ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವುದು ಶಿಕ್ಷಣವೆಂದರೆ ಶಾಲೆಗೆ ಹೋಗಿ ಪಡೆದುಕೊಳ್ಳುವುದು ಎಂದು. ಅದನ್ನು ಹೊರತುಪಡಿಸಿ ಹೊರಗಡೆ ಕಲಿಯುವ ಜ್ಞಾನವನ್ನು ಶಿಕ್ಷಣ ಎಂದು ಯಾರೂ ಕೂಡ ನಂಬುವುದಿಲ್ಲ. ಪುನೀತ್ ರಾಜಕುಮಾರ್ ಯಾವುದಕ್ಕೂ ಹಿಂಜರಿಯುತ್ತಿರಲಿಲ್ಲ ಮತ್ತು ಯಾವುದೇ ಸಂದರ್ಶನದಲ್ಲಿ ಏನನ್ನು ಕೇಳಿದರೂ ತಾಳ್ಮೆಯಿಂದ ಉತ್ತರಿಸುತ್ತಿದ್ದರು. ಆದರೆ ಶಿಕ್ಷಣದ ಬಗ್ಗೆ ಪ್ರಶ್ನೆ ಮಾಡಿದಾಗ ಪುನೀತ್ ರಾಜಕುಮಾರ್ ಸ್ವಲ್ಪ ಹಿಂದಕ್ಕೆ ಸರಿಯುತ್ತಿದ್ದರು. ಶಿಕ್ಷಣದ ಬಗ್ಗೆ ಇನ್ನು ಜಾಸ್ತಿ ಪ್ರಶ್ನೆ ಕೇಳಿದಾಗ ಆ ವಿಷಯ ಇವಾಗ ಯಾಕೆ ಎಂದು ಮುಂದಕ್ಕೆ ಹೋಗೋಣ ಎಂದು ಹೇಳುತ್ತಿದ್ದರು ಪುನೀತ್ ರಾಜಕುಮಾರ್.
ಪುನೀತ್ ರಾಜಕುಮಾರ್ ಈ ರೀತಿ ಮಾಡುವುದಕ್ಕೂ ಕಾರಣವಿದೆ ಏಕೆಂದರೆ ಪುನೀತ್ ಅವರಿಗೆ ಸಾಕಷ್ಟು ಜನ ಅವರನ್ನು ಹಿಂಬಾಲಿಸುವವರು ಇದ್ದಾರೆ, ಆದ್ದರಿಂದ ಅವರೇನಾದರೂ ನಾನು ಶಾಲೆಗೆ ಹೋಗಿಲ್ಲ ಎಂದು ಹೇಳಿಬಿಟ್ಟರೆ ತುಂಬಾ ಜನ ಅದನ್ನೇ ಹಿಂಬಾಲಿಸಲು ಪ್ರಾರಂಭಿಸುತ್ತಾರೆ. ಆದ್ದರಿಂದ ಪುನೀತ್ ಅವರು ತಮ್ಮ ಶಿಕ್ಷಣದ ಬಗ್ಗೆ ಎಲ್ಲಿಯೂ ಹೇಳಿಕೊಳ್ಳುತ್ತಿರಲಿಲ್ಲ. ಇಂತಹ ವ್ಯಕ್ತಿ ಮಕ್ಕಳ ಶಿಕ್ಷಣದ ಸಲುವಾಗಿ ರಾಜ್ಯ ಶಿಕ್ಷಣ ರಾಯಭಾರಿಯಾಗಿ ಮಹತ್ವಪೂರ್ಣ ಹೊಣೆ ನಿರ್ವಹಿಸಿದ್ದಾರೆ
ಪುನೀತ್ ರಾಜಕುಮಾರ್. ಅವರ ಬಗ್ಗೆ ಹೇಳುತ್ತಾ ಹೋದರೆ ಸಾಗರದ ಉದ್ದಗಲವನ್ನು ಹೇಗೆ ಅಳೆಯಲು ಸಾಧ್ಯವಿಲ್ಲವೋ ಅದೆ ರೀತಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಸಹ ಅವರ ಬಗ್ಗೆ ಹೇಳುತ್ತಾ ಹೋದರೆ ಮುಗಿಯದಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ. ಅವರ ಬಗ್ಗೆ ಸಾಗರದ ನೀರಿನಲ್ಲಿನ ಬೋಗಸೆಯಷ್ಟನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಪುನೀತ್ ರಾಜಕುಮಾರ್ ಅವರಿಗೆ ಮಕ್ಕಳು ಶಾಲೆಗೆ ಹೋಗಬೇಕು ಶಿಕ್ಷಣವನ್ನು ಪಡೆದುಕೊಳ್ಳಬೇಕು ಹಾಗೂ ಜ್ಞಾನವನ್ನು ಸಂಪಾದನೆ ಮಾಡಿಕೊಂಡು ಎಲ್ಲರೂ ಒಳ್ಳೆಯ ಹುದ್ದೆಯನ್ನು ಅಲಂಕರಿಸಬೇಕು ಎಂಬ ಆಸೆಯನ್ನು ಇಟ್ಟುಕೊಂಡಿದ್ದರು. ಆದ್ದರಿಂದ ಪುನೀತ್ ಅವರು ಯಾವ ಸಂದರ್ಶನದಲ್ಲೂ ತಮ್ಮ ಶಿಕ್ಷಣದ ಬಗ್ಗೆ ಹೆಚ್ಚಾಗಿ ಮಾಹಿತಿಯನ್ನು ನೀಡುತ್ತಿರಲಿಲ್ಲ. ಕನ್ನಡ ಚಿತ್ರರಂಗದ ಪವರ್ ಸ್ಟಾರ್, ಅಪ್ಪು, ಪುನೀತ್ ರಾಜ್ ಕುಮಾರ್ ಶಿಕ್ಷಣ ರಾಯಭಾರಿಯಾಗಿ, ಯೂತ್ ಐಕಾನ್ ಆಗಿ ನಮ್ಮ ನಡುವೆ ಹಲವು ನೆನಹುಗಳನ್ನು ಬಿಟ್ಟು ಹೋಗಿದ್ದಾರೆ.
ಮಕ್ಕಳ ಶಿಕ್ಷಣ ಹಕ್ಕುಗಳ ರಾಯಭಾರಿಯಾಗಿ ಪುನೀತ್, ”ಎಜುಕೇಶನ್ ಈಸ್ ಪವರ್” ಅಭಿಯಾನದಲ್ಲಿ ಪುನೀತ್ ಕಾರ್ಯ ನಿರ್ವಹಿಸಿದ್ದಾರೆ. ಈ ಅಭಿಯಾನದಲ್ಲಿ ಪುನೀತ್ ಜೊತೆ ಕಾರ್ಯನಿರ್ವಹಿಸಿದ್ದ ಶಿಕ್ಷಣತಜ್ನ ನಿರಂಜನಾರಾಧ್ಯ ಅವರು ಪುನೀತ್ ಅಗಲಿಕೆಗೆ ಆಘಾತ ವ್ಯಕ್ತಪಡಿಸಿ ಮಕ್ಕಳಲ್ಲಿ ಶಿಕ್ಷಣದ ಮಹತ್ವ ಪಸರಿಸುವಲ್ಲಿ ಪುನೀತ್ ಪ್ರಮುಖ ಪಾತ್ರ ವಹಿಸಿದ್ದರು ಎನ್ನುವುದನ್ನು ಅವರು ನೆನಪಿಸಿಕೊಂಡಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಪುನೀತ್ ಅಗಲಿಕೆ ತುಂಬಲಾರದ ನಷ್ಟವನ್ನು ಉಂಟುಮಾಡಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ರಾಜ್ಯ ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವತ್ಥನಾರಾಯಣ ಅವರು ರಾಜ್ಯದಲ್ಲಿ ಐಟಿಐ ಕಾಲೇಜುಗಳ ಹೆಚ್ಚಳಕ್ಕೆ ಪುನೀತ್ ಯಾವ ರೀತಿ ಬೆಂಬಲ ನೀಡಿದರು ಎನ್ನುವುದನ್ನು ಹಂಚಿಕೊಂಡಿದ್ದಾರೆ. ಐಟಿಐ ಕಾಲೇಜುಗಳಿಂದ ಗ್ರಾಮೀಣ ಭಾಗದ ಮಕ್ಕಳು ಉದ್ಯೋಗ ಖಾತರಿಯನ್ನು ಹೊಂದುತ್ತಾರೆ, ಹೀಗಾಗಿ ಅವರನ್ನು ಐಟಿಐ ಕಾಲೇಜುಗಳ ಸೆಳೆಯುವುದು ನನ್ನ ಕರ್ತವ್ಯ ಎಂದು ಪುನೀತ್ ಹೇಳಿದ್ದನ್ನು ಅವರು ಸ್ಮರಿಸಿಕೊಂಡಿದ್ದಾರೆ.
ಪುನೀತ್ ರಾಜಕುಮಾರ್ ಅವರು ತಮ್ಮ ಶೈಕ್ಷಣಿಕ ಅರ್ಹತೆ ಬಗೆಗಿನ ಪ್ರಶ್ನೆಗಳನ್ನು ಮುಜುಗರದಿಂದ ಅವಾಯ್ಡ್ ಮಾಡುತ್ತಿದ್ದ ಪುನೀತ್ ರಾಜ್ ಕುಮಾರ್ ಮಕ್ಕಳ ಶಿಕ್ಷಣದ ವಿಚಾರಕ್ಕೆ ಬಂದಾಗ, ಶಿಕ್ಷಣದ ಮಹತ್ವವನ್ನು ಸಾರಿ ಸಾರಿ ಹೇಳುತ್ತಿದ್ದರು. ರಾಜ್ಯ ಶಿಕ್ಷಣ ಅಭಿಯಾನದ ರಾಯಭಾರಿಯಾಗಿ ಅವರು ಹಲವು ಉತ್ತಮ ಕೆಲಸಗಳಲ್ಲಿ ಭಾಗಿಯಾಗಿದ್ದರು. ಪುನೀತ್ ರಾಜಕುಮಾರ್ ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ರು. ಕಲಿಕೆಯಲ್ಲಿ ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಕಾಳಜಿ ವಹಿಸಿದ್ದರು.
