ಪುನೀತ್ ಅವರ ಸುದೀರ್ಘ ವೃತ್ತಿಜೀವನದಲ್ಲಿ ಅನೇಕ ಬ್ಲಾಕ್‌ಬಸ್ಟರ್ ಚಲನಚಿತ್ರಗಳನ್ನು ನೀಡಿದ್ದಾರೆ ಇದರಿಂದ ಅವರಿಗೆ ಸಿನೆಮಾ ಕ್ಷೇತ್ರದಲ್ಲಿ ಅತಿದೊಡ್ಡ ಅಭಿಮಾನಿ ಬಳಗವನ್ನು ಗಳಿಸುವಂತೆ ಮಾಡಿದೆ ವಸಂತ ಗೀತೆ ಭಾಗ್ಯವಂತ ಚಲಿಸುವ ಮೋಡಗಳು ಎರಡು ನಕ್ಷತ್ರಗಳು ಭಕ್ತ ಪ್ರಹ್ಲಾದ, ಮತ್ತು ಯಾರಿವನು ಇವು ಅವರ ಕೆಲವು ಯಶಸ್ವಿ ಚಲನಚಿತ್ರಗಳು ಅಪ್ಪು ಅವರು ನಟರಾಗಿರುವುದರ ಜೊತೆಗೆ ಅನೇಕ ಸಾಮಾಜಿಕ ಕೆಲಸಗಳಲ್ಲಿಯೂ ತೊಡಗಿಕೊಂಡಿದ್ದರು

ಇಪ್ಪತ್ತಾರು ಅನಾಥಾಶ್ರಮ ನಲವತ್ತೈದು ಉಚಿತ ಶಾಲೆ ಹದಿನಾರು ವೃದ್ಧಾಶ್ರಮ ಹತ್ತೊಂಬತ್ತು ಗೋಶಾಲೆ ಮತ್ತು ಒಂದು ಸಾವಿರದ ಎಂಟು ನೂರು ಮಕ್ಕಳ ಸಂಪೂರ್ಣ ಶಿಕ್ಷಣ ಹಾಗೂ ಮೈಸೂರಿನಲ್ಲಿ ಶಕ್ತಿ ಧಾಮ ಹೆಸರಿನಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ವ್ಯವಸ್ಥೆ ನೋಡಿಕೊಳ್ಳುತ್ತಿದ್ದ ಏಕೈಕ ನಟ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು.ನಾವು ಈ ಲೇಖನದ ಮೂಲಕ ಪುನೀತ್ ರಾಜ ಕುಮಾರ್ ಅವರು ರಾಜಕುಮಾರ್ ಅವರ ಬಗ್ಗೆ ಹಾಗೂ ಕೋರೋನಸಂದರ್ಭದಲ್ಲಿ ಜನರಿಗೆ ನೀಡಿದ ಮಾಹಿತಿ ಬಗ್ಗೆ ತಿಳಿದುಕೊಳ್ಳೊಣ.

ರಾಜಕುಮಾರ ಅವರು ಕೇವಲ ನೆನಪು ಮಾತ್ರ ಇಟ್ಟು ಹೋಗಿದ್ದಾರೆ ಎಂದು ಪುನೀತ್ ಅವರು ತಿಳಿಸಿದ್ದರು ಹಾಗೆಯೇ ರಾಜಕುಮಾರ್ ಅವರು ಜನಗಳಿಗೆ ಪ್ರೀತಿಯನ್ನು ಹಾಗೂ ಮನೆಯವರಿಗೆ ಕುಟುಂಬದ ಜೊತೆ ಹೇಗೆ ಇರಬೇಕು ಎಂಬುದನ್ನು ತಿಳಿಸಿದ್ದಾರೆ ರಾಜಕುಮಾರ್ ಅವರು ಅಭಿಮಾನಿಗಳಿಂದ ಗಳಿಸಿದ ಪ್ರೀತಿಯನ್ನು ಮಕ್ಕಳು ಪಡೆಯುವಂತಾಗಿದೆ ಅವರ ಮಗನಾಗಿ ಹುಟ್ಟಿದ್ದಕ್ಕೆ ಹೆಮ್ಮೆ ಪಡುತ್ತಾರೆ ಕೋರೋನಸಂದರ್ಭದಲ್ಲಿ ಪುನೀತ್ ರಾಜ್ ಕುಮಾರ್ ಅವರು ಕೋರೋಣ ದ ವಿರುದ್ದ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಳ್ಳಲು ತಿಳಿಸಿದ್ದರು

ಅದರಲ್ಲಿ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದು ಕೊಳ್ಳಲು ತಿಳಿದಿದ್ದರು ಸ್ಯಾನಿಟೈಸರ್ ಹಾಕುವುದು ನಾವೆಲ್ಲರೂ ಸುರಕ್ಷತೆ ಯಿಂದ ಇರೋಣ ಹಾಗೂ ಕೋರೋನ ವಿರುದ್ಧದ ನಿಯಮವನ್ನು ಪಾಲಿಸೋಣ ಎಂದು ತಿಳಿಸಿದ್ದರು ನಮ್ಮ ಸುರಕ್ಷತೆ ನಮ್ಮ ಕರ್ತವ್ಯವಾಗಿದೆ ಎಂದು ಪುನೀತ್ ಅವರು ತಿಳಿಸಿದ್ದಾರೆ.

ಹೀಗೆ ಅಪ್ಪು ಅವರು ಜನ ಸಾಮಾನ್ಯರಿಗೆ ತಿಳುವಳಿಕೆಯನ್ನು ನೀಡಿದ್ದಾರೆ.ದೊಡ್ಮನೆ ಹುಡುಗನ ನಿಧನದಿಂದ ಅದೆಷ್ಟೋ ಹೃದಯಗಳಿಗೆ ಇಂದು ಆಘಾತವಾಗಿದೆ ಸಿನೆಮಾ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸುವುದರ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಅನೇಕರ ಬದುಕಿಗೆ ಬೆಳಕಾಗಿದ್ದವರು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!