ಭಾರತೀಯರೂ ಪ್ರತಿನಿತ್ಯ ನೆಮ್ಮದಿಯಿಂದ ನಿರ್ಭಿತಿಯಿಂದ ಜೀವನ ಮಾಡಲು ಕಾರಣ ಗಡಿಭಾಗಗಳಲ್ಲಿ ತಮ್ಮ ಜೀವದ ಹಂಗು ತೊರೆದು ರಕ್ಷಣೆ ಮಾಡುತ್ತಿರುವ ನಮ್ಮ ಹೆಮ್ಮೆಯ ಸೈನಿಕರು. ಕೊರೆಯುವ ಚಳಿಯಲ್ಲಿ ಅಥವಾ ಸುಡುಬಿಸಿಲಿನಲ್ಲಿ ತಮ್ಮ ಜೀವದ ಬಗ್ಗೆ ಯೋಚಿಸದೆ ನಮ್ಮ ದೇಶದ ರಕ್ಷಣೆಗಾಗಿ ತಮ್ಮ ಜೀವವನ್ನು ಪಣಕ್ಕಿಟ್ಟು ಹೋರಾಡುತ್ತಿದ್ದಾರೆ. ದೇಶಕ್ಕೋಸ್ಕರ ತಮ್ಮ ಸಂಸಾರ ಮನೆಯ ಮಕ್ಕಳು ಇವರನ್ನೆಲ್ಲ ತೊರೆದು ಹೋರಾಡುತ್ತಾ ತಮ್ಮ ಜೀವವನ್ನು ಕೂಡ ಪಣಕ್ಕೆ ಇಡುತ್ತಾರೆ. ಇಂತಹ ಸೈನಿಕರಾಗುವುದಕ್ಕೆ ಅನೇಕ ಯುವಕರು ಮುಂದೆ ಬರುತ್ತಾರೆ.ಅನೇಕ ತಾಯಂದಿರು ತಮ್ಮ ಮಕ್ಕಳನ್ನು ದೇಶದ ರಕ್ಷಣೆಗಾಗಿ ಕಳಿಸಿಕೊಡುತ್ತಾರೆ. ಆದ್ದರಿಂದ ನಾವು ಇಲ್ಲಿ ಸೈನಿಕರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಸೈನಿಕರ ಆಯ್ಕೆಯು ಬಲು ಕಠಿಣವಾಗಿಯೂ ಮತ್ತು ಅದ್ಭುತವಾಗಿರುತ್ತದೆ. ಆರ್ಮಿ ನೇವಿ, ಏರ್ಫೋರ್ಸ್, ಪ್ಯಾರಾಮಿಲಿಟರಿ,ಮತ್ತು ಪೊಲೀಸ್ ಇಲಾಖೆಗಳಲ್ಲಿ ವೈದ್ಯಕೀಯ ಪರೀಕ್ಷೆ ಕಡ್ಡಾಯವಾಗಿರುತ್ತದೆ. ಇದರ ಆಯ್ಕೆಗಾಗಿ 16 ವಿಧಗಳಲ್ಲಿ ಟೆಸ್ಟುಗಳನ್ನು ಮಾಡುತ್ತಾರೆ. ಮೊದಲನೆಯದಾಗಿ ದೇಹದ ತೂಕ 50 ಕೆಜಿ ಇಂದ 60 ಕೆಜಿ ವರೆಗೆ ಇರುವವರನ್ನು ಆಯ್ಕೆ ಮಾಡಲಾಗುತ್ತದೆ. ಇದನ್ನು ಅವರ ಎತ್ತರದ ಮೇಲೆ ನಿರ್ಧಾರ ಮಾಡಲಾಗುತ್ತದೆ. ಎರಡನೆಯದಾಗಿ ಎದೆಯ ಸುತ್ತಳತೆಯನ್ನು ನೋಡುತ್ತಾರೆ. ಅಂದರೆ ವ್ಯಕ್ತಿಯು ಉಸಿರನ್ನು ಎಳೆದುಕೊಂಡಾಗ ವ್ಯಕ್ತಿಯ ಎದೆಯ ಸುತ್ತಳತೆ ಐದು ಸೆಂಟಿಮೀಟರ್ ನಷ್ಟು ಹಿಗ್ಗಬೇಕು. ಮೂರನೆಯದಾಗಿ ಕಾಲಿನ ಪೊಸಿಶನ್ ಗಳು ಸರಿಯಾಗಿರಬೇಕು.

ನಾಲ್ಕನೆಯದಾಗಿ ಆರ್ಮಿಗೆ ಸೇರಬಯಸುವವರು ಕೃತಕವಾಗಿ ಯಾವುದೇ ಹಚ್ಚೆಗಳನ್ನು ಹಾಕಿಸಿಕೊಳ್ಳಬಹುದು. ಕಾರಣ ಹಚ್ಚೆಗಳು ಚರ್ಮರೋಗವನ್ನು ಹೆಚ್ಚಾಗಿ ಉಂಟುಮಾಡುತ್ತದೆ. ಆದ ಕಾರಣ ಕೆಲವೊಂದು ಗೌರ್ಮೆಂಟ್ ಕೆಲಸಗಳಲ್ಲಿ ಹಚ್ಚೆಗಳನ್ನು ನಿಷೇಧ ಮಾಡಿದ್ದಾರೆ. ಐದನೆಯದಾಗಿ ಯಾರಿಗೆ ಕಾಲುಗಳಲ್ಲಿ ನರಗಳ ಗಂಟು ಕೊಟ್ಟಿರುವವರನ್ನು ಆಯ್ಕೆ ಮಾಡಲಾಗುವುದಿಲ್ಲ. ಆರನೆಯದಾಗಿ ಯಾರ ಪಾದಗಳು ಸರಿಯಾದ ಸ್ಥಿತಿಯಲ್ಲಿ ಇರುತ್ತದೆಯೋ ಅವರನ್ನು ಆಯ್ಕೆ ಮಾಡಲಾಗುತ್ತದೆ. ಏಳನೆಯದಾಗಿ ಹೆಚ್ಚುವರಿ ಬೆರಳುಗಳು ಇರುತ್ತವೆಯೋ ಅಂತವರನ್ನು ರಿಜೆಕ್ಟ್ ಮಾಡಲಾಗುತ್ತದೆ. ಹಾಗೂ ಎಂಟನೆಯದಾಗಿ ಕಣ್ಣಿನ ದೃಷ್ಟಿಯನ್ನು ಕೂಡ ಪರೀಕ್ಷೆ ಮಾಡಲಾಗುತ್ತದೆ. ಕಣ್ಣಿನ ದೃಷ್ಟಿ ಸರಿಯಾಗಿ ಇರುವವರನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ.

ಒಂಭತ್ತನೆಯದಾಗಿ ಆರ್ಮಿಗೆ ಸೇರುವ ಬಯಸುವವರ ಕಿವಿಯನ್ನು ಕೂಡ ಪರೀಕ್ಷೆ ಮಾಡಲಾಗುತ್ತದೆ. ಹತ್ತನೆಯ ದಾಗಿ ಮೂಗಿನ ಪರೀಕ್ಷೆಯನ್ನು ಮಾಡಲಾಗುತ್ತದೆ. ಮೂಗಿನಲ್ಲಿ ಕೆಲವೊಬ್ಬರಿಗೆ ಹೆಚ್ಚುವರಿ ಮಾಸವು ಬೆಳವಣಿಗೆಯಾಗಿರುತ್ತದೆ. ಇಂಥವರನ್ನು ರಿಜೆಕ್ಟ್ ಮಾಡಲಾಗುತ್ತದೆ. ಹಲ್ಲಿನ ಪರೀಕ್ಷೆಯನ್ನು ಸಹ ಮಾಡಲಾಗುತ್ತದೆ. ಹಲ್ಲು ಹುಳುಕು ಅಥವಾ ಹಲ್ಲಿನ ಇನ್ನಿತರ ಸಮಸ್ಯೆಗಳಿದ್ದರೆ ಅವರನ್ನು ರಿಜೆಕ್ಟ್ ಮಾಡಲಾಗುತ್ತದೆ ಹಾಗೂ ಇದರಲ್ಲಿ ಮನುಷ್ಯನ ಹೃದಯದ ಬಡಿತದ ವೇಗ ಜೊತೆಗೆ ರಕ್ತದೊತ್ತಡವನ್ನು ಪರೀಕ್ಷೆ ಮಾಡಲಾಗುತ್ತದೆ. ಆರ್ಮಿಯಲ್ಲಿ ಮೆಡಿಕಲ್ ಚೆಕಪ್ ಗೆ ಹೋಗುವವರು ರಿಲ್ಯಾಕ್ಸ್ ಮೂಡ್ ನಿಂದ ಹೋದಾಗ ಇವೆರಡು ಪರೀಕ್ಷೆಗಳನ್ನು ಆರಾಮವಾಗಿ ಪಾಸ್ ಆಗಬಹುದು.

ಇನ್ನು ಮುಖ್ಯವಾಗಿ ಕೆಲವರಿಗೆ ಏನು ಕೆಲಸ ಮಾಡದಿದ್ದರೂ ಸಹ ಅಂಗೈಗಳು ಬೆವರುತ್ತದೆ ಇಂಥವರನ್ನು ರಿಜೆಕ್ಟ್ ಮಾಡಲಾಗುತ್ತದೆ. ಎರಡು ಕೈಗಳು ಸರಿಯಾಗಿ ನೇರವಾಗಿ ಇರುವವರನ್ನು ಆಯ್ಕೆ ಮಾಡಲಾಗುತ್ತದೆ.14 ನೆಯದಾಗಿ ಅಭ್ಯರ್ಥಿಯ ಸಂಪೂರ್ಣ ದೇಹದ ಎಕ್ಸರೆ ತೆಗೆಯಲಾಗುತ್ತದೆ. ದೇಹದಲ್ಲಿ ಹಳೆಯ ಯಾವ ಇಂಜುರಿಗಳು ಇದ್ದರೂ ಕೂಡ ಅವರನ್ನು ರಿಜೆಕ್ಟ್ ಮಾಡಲಾಗುತ್ತದೆ. ಅಭ್ಯರ್ಥಿಗಳ ಎರಡು ಋಷಣಗಳು ಒಂದೇ ಗಾತ್ರದಲ್ಲಿ ಇರುವವರನ್ನು ಆಯ್ಕೆ ಮಾಡಲಾಗುತ್ತದೆ. ಕೊನೆಯದಾಗಿ ಅಭ್ಯರ್ಥಿಯ ಫಾಲ್ಸ್ ಟೆಸ್ಟನ್ನು ಮಾಡುತ್ತಾರೆ. ಅಭ್ಯರ್ಥಿಗೆ ಗುದದ್ವಾರದಲ್ಲಿ ಯಾವುದೇ ಸಮಸ್ಯೆ ಅಥವಾ ಫೈಲ್ಸ್ ಇದ್ದರೆ ಅಂಥವರನ್ನು ರಿಜೆಕ್ಟ್ ಮಾಡಲಾಗುತ್ತದೆ. ಹೀಗೆ ಆರ್ಮಿಗೆ ಸೇರ ಬಯಸುವವರನ್ನು ವಿವಿಧ ರೀತಿಯಲ್ಲಿ ಪರೀಕ್ಷೆ ಮಾಡಲಾಗುತ್ತದೆ.

Leave a Reply

Your email address will not be published. Required fields are marked *