸರು ಕಾಣಿಸುತ್ತದೆ ನಿಮ್ಮ ತಾಲೂಕಿನ ಮೇಲೆ ಕ್ಲಿಕ್ ಮಾಡಿದಾಗ ಗ್ರಾಮಪಂಚಾಯಿತಿ ಹೆಸರು ಕಾಣಿಸುತ್ತದೆ.

ನಿಮ್ಮದು ಯಾವ ಗ್ರಾಮ ಪಂಚಾಯಿತಿ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು ಅಲ್ಲಿ ನಿಮಗೆ ಆಶ್ರಯ ಯೋಜನೆಗೆ ಸಂಬಂಧಿಸಿದಂತೆ ಎಲ್ಲಾ ಮಾಹಿತಿಗಳು ದೊರೆಯುತ್ತದೆ. ಅಲ್ಲಿ ಕೆಲವೊಂದಿಷ್ಟು ಆಯ್ಕೆಗಳಿರುತ್ತವೆ ಅಲ್ಲಿ ನೀವು ಫಲಾನುಭವಿಗಳು ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು ಆಗ ನಿಮಗೆ ನಿಮ್ಮ ಊರಿನ ಗ್ರಾಮ ಪಂಚಾಯಿತಿಯಲ್ಲಿ ಯಾರ ಯಾರ ಹೆಸರಿಗೆ ಆಶ್ರಯ ಯೋಜನೆಯಲ್ಲಿ ಮನೆಗಳು ದೊರಕಿದೆ ನಿಮ್ಮ ಮಾಹಿತಿ ಸಿಗುತ್ತದೆ.

ಅಲ್ಲಿ ಪಲಾನುಭವಿಯ ಹೆಸರು ತಂದೆಯ ಹೆಸರು ವಿಳಾಸ ಆಶ್ರಯ ಯೋಜನೆಯಡಿ ಯಾವು ಉದ್ದೇಶಕ್ಕೆ ಮನೆ ದೊರಕಿದೆ ಎಂಬ ಎಲ್ಲಾ ಮಾಹಿತಿ ಸಿಗುತ್ತದೆ. ಈ ರೀತಿಯಾಗಿ ನೀವು ತುಂಬಾ ಸುಲಭವಾಗಿ ಆಶ್ರಯ ಯೋಜನೆಯ ಅಡಿಯಲ್ಲಿ ಯಾರು ಯಾರಿಗೆ ಮನೆಗಳು ದೊರೆತಿವೆ ಎಂಬುವುದನ್ನು ಸರಳ ರೀತಿಯಲ್ಲಿ ಸ್ವತಹ ನೀವೇ ಕಂಡುಕೊಳ್ಳಬಹುದಾಗಿದೆ. ಈ ಮಾಹಿತಿಯನ್ನು ನೀವು ತೆಗೆದುಕೊಳ್ಳುವುದರ ಜೊತೆಗೆ ನಿಮ್ಮ ಸ್ನೇಹಿತರು ಹಾಗೂ ಪರಿಚಿತರು ತಿಳಿಸಿರಿ

Leave a Reply

Your email address will not be published. Required fields are marked *