ಡಾಕ್ಟರ್ ರಾಜಕುಮಾರ್ ಅವರು ತಮ್ಮ ಜೀವಿತಾವಧಿಯಲ್ಲಿ ಒಂದೇ ಒಂದು ಜಾಹೀರಾತಿನಲ್ಲಿ ನಟಿಸಿದ್ದರು. ಅದು ನಂದಿನಿ ಹಾಲಿನ ಜಾಹೀರಾತು ಆದರೆ ಆ ಜಾಹೀರಾತಿಗಾಗಿ ಅವರು ಒಂದು ರೂಪಾಯಿ ಕೂಡಾ ಸಂಭಾವನೆ ಪಡೆಯಲಿಲ್ಲ ಅವರ ಹಾಗೆಯೇ ಅವರ ಮಗ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರೂ ಸಹ ನಂದಿನಿ ಹಾಲಿನ ರಾಯಭಾರಿ ಆಗಿ ಯಾವುದೇ ಸಂಭಾವನೆ ಪಡೆಯದೇ ನಟಿಸಿದ್ದರು. “ಸರ್ವಶಿಕ್ಷಣ ಅಭಿಯಾನ” ಕ್ಕೇ ಬ್ರಾಂಡ್ ಅಂಬಾಸಿಡರ್ ಆಗಿದ್ದ ಪುನೀತ್ ರಾಜಕುಮಾರ್ ಅವರು ಅದಕ್ಕೂ ಸಹ ಸಂಭಾವನೆ ಪಡೆಯಲಿಲ್ಲ. ಒಂದು ಇಡೀ ದಿನ ಶೂಟಿಂಗ್ ನಲ್ಲಿ ಭಾಗವಹಿಸಿದ್ದ ಅವರು ಸರ್ಕಾರಿ ಶಾಲೆಗಳಲ್ಲಿ ಇರುವ ಗುಣಮಟ್ಟದ ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್ ಮತ್ತು ಸೈನ್ಸ್ ಲ್ಯಾಬ್ ಇರುವುದನ್ನು ನೋಡಿ ಅಚ್ಚರಿ ಪಟ್ಟಿದ್ದರು. “ಸರ್ವಶಿಕ್ಷಣ ಅಭಿಯಾನ” ಇದರಲ್ಲಿ ಬೆಂಗಳೂರಿನ ಉಳ್ಳಾಲ ಉಪನಗರದ ಶಾಲೆಯಲ್ಲಿ ಒಟ್ಟೂ ಮೂರು ಜಾಹೀರಾತು ಶೂಟಿಂಗ್ ಮಾಡಲಾಗಿತ್ತು.
ಶಿಕ್ಷಣವೇ ಶಕ್ತಿ ಎಂದು ಸಾರಿದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಡೌನ್ ಟು ಅರ್ಥ್. ಇಷ್ಟೆಲ್ಲಾ ಮಾಡಿಯೂ ಸಹ ಮಾಧ್ಯಮದವರ ಮುಂದೆ ಯಾವುದೇ ರೀತಿಯ ಪ್ರಚಾರಕ್ಕೂ ಸಹ ಆಸ್ಪದ ನೀಡುತ್ತಿರಲಿಲ್ಲ ಪವರ್ ಸ್ಟಾರ್. ಇದೊಂದು ಸಾಮಾಜಿಕ ಕಾರ್ಯ, ಈ ಚಿತ್ರವನ್ನು ನೋಡಿ ಶಾಲೆ ಬಿಟ್ಟ ಅದೆಷ್ಟೋ ಮಕ್ಕಳು ಮತ್ತೆ ಶಾಲೆಗೆ ಬಂದು ಶಿಕ್ಷಣದಲ್ಲಿ ಆಸಕ್ತಿ ತೋರಿದರೆ ತಾನು ಮಾಡಿದ ಕೆಲಸ ಸಾರ್ಥಕವಾಗುತ್ತದೆ ಎಂದಿದ್ದರು
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು. ನಟನೆಯ ಹಾದಿ ಹಿಡಿದವರಲ್ಲಿ ಬಹುತೇಕರು ಓದಿಗೆ ತಿಲಾಂಜಲಿ ಇಟ್ಟಿರುತ್ತಾರೆ ಶಿಕ್ಷಣವನ್ನು ಪ್ರೋತ್ಸಾಹಿಸುತ್ತಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಒಂದು ಹೆಜ್ಜೆ ಮುಂದೆಯೇ ಇದ್ದರು. ಇನ್ನುಳಿದ ದೊಡ್ಡ ದೊಡ್ಡ ಸ್ಟಾರ್ ಗಳಿಗೂ ಸಹ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಮಾದರಿ ಆಗಿರಲಿ ಅವರೂ ಸಹ ಪುನೀತ್ ರಾಜಕುಮಾರ್ ಅವರ ಹಾದಿ ಹಿಡಿಯಲಿ ಎಂದು ಆಶಿಸೋಣ.