Aquarius finance Horoscope: ಕುಂಭ ರಾಶಿಯವರ ಸೆಪ್ಟೆಂಬರ್ ತಿಂಗಳ ಭವಿಷ್ಯ ಹೇಗಿದೆ ಎಂಬುದನ್ನು ಈ ಲೇಖನದಲ್ಲಿ ನಾವು ತಿಳಿದುಕೊಳ್ಳೋಣ. 2023 ಸೆಪ್ಟೆಂಬರ್ ತಿಂಗಳು ಕುಂಭ ರಾಶಿಯವರಿಗೆ ಮಿಶ್ರಫಲದಾಯಕವಾಗಿರುತ್ತದೆ ತಿಂಗಳ ಆರಂಭದಲ್ಲಿ ಕ್ಷೇತ್ರದ ಹಿರಿಯರು ಹಾಗೂ ಇತರ ಜನರೊಂದಿಗೆ ಸಮನ್ವಯತೆಯಿಂದ ಇರುವುದು ಮುಖ್ಯ ಅಂದರೆ ನೀವು ಕೆಲಸ ಮಾಡುವಂತಹ ಜಾಗದಲ್ಲಿ ಅಥವಾ ನಿಮ್ಮ ಸುತ್ತಮುತ್ತಲಿನ ಜನರ ಜೊತೆಗೆ ಸಮನ್ವಯತೆಯನ್ನ ಕಾಯ್ದುಕೊಳ್ಳಬೇಕಾಗುತ್ತದೆ ವಿಶೇಷವಾಗಿ ಈ ಸಮಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಗಮನವನ್ನು ಹರಿಸಬೇಕು. ತಿಂಗಳ ಎರಡನೇ ವಾರದಲ್ಲಿ ಕುಂಭ ರಾಶಿಯವರ ಮೇಲೆ ಸ್ವಲ್ಪ ಕೆಲಸದ ಹೂರೆ ಹೆಚ್ಚಾಗಿರುತ್ತದೆ ಈ ಸಮಯದಲ್ಲಿ ಕೆಲಸಕ್ಕೆ ಸಂಬಂಧಿಸಿದಂತೆ ದೀರ್ಘ ಹಾಗೂ ದಣಿದ ಪ್ರಯಾಣವನ್ನು ಮಾಡುವ ಸಂದರ್ಭ ಬರಲಿದೆ.

ಅಂತೆಯೇ ಈ ಸಮಯದಲ್ಲಿ ನೀವು ಕೆಲವು ಯೋಜನೆಗಳಲ್ಲಿ ಬುದ್ಧಿವಂತಿಕೆಯಿಂದ ಹಣದ ಹೂಡಿಕೆ ಮಾಡಬೇಕಾಗುತ್ತದೆ ಈ ನಿಟ್ಟಿನಲ್ಲಿ ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳುವುದಕ್ಕೂ ಮೊದಲು ಮೂರು ಬಾರಿಯ ಯೋಚಿಸಿ ಹಿತೈಷಿಗಳ ಸಲಹೆ ಪಡೆದುಕೊಳ್ಳುವುದು ಉತ್ತಮ.

ಕುಂಭ ರಾಶಿ ಒಂದು ಸಾಮಾನ್ಯ ಹಾಗೂ ಗಾಳಿಯ ಚಿನ್ಹೆಯಾಗಿದ್ದು ಶನಿಯ ಒಡೆತನಕ್ಕೆ ಒಳಪಟ್ಟಿರುತ್ತದೆ ಈ ರಾಶಿಯಲ್ಲಿ ಜನಿಸಿದ ಜನರು ಸಂಶೋಧನೆ ಮಾಡುವಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ ಅಷ್ಟೇ ಅಲ್ಲದೆ ಸೀಮಿತ ಸ್ನೇಹಿತರನ್ನು ಹೊಂದಿರುತ್ತಾರೆ ಮಕರ ರಾಶಿಯವರಿಗೆ ಹೋಲಿಸಿದರೆ ಕುಂಭ ರಾಶಿಯವರು ತಮ್ಮ ವಿಧಾನಗಳಲ್ಲಿ ಸ್ವಲ್ಪ ನಿಧಾನವಾಗಿರುತ್ತಾರೆ ಆದರೆ ಅವರು ಬುದ್ಧಿವಂತಿಕೆ ಮತ್ತು ಸೃಜನಶೀಲತೆಯ ಚಿಂತನೆಯನ್ನು ಹೆಚ್ಚಾಗಿ ಹೊಂದಿರುತ್ತಾರೆ.

ಈ ತಿಂಗಳಲ್ಲಿ ಕುಂಭ ರಾಶಿಯವರು ವೃತ್ತಿ ಹಣ ಕುಟುಂಬ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಮಿಶ್ರ ಫಲಿತಾಂಶಗಳನ್ನ ಹೊಂದಿರುತ್ತಾರೆ ಇವರು ಆರೋಗ್ಯ ಮತ್ತು ವೃತ್ತಿ ಜೀವನದ ಮೇಲೆ ಹೆಚ್ಚಿನ ಗಮನವನ್ನು ಹರಿಸಬೇಕಾಗುತ್ತದೆ ಇವುಗಳಲ್ಲಿ ಕೆಲವು ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ. ಇವರು ಶನಿ ಯಿಂದಾಗಿ ಸವಾಲಿನ ಫಲಿತಾಂಶಗಳನ್ನ ಎದುರಿಸುವ ಸಂದರ್ಭ ಬರಬಹುದು ಅಂತಯೇ ಕುಂಭ ರಾಶಿಯವರ ವೃತ್ತಿ ಜೀವನದಲ್ಲಿ ಹೆಚ್ಚಿನ ಜವಾಬ್ದಾರಿಯುತ ಕೆಲಸಗಳು ಬರಬಹುದು. ಈ ತಿಂಗಳಲ್ಲಿ ಕಠಿಣ ಪರಿಶ್ರಮ ಇಲ್ಲದೆ ಹೋದರೆ ನಿಮಗೆ ಮೆಚ್ಚುಗೆ ಸಿಗುವುದು ಸ್ವಲ್ಪ ಕಷ್ಟ ಆದ್ದರಿಂದ ಕೆಲಸದಲ್ಲಿ ಕಠಿಣ ಪರಿಶ್ರಮ ಹೊಂದಿರಬೇಕು ಅಷ್ಟೇ ಅಲ್ಲದೆ ನಿಮ್ಮ ಆರೋಗ್ಯದ ಕಡೆಯೂ ಗಮನಹರಿಸಬೇಕು.

Aquarius finance Horoscope

ನಿಮ್ಮ ರಾಶಿಯಲ್ಲಿನ ಶುಕ್ರನ ಬದಲಾವಣೆಯು ಕೆಲವು ಸಮಸ್ಯೆಗಳನ್ನು ತರಬಹುದು ಅಂದರೆ ಆರನೇ ಮನೆಯಲ್ಲಿ ಹಿಮ್ಮುಖವಾಗಿ ಶುಕ್ರ ಚಲಿಸಲಿದ್ದು ನಿಮ್ಮ ಆರೋಗ್ಯದ ಮೇಲೆ ಸಮಸ್ಯೆಯನ್ನು ತರಬಹುದು ಆದ್ದರಿಂದ ಈ ತಿಂಗಳಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತಿಯನ್ನು ವಹಿಸಬೇಕಾಗುತ್ತದೆ. ಇನ್ನು ಸಪ್ಟೆಂಬರ್ ತಿಂಗಳ ಮಧ್ಯಭಾಗದಲ್ಲಿ ಇದ್ದಕ್ಕಿದ್ದಂತೆ ಕುಂಭ ರಾಶಿಯವರಿಗೆ ದೊಡ್ಡ ಯಶಸ್ಸು ಒದಗಿ ಬರಲಿದ್ದು ಕೆಲಸದ ಸ್ಥಳದಲ್ಲಿ ಅಥವಾ ನಿಮ್ಮ ವ್ಯವಹಾರ ಸ್ಥಳಗಳಲ್ಲಿ ಬಡ್ತಿ ಹೊಂದುವುದು ಅಥವಾ ಇತರ ಹೆಚ್ಚಿನ ಜವಾಬ್ದಾರಿಯನ್ನ ಪಡೆದುಕೊಳ್ಳುವಂತದ್ದು ನಿಮ್ಮ ಜೀವನದಲ್ಲಿ ಉಂಟಾಗುತ್ತದೆ ಇದರಿಂದ ನಿಮ್ಮ ಸ್ಥಾನಮಾನ ಹೆಚ್ಚಾಗುತ್ತದೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವಂತಹ ಜನರಿಗೆ ಈ ತಿಂಗಳು ಒಳ್ಳೆಯ ಸುದ್ದಿ ಸಿಗುತ್ತದೆ ಹಾಗೂ ಭೂಮಿ ಖರೀದಿ ಮಾಡುವ ಆಸೆ ಹೊಂದಿದ್ದವರು ಅಥವಾ ಮನೆ ನಿರ್ಮಿಸುವ ಆಸೆ ಹೊಂದಿದ್ದು ಅವರಿಗೂ ಕೂಡ ಈ ತಿಂಗಳಲ್ಲಿ ಒಳ್ಳೆಯ ಫಲ ದೊರಕಲಿದೆ.

ಹಾಗೆ ವ್ಯವಹಾರದಲ್ಲೂ ಸಹ ನೀವು ಬಯಸಿದ ಲಾಭ ದೊರೆಯುತ್ತದೆ ಹಲವಾರು ದಿನಗಳಿಂದ ಪ್ರೀತಿಸಿದವರೊಂದಿಗಿನ ಹಾಳಾದ ಸಂಬಂಧವು ಈ ತಿಂಗಳಲ್ಲಿ ಸರಿ ಹೋಗುತ್ತದೆ ದಾಂಪತ್ಯ ಜೀವನದಲ್ಲಿ ಹಾಗೂ ಕುಟುಂಬದಲ್ಲಿ ಒಳ್ಳೆಯ ಬದಲಾವಣೆ ಉಂಟಾಗುತ್ತದೆ ಕುಟುಂಬದ ಎಲ್ಲಾ ಸದಸ್ಯರು ಪ್ರತಿ ಕ್ಷಣವು ನಿಮ್ಮ ಜೊತೆ ನಿಲ್ಲುತ್ತಾರೆ ನಿಮ್ಮ ಯಶಸ್ಸಿಗೆ ಕಾರಣರಾಗುತ್ತಾರೆ ಒಟ್ಟಾರೆಯಾಗಿ ಈ ತಿಂಗಳಲ್ಲಿ ನಿಮಗೆ ಎಲ್ಲಾ ಕೆಲಸಗಳಲ್ಲಿಯೂ ಜಯ ಸಿಗುತ್ತದೆ ಕೆಲವೊಂದು ಆರೋಗ್ಯದ ಸಮಸ್ಯೆ ನಿಮ್ಮನ್ನ ಕಾಡುತ್ತದೆ ಇದನ್ನು ಹೊರತುಪಡಿಸಿ ಬೇರೆ ಯಾವ ಹೆಚ್ಚಿನ ಸಮಸ್ಯೆಯು ಕುಂಭ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳಲ್ಲಿ ಉಂಟಾಗುವುದಿಲ್ಲ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